ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

2027ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಆಡಬೇಕೆಂದ ಹರ್ಭಜನ್‌ ಸಿಂಗ್!

2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಆಡಬೇಕೆಂದು ಸ್ಪಿನ್‌ ದಿಗ್ಗಜ ಹರ್ಭಜನ್‌ ಸಿಂಗ್‌ ಸಲಹೆ ನೀಡಿದ್ದಾರೆ. ಉತ್ತಮ ಪ್ರದರ್ಶನ ಹಾಗೂ ಫಿಟ್‌ನೆಸ್‌ ಅನ್ನು ಉಳಿಸಿಕೊಂಡರೆ, ಲಿಯೊನೆಲ್‌ ಮೆಸ್ಸಿ ಅವರ ರೀತಿ ಈ ಇಬ್ಬರೂ ಕೂಡ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಿಸಬೇಕೆಂದು ತಿಳಿಸಿದ್ದಾರೆ.

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾಗೆ ಬೆಂಬಲಿಸಿದ ಹರ್ಭಜನ್‌ ಸಿಂಗ್‌.

ನವದೆಹಲಿ: ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ ತಮ್ಮ ಫಿಟ್‌ನೆಸ್ ಕಾಪಾಡಿಕೊಂಡರೆ 2027ರ ಏಕದಿನ ವಿಶ್ವಕಪ್‌ ಟೂರ್ನಿಗೆ (ICC ODI World Cup 2026) ಇವರಿಬ್ಬರನ್ನೂ ಆಯ್ಕೆಗೆ ಪರಿಗಣಿಸಬೇಕು ಎಂದು ಸ್ಪಿನ್‌ ದಿಗ್ಗಜ ಹರ್ಭಜನ್‌ ಸಿಂಗ್‌ ಅಭಿಪ್ರಾಯ ವ್ಯಕ್ತಪಟ್ಟಿದ್ದಾರೆ. ಲಿಯೊನೆಲ್ ಮೆಸ್ಸಿ ಇತ್ತೀಚಿನ ವಿಶ್ವಕಪ್‌ ಟೂರ್ನಿಯಲ್ಲಿ ತೋರಿದ ಪ್ರದರ್ಶನವನ್ನು ಉದಾಹರಣೆಯಾಗಿ ನೀಡಿದ ಹರ್ಭಜನ್, ಆಟಗಾರರ ವಯಸ್ಸು ಆಯ್ಕೆಗೆ ನಿರ್ಣಾಯಕ ಮಾನದಂಡವಾಗಬಾರದು ಎಂದು ಹೇಳಿದ್ದಾರೆ.

ಪಿಟಿಐ ಜೊತೆಗಿನ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿದ ಹರ್ಭಜನ್ ಸಿಂಗ್‌, ವಿರಾಟ್‌ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಮ್ಮ ವೃತ್ತಿಜೀವನದ ಅಂತಿಮ ಹಂತದತ್ತ ಸಾಗುತ್ತಿದ್ದರೂ ಪ್ರದರ್ಶನವೇ ತಂಡದ ಆಯ್ಕೆಯ ಪ್ರಮುಖ ಮಾನದಂಡವಾಗಬೇಕು ಎಂದು ಒತ್ತಿ ಹೇಳಿದ್ದಾರೆ. 2027ರ ಏಕದಿನ ವಿಶ್ವಕಪ್ ಟೂರ್ನಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದ್ದು, ಟೂರ್ನಿ ನಡೆಯುವ ವೇಳೆಗೆ ರೋಹಿತ್ ಶರ್ಮಾ 40 ವರ್ಷ ಮತ್ತು ವಿರಾಟ್ ಕೊಹ್ಲಿಗೆ 39 ವರ್ಷ ವಯಸ್ಸಾಗಿರುತ್ತದೆ.

IND vs SL: ಪ್ರಸಿಧ್‌ ಕೃಷ್ಣ-ಆಕಿಬ್‌ ನಬಿ ನಡುವೆ ಎರಡನೇ ವೇಗಿಯನ್ನು ಆರಿಸಿದ ಅಜಿಂಕ್ಯ ರಹಾನೆ!

ಲಿಯೊನೆಲ್‌ ಮೆಸ್ಸಿ ಉದಾಹರಣೆಯಾಗಿ ತೆಗೆದುಕೊಂಡ ಭಜ್ಜಿ

39ನೇ ವಯಸ್ಸಿನಲ್ಲೇ ಅರ್ಜೆಂಟೀನಾ ತಂಡವನ್ನು ಫಿಫಾ ಫುಟ್‌ಬಾಲ್ ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ಗೆ ಮುನ್ನಡೆಸಿದ್ದ ಲಿಯೊನೆಲ್ ಮೆಸ್ಸಿ ಅವರನ್ನು ಉದಾಹರಣೆಯಾಗಿ ತೆಗೆದುಕೊಂಡ ಹರ್ಭಜನ್ ಸಿಂಗ್, ವಯಸ್ಸು ಹೆಚ್ಚಾದರೂ ಅತ್ಯುತ್ತಮ ಕ್ರೀಡಾಪಟು ನಿರ್ಣಾಯಕ ಪ್ರದರ್ಶನ ನೀಡಲು ಸಾಧ್ಯ ಎಂಬುದನ್ನು ಮೆಸ್ಸಿ ತೋರಿಸಿದ್ದಾರೆ ಎಂದು ಹೇಳಿದ್ದಾರೆ.

“ಆಟಗಾರ ಯಾರೇ ಆಗಿರಲಿ, ನನ್ನ ಪ್ರಕಾರ ಆಯ್ಕೆಗೆ ಮಾನದಂಡ ವಯಸ್ಸಲ್ಲ, ಪ್ರದರ್ಶನವಾಗಿರಬೇಕು,” ಎಂದು ಹರ್ಭಜನ್ ಹೇಳಿದ್ದಾರೆ.

“ವಿರಾಟ್‌ಗೆ 39 ವರ್ಷವಾಗಿರಬಹುದು. ಆದರೆ ಆತ ಇನ್ನೂ 20 ವರ್ಷದ ಆಟಗಾರರನ್ನು ಮೈದಾನದಲ್ಲಿ ಹಿಂದಿಕ್ಕುತ್ತಿದ್ದರೆ, ಆತನ ವಯಸ್ಸು ಮುಖ್ಯವಾಗುವುದಿಲ್ಲ. ಲಿಯೊನೆಲ್ ಮೆಸ್ಸಿಯನ್ನು ನೋಡಿ. ಅವರಿಗೆ 40 (39) ವರ್ಷವಾಗಿದ್ದರೂ, ಅವರನ್ನು ತಡೆಯಲು ಐವರು ಆಟಗಾರರು ಪ್ರಯತ್ನಿಸಬೇಕಾಗುತ್ತದೆ,” ಎಂದು ಅವರು ತಿಳಿಸಿದ್ದಾರೆ.

“ಒಬ್ಬ ಆಟಗಾರನಲ್ಲಿ ಅಂತಹ ಫಿಟ್‌ನೆಸ್ ಮತ್ತು ಕೌಶಲವಿದ್ದರೆ, ಐವರು ಎದುರಾಳಿ ಆಟಗಾರರು ಸೇರಿಕೊಂಡರೂ ಅವರನ್ನು ತಡೆಯಲು ಸಾಧ್ಯವಾಗದಿದ್ದರೆ, ಕೌಶಲಕ್ಕೆ ಯಾವಾಗಲೂ ಮೊದಲ ಆದ್ಯತೆ ನೀಡಬೇಕು ಎಂಬುದು ನಮಗೆ ಅರ್ಥವಾಗುತ್ತದೆ,” ಎಂದು ಹರ್ಭಜನ್ ಸಂಗ್‌ ವಿವರಿಸಿದ್ದಾರೆ.

IND vs SL: ʻಸರ್ಫರಾಝ್‌ ಖಾನ್‌ ಪಾತ್ರದ ಬಗ್ಗೆ ಸ್ಪಷ್ಟತೆ ನೀಡಬೇಕುʼ-ಗಂಭೀರ್‌ಗೆ ಅಶ್ವಿನ್‌ ಸಲಹೆ!

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕ್ರಮವಾಗಿ ಟೆಸ್ಟ್ ಮತ್ತು ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿರುವುದರಿಂದ, ಇದೀಗ ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿಯುತ್ತಿರುವ ಅನುಭವಿ ಆಟಗಾರರಾಗಿದ್ದಾರೆ. ಆದರೆ 2027ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಅವರ ಭವಿಷ್ಯವನ್ನು ವಯಸ್ಸಿನ ಆಧಾರದ ಮೇಲೆ ನಿರ್ಧರಿಸಬಾರದು. ಅವರು ನೀಡುವ ಪ್ರದರ್ಶನ ಮತ್ತು ಫಿಟ್‌ನೆಸ್ ಆಧಾರದಲ್ಲೇ ನಿರ್ಧಾರ ಕೈಗೊಳ್ಳಬೇಕು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

“ಫಿಟ್‌ನೆಸ್‌ಗೆ ಆದ್ಯತೆ ನೀಡಬೇಕು ಮತ್ತು ನಿಮ್ಮ ಪ್ರದರ್ಶನವೂ ಮುಖ್ಯ. ಪ್ರದರ್ಶನವೇ ಅಂತಿಮ ಮಾನದಂಡ. ಈ ಇಬ್ಬರು ರನ್ ಗಳಿಸುತ್ತಿದ್ದರೆ ಮತ್ತು ಶ್ರೇಯಸ್ ಅಯ್ಯರ್ ಅಥವಾ ಯಶಸ್ವಿ ಜೈಸ್ವಾಲ್ ಅವರ ಮಟ್ಟದ ಫಿಟ್‌ನೆಸ್ ಹೊಂದಿದ್ದರೆ, ಬೇರೆ ಯಾವುದೂ ಮುಖ್ಯವಾಗುವುದಿಲ್ಲ,” ಎಂದು ಹರ್ಭಜನ್ ಸಿಂಗ್‌ ತಿಳಿಸಿದ್ದಾರೆ.