ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬುಮ್ರಾ, ಕೊಹ್ಲಿಯನ್ನು ಕೈ ಬಿಟ್ಟು ಭಾರತ-ಇಂಗ್ಲೆಂಡ್‌ ಸಂಯೋಜನೆಯ ಟೆಸ್ಟ್‌ XI ಕಟ್ಟಿದ ನಿಕ್‌ ನೈಟ್‌!

Nick Knight Picked IND-ENG Test XI: ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ ನಿಕ್‌ ನೈಟ್‌ ಅವರು ಭಾರತ ಹಾಗೂ ಇಂಗ್ಲೆಂಡ್‌ ಸಂಯೋಜನೆಯ ಟೆಸ್ಟ್‌ ಪ್ಲೇಯಿಂಗ್‌ XI ಅನ್ನು ಆಯ್ಕೆ ಮಾಡಿದ್ದಾರೆ. ಆದರೆ, ಆಧುನಿಕ ಕ್ರಿಕೆಟ್‌ ದಿಗ್ಗಜರಾದ ವಿರಾಟ್‌ ಕೊಹ್ಲಿ ಹಾಗೂ ಜಸ್‌ಪ್ರೀತ್‌ ಬುಮ್ರಾ ಅವರನ್ನು ಕೈ ಬಿಡುವ ಮೂಲಕ ನಿಕ್‌ ನೈಟ್‌ ಅಚ್ಚರಿ ಮೂಡಿಸಿದ್ದಾರೆ.

ಭಾರತ-ಇಂಗ್ಲೆಂಡ್‌ ಸಂಯೋಜನೆಯ ಟೆಸ್ಟ್‌ ಪ್ಲೇಯಿಂಗ್‌ XI ಆರಿಸಿದ ನಿಕ್‌ ನೈಟ್‌.

ನವದೆಹಲಿ: ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ ನಿಕ್‌ ನೈಟ್‌ (Nick Knight) ಅವರು ಭಾರತ ಹಾಗೂ ಇಂಗ್ಲೆಂಡ್‌ (IND-ENG Test XI) ಸಂಯೋಜನೆಯ ಟೆಸ್ಟ್‌ ಪ್ಲೇಯಿಂಗ್‌ Xi ಅನ್ನು ಆಯ್ಕೆ ಮಾಡಿದ್ದು, ಆಧುನಿಕ ಬ್ಯಾಟಿಂಗ್‌ ದಿಗ್ಗಜ ವಿರಾಟ್‌ ಕೊಹ್ಲಿ (Virat Kohli) ಹಾಗೂ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಅವರನ್ನು ಕೈ ಬಿಟ್ಟು ಅಚ್ಚರಿ ಮೂಡಿಸಿದ್ದಾರೆ. ಆದರೆ, ಭಾರತದಿಂದ ಮಾಸ್ಟರ್‌-ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌, ವೀರೇಂದ್ರ ಸೆಹ್ವಾಗ್‌ ಸೇರಿದಂತೆ ಐವರಿಗೆ ನಿಕ್‌ ನೈಟ್‌ ಸ್ಥಾನವನ್ನು ಕಲ್ಪಿಸಿದ್ದಾರೆ. ಇನ್ನು ಇವರು ವಿಕೆಟ್‌ ಕೀಪರ್‌ ಆಗಿ ಭಾರತದ ಮಾಜಿ ನಾಯಕ ವೀರೇಂದ್ರ ಸೆಹ್ವಾಗ್‌ ಅವರನ್ನು ಆಯ್ಕೆ ಮಾಡಿದ್ದಾರೆ.

ತನ್ನ ನೆಚ್ಚಿನ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನಾಗಿ ಇಂಗ್ಲೆಂಡ್‌ನ ಆಲ್‌ಸ್ಟೈರ್‌ ಕುಕ್‌ ಹಾಗೂ ಭಾರತದ ಸ್ಪೋಟಕ ಬ್ಯಾಟರ್‌ ವೀರೇಣದ್ರ ಸೆಹ್ವಾಗ್‌ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕುಕ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅದ್ಭುತ ದಾಖಲೆಗಳನ್ನು ಹೊಂದಿದ್ದಾರೆ ಹಾಗೂ ಇನಿಂಗ್ಸ್‌ ಕಟ್ಟುವ ಅದ್ಭುತ ಕೌಶಲವನ್ನು ಅವರು ಹೊಂದಿದ್ದಾರೆ. ಇನ್ನು ಸೆಹ್ವಾಗ್‌ ಆಕ್ರಮಣಕಾರಿ ಬ್ಯಾಟಿಂಗ್‌ ಪ್ರದರ್ಶನ ತೋರುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಮೈಕಲ್‌ ವಾನ್‌, ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಹಾಗೂ ಕೆವಿನ್‌ ಪೀಟರ್ಸನ್‌ಗೆ ಅವರು ಅವಕಾಶ ನೀಡಿದ್ದಾರೆ.

IND vs ENG: ನಾಲ್ಕನೇ ಟೆಸ್ಟ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ ಸ್ಥಾನಕ್ಕೆ ಸೂಕ್ತ ವೇಗಿಯನ್ನು ಆರಿಸಿದ ಅಜಿಂಕ್ಯ ರಹಾನೆ!

ಇನ್ನು ಗ್ರಹಾಮ್‌ ತೊರ್ಪೆ ಹಾಗೂ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಆಗಿ ಎಂಎಸ್‌ ಧೋನಿಯನ್ನು ಅವರು ಆರಿಸಿದ್ದಾರೆ. ನಿಕ್‌ ನೈಟ್‌ ಅವರು ಒಟ್ಟು 7 ಮಂದಿ ಬ್ಯಾಟ್ಸ್‌ಮನ್‌ಗಳನ್ನು ಆರಿಸಿದ್ದಾರೆ. ಮೂವರು ವೇಗಿಗಳಾಗಿ ಝಹೀರ್‌ ಖಾನ್‌, ಸ್ಟುವರ್ಟ್‌ ಬ್ರಾಡ್‌ ಹಾಗೂ ಜೇಮ್ಸ್‌ ಆಂಡರ್ಸನ್‌ ಅವರನ್ನು ಆರಿಸಿದ ಅವರು, ಪೂರ್ಣ ಪ್ರಮಾಣದ ಸ್ಪಿನ್ನರ್‌ ಆಗಿ ಗ್ರೇಮ್‌ ಸ್ವಾನ್‌ ಅವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಹನ್ನೇರಡನೇ ಆಟಗಾರನಾಗಿ ಭಾರತದ ಸ್ಪಿನ್‌ ದಿಗ್ಗಜ ಅನಿಲ್‌ ಕುಂಬ್ಳೆ ಯವರನ್ನು ಸೇರಿಸಿಕೊಂಡಿದ್ದಾರೆ.

IND vs ENG 4th Test: ರಿಷಭ್‌ ಪಂತ್‌ ಬಗ್ಗೆ ಟೀಮ್‌ ಇಂಡಿಯಾಗೆ ಎಚ್ಚರಿಕೆ ಕೊಟ್ಟ ರವಿ ಶಾಸ್ತ್ರಿ!

ನಿಕ್‌ ನೈಟ್‌ ಆರಿಸಿದ ಭಾರತ-ಇಂಗ್ಲೆಂಡ್‌ ಸಂಯೋಜನೆಯ ಟೆಸ್ಟ್‌ ಪ್ಲೇಯಿಂಗ್‌ xi

  1. ಆಲ್‌ಸ್ಟೈರ್‌ ಕುಕ್‌ (ಓಪನರ್‌)

2. ವೀರೇಂದ್ರ ಸೆಹ್ವಾಗ್‌ (ಓಪನರ್‌)

3. ಮೈಕಲ್‌ ವಾನ್‌ (ಬ್ಯಾಟ್ಸ್‌ಮನ್‌)

4. ಸಚಿನ್‌ ತೆಂಡೂಲ್ಕರ್‌ (ಬ್ಯಾಟ್ಸ್‌ಮನ್‌)

5. ಕೆವಿನ್‌ ಪೀಟರ್ಸನ್‌ (ಬ್ಯಾಟ್ಸ್‌ಮನ್‌)

6. ಗ್ರಹಾಮ್‌ ತೊರ್ಪೆ (ಬ್ಯಾಟ್ಸ್‌ಮನ್‌)

7. ಎಂಎಸ್‌ ಧೋನಿ (ವಿಕೆಟ್‌ ಕೀಪರ್‌/ಬ್ಯಾಟ್ಸ್‌ಮನ್‌)

8. ಗ್ರೇಮ್‌ ಸ್ವಾನ್‌ (ಸ್ಪಿನ್ನರ್‌)

9. ಝಹೀರ್‌ ಖಾನ್‌ (ವೇಗದ ಬೌಲರ್‌)

10. ಸ್ಟುವರ್ಟ್‌ ಬ್ರಾಡ್‌ (ವೇಗದ ಬೌಲರ್‌)

11. ಜೇಮ್ಸ್‌ ಆಂಡರ್ಸನ್‌ (ವೇಗದ ಬೌಲರ್‌)

12. ಅನಿಲ್‌ ಕುಂಬ್ಳೆ (12ನೇ ಆಟಗಾರ)