ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ENG vs PAK: ಮೊದಲ ಮಹಾಯುದ್ಧದ ಬಳಿಕ ಅತ್ಯುತ್ತಮ ಟೆಸ್ಟ್‌ ಸರಾಸರಿಯಲ್ಲಿ 100 ವಿಕೆಟ್‌ ಕಿತ್ತ ಓಲ್ಲಿ ರಾಬಿನ್ಸನ್‌!

ಪಾಕಿಸ್ತಾನ ವಿರುದ್ಧ ಮೂರನೇ ಟೆಸ್ಟ್‌ ಪಂದ್ಯದ ಮೊದಲನೇ ದಿನ ಅದ್ಭುತ ಬೌಲಿಂಗ್‌ ಸ್ಪೆಲ್‌ ಬೌಲ್‌ ಮಾಡಿದ ಓಲ್ಲಿ ರಾಬಿನ್ಸನ್‌ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ನೂತನ ದಾಖಲೆಯನ್ನು ಬರೆದಿದ್ದಾರೆ. ಅವರು ಮೊದಲನೇ ಮಹಾಯುದ್ಧದ ಬಳಿಕ ಅತ್ಯುತ್ತಮ ಸರಾಸರಿಯಲ್ಲಿ 100 ಟೆಸ್ಟ್‌ ವಿಕೆಟ್‌ಗಳನ್ನು ಕಬಳಿಸಿದ ಮೊದಲ ಬೌಲರ್‌ ಎನಿಸಿಕೊಂಡಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ಓಲ್ಲಿ ರಾಬಿನ್ಸನ್‌.

ಬರ್ಮಿಂಗ್‌ಹ್ಯಾಮ್‌: ಮೊದಲನೇ ಮಹಾಯುದ್ಧದ ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಯಾವುದೇ ಬೌಲರ್‌ನಿಂದ ಸಾಧ್ಯವಾಗದ ದಾಖಲೆಯನ್ನು ಇಂಗ್ಲೆಂಡ್‌ ತಂಡದ ವೇಗಿ ಓಲ್ಲಿ ರಾಬಿನ್ಸನ್‌ (Ollie Robinson) ಬರೆದಿದ್ದಾರೆ. ಇಲ್ಲಿನ ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್‌ ಪಂದ್ಯದ (ENG vs PAK) ಆರಂಭಿಕ ದಿನ ಅತ್ಯುತ್ತಮ ಬೌಲಿಂಗ್‌ ಸ್ಪೆಲ್‌ ಬೌಲ್‌ ಮಾಡಿದ ಓಲ್ಲಿ ರಾಬಿನ್ಸನ್‌ ಅವರು 11 ಓವರ್‌ಗಳಿಗೆ 15 ರನ್‌ ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ತಮ್ಮ ಟೆಸ್ಟ್‌ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ಮೊದಲ ಮಹಾಯುದ್ಧದ ಬಳಿಕ ಅತ್ಯುತ್ತಮ ಸರಾಸರಿಯಲ್ಲಿ 100 ಟೆಸ್ಟ್‌ ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಮೊದಲ ಬೌಲರ್‌ ಎನಿಸಿಕೊಂಡಿದ್ದಾರೆ.

ಇಂಗ್ಲೆಂಡ್‌ ವೇಗಿ ಸದ್ಯ 24 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಓಲ್ಲಿ ರಾಬಿನ್ಸನ್‌ ಅವರು 191.10ರ ಸರಾಸರಿಯಲ್ಲಿ 102 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2021ರಲ್ಲಿ ಇಂಗ್ಲೆಂಡ್‌ ಪರ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರಾಬಿನ್ಸನ್‌ ಅವರು, ಅಂದಿನಿಂದ ಇಲ್ಲಿಯವರೆಗೂ ನಿಯಮಿತವಾಗಿ ಆಡುತ್ತಿದ್ದಾರೆ. ಅದರಂತೆ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಅವರು ಗಮನಾರ್ಹ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದಾರೆ. ಇದಕ್ಕೂ ಮುನ್ನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಅತ್ಯುತ್ತಮ ಎಕಾನಮಿ ರೇಟ್‌ನಲ್ಲಿ (0.84) 4 ವಿಕೆಟ್‌ಗಳ ಸಾಧನೆಯನ್ನು ಮಾಡಿದ್ದರು. ಅವರು ಆ ಪಂದ್ಯದಲ್ಲಿ 13 ಓವರ್‌ಗಳಿಗೆ ಕೇವಲ 11 ರನ್‌ ನೀಡಿ 4 ವಿಕೆಟ್‌ ಕಿತ್ತಿದ್ದರು.

ENG vs PAK: ಸಚಿನ್‌ ತೆಂಡೂಲ್ಕರ್‌ರ ಮತ್ತೊಂದು ದಾಖಲೆ ಮುರಿಯುವ ಸನಿಹದಲ್ಲಿ ಜೋ ರೂಟ್‌!

ಈ ಸರಣಿಯಲ್ಲಿ ಇಂಗ್ಲೆಂಡ್‌ ತಂಡ ಯಶಸ್ವಿಯಾಗಲು ಓಲ್ಲಿ ರಾಬಿನ್ಸನ್‌ ಅವರ ಬೌಲಿಂಗ್‌ ಪ್ರದರ್ಶನ ಕೂಡ ಕೀ ಪಾತ್ರವನ್ನು ನಿರ್ವಹಿಸಿದೆ. ಅಂದ ಹಾಗೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆಯಬಲ್ಲ ಆಟಗಾರರ ರೇಸ್‌ನಲ್ಲಿ ಓಲ್ಲಿ ರಾಬಿನ್ಸನ್‌ ಕೂಡ ಬಲವಾದ ಸ್ಪರ್ಧಿಯಾಗಿದ್ದಾರೆ.

2-0 ಮುನ್ನಡೆ ಗಳಿಸಿರುವ ಇಂಗ್ಲೆಂಡ್‌ ತಂಡ

ಲೀಡ್ಸ್‌ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಇನಿಂಗ್ಸ್‌ ಹಾಗೂ 103 ರನ್‌ಗಳ ಭರ್ಜರಿ ಗೆಲುವು ಪಡೆದಿತ್ತು ಹಾಗೂ ಟೆಸ್ಟ್‌ ಸರಣಿಯನ್ನು 1-0 ಮುನ್ನಡೆಯೊಂದಿಗೆ ಭರ್ಜರಿ ಆರಂಭ ಪಡೆದಿತ್ತು. ಬಳಿಕ ತನ್ನ ಗೆಲುವಿನ ಲಯವನ್ನು ಮುಂದುವರಿಸಿದ ಆಂಗ್ಲರು, ಎರಡನೇ ಟೆಸ್ಟ್‌ ಪಂದ್ಯವನ್ನು 194 ರನ್‌ಗಳಿಂದ ಗೆದ್ದು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಟೆಸ್ಟ್‌ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತ್ತು.

ಇಂಗ್ಲೆಂಡ್‌ ಬೌಲರ್‌ಗಳು ತಮ್ಮ ಮಾರಕ ಬೌಲಿಂಗ್‌ ದಾಳಿಯಿಂದ ಪಾಕಿಸ್ತಾನ ತಂಡವನ್ನು ಮೂರನೇ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಕೇವಲ 133 ರನ್‌ಗಳಿಗೆ ಆಲ್‌ಔಟ್‌ ಮಾಡಿದರು. ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ತಂಡ ಮೊದಲನೇ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್‌ಗಳ ನಷ್ಟಕ್ಕೆ 156 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ 23 ರನ್‌ಗಳ ಮುನ್ನಡೆಯನ್ನು ಪಡೆದಿದೆ. ಇದೀಗ ಎರಡನೇ ದಿನ ಆಂಗ್ಲರು ಪ್ರಥಮ ಇನಿಂಗ್ಸ್‌ನಲ್ಲಿ 400 ರನ್‌ಗಳನ್ನು ಕಲೆ ಹಾಕಲು ಪ್ರಯತ್ನಿಸಲಿದ್ದಾರೆ.

East Zone vs South Zone: ದುಲೀಪ್‌ ಟ್ರೋಫಿ ಇತಿಹಾಸದಲ್ಲಿ ದೊಡ್ಡ ದಾಖಲೆ ಬರೆದ ಇಶಾನ್‌ ಕಿಶನ್‌!

7 ಆಟಗಾರರನ್ನು ತವರಿಗೆ ಕರೆದುಕೊಂಡಿದ್ದ ಪಾಕಿಸ್ತಾನ

ಎರಡನೇ ಟೆಸ್ಟ್‌ ಪಂದ್ಯದ ಹೀನಾಯ ಸೋಲಿನ ಬಳಿಕ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ತನ್ನ ತಂಡದ ಏಳು ಮಂದಿ ಆಟಗಾರರನ್ನು ತವರಿಗೆ ವಾಪಸ್‌ ಕರೆಸಿಕೊಂಡಿತ್ತು. ಪಾಕ್‌ ಹೆಡ್‌ ಕೋಚ್‌ ಸರ್ಫರಾಝ್‌ ಅಹ್ಮದ್‌ ಹಾಗೂ ಬೌಲಿಂಗ್‌ ಕೋಚ್‌ ಉಮರ್‌ ಗುಲ್‌ ಅವರನ್ನು ಕೂಡ ತಮ್ಮ ಹುದ್ದೆಗಳಿಂದ ತೆಗೆದು ಹಾಕಲಾಯಿತು. ಮೂರನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ನಾಯಕ ಬಾಬರ್‌ ಆಝಮ್‌ ತಮ್ಮ ತಂಡದಲ್ಲಿ ಬದಲಾವಣೆಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದರು. ಪ್ರಥಮ ಇನಿಂಗ್ಸ್‌ನಲ್ಲಿ ಬಾಬರ್‌ ಆಝಮ್‌ ಕೇವಲ 7 ರನ್‌ಗೆ ವಿಕೆಟ್‌ ಒಪ್ಪಿಸಿದರು.