ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಭಾರತ ತಂಡದಲ್ಲಿ ರಜತ್‌ ಪಾಟಿದಾರ್‌ಗೆ ಸ್ಥಾನ ನೀಡಿʼ: ಬಿಸಿಸಿಐಗೆ ಆಕಾಶ್‌ ಚೋಪ್ರಾ ಆಗ್ರಹ!

ಗುಜರಾತ್‌ ಟೈಟನ್ಸ್‌ ಎದುರು ಕೇವಲ 33 ಎಸೆತಗಳಲ್ಲಿ ಅಜೇಯ 93 ರನ್‌ಗಳನ್ನು ಸಿಡಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ರಜತ್‌ ಪಾಟಿದಾರ್‌ ಅವರನ್ನು ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಶ್ಲಾಘಿಸಿದ್ದಾರೆ. ಭಾರತ ತಂಡದಲ್ಲಿ ಪಾಟಿದಾರ್‌ಗೆ ಅವಕಾಶ ನೀಡಿ ಎಂದು ಆಗ್ರಹಿಸಿದ್ದಾರೆ.

ರಜತ್‌ ಪಾಟಿದಾರ್‌ಗೆ ಆಕಾಶ್‌ ಚೋಪ್ರಾ ಮೆಚ್ಚುಗೆ.

ನವದೆಹಲಿ: ಗುಜರಾತ್‌ ಟೈಟನ್ಸ್‌ ಎದುರು ಸ್ಪೋಟಕ ಬ್ಯಾಟಿಂಗ್‌ ಮೂಲಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ (RCB) ಮೊದಲನೇ ಕ್ವಾಲಿಫೈಯರ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕ ರಜತ್‌ ಪಾಟಿದಾರ್‌(Rajat Patidar) ಅವರನ್ನು ಭಾರತದ ಮಾಜಿ ಕ್ರಿಕೆಟ್‌ ಆಕಾಶ ಚೋಪ್ರಾ (Aakash Chopra) ಗುಣಗಾನ ಮಾಡಿದ್ದಾರೆ. ರಜತ್‌ ಪಾಟಿದಾರ್‌ಗೆ ಭಾರತ ತಂಡದಲ್ಲಿ ಅವಕಾಶ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. ಈ ಪಂದ್ಯದಲ್ಲಿ 92 ರನ್‌ಗಳಿಂದ ಗುಜರಾತ್‌ ಟೈಟನ್ಸ್‌ ತಂಡವನ್ನು ಮಣಿಸಿದ ಆರ್‌ಸಿಬಿ ತಂಡ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ಗೆ ಅರ್ಹತೆ ಪಡೆಯಿತು.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಸೋತ ಮೊದಲು ಬ್ಯಾಟ್‌ ಮಾಡುವಂತಾದ ಆರ್‌ಸಿಬಿ ಪರ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದ ರಜತ್‌ ಪಾಟಿದಾರ್‌, ಕೇವಲ 33 ಎಸೆತಗಳಲ್ಲಿ 9 ಸಿಕ್ಸರ್‌ ಹಗೂ 5 ಬೌಂಡರಿಗಳೊಂದಿಗೆ ಅಜೇಯ 93 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಆರ್‌ಸಿಬಿ 254 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು. ಬಳಿಕ ಗುರಿಯನ್ನು ಹಿಂಬಾಲಿಸಿದ ಜಿಟಿ 162 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ರಜತ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

IPL 2026ರ ಲೀಗ್‌ ಹಂತದ ಬೆಸ್ಟ್‌ XII ಆಟಗಾರರನ್ನು ಆರಿಸಿದ ಎಸ್‌ ಬದ್ರಿನಾಥ್‌!

ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಆಕಾಶ್‌ ಚೋಪ್ರಾ, "ಯಾರಾದರೂ 33 ಎಸೆತಗಳಲ್ಲಿ 93 ರನ್‌ಗಳನ್ನು ಬಾರಿಸಿ, ಪ್ಲೇಆಫ್ಸ್‌ನಲ್ಲಿ 112ರ ಸರಾಸರಿ ಹೊಂದಿದ್ದರೆ, ಅವರಿಗೆ ವಿಶೇಷ ಪ್ರಶಂಸೆ ಸಿಗಲೇಬೇಕು. ನಾನು ಅವರನ್ನು ಭಾರತ ತಂಡದಲ್ಲೇ ಆಡಿಸಬೇಕು ಎಂದು ಹೇಳುತ್ತಿದ್ದೇನೆ. ಇದು ಒಂದು ದೊಡ್ಡ ಫ್ರಾಂಚೈಸಿ. ಈ ತಂಡಕ್ಕೆ ಅನೇಕ ಖ್ಯಾತ ನಾಯಕರು ಇದ್ದರು, ಇದು ಅತ್ಯಂತ ಜನಪ್ರಿಯ ತಂಡವಾಗಿತ್ತು ಮತ್ತು ಅಪಾರ ಅಭಿಮಾನಿ ಬಳಗವನ್ನೂ ಹೊಂದಿತ್ತು. ಆದರೆ ಇಷ್ಟೊಂದು ವರ್ಷಗಳಾದರೂ ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ,” ಎಂದು ಹೇಳಿದ್ದಾರೆ.



“ಅವರು ಪಂದ್ಯವನ್ನೇ ಬದಲಿಸಿದರು. ಅವರಿಗೆ ಎರಡು ಜೀವದಾನಗಳು ಸಿಕ್ಕಿದ್ದರೂ, ಅದರ ಬಳಿಕ ಅವರು ಭರ್ಜರಿಯಾಗಿ ಬ್ಯಾಟಿಂಗ್ ನಡೆಸಿ ಎದುರಾಳಿ ಬೌಲರ್‌ಗಳನ್ನು ಸಂಪೂರ್ಣವಾಗಿ ಮಣಿಸಿದರು. ಒಂದು ಹಂತದಲ್ಲಿ ಕೇವಲ 30 ಎಸೆತಗಳಲ್ಲಿ 100 ರನ್‌ಗಳನ್ನು ಕಲೆಹಾಕಿದ್ದರು. ಇಂತಹ ಮನೋಭಾವವೇ ಪಂದ್ಯವನ್ನು, ಅದೃಷ್ಟವನ್ನು ಮತ್ತು ಸಂಪೂರ್ಣ ಸೀಸನ್‌ನ ದಿಕ್ಕನ್ನೇ ಬದಲಾಯಿಸುತ್ತದೆ. ಕ್ವಾಲಿಫೈಯರ್ ಪಂದ್ಯಗಳ ದೃಷ್ಟಿಯಿಂದ ನೋಡಿದರೆ, ಅದು ಅತ್ಯುತ್ತಮ ಇನಿಂಗ್ಸ್‌ಗಳಲ್ಲಿ ಒಂದಾಗಿದೆ,” ಎಂದು ಚೋಪ್ರಾ ಗುಣಗಾನ ಮಾಡಿದ್ದಾರೆ.

ರಜತ್‌ ಪಾಟಿದಾರ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಯಣ

ರಜತ್ ಪಾಟಿದಾರ್ ಈಗಾಗಲೇ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದರೂ, ಇನ್ನೂ ಟಿ20ಐ ಪಂದ್ಯದಲ್ಲಿ ಅವಕಾಶ ಪಡೆದಿಲ್ಲ. ಅವರು 2023ರ ದಕ್ಷಿಣ ಆಫ್ರಿಕಾ ಪ್ರವಾಸದ ಭಾರತ ಏಕದಿನ ಸರಣಿಯ ತಂಡದಲ್ಲಿ ಸ್ಥಾನ ಪಡೆದಿದ್ದರು ಹಾಗೂ ಒಂದು ಪಂದ್ಯದಲ್ಲಿ ಆಡಿದ್ದರು. ಆ ಪಂದ್ಯದಲ್ಲಿ ಅವರು 22 ರನ್‌ಗಳನ್ನು ಗಳಿಸಿದ್ದರು.

IPL 2026: ಗುಜರಾತ್‌ ಟೈಟನ್ಸ್‌ಗೆ ಮಣ್ಣು ಮುಕ್ಕಿಸಿ ಸತತ ಎರಡನೇ ಬಾರಿ ಫೈನಲ್‌ಗೇರಿದ ಆರ್‌ಸಿಬಿ!

ಇದರ ಬಳಿಕ, 2024ರಲ್ಲಿ ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಗೂ ರಜತ್ ಆಯ್ಕೆಯಾಗಿದ್ದರು. ಆದರೆ ಮೂರು ಟೆಸ್ಟ್ ಪಂದ್ಯಗಳಲ್ಲಿ ಕೇವಲ 63 ರನ್‌ಗಳನ್ನು ಮಾತ್ರ ಗಳಿಸಿದ ಅವರು ಬಳಿಕ ತಂಡದಿಂದ ಹೊರಬಿದ್ದರು. ಇಲ್ಲಿಯವರೆಗೆ ಟಿ20ಐ ತಂಡದಲ್ಲಿ ಅವಕಾಶ ಪಡೆಯದಿದ್ದರೂ, 2026ರ ಐಪಿಎಲ್ ಟೂರ್ನಿಲ್ಲಿ ತೋರಿದ ಭರ್ಜರಿ ಪ್ರದರ್ಶನದ ಹಿನ್ನೆಲೆಯಲ್ಲಿ ರಜತ್ ಪಾಟಿದಾರ್‌ಗೆ ಮೊದಲ ಟಿ20ಐ ಕರೆ ಬರುವ ಸಾಧ್ಯತೆ ಹೆಚ್ಚಾಗಿದೆ.