ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs AFG ಮೊದಲನೇ ಒಡಿಐಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ಆಕಾಶ್‌ ಚೋಪ್ರಾ!

Aakash Chopra picks India's Playing XI: ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಣ ಏಕದಿನ ಸರಣಿಯ ಮೊದಲನೇ ಪಂದ್ಯ ಜೂನ್‌ 13 ರಂದು ಧರ್ಮಶಾಲಾದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಕಾಶ್‌ ಚೋಪ್ರಾ ತಮ್ಮ ನೆಚ್ಚಿನ ಪ್ಲೇಯಿಂಗ್‌ XI ಆರಿಸಿದ್ದಾರೆ. ಇವರು ಪ್ರಿನ್ಸ್‌ ಯಾದವ್‌ ಅವರಿಗೆ ಪದಾರ್ಪಣೆ ಮಾಡಲು ಅವಕಾಶ ನೀಡಿದ್ದಾರೆ.

ಭಾರತದ ಪ್ಲೇಯಿಂಗ್‌ XI ಆರಿಸಿದ ಆಕಾಶ್‌ ಚೋಪ್ರಾ.

ಧರ್ಮಶಾಲಾ: ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಣ ಏಕದಿನ ಸರಣಿಯ ಮೊದಲನೇ ಪಂದ್ಯ ಜೂನ್‌ 13 ರಂದು ಶನಿವಾರ ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಮಾಜಿ ಟೆಸ್ಟ್‌ ಆರಂಭಿಕ ಆಕಾಶ್‌ ಚೋಪ್ರಾ ಅವರು ತಮ್ಮ ನೆಚ್ಚಿನ ಭಾರತ ತಂಡದ ಪ್ಲೇಯಿಂಗ್‌ XI ಆರಿಸಿದ್ದಾರೆ. ಏಕದಿನ ಸರಣಿಗೂ ಆರಂಭಿಕ ಮುನ್ನ ವಿರಾಟ್‌ ಕೊಹ್ಲಿ ಹಾಗೂ ಹಾರ್ದಿಕ್‌ ಪಾಂಡ್ಯ ಅವರು ಗಾಯದಿಂದ ಭಾರತ ತಂಡದಿಂದ ಹೊರ ನಡೆದಿದ್ದು, ಇದು ಆತಿಥೇಯ ತಂಡಕ್ಕೆ ಭಾರಿ ಹಿನ್ನಡೆಯನ್ನು ತಂದೊಡ್ಡಿದೆ.

ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆಕಾಶ್‌ ಚೋಪ್ರಾ,"ನಾನು ಆಯ್ಕೆ ಮಾಡಿದ ತಂಡದಲ್ಲಿ ಶುಭಮನ್‌ ಗಿಲ್‌ ಹಾಗೂ ರೋಹಿತ್‌ ಶರ್ಮಾ ಇನಿಂಗ್ಸ್‌ ಆರಂಭಿಸಲಿದ್ದಾರೆ. ಇನ್ನು ಹಾರ್ದಿಕ್‌ ಪಾಂಡ್ಯ ಅವರು ಲಭ್ಯತೆ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ. ಅವರು ಆಡುವುದಿಲ್ಲ ಎಂದು ನಾನು ಊಹಿಸುತ್ತಿದ್ದೇನೆ. ಇಶಾನ್‌ ಕಿಶನ್‌ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಲು ಬಯಸುತ್ತೇನೆ. ಶ್ರೇಯಸ್‌ ಅಯ್ಯರ್‌ ನಾಲ್ಕನೇ ಕ್ರಮಾಂಕದಲ್ಲಿ ಆಡಿದರೆ, ಐದನೇ ಕ್ರಮಾಂಕದಲ್ಲಿ ಕೆಎಲ್‌ ರಾಹುಲ್‌, ಆರನೇ ಕ್ರಮಾಂಕದಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ ಹಾಗೂ ಏಳನೇ ಕ್ರಮಾಂಕದಲ್ಲಿ ವಾಷಿಂಗ್ಟನ್‌ ಸುಂದರ್‌," ಎಂದು ಹೇಳಿದ್ದಾರೆ.

IND vs AFG: ಮೊಹಿಂದರ್‌ ಅಮರನಾಥ್‌ ದಾಖಲೆ ಮುರಿಯುವ ಸನಿಹದಲ್ಲಿ ರೋಹಿತ್‌ ಶರ್ಮಾ!

“ಎಂಟನೇ ಕ್ರಮಾಂಕದಲ್ಲಿ ಕುಲ್ದೀಪ್‌ ಯಾದವ್‌ ಕಾಣಿಸಿಕೊಳ್ಳಬಹುದು. ಬಳಿಕ ಒಂಬತ್ತರಿಂದ ಹನ್ನೊಂದನೇ ಕ್ರಮಾಂಕದವರೆಗೆ ಪ್ರಸಿಧ್‌ ಕೃಷ್ಣ, ಅರ್ಷದೀಪ್‌ ಸಿಂಗ್‌ ಮತ್ತು ಪ್ರಿನ್ಸ್‌ ಯಾದವ್‌ ಇರಬಹುದು. ಈ ರೀತಿಯ ಅಂತಿಮ ಹನ್ನೊಂದರ ಬಳಗವನ್ನು ನಾವು ಕಾಣುವ ಸಾಧ್ಯತೆಯಿದೆ. ಈ ತಂಡದಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ ಅವರ ಪಾತ್ರ ಇನ್ನಷ್ಟು ಮಹತ್ವದ್ದಾಗಿರಲಿದೆ,” ಎಂದು ಆಕಾಶ್‌ ಚೋಪ್ರಾ ತಿಳಿಸಿದ್ದಾರೆ.

ಚೋಪ್ರಾ ತಮ್ಮ ಅಂತಿಮ ಹನ್ನೊಂದರ ಬಳಗದಲ್ಲಿ 2023ರ ಬಳಿಕ ಏಕದಿನ ಪಂದ್ಯವನ್ನಾಡದ ಇಶಾನ್‌ ಕಿಶನ್‌ ಅವರನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಆಯ್ಕೆ ಮಾಡಿದ್ದಾರೆ. ಆದರೆ ಯಶಸ್ವಿ ಜೈಸ್ವಾಲ್‌ ಅವರಿಗೆ ಸ್ಥಾನ ನೀಡಿಲ್ಲ. ವಿರಾಟ್ ಕೊಹ್ಲಿಯ ಬದಲಿಯಾಗಿ ತಂಡಕ್ಕೆ ಸೇರಿದ್ದ ಜೈಸ್ವಾಲ್, ತಮ್ಮ ಹಿಂದಿನ ಏಕದಿನ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದರೂ, ನ್ಯೂಜಿಲೆಂಡ್ ಸರಣಿಗೆ ತಂಡದಿಂದ ಹೊರಗುಳಿದಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕೇನ್‌ ವಿಲಿಯಮ್ಸನ್‌ಗೆ ವಿರಾಟ್‌ ಕೊಹ್ಲಿ ಭಾವನಾತ್ಮಕ ಸಂದೇಶ!

ಇದಲ್ಲದೆ, ಚೋಪ್ರಾ ಅವರು ಪ್ರಿನ್ಸ್‌ ಯಾದವ್‌ ಅವರಿಗೆ ಪದಾರ್ಪಣೆ ಮಾಡುವ ಅವಕಾಶ ನೀಡಿದ್ದು, ಗುರ್ನೂರ್‌ ಬ್ರಾರ್‌ ಅವರನ್ನು ಕಡೆಗಣಿಸಿದ್ದಾರೆ. ಗುರ್ನೂರ್ ಬ್ರಾರ್ ಟೆಸ್ಟ್ ತಂಡದ ಭಾಗವಾಗಿದ್ದರೂ, ಅವರಿಗೆ ಇನ್ನೂ ಅಂತಾರಾಷ್ಟ್ರೀಯ ಪದಾರ್ಪಣೆಯ ಅವಕಾಶ ಸಿಕ್ಕಿಲ್ಲ.

ಮೊದಲನೇ ಏಕದಿನ ಪಂದ್ಯಕ್ಕೆ ಆಕಾಶ್‌ ಚೋಪ್ರಾ ಆರಿಸಿದ ಭಾರತದ ಪ್ಲೇಯಿಂಗ್‌ xi

ರೋಹಿತ್ ಶರ್ಮಾ, ಶುಭಮನ್ ಗಿಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್‌ದೀಪ್ ಯಾದವ್, ಪ್ರಸಿಧ್‌ ಕೃಷ್ಣ, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್