ನವದೆಹಲಿ: ಬಹುನಿರೀಕ್ಷಿತ 2025-27ರ ಸಾಲಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ (WTC Final) ಪಂದ್ಯಕ್ಕೂ ಕೂಡ ಇಂಗ್ಲೆಂಡ್‌ಗೆ ಆತಿಥ್ಯವನ್ನು ನೀಡಲಾಗಿದೆ. ಆದರೆ, ಈ ಬಾರಿ ಫೈನಲ್ ಪಂದ್ಯದ ಆತಿಥ್ಯ ಐತಿಹಾಸಿಕ ಲಾರ್ಡ್ಸ್ ಅಂಗಣಕ್ಕೆ ತಪ್ಪಿದೆ. ಅಂದ ಹಾಗೆ ಬಾರಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ (AUS vs SA) ತಂಡಗಳು ಫೈನಲ್ ಪಂದ್ಯದಲ್ಲಿ ಆಡುವ ನೆಚ್ಚಿನ ತಂಡಗಳಾಗಿವೆ. ಆದರೆ, ಶುಭಮನ್ ಗಿಲ್ ನಾಯಕತ್ವದ ಭಾರತ ತಂಡ ಸದ್ಯ ಪಾಯಿಂಟ್ಸ್ ಟೇಬಲ್‌ನಲ್ಲಿ ಐದನೇ ಸ್ಥಾನದಲ್ಲಿದ್ದು, ಫೈನಲ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.
2027ರಲ್ಲಿ ನಡೆಯುವ ಡಬ್ಲ್ಯುಟಿಸಿ ಫೈನಲ್ ಪಂದ್ಯದ ಫೈನಲ್‌ಗೆ ಐಸಿಸಿ ವೇಳಾಪಟ್ಟಿಯನ್ನು ಖಚಿತಪಡಿಸಿದೆ. ಈ ಬಾರಿಯೂ ಕೂಡ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಅಕಾಡೆಮಿ ಆತಿಥ್ಯ ವಹಿಸಲಿದ್ದು, ಲಂಡನ್‌ಮನ ದಿ ಓವಲ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ಜೂನ್ 9 ರಿಂದ 13ರವರೆಗೆ ನಡೆಯಲಿದೆ. 2025ರ ಫೈನಲ್ ಪಂದ್ಯದಲ್ಲಿ ಗೆದ್ದು ಚೊಚ್ಚಲ ಟೆಸ್ಟ್ ಚಾಂಪಿಯನ್ ಆಗಿದ್ದ ದಕ್ಷಿಣ ಆಫ್ರಿಕಾ ಇದೀಗ ಸತತ ಎರಡನೇ ಬಾರಿ ಪ್ರಶಸ್ತಿಯನ್ನು ಗೆಲ್ಲಲು ಎದುರು ನೋಡುತ್ತಿದೆ. ಈ ವೇಳೆ ಆಸ್ಟ್ರೇಲಿಯಾವನ್ನು ಮಣಿಸಿ ಚಾಂಪಿಯನ್ ಆಗಿತ್ತು.
ರವಿ ಶಾಸ್ತ್ರಿ-ಇಯಾನ್ ಮಾರ್ಗನ್ ಆಯ್ಕೆಯ ಭಾರತ-ಇಂಗ್ಲೆಂಡ್ ಸಂಯೋಜನೆಯ ಒಡಿಐ ಪ್ಲೇಯಿಂಗ್ XI
2027ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಗಿದ ಕಲವೇ ದಿನಗಳ ಬಳಿಕ ಹಾಗೂ 2027ರ ಆಶಷ್ ಟ್ರೋಫಿ ಆರಂಭಕ್ಕೂ ಮುನ್ನ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ನಡೆಯಲಿದೆ. 2021ರ ಉದ್ಘಾಟನಾ ಆವೃತ್ತಿಯ ಫೈನಲ್ ಪಂದ್ಯ ಸೌತಾಮ್ಟನ್‌ನ ರೋಸ್ ಬೌಲ್‌ನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಡ್ ಎದುರು ಸೋಲು ಅನುಭವಿಸಿತ್ತು. 2023ರಲ್ಲಿಯೂ ಫೈನಲ್‌ಗೆ ಅರ್ಹತೆ ಪಡೆದಿದ್ದ ಭಾರತ ತಂಡ, ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಎದುರು ಸೋಲು ಅನುಭವಿಸಿ ರನ್ನರ್ ಅಪ್ ಆಗಿತ್ತು.
ಮತ್ತೊಂದು ಫೈನಲ್ ಆಡಲು ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಸಜ್ಜು
2025ರಲ್ಲಿ ಫೈನಲ್ ಆಡಿದ್ದ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮತ್ತೊಂದು ಫೈನಲ್ ಪಂದ್ಯವನ್ನು ಆಡಲು ಸಜ್ಜಾಗುತ್ತಿವೆ. ಸದ್ಯ ಅಂಕಪಟ್ಟಿಯಲ್ಲಿ ಈ ಎರಡೂ ತಂಡಗಳು ಅಗ್ರ ಸ್ಥಾನವನ್ನು ಕಾಯ್ದುಕೊಂಡಿವೆ. ಈ ಎರಡೂ ತಂಡಗಳಿಗೆ ಆದರೆ, ಪ್ರತಿ ತಂಡಕ್ಕೂ ತಮ್ಮ ಆರು ಸರಣಿಗಳ ಪೈಕಿ ಇನ್ನೂ ಮೂರು ಅಥವಾ ನಾಲ್ಕು ಸರಣಿಗಳು ಆಡಬೇಕಿರುವುದರಿಂದ, ಮುಂದಿನ ಒಂಬತ್ತು ತಿಂಗಳಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳಾಗುವ ಸಾಧ್ಯತೆ ಇದೆ.
ವಿಶೇಷವೆಂದರೆ, ಈ ವರ್ಷದ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಈ ಸರಣಿಯ ಫಲಿತಾಂಶವು ಡಬ್ಲ್ಯುಟಿಸಿ ಫೈನಲ್ ರೇಸ್‌ನಲ್ಲಿ ಮಹತ್ವದ ತಿರುವು ನೀಡುವ ಸಾಧ್ಯತೆಯಿದೆ.
IND vs ZIM: ಭಾರತದ ಪರ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅಶೋಕ್ ಶರ್ಮಾ ಯಾರು?
2025-27ರ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿ
ಆಷಸ್ ಟ್ರೋಫಿ ಟೆಸ್ಟ್ ಸರಣಿಯ ವೇಳಾಪಟ್ಟಿ ಖಚಿತಪಡಿಸಿದ ಇಸಿಬಿ
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ದಿನಾಂಕಗಳನ್ನು ಅಧಿಕೃತವಾಗಿ ಪ್ರಕಟಿಸಿದ ಬೆನ್ನಲ್ಲೇ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) 2027ರ ತವರು ಕ್ರಿಕೆಟ್ ಋತುವಿನ ವೇಳಾಪಟ್ಟಿಯನ್ನೂ ಪ್ರಕಟಿಸಿದೆ. ಈ ವೇಳಾಪಟ್ಟಿಯ ಪ್ರಕಾರ, ಪುರುಷರ ಆ್ಯಷಸ್ ಸರಣಿಯು ಜೂನ್ 18ರಿಂದ ಆಗಸ್ಟ್ 2ರವರೆಗೆ ನಡೆಯಲಿದೆ. ಈ ಪ್ರತಿಷ್ಠಿತ ಐದು ಪಂದ್ಯಗಳ ಸರಣಿಗೆ ಟ್ರೆಂಟ್ ಬ್ರಿಡ್ಜ್, ಲಾರ್ಡ್ಸ್, ಎಡ್ಜ್‌ಬಾಸ್ಟನ್, ಸೌಥಾಂಪ್ಟನ್ ಹಾಗೂ ದಿ ಓವಲ್ ಆತಿಥ್ಯ ವಹಿಸಲಿವೆ.
ಇದರ ಜೊತೆಗೆ, ಬಾಂಗ್ಲಾದೇಶ ತಂಡ 27 ವರ್ಷಗಳ ಬಳಿಕ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಪಂದ್ಯವನ್ನು ಆಡಲಿದೆ. ಈ ಏಕೈಕ ಟೆಸ್ಟ್ ಪಂದ್ಯ ಮೇ 23ರ ರಂದು ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ಆರಂಭವಾಗಲಿದೆ.