ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ವಿರಾಟ್‌ ಕೊಹ್ಲಿ ಅಲ್ಲವೇ ಅಲ್ಲ, ಈ ಸಲ ಆರೆಂಜ್‌ ಕ್ಯಾಪ್‌ ಗೆಲ್ಲಬಲ್ಲ ಬ್ಯಾಟರ್‌ ಆರಿಸಿದ ಗ್ರೇಮ್‌ ಸ್ಮಿತ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ನಿರ್ಣಾಯಕ ಹಂತಕ್ಕೆ ತಲುಪಿದೆ. ಇದೀಗ ಎಂಟು ತಂಡಗಳ ನಡುವೆ ಅಗ್ರ ನಾಲ್ಕರ ಸ್ಥಾನಕ್ಕೆ ಭಾರಿ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ಆರೆಂಜ್‌ ಕ್ಯಾಪ್‌ಗೂ ಕೂಡ ಬ್ಯಾಟ್ಸ್‌ಮನ್‌ಗಳ ನಡುವೆ ಫೈಟ್‌ ನಡೆಯುತ್ತಿದೆ. ಅಂದ ಹಾಗೆ ಈ ಬಾರಿ ಆರೆಂಜ್‌ ಕ್ಯಾಪ್‌ ಗೆಲ್ಲಬಲ್ಲ ಬ್ಯಾಟ್ಸ್‌ಮನ್‌ ಯಾರೆಂದು ದಕ್ಷಿಣ ಆಫ್ರಿಕಾ ದಿಗ್ಗಜ ಗ್ರೇಮ್‌ ಸ್ಮಿತ್‌ ಅಭಿಪ್ರಾಯಪಟ್ಟಿದ್ದಾರೆ.

ಆರೆಂಜ್‌ ಕ್ಯಾಪ್‌ ಗೆಲ್ಲಬಲ್ಲ ಆಟಗಾರನನ್ನು ಆರಿಸಿದ ಗ್ರೇಮ್‌ ಸ್ಮಿತ್‌.

ನವದೆಹಲಿ: ಪ್ರಸ್ತುತ ಸಾಗುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯು ನಿರ್ಣಾಯಕ ಹಂತಕ್ಕೆ ತಲುಪಿದೆ. ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು ಎಂಟು ತಂಡಗಳ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಇದರ ಜೊತೆಗೆ ಆರೆಂಜ್‌ ಕ್ಯಾಪ್‌ ಹಾಗೂ ಪರ್ಪಲ್‌ ಕ್ಯಾಪ್‌ ಗೆಲ್ಲಲು ಕೂಡ ಆಟಗಾರರ ನಡುವೆ ತೀವ್ರ ಕಾದಾಟ ನಡೆಯುತ್ತಿದೆ. ಇದರ ನಡುವೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಗ್ರೇಮ್‌ ಸ್ಮಿತ್‌ (Graeme smith) ಅವರು ಈ ಬಾರಿ ಐಪಿಎಲ್‌ ಟೂರ್ನಿಯಲ್ಲಿ ಆರೆಂಜ್‌ ಕ್ಯಾಪ್‌ ಗೆಲ್ಲಬಲ್ಲ ಬ್ಯಾಟ್ಸ್‌ಮನ್‌ ಅನ್ನು ಆರಿಸಿದ್ದಾರೆ. ಆದರೆ, ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರಾಟ್‌ ಕೊಹ್ಲಿ (Virat Kohli) ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡದ ವೈಭವ್‌ ಸೂರ್ಯವಂಶಿ ಅವರನ್ನು ಕೈ ಬಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಟೂರ್ನಿಯಲ್ಲಿ ಪಂದ್ಯದಿಂದ ಪಂದ್ಯಕ್ಕೆ ಆರೆಂಜ್‌ ಕ್ಯಾಪ್‌ ಆಟಗಾರರ ಪಟ್ಟಿ ನಿರಂತರವಾಗಿ ಬದಲಾವಣೆಯಾಗುತ್ತಿದೆ. ಸದ್ಯ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಹೆನ್ರಿಕ್‌ ಕ್ಲಾಸೆನ್‌ ಅವರು 12 ಇನಿಂಗ್ಸ್‌ಗಳಿಂದ 508 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್‌ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಆರೆಂಜ್‌ ಕ್ಯಾಪ್‌ ಅನ್ನು ತನ್ನಲ್ಲಿಯೇ ಉಳಿಸಿಕೊಂಡಿದ್ದಾರೆ. ಇದೇ ಪಂದ್ಯದಲ್ಲಿ ಹೆನ್ರಿಕ್‌ ಕ್ಲಾಸೆನ್‌ ಕ್ರೀಸ್‌ಗೂ ಬರುವುದಕ್ಕೂ ಗುಜರಾತ್‌ ಟೈಟನ್ಸ್‌ ತಂಡದ ಸಾಯಿ ಸುದರ್ಶನ್‌ ಬಳಿ ಇತ್ತು. ಆದರೆ, ಮುಂದಿನ ಇನಿಂಗ್ಸ್‌ನಲ್ಲಿ ಆರೆಂಜ್‌ ಕ್ಯಾಪ್‌ ಆಟಗಾರನ ಹೆಸರು ಬದಲಾಯಿತು.

IPL 2026: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಕರ್ನಾಟಕ ಆಲ್‌ರೌಂಡರ್‌ ಮ್ಯಾಕ್ನೀಲ್ ನೊರೊನ್ಹಾಗೆ ಅವಕಾಶ!

ದಕ್ಷಿಣ ಆಫ್ರಿಕಾ ದಿಗ್ಗಜ ಗ್ರೇಮ್‌ ಸ್ಮಿತ್‌ ಅವರು ಈ ಸಲ ಯಾವ ಬ್ಯಾಟ್ಸ್‌ಮನ್‌ ಆರೆಂಜ್‌ ಕ್ಯಾಪ್‌ ಗೆಲ್ಲಬಹುದೆಂದು ಅಂದಾಜಿಸಿದ್ದಾರೆ. ಅವರು ಆರ್‌ಸಿಬಿ ತಂಡದ ದಿಗ್ಗಜ ವಿರಾಟ್‌ ಕೊಹ್ಲಿ ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡದ ವೈಭವ್‌ ಸೂರ್ಯವಂಶಿ ಅವರನ್ನು ಕೂಡ ಆರೆಂಜ್‌ ಕ್ಯಾಪ್‌ನ ಬಲಿಷ್ಢ ಸ್ಪರ್ಧಿಗಳು ಎಂದು ಗುರುತಿಸಿದ ಸ್ಮಿತ್‌, ಅಂತಿಮವಾಗಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಆರಂಭಿಕ ಅಭಿಷೇಕ್‌ ಶರ್ಮಾ ಈ ಬಾರಿ ಆರೆಂಜ್‌ ಕ್ಯಾಪ್‌ ಗೆಲ್ಲಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ.

ಆರೆಂಜ್‌ ಕ್ಯಾಪ್‌ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿ ಅಭಿಷೇಕ್‌

ಅಭಿಷೇಕ್‌ ಶರ್ಮಾ ಪ್ರಸ್ತುತ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು 12 ಇನಿಂಗ್ಸ್‌ಗಳಲ್ಲಿ 43.73ರ ಸರಾಸರಿ ಮತ್ತು 209.13ರ ಅದ್ಭುತ ಸ್ಟ್ರೈಕ್ ರೇಟ್‌ನೊಂದಿಗೆ 481 ರನ್‌ಗಳನ್ನು ಗಳಿಸಿದ್ದಾರೆ. 2026ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಎದುರಿಸಿದ ಕೆಲ ಹಿನ್ನಡೆಗಳ ಬಳಿಕ, ಅವರು ಮತ್ತೆ ತಮ್ಮ ಸ್ಫೋಟಕ ಲಯವನ್ನು ಕಂಡುಕೊಂಡಿದ್ದಾರೆ. ಎಸ್‌ಆರ್‌ಎಚ್‌ ತಂಡದ ಈ ಸ್ಟಾರ್‌ ಬ್ಯಾಟರ್ 12 ಇನಿಂಗ್ಸ್‌ಗಳಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 135 ರನ್‌ಗಳ ಸ್ಫೋಟಕ ಇನಿಂಗ್ಸ್ ಆಡಿದ ವೇಳೆ, 150ರನ್ ಗಡಿ ದಾಟುವ ಭೀತಿಯನ್ನೂ ಎದುರಾಳಿ ತಂಡಕ್ಕೆ ಉಂಟುಮಾಡಿದ್ದರು.

‌IPL 2026: 500 ರನ್‌ಗಳ ಮೂಲಕ ವಿರಾಟ್‌ ಕೊಹ್ಲಿ ದಾಖಲೆ ಮುರಿದ ಸಾಯಿ ಸುದರ್ಶನ್!

“ಈ ಸೀಸನ್‌ನಲ್ಲಿ ಆರೆಂಜ್ ಕ್ಯಾಪ್‌ಗಾಗಿ ಭರ್ಜರಿ ಪೈಪೋಟಿ ನಡೆಯುತ್ತಿದೆ. ವಿಶ್ವಕಪ್‌ ಟೂರ್ನಿಯಲ್ಲಿ ಕಂಡ ಹಿನ್ನಡೆ ಮತ್ತು ವಭವ್‌ ಸೂರ್ಯವಂಶಿ ಅವರಂತಹ ಪ್ರತಿಭಾವಂತ ಆಟಗಾರರ ಹೊರತಾಗಿಯೂ, ಅಭಿಷೇಕ್ ಶರ್ಮಾಗೆ ಅತ್ಯುತ್ತಮ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ. ಟಾಪ್ ಆರ್ಡರ್‌ನಲ್ಲಿ ಬ್ಯಾಟ್‌ ಮಾಡುವವರಿಗೆ ಹೆಚ್ಚು ಸಮಯ ಸಿಗುತ್ತದೆ. ಹೀಗಾಗಿ ಫಾರ್ಮ್‌ನಲ್ಲಿ ಸಣ್ಣ ಕುಸಿತ ಬಂದರೂ ಅದನ್ನು ಬೇಗ ಸರಿಪಡಿಸಿಕೊಳ್ಳಲು ಅವಕಾಶ ಇರುತ್ತದೆ. ವಿಶೇಷವಾಗಿ ಇಂತಹ ಸಮತಟ್ಟಾದ ಪಿಚ್‌ಗಳಲ್ಲಿ ಅದು ಇನ್ನಷ್ಟು ಸಾಧ್ಯ,” ಎಂದು ಗ್ರೇಮ್‌ ಸ್ಮಿತ್ ತಮ್ಮ ದಕ್ಷಿಣ ಆಫ್ರಿಕಾ20 ಅಂಕಣದಲ್ಲಿ ಹೇಳಿದ್ದಾರೆ.

“ಶರ್ಮಾ ಬಹುತೇಕ ಬ್ಯಾಟರ್‌ಗಳಿಗಿಂತ ಹೆಚ್ಚು ಚೌಕಾಕಾರದ ಶಾಟ್‌ಗಳನ್ನು ಆಡುತ್ತಾರೆ, ವಿಶೇಷವಾಗಿ ಆಫ್ ಸೈಡ್‌ನಲ್ಲಿ. ಇಂದಿನ ಯುವ ಆಟಗಾರರಲ್ಲಿ ಭಯ ಎಂಬುದೇ ಕಾಣುವುದಿಲ್ಲ. ಆರಂಭದಿಂದಲೇ ಅವರು ಬೌಂಡರಿಗಳ ಮಳೆಗೈಯುತ್ತಿದ್ದಾರೆ,” ಎಂದು ಅವರು ಸೇರಿಸಿದ್ದಾರೆ.