ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತ ತಂಡದಲ್ಲಿ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾರ ಪಾತ್ರವನ್ನು ವಿವರಿಸಿದ ಗೌತಮ್‌ ಗಂಭೀರ್‌!

ಭಾರತ ತಂಡದ ನಾಯಕನಾಗಿ ಬೆಳೆಯುತ್ತಿರುವ ಹಾದಿಯಲ್ಲಿ ಶುಭಮನ್‌ ಗಿಲ್‌ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತಿರುವ ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರನ್ನು ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧದ ಒಡಿಐ ಸರಣಿಗೆ ಟೀಮ್‌ ಇಂಡಿಯಾ ಸಜ್ಜಾಗುತ್ತಿದೆ.

ಕೊಹ್ಲಿ, ರೋಹಿತ್‌ ಮಹತ್ವವನ್ನು ತಿಳಿಸಿದ ಗೌತಮ್‌ ಗಂಭೀರ್.

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನಾಯಕನಾಗಿ ಬೆಳೆಯಲು ಶುಭಮನ್‌ ಗಿಲ್‌ಗೆ (Shubman Gill) ನೆರವಾಗುತ್ತಿರುವ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರ ಅನುಪಸ್ಥಿತಿಯನ್ನು ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಗುಣಗಾನ ಮಾಡಿದ್ದಾರೆ. ತಿರುವನಂತಪುರಂನಲ್ಲಿ ಸೆಪ್ಟಂಬರ್‌ 27 ರಂದು ಮೊದಲನೇ ಪಂದ್ಯದ ಮೂಲಕ ವೆಸ್ಟ್‌ ಇಂಡೀಸ್‌ ಹಾಗೂ ಭಾರತ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಗೆ ಭಾರತ ತಂಡ ಸಜ್ಜಾಗುತ್ತಿದೆ. ಈ ಸರಣಿಯ ಮೂಲಕ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ.

ಕಳೆದ ವರ್ಷ ಶುಭಮನ್‌ ಗಿಲ್‌ ಭಾರತ ಏಕದಿನ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಇದೀಗ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ತಂಡವನ್ನು ಮುನ್ನಡೆಸಲಿದ್ದು, ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರ ಅನುಭವವನ್ನು ಬಳಸಿಕೊಳ್ಳಲಿದ್ದಾರೆ. ಭಾನುವಾರ ತಿರುವನಂತಪುರಂನ ಗ್ರೀನ್‌ ಫೀಲ್ಡ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಮೊದಲನೇ ಏಕದಿನ ಪಂದ್ಯ ನಡೆಯಲಿದೆ.

IND vs AFG ಟಿ20ಐ ಸರಣಿಯಲ್ಲಿ ವೈಭವ್‌ ಸೂರ್ಯವಂಶಿ ಆಡದೇ ಇರಲು ಕಾರಣ ತಿಳಿಸಿದ ಗೌತಮ್‌ ಗಂಭೀರ್‌!

ಜಿಯೊ ಸ್ಟಾರ್‌ ಸಂದರ್ಶನದಲ್ಲಿ ಮಾತನಾಡಿದ ಗೌತಮ್‌ ಗಂಭೀರ್‌,"ಏಕದಿನ ಕ್ರಿಕೆಟ್‌ ಬಗ್ಗೆ ನೀವು ಮಾತನಾಡಿದಾಗ, ಆಫ್‌ ಫೀಲ್ಡ್‌ ಹಾಗೂ ಆನ್‌ ಫೀಲ್ಡ್‌ನಲ್ಲಿ ನೆರವು ನೀಡಲು ನಿಮಗೆ ಹಿರಿಯ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಇರುವುದು ನಮ್ಮ ಪಾಲಿಗೆ ಪ್ಲಸ್‌ ಪಾಯಿಂಟ್‌. ಅದಾದ ನಂತರ, ಇನ್ನೂ ಮುಖ್ಯವಾಗಿ, ನನ್ನ ಪ್ರಕಾರ ಶಾಂತವಾಗಿರುವುದು ಮತ್ತು ಭಾವನೆಗಳನ್ನು ಬದಿಗಿರಿಸುವುದು ಬಹಳ ಮುಖ್ಯ. ಏಕೆಂದರೆ ನೀವು ಯುವಕರಾಗಿದ್ದಾಗ ಕೆಲವೊಮ್ಮೆ ಭಾವನೆಗಳ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆಯೂ ಇರುತ್ತದೆ,” ಎಂದು ಹೇಳಿದ್ದಾರೆ.

ಶುಭಮನ್‌ ಗಿಲ್‌ ನಿಸ್ವಾರ್ಥ, ಶಾಂತ ಸ್ವಭಾವದ ವ್ಯಕ್ತಿ: ಗಂಭೀರ್‌

ಗೌತಮ್‌ ಗಂಭೀರ್ ಅವರು ಶುಭಮನ್ ಗಿಲ್ ಅವರ ನಾಯಕತ್ವದ ವಿಧಾನವನ್ನೂ ಶ್ಲಾಘಿಸಿದ್ದಾರೆ. 26ರ ವಯಸ್ಸಿನ ಗಿಲ್ ನಾಯಕತ್ವದ ಜವಾಬ್ದಾರಿ ಪಡೆದ ಬಳಿಕ ತೋರಿಸಿರುವ ವಿಭಿನ್ನ ಗುಣಗಳನ್ನು ಅವರು (ಗಂಭೀರ್‌) ಮೆಚ್ಚಿಕೊಂಡಿದ್ದಾರೆ. 2027ರ ಏಕದಿನ ವಿಶ್ವಕಪ್‌ಗೆ ತಂಡವನ್ನು ಸಿದ್ಧಪಡಿಸುವ ಉದ್ದೇಶದಿಂದ ಗಿಲ್ ಭಾರತ ತಂಡದ ಏಕದಿನ ನಾಯಕತ್ವ ವಹಿಸಿದ್ದಾರೆ.

ವೈಭವ್‌ ಸೂರ್ಯವಂಶಿ ಆಯ್ಕೆಯ ಸಂಬಂಧ ಒಂದು ರಾತ್ರಿ ನಿದ್ರೆ ಮಾಡಿರಲಿಲ್ಲ: ಗೌತಮ್‌ ಗಂಭೀರ್‌

ಗಿಲ್ ನಾಯಕತ್ವದಲ್ಲಿ ಶಾಂತವಾಗಿರುವ ಗುಣ, ಸ್ವಾರ್ಥರಹಿತ ಮನೋಭಾವ ಹಾಗೂ ಅಗತ್ಯ ಸಂದರ್ಭದಲ್ಲಿ ಆಕ್ರಮಣಕಾರಿ ನಿಲುವು ಕಾಣಿಸುತ್ತಿದೆ ಎಂದು ಗಂಭೀರ್ ಹೇಳಿದ್ದಾರೆ. ಸರಿಯಾದ ಮಾತುಗಳನ್ನು ಹೇಳುವುದರ ಜೊತೆಗೆ, ಕೇವಲ ರನ್‌ಗಳಿಂದಲ್ಲ, ತಮ್ಮ ನಡೆ-ನುಡಿಗಳ ಮೂಲಕವೂ ತಂಡವನ್ನು ಮುನ್ನಡೆಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಅವರು ಎಲ್ಲಾ ರೀತಿಯಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಶಾಂತವಾಗಿದ್ದಾರೆ, ಸ್ವಾರ್ಥರಹಿತರಾಗಿದ್ದಾರೆ, ಆಕ್ರಮಣಕಾರಿಯಾಗಿದ್ದಾರೆ. ಸರಿಯಾದ ಮಾತುಗಳನ್ನು ಹೇಳಿದ್ದಾರೆ. ಕೇವಲ ರನ್‌ಗಳ ಮೂಲಕವಲ್ಲ, ತಮ್ಮ ನಡೆ-ನುಡಿಗಳ ಮೂಲಕವೂ ನಾಯಕತ್ವ ವಹಿಸಿದ್ದಾರೆ. ಅವರು ಎಲ್ಲಾ ಸರಿಯಾದ ಕೆಲಸಗಳನ್ನು ಮಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಏಕದಿನ ಕ್ರಿಕೆಟ್‌ನಲ್ಲಿ ಅವರಿಗೆ ಇತ್ತೀಚೆಗೆ ಸ್ವಲ್ಪ ಕಠಿಣ ಸಮಯ ಎದುರಾಗಿದೆ. ಆದರೆ ಫಲಿತಾಂಶವೂ ಶೀಘ್ರದಲ್ಲೇ ಅವರ ಪರವಾಗಿ ತಿರುಗಲಿದೆ ಎಂಬ ವಿಶ್ವಾಸವಿದೆ. ಏಕೆಂದರೆ ಅವರು ಮಾಡಬೇಕಾದ ಎಲ್ಲವನ್ನೂ ಸರಿಯಾದ ರೀತಿಯಲ್ಲಿ ಮಾಡಿದ್ದಾರೆ,” ಎಂದು ಗಂಭೀರ್ ಹೇಳಿದರು.