ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ENG vs NZ: ಎರಡನೇ ಟೆಸ್ಟ್‌ ಪಂದ್ಯಕ್ಕೆ ಇಂಗ್ಲೆಂಡ್‌ ಪ್ಲೇಯಿಂಗ್‌ XI ಪ್ರಕಟ, ಜೋಫ್ರಾ ಆರ್ಚರ್‌ ಕಮ್‌ಬ್ಯಾಕ್‌!

England Playing Xi: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಎರಡನೇ ಟೆಸ್ಟ್‌ ಪಂದ್ಯ ಜೂನ್‌ 17 ರಂದು ಲಂಡನ್‌ನ ಕೆನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಇಂಗ್ಲೆಂಡ್‌ ತಂಡದ ಪ್ಲೇಯಿಂಗ್‌ XI ಅನ್ನು ಪ್ರಕಟಿಸಲಾಗಿದೆ. ನಿರೀಕ್ಷೆಯಂತೆ ಬೆನ್‌ ಸ್ಟೋಕ್ಸ್‌ ಅವರನ್ನು ಕೈ ಬಿಡಲಾಗಿದ್ದು, ಜೋಫ್ರಾ ಆರ್ಚರ್‌ ಪ್ಲೇಯಿಂಗ್‌ XIಗೆ ಮರಳಿದ್ದಾರೆ.

ಎರಡನೇ ಟೆಸ್ಟ್‌ಗೆ ಇಂಗ್ಲೆಂಡ್‌ ಪ್ಲೇಯಿಂಗ್‌ XI.

ಲಂಡನ್‌: ಇಲ್ಲಿನ ಕೆನಿಂಗ್ಟನ್‌ ಓವಲ್‌ನಲ್ಲಿ ಜೂನ್‌ 17 ರಂದು ನಡೆಯುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ (ENG vs NZ) ಕಾದಾಟ ನಡೆಸಲು ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್‌ ತಂಡಗಳು ಸಜ್ಜಾಗುತ್ತಿವೆ. ಈ ಪಂದ್ಯಕ್ಕೆ ಇಂಗ್ಲೆಂಡ್‌ ತಂಡದ ಪ್ಲೇಯಿಂಗ್‌ XI ಅನ್ನು ಪ್ರಕಟಿಸಲಾಗಿದೆ. ಬೆನ್‌ ಸ್ಟೋಕ್ಸ್‌ (Ben Stokes) ಅವರನ್ನು ಕೈ ಬಿಡಲಾಗಿದ್ದು, ಜೋಫ್ರಾ ಆರ್ಚರ್‌ (Jofra Archer) ಅವರು ಪ್ಲೇಯಿಂಗ್‌ XIಗೆ ಮರಳಿದ್ದಾರೆ. ನೈಟ್‌ ಕ್ಲಬ್‌ ವಿವಾದದಿಂದಾಗಿ ಸದ್ಯ ಸ್ಟೋಕ್ಸ್‌ ಅವರನ್ನು ಕೈ ಬಿಡಲಾಗಿದೆ.

ಲಾರ್ಡ್ಸ್‌ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ 115 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಬಳಿಕ, ತಂಡದ ಶಿಸ್ತು ನಿಯಮ ಉಲ್ಲಂಘನೆಯ ಆರೋಪದ ಕುರಿತು ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆನ್‌ ಸ್ಟೋಕ್ಸ್‌ ಹಾಗೂ ಸಹ ವೇಗದ ಬೌಲರ್ ಗಸ್‌ ಅಟ್ಕಿನ್ಸನ್‌ ಅವರನ್ನು ಆಯ್ಕೆಯಿಂದ ಹೊರಗಿಡಲಾಗಿದೆ ಎಂದು ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್ ಇಲ್ಲಿ ಈಗಾಗಲೇ ಸ್ಪಷ್ಟಪಡಿಸಿದೆ.

ಮೂರು ಪಂದ್ಯಗಳ ಸರಣಿಯನ್ನು ಗೆಲ್ಲುವ ಗುರಿಯೊಂದಿಗೆ ಇಂಗ್ಲೆಂಡ್ ಕಣಕ್ಕಿಳಿಯಲಿದ್ದು, ಅನುಭವಿ ಬ್ಯಾಟರ್ ಜೋ ರೂಟ್‌ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಲಾರ್ಡ್ಸ್‌ನಲ್ಲಿ ಗೆದ್ದಿದ್ದ ತಂಡದಲ್ಲಿ ಇಂಗ್ಲೆಂಡ್ ನಾಲ್ಕು ಬದಲಾವಣೆಗಳನ್ನು ಮಾಡಿದೆ. ಜೋರ್ಡನ್‌ ಕಾಕ್ಸ್‌ ಹಾಗೂ ಸನ್ನಿ ಬಾಕರ್‌ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಇದೇ ವೇಳೆ ಜೋಫ್ರಾ ಆರ್ಚರ್‌ ಮತ್ತು ಮ್ಯಾಟ್‌ ಹೆನ್ರಿ ಮತ್ತೆ ತಂಡಕ್ಕೆ ಮರಳಿದ್ದಾರೆ.

Nightclub Controversy: ಎರಡನೇ ಟೆಸ್ಟ್‌ ಇಂಗ್ಲೆಂಡ್‌ ತಂಡದಲ್ಲಿ ಸ್ಥಾನ ಕಳೆದುಕೊಂಡ ಬೆನ್‌ ಸ್ಟೋಕ್ಸ್‌, ಗಸ್‌ ಅಟ್ಕಿನ್ಸನ್‌!

ನಿರಂತರ ಗಾಯದ ಸಮಸ್ಯೆಗಳಿಂದ ಚೇತರಿಸಿಕೊಂಡು ಮರಳುತ್ತಿರುವ ಆರ್ಚರ್‌ಗೆ ಇದು ಮತ್ತೊಂದು ಮಹತ್ವದ ಮೈಲುಗಲ್ಲಾಗಿದ್ದು, ಅವರ ವೇಗ ಮತ್ತು ಆಕ್ರಮಣಕಾರಿ ಬೌಲಿಂಗ್ ತಂಡದ ದಾಳಿಗೆ ಹೊಸ ಆಯಾಮ ನೀಡಲಿದೆ ಎಂಬ ನಿರೀಕ್ಷೆಯನ್ನು ಇಂಗ್ಲೆಂಡ್ ತಂಡ ಹೊಂದಿದೆ.

ಇದೇ ವೇಳೆ, ಮ್ಯಾಟ್‌ ಫಿಷರ್‌ ಅವರು 2022ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಮೊದಲ ಬಾರಿ ಟೆಸ್ಟ್ ಪಂದ್ಯವಾಡಲು ಸಜ್ಜಾಗಿದ್ದಾರೆ. ಯಾರ್ಕ್‌ಶೈರ್ ತಂಡದ ಈ ವೇಗದ ಬೌಲರ್, ಆರಂಭಿಕ ಟೆಸ್ಟ್‌ನಲ್ಲಿ ಏಳು ವಿಕೆಟ್‌ಗಳನ್ನು ಪಡೆದಿದ್ದರೂ ಬಲ ಮೊಣಕಾಲಿನ ನೋವಿನ ಕಾರಣದಿಂದ ಹೊರಗುಳಿದ ಒಲ್ಲೀ ರಾಬಿನ್ಸನ್‌ ಅವರ ಸ್ಥಾನವನ್ನು ತುಂಬಲಿದ್ದಾರೆ.

ಇನ್ನೊಂದೆಡೆ, ಸನ್ನಿ ಬಾಕರ್‌ ಅವರನ್ನು ಆಯ್ಕೆ ಮಾಡಿರುವುದು, ಸಂಪೂರ್ಣ ವೇಗದ ಬೌಲಿಂಗ್ ದಾಳಿಯೊಂದಿಗೆ ಕಣಕ್ಕಿಳಿಯುವ ಇಂಗ್ಲೆಂಡ್‌ನ ಉದ್ದೇಶವನ್ನು ಸ್ಪಷ್ಟಪಡಿಸಿದೆ. ಈ ಯುವ ವೇಗಿ ಜೋಫ್ರಾ ಆರ್ಚರ್‌, ಜಾಶ್‌ ಟಾಂಗ್‌ ಹಾಗೂ ಫಿಶರ್ ಅವರೊಂದಿಗೆ ನಾಲ್ವರು ವೇಗಿಗಳ ಬೌಲಿಂಗ್ ದಾಳಿಯ ಭಾಗವಾಗಲಿದ್ದಾರೆ.



ವಿಶೇಷವೆಂದರೆ, ಆತಿಥೇಯ ಇಂಗ್ಲೆಂಡ್ ಈ ಪಂದ್ಯಕ್ಕಾಗಿ ಯಾವುದೇ ಪ್ರಮುಖ ಸ್ಪಿನ್ನರ್‌ರನ್ನು ಆಯ್ಕೆ ಮಾಡದೇ, ಸಂಪೂರ್ಣವಾಗಿ ವೇಗದ ಬೌಲಿಂಗ್ ಶಕ್ತಿಯ ಮೇಲೆಯೇ ನಂಬಿಕೆ ಇಟ್ಟಿದೆ. ಪಿಚ್ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಂದೆಡೆ, ಜೋರ್ಡನ್‌ ಕಾಕ್ಸ್‌ ಅವರಿಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವುದು ಅವರ ತಾಳ್ಮೆ ಮತ್ತು ನಿರಂತರ ಪರಿಶ್ರಮಕ್ಕೆ ದೊರೆತ ಪ್ರತಿಫಲವಾಗಿದೆ. ಕೆಂಟ್ ತಂಡದ ಈ ಬ್ಯಾಟರ್ ಹಲವು ಬಾರಿ ಟೆಸ್ಟ್ ಪದಾರ್ಪಣೆಯ ಅಂಚಿಗೆ ಬಂದಿದ್ದರೂ, ಗಾಯದ ಸಮಸ್ಯೆಗಳು ಅವರ ಪ್ರಗತಿಗೆ ಅಡ್ಡಿಯಾಗಿದ್ದವು. 2024ರಲ್ಲಿ ಅವರು ಬಲಗೈ ಹೆಬ್ಬೆರಳಿನ ಮುರಿತಕ್ಕೆ ಒಳಗಾಗಿದ್ದರೆ, 2025ರಲ್ಲಿಯೂ ಸ್ನಾಯು ಗಾಯದಿಂದ ಬಳಲಿದ್ದರು. ಈ ಎರಡೂ ಗಾಯಗಳು ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಕನಸನ್ನು ಮುಂದೂಡಿದ್ದವು. ಆದರೆ ಈಗ ಅವರು ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದಾರೆ.

ಶಿಷ್ಟಾಚಾರ ಉಲ್ಲಂಘನೆ ವಿವಾದ; ಕ್ರಿಕೆಟ್‌ ನಿವೃತ್ತಿಗೆ ಮುಂದಾದ ಬೆನ್‌ ಸ್ಟೋಕ್ಸ್‌

ಇಂಗ್ಲೆಂಡ್‌ ತಂಡದ ಪ್ಲೇಯಿಂಗ್‌ XI: ಜೋ ರೂಟ್‌ (ನಾಯಕ), ಜೋಫ್ರಾ ಆರ್ಚರ್‌, ಸನ್ನಿ ಬಾಕರ್‌, ಜಾಕೋಬ್‌ ಬೆಥೆಲ್‌, ಹ್ಯಾರಿ ಬ್ರೂಕ್‌, ಜೋರ್ಡನ್‌ ಕಾಕ್ಸ್‌, ಬೆನ್‌ ಡಕೆಟ್‌, ಮ್ಯಾಟ್‌ ಫಿಷರ್‌, ಎಮಿಲಿಯೊ ಗೇ, ಜೇಮಿ ಸ್ಮಿತ್‌, ಜಾಶ್‌ ಟಂಗ್‌