ನವದೆಹಲಿ: ಗೌತಮ್ ಗಂಭೀರ್ (Gautam Gambhir) ಅವರ ಹೆಡ್ ಕೋಚ್ ಅಡಿಯಲ್ಲಿ ಭಾರತ ತಂಡ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಸಾಕಷ್ಟು ಸಕ್ಸಸ್ ಕಂಡಿದೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ವೈಫಲ್ಯ ಅನುಭವಿಸಿದೆ. ಇದರಲ್ಲಿ ವಿಶೇಷವಾಗಿ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ತವರು ಟೆಸ್ಟ್ ಸರಣಿಗಳಲ್ಲಿ ಕ್ಲೀನ್ ಸ್ವೀಪ್ ಆಘಾತ ಅನುಭವಿಸಿತು. ಇದರ ಪರಿಣಾಮವಾಗಿ ಭಾರತ ಟೆಸ್ಟ್ ತಂಡದ ಹೆಡ್ ಕೋಚ್ ಹುದ್ದೆಯಿಂದ ಗೌತಮ್ ಗಂಭೀರ್ ಅವರನ್ನು ತೆಗೆದು ವಿವಿಎಸ್ ಲಕ್ಷ್ಮಣ್‌ಗೆ (VVS Laxman) ನೀಡಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಈ ಬಗ್ಗೆ ಇದೀಗ ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ (Devajit Saikia) ಅವರು ಪ್ರತಿಕ್ರಿಯಿಸಿದ್ದಾರೆ.
ಭಾರತ ತಂಡದ ಹೆಡ್ ಕೋಚ್ ಅಡಿಯಲ್ಲಿ ಭಾರತ ತಂಡ ಮೂರೂ ಸ್ವರೂಪಗಳಲ್ಲಿ ಮಿಶ್ರ ಫಲಿತಾಂಶವನ್ನು ಪಡೆದಿದೆ. ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಕೋಚ್ ಆಗಿ ಗಂಭೀರ್ ಯಶಸ್ವಿಯಾಗಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ಏಷ್ಯಾ ಕಪ್ ಟೂರ್ನಿಗಳಲ್ಲಿ ಭಾರತ ತಂಡ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಇದೇ ಪ್ರದರ್ಶನ ಭಾರತ ತಂಡದಿಂದ ಮೂಡಿ ಬಂದಿಲ್ಲ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಕಳೆದ ವರ್ಷದಿಂದ 10 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಗೌತಮ್ ಗಂಭೀರ್ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ.
AUS vs ENG: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 22,000 ರನ್ ಗಳಿಸಿದ ಜೋ ರೂಟ್!
ದಕ್ಷಿಣ ಆಫ್ರಿಕಾ ವಿರುದ್ಧ ಕಳೆದ ತಿಂಗಳು ಭಾರತ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಆಘಾತ ಅನುಭವಿಸಿತ್ತು.ಇದಾದ ಬಳಿಕ ಗಂಭೀರ್ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದರ ನಂತರ, ಬಿಸಿಸಿಐ ಕೆಂಪು ಚೆಂಡಿನ ವ್ಯವಸ್ಥೆಗೆ ಪರ್ಯಾಯ ಆಯ್ಕೆಗಳನ್ನು ಅನ್ವೇಷಿಸಿದೆ ಎಂದು ವರದಿಯಾಗಿದೆ. ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಕ್ರಿಕೆಟ್ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರನ್ನು ಸಂಭಾವ್ಯ ಪಾತ್ರಕ್ಕೆ ಲಿಂಕ್ ಮಾಡುವ ಊಹಾಪೋಹಗಳು ಕೇಳಿಬಂದವು. ಭಾರತದ ಟೆಸ್ಟ್ ಪ್ರದರ್ಶನಗಳ ಪರಿಶೀಲನೆಯ ಹಿನ್ನೆಲೆಯಲ್ಲಿ ಈ ಚರ್ಚೆ ವೇಗ ಪಡೆದುಕೊಂಡಿತು.
ದೇವಜೀತ್ ಸೈಕಿಯಾ ಆ ಹೇಳಿಕೆಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಯಾವುದೇ ತರಬೇತುದಾರರನ್ನು ಸಂಪರ್ಕಿಸಿಲ್ಲ ಮತ್ತು ಯಾವುದೇ ಸ್ವರೂಪದಲ್ಲಿ ಗಂಭೀರ್ ಅವರನ್ನು ಬದಲಾಯಿಸುವ ಬಗ್ಗೆ ಮಂಡಳಿ ಚರ್ಚಿಸಿಲ್ಲ ಎಂದು ಪುನರುಚ್ಚರಿಸಿದರು. ಗಂಭೀರ್ ಅವರ ಒಪ್ಪಂದವು 2027ರ ಏಕದಿನ ವಿಶ್ವಕಪ್ ಟೂರ್ನಿಯವರೆಗೆ ಇರುತ್ತದೆ ಮತ್ತು ಪ್ರಸ್ತುತ ತರಬೇತಿ ರಚನೆಯು ಬದಲಾಗದೆ ಉಳಿದಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
IND vs NZ: ಸಚಿನ್ ತೆಂಡೂಲ್ಕರ್ ಒಳಗೊಂಡ ಎಲೈಟ್ ಲಿಸ್ಟ್‌ಗೆ ಸೇರುವ ಸನಿಹದಲ್ಲಿ ರೋಹಿತ್ ಶರ್ಮಾ!
ಮುಂದಿನ ವರ್ಷ ಭಾರತ ತಂಡಕ್ಕೆ ಕಠಿಣವಾದ ರೆಡ್-ಬಾಲ್ ವೇಳಾಪಟ್ಟಿ ಇದೆ. ಇಂಗ್ಲೆಂಡ್‌ನಲ್ಲಿ ನಡೆದಿದ್ದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-2 ಡ್ರಾ ಮಾಡಿಕೊಂಡ ನಂತರ, ಭಾರತ ಆಗಸ್ಟ್ 2026 ರಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಲು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ ಮತ್ತು ನಂತರ ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್‌ನಲ್ಲಿ ಮತ್ತೊಂದು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ನಂತರ 2027ರ ಜನವರಿ-ಫೆಬ್ರವರಿ ಅವಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ಗಳ ಸರಣಿಯನ್ನು ಆಡಲಿದೆ. ಇದು ಭಾರತದ ಟೆಸ್ಟ್ ಭವಿಷ್ಯವನ್ನು ಗಮನಾರ್ಹವಾಗಿ ರೂಪಿಸುತ್ತದೆ.