ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IPL 2026: ಸಿಎಸ್‌ಕೆ ಅಭಿಮಾನಿಗಳಿಗೆ ಸಿಹಿ ಸುದ್ದಿ, ಅಭ್ಯಾಸ ಆರಂಭಿಸಿದ ಎಂಎಸ್‌ ಧೋನಿ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ಮಾಜಿ ನಾಯಕ ಎಂಎಸ್‌ ಧೋನಿ ಅಭ್ಯಾಸವನ್ನು ಆರಂಭಿಸಿದ್ದಾರೆ. ಈ ವಿಡಿಯೊವನ್ನು ಜಾರ್ಖಂಡ್‌ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದೆ. ಎಂಎಸ್‌ ಧೋನಿ ಈ ಸೀಸನ್‌ನಲ್ಲಿ ಆಡುವುದು ಖಚಿತವಾಗಿದೆ.

2026ರ ಐಪಿಎಲ್‌ಗೆ ಅಭ್ಯಾಸ ಶುರು ಮಾಡಿದ ಎಂಎಸ್‌ ಧೋನಿ.

ನವದೆಹಲಿ: ಹತ್ತೊಂಬತ್ತನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು (IPL 2026) ಮಾರ್ಚ್ ಅಂತ್ಯದಲ್ಲಿ ಆರಂಭವಾಗಲಿದೆ. ಈ ಹೊಡಿ ಬಡಿ ಟೂರ್ನಿಯನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿ ಕಾಯುತ್ತಿದ್ದಾರೆ. ತಮ್ಮ ತಮ್ಮ ನೆಚ್ಚಿನ ತಂಡಗಳು ಹಾಗೂ ತಮ್ಮ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇದರ ನಡುವೆ ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅಭ್ಯಾಸವನ್ನು ಆರಂಭಿಸಿದ್ದಾರೆ. ಆ ಮೂಲಕ ಸಿಎಸ್‌ಕೆ ಪರ ಈ ಸೀಸನ್‌ ಆಡುವುದು ಖಚಿತವಾಗಿದೆ.

ಜಾರ್ಖಂಡ್ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಈ ವಿಡಿಯೊದಲ್ಲಿ ಎಂಎಸ್ ಧೋನಿ ತಮ್ಮ ಹಳದಿ ಪ್ಯಾಡ್‌ಗಳನ್ನು ಧರಿಸಿ ನಂತರ ಬ್ಯಾಟ್ ಹಿಡಿದು ಮಾತನಾಡುತ್ತಿರುವುದನ್ನು ಕಾಣಬಹುದು. "ಯಾರು ಹಿಂತಿರುಗಿದ್ದಾರೆ ನೋಡಿ, ಜೆಎಸ್‌ಸಿಎಯ ಹೆಮ್ಮೆ, ಮಹೇಂದ್ರ ಸಿಂಗ್ ಧೋನಿ." ಎಂಬ ಶೀರ್ಷಿಕೆಯಲ್ಲಿ ಜೆಎಸ್‌ಸಿಎ ಹಾಕಿಕೊಂಡಿದೆ. 2026ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಆರನೇ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಎದುರು ನೋಡುತ್ತಿದೆ.

IPL 2026: ಆರ್‌ಸಿಬಿ ತಂಡವನ್ನು ಖರೀದಿಸಲು ಮುಂದೆ ಬಂದ ಸೀರಮ್‌ ಕಂಪನಿ ಸಿಇಒ!

ಕಳೆದ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 14 ಪಂದ್ಯಗಳಲ್ಲಿ ಕೇವಲ ನಾಲ್ಕರಲ್ಲಿ ಗೆದ್ದು ಪಾಯಿಂಟ್ ಟೇಬಲ್‌ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಎಂಎಸ್ ಧೋನಿ ಅವರ ಕಡೆಯಿಂದಲೂ ಹೇಳಿಕೊಳ್ಳುವ ಪ್ರದರ್ಶನ ಮೂಡಿ ಬಂದಿರಲಿಲ್ಲ. ಅವರು 13 ಇನಿಂಗ್ಸ್‌ಗಳಲ್ಲಿ 24.50ಎ ಸರಾಸರಿ ಮತ್ತು 135.17ರ ಸ್ಟ್ರೈಕ್ ರೇಟ್‌ನಲ್ಲಿ 196 ರನ್ ಗಳಿಸಿದ್ದರು. ಋತುರಾಜ್ ಗಾಯಕ್ವಾಡ್ ಗಾಯದ ನಂತರ, ಎಂಎಸ್‌ ಧೋನಿ ಮತ್ತೊಮ್ಮೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕತ್ವ ವಹಿಸಿಕೊಂಡಿದ್ದರು.

ಎಂಎಸ್ ಧೋನಿಯ ಐಪಿಎಲ್ ವೃತ್ತಿಜೀವನ

44ರ ವಯಸ್ಸಿನ ಎಂಎಸ್ ಧೋನಿ 2008 ರಿಂದ ಐಪಿಎಲ್‌ನಲ್ಲಿ 278 ಪಂದ್ಯಗಳನ್ನು ಆಡಿದ್ದಾರೆ. 242 ಇನಿಂಗ್ಸ್‌ಗಳಲ್ಲಿ 137.45 ಸ್ಟ್ರೈಕ್ ರೇಟ್‌ನಲ್ಲಿ 5439 ರನ್ ಗಳಿಸಿದ್ದಾರೆ. ಅವರು ಐಪಿಎಲ್‌ನಲ್ಲಿ 24 ಅರ್ಧಶತಕಗಳನ್ನು ಗಳಿಸಿದ್ದಾರೆ. ಅವರ ಅತ್ಯುತ್ತಮ ಐಪಿಎಲ್ ವೈಯಕ್ತಿಕ ಸ್ಕೋರ್‌ ಅಜೇಯ 84 ರನ್‌ ಆಗಿದೆ. ಸಂಜು ಸ್ಯಾಮ್ಸನ್ ಸಿಎಸ್‌ಕೆಗೆ ಸೇರ್ಪಡೆಗೊಳ್ಳುವುದರೊಂದಿಗೆ, ಧೋನಿ 2026ರಲ್ಲಿ ಇಂಪ್ಯಾಕ್ಟ್‌ ಆಟಗಾರನಾಗಿ ಆಡಬಹುದು.



ಚೆನ್ನೈ ಸೂಪರ್‌ ಕಿಂಗ್ಸ್‌: ಋತುರಾಜ್‌ ಗಾಯಕ್ವಾಡ್‌ (ನಾಯಕ), ಆಯುಷ್‌ ಮ್ಹಾತ್ರೆ, ಎಂಎಸ್‌ ಧೋನಿ, ಡೆವಾಲ್ಡ್‌ ಬ್ರೆವಿಸ್‌, ಊರ್ವಿಲ್‌ ಪಟೇಲ್‌, ಶಿವಂ ದುಬೆ, ಜೇಮಿ ಓವರ್ಟನ್‌, ರಾಮಕೃಷ್ಣ ಘೋಷ್‌, ನೂರ್‌ ಅಹ್ಮದ್‌, ಖಲೀಲ್‌ ಅಹ್ಮದ್‌, ಅನ್ಶುಲ್‌ ಕಾಂಬೋಜ್‌, ಗುರ್ಜಪನೀತ್‌ ಸಿಂಗ್‌, ಶ್ರೇಯಸ್‌ ಗೋಪಾಲ್‌, ಮುಕೇಶ ಚೌಧರಿ, ನೇಥನ್‌ ಎಲ್ಲಿಸ್‌, ಸಂಜು ಸ್ಯಾಮ್ಸನ್‌ (ಟ್ರೇಡ್‌ ಡೀಲ್‌), ಕಾರ್ತಿಕ್‌ ಶರ್ಮಾ, ಪ್ರಶಾಂತ್‌ ವೀರ್‌, ರಾಹುಲ್‌ ಚಹರ್‌, ಅಕೀಲ್‌ ಹುಸೇನ್‌, ಮ್ಯಾಟ್‌ ಹೆನ್ರಿ, ಮ್ಯಾಥ್ಯೂ ಶಾರ್ಟ್‌, ಅಮನ್‌ ಖಾನ್‌, ಸರ್ಫರಾಝ್‌ ಖಾನ್‌, ಝ್ಯಾಕರಿ ಫೌಕ್ಸ್‌