ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ENG vs SA: 131 ರನ್‌ಗಳಿಗೆ ಆಲೌಟ್‌ ಆಗಿ ಅನಗತ್ಯ ದಾಖಲೆ ಬರೆದ ಇಂಗ್ಲೆಂಡ್‌!

ಲೀಡ್ಸ್‌ನಲ್ಲಿ ಮಂಗಳವಾರ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ, ಇಂಗ್ಲೆಂಡ್ ತಂಡವನ್ನು 131 ರನ್‌ಗಳಿಗೆ ಆಲೌಟ್ ಮಾಡಿತು. ಆರಂಭಿಕ ಆಟಗಾರ ಜೇಮೀ ಸ್ಮಿತ್ ಅವರ ಅರ್ಧಶತಕದ ಹೊರತಾಗಿಯೂ, ತಂಡವು 25ನೇ ಓವರ್‌ನಲ್ಲಿ ಆಲೌಟ್ ಆಗಿತ್ತು. ಇದರೊಂದಿಗೆ ಇಂಗ್ಲೆಂಡ್‌ ಅನಗತ್ಯ ದಾಖಲೆಯನ್ನು ಹೆಗಲೇರಿಸಿಕೊಂಡಿದೆ.

131 ರನ್‌ಗಳಿಗೆ ಆಲೌಟ್‌ ಆಗಿ ಅನಗತ್ಯ ದಾಖಲೆ ಬರೆದ ಇಂಗ್ಲೆಂಡ್‌!

ಮೊದಲನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ 131 ರನ್‌ಗಳಿಗೆ ಆಲ್‌ಔಟ್‌. -

Profile Ramesh Kote Sep 2, 2025 10:04 PM

ಲೀಡ್ಸ್: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ (ENG vs SA) ದಕ್ಷಿಣ ಆಫ್ರಿಕಾ ಅದ್ಭುತ ಬೌಲಿಂಗ್ ಪ್ರದರ್ಶನವನ್ನು ತೋರಿತು. ಇಂಗ್ಲೆಂಡ್ (England) ಬ್ಯಾಟ್ಸ್‌ಮನ್‌ಗಳ ಬಳಿ ಹರಿಣ ಪಡೆಯ ಬೌಲಿಂಗ್‌ ದಾಳಿಯನ್ನು ಮೆಟ್ಟಿ ನಿಲ್ಲಲು ಯಾವುದೇ ಅಸ್ತ್ರವಿರಲಿಲ್ಲ. ಇಂಗ್ಲೆಂಡ್‌ ತಂಡ ಮೊದಲು ಬ್ಯಾಟ್‌ ಮಾಡಿ 24.3 ಓವರ್‌ಗಳಲ್ಲಿ ಕೇವಲ 131 ರನ್‌ಗಳಿಗೆ ಆಲ್‌ಔಟ್‌ ಆಯಿತು. ಲೀಡ್ಸ್‌ನ ಹೆಡಿಂಗ್ಲೆ ಮೈದಾನದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿತ್ತು. ಆಂಗ್ಲರ ಪರ ಆರಂಭಿಕ ಆಟಗಾರ ಜೇಮೀ ಸ್ಮಿತ್ (Jamie Smith) ಅರ್ಧಶತಕ ಬಾರಿಸಿದರು. ಅವರು 54 ರನ್ ಗಳಿಸಿದರು. ಆದರೆ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್‌ ಹೆಚ್ಚು ಹೊತ್ತು ಕ್ರೀಸ್‌ನಲಿ ಉಳಿಯಲಿಲ್ಲ.

ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಇಂಗ್ಲೆಂಡ್ ತಂಡವು 24.3 ಓವರ್‌ಗಳಿಗೆ ಆಲೌಟ್ ಆಗಿದ್ದು ಕೇವಲ ನಾಲ್ಕು ಬಾರಿ ಮಾತ್ರ. 2023ರ ವಿಶ್ವಕಪ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಂಡದ ಇನಿಂಗ್ಸ್‌ ಅನ್ನು 22 ಓವರ್‌ಗಳಿಗೆ ಇಳಿಸಲಾಗಿತ್ತು. ಇದು ದಕ್ಷಿಣ ಆಫ್ರಿಕಾ ವಿರುದ್ಧ ತಂಡದ ನಾಲ್ಕನೇ ಕನಿಷ್ಠ ಸ್ಕೋರ್ ಆಗಿದೆ. ಆದಾಗ್ಯೂ, ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲು ಬ್ಯಾಟ್‌ ಮಾಡುವಾಗ ಇಂಗ್ಲೆಂಡ್ ಗಳಿಸಿದ ಅತ್ಯಂತ ಕಡಿಮೆ ಸ್ಕೋರ್ 153 ರನ್‌ಗಳಾಗಿದ್ದು, ಇದು 2017 ರಲ್ಲಿ ಗಳಿಸಿತ್ತು.

ರೋಹಿತ್‌ ಶರ್ಮಾರ ಏಕದಿನ ವಿಶ್ವಕಪ್‌ ಟೂರ್ನಿಯ ಭವಿಷ್ಯವನ್ನು ನುಡಿದ ಇರ್ಫಾನ್‌ ಪಠಾಣ್‌!

ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ನ ಅತ್ಯಂತ ಕಡಿಮೆ ಮೊತ್ತ

103 ರನ್‌ಗಳು, ದಿ ಓವಲ್, 1999

111 ರನ್‌ಗಳು, ಜೋಹಾನ್ಸ್‌ಬರ್ಗ್, 2000

115 ರನ್‌ಗಳು, ಈಸ್ಟ್ ಲಂಡನ್, 1996

131 ರನ್‌ಗಳು, ಲೀಡ್ಸ್, 2025

ಏಳು ಮಂದಿ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತವನ್ನು ಗಳಿಸಿಲ್ಲ

ಇಂಗ್ಲೆಂಡ್‌ನ ಆರಂಭಿಕ ಆಟಗಾರ ಬೆನ್ ಡಕೆಟ್ 5 ರನ್ ಗಳಿಸಿದ ನಂತರ ಔಟಾದರು. ಅವರನ್ನು ಹೊರತುಪಡಿಸಿ, ಜಾಕೋಬ್ ಬೆಥೆಲ್, ವಿಲ್ ಜ್ಯಾಕ್ಸ್, ಬ್ರೈಡನ್ ಕಾರ್ಸ್‌, ಜೋಫ್ರಾ ಆರ್ಚರ್, ಆದಿಲ್ ರಶೀದ್ ಮತ್ತು ಸೋನಿ ಬೇಕರ್ ಕೂಡ ಎರಡಂಕಿಯನ್ನು ತಲುಪಲು ಸಾಧ್ಯವಾಗಲಿಲ್ಲ. 18ನೇ ಓವರ್‌ನ ಒಂದು ಹಂತದಲ್ಲಿ ಇಂಗ್ಲೆಂಡ್‌ನ ಸ್ಕೋರ್ 3 ವಿಕೆಟ್‌ಗಳಿಗೆ 102 ರನ್‌ಗಳಾಗಿತ್ತು. ಅದೇ ಸಮಯದಲ್ಲಿ, ಜೇಮೀ ಸ್ಮಿತ್ ಅವರನ್ನು ವಿಯಾನ್ ಮುಲ್ಡರ್ ಔಟ್ ಮಾಡಿದರು. ಇಲ್ಲಿಂದ ವಿಕೆಟ್ ಬೀಳುವ ಪ್ರಕ್ರಿಯೆ ಪ್ರಾರಂಭವಾಯಿತು. ತಂಡದ ಇನಿಂಗ್ಸ್‌ 25 ನೇ ಓವರ್‌ನಲ್ಲಿ ಕೊನೆಗೊಂಡಿತು.

Asif Ali Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಆಸಿಫ್‌ ಅಲಿ!

ಬೌಲಿಂಗ್‌ನಲ್ಲಿ ಮಿಂಚಿದ ಮಹಾರಾಜ್ ಮತ್ತು ಮುಲ್ಡರ್

ಇಂಗ್ಲೆಂಡ್‌ನ ಕೊನೆಯ ಏಳು ವಿಕೆಟ್‌ಗಳು 29 ರನ್‌ಗಳ ಅಂತರದಲ್ಲಿ ಉರುಳಿದವು. ದಕ್ಷಿಣ ಆಫ್ರಿಕಾ ತಂಡ, ಎದುರಾಳಿ ತಂಡವನ್ನು 43 ಎಸೆತಗಳಲ್ಲಿ ಪೆವಿಲಿಯನ್‌ಗೆ ಕಳುಹಿಸಿತ್ತು. ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ನಾಲ್ಕು ವಿಕೆಟ್‌ಗಳನ್ನು ಪಡೆದರೆ, ವಿಯಾನ್ ಮುಲ್ಡರ್ ಮೂರು ವಿಕೆಟ್‌ಗಳನ್ನು ಪಡೆದರು. ಮಹಾರಾಜ್ 5.3 ಓವರ್‌ಗಳಲ್ಲಿ 22 ರನ್‌ಗಳನ್ನು ಬಿಟ್ಟುಕೊಟ್ಟರು. ಪಂದ್ಯದಲ್ಲಿ ಅವರು ನಾಲ್ಕು ವಿಕೆಟ್‌ಗಳನ್ನು ಪಡೆದರು. ಜೇಮಿ ಸ್ಮಿತ್ ಹೊರತುಪಡಿಸಿ, ಜೋಸ್ ಬಟ್ಲರ್ 15, ಜೋ ರೂಟ್ 14 ಮತ್ತು ನಾಯಕ ಹ್ಯಾರಿ ಬ್ರೂಕ್ ಇಂಗ್ಲೆಂಡ್ ಪರ 12 ರನ್ ಗಳಿಸಿದರು.

Asia Cup 2025: ಈ ಆಟಗಾರನಿಂದ ಸಂಜು ಸ್ಯಾಮ್ಸನ್‌ಗೆ ಅವಕಾಶ ಇಲ್ಲವೆಂದ ಇರ್ಫಾನ್‌ ಪಠಾಣ್‌!

ದಕ್ಷಿಣ ಆಫ್ರಿಕಾ ತಂಡಕ್ಕೆ 7 ವಿಕೆಟ್‌ ಜಯ

ಇಂಗ್ಲೆಂಡ್‌ ನೀಡಿದ್ದ 132 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ, ಏಡೆನ್‌ ಮಾರ್ಕ್ರಮ್‌ (86 ರನ್‌) ಅವರ ಬ್ಯಾಟಿಂಗ್‌ ಬಲದಿಂದ 20.5 ಓವರ್‌ಗಳಿಗೆ 3 ವಿಕೆಟ್‌ ನಷ್ಟಕ್ಕೆ 137 ರನ್‌ ಗಳಿಸಿ 7 ವಿಕೆಟ್‌ ಗೆಲುವು ಪಡೆಯಿತು. ರಯಾನ್‌ ರಿಕೆಲ್ಟನ್‌ ಕೂಡ 31 ರನ್‌ ಗಳಿಸಿದರು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ 1-0 ಮುನ್ನಡೆ ಪಡೆದಿದೆ.