ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಮುಂಬೈ ಇಂಡಿಯನ್ಸ್‌ ತಂಡದ ವಾತಾವರಣವನ್ನು ಹಾರ್ದಿಕ್‌ ಪಾಂಡ್ಯ ಹಾಳು ಮಾಡಿದ್ದಾರೆ-ಮನೋಜ್‌ ತಿವಾರಿ!

ಹಾರ್ದಿಕ್‌ ಪಾಂಡ್ಯ ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್‌ ಪ್ರದರ್ಶನ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಈ ಸೀಸನ್‌ನಲ್ಲಿ ಆಡಿದ 13 ಪಂದ್ಯಗಳಲ್ಲಿ ಗೆದ್ದಿರುರುವುದು ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರ. ಆ ಮೂಲಕ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಹಾರ್ದಿಕ್‌ ಅವರ ನಾಯಕತ್ವವನ್ನು ಮಾಜಿ ಕ್ರಿಕೆಟಿಗ ಮನೋಜ್‌ ತಿವಾರಿ ತೀವ್ರವಾಗಿ ಟೀಕಿಸಿದ್ದಾರೆ.

ಹಾರ್ದಿಕ್‌ ಪಾಂಡ್ಯ ನಾಯಕತ್ವವನ್ನು ಟೀಕಿಸಿದ ಮನೋಜ್‌ ತಿವಾರಿ.

ನವದೆಹಲಿ: ಹಾರ್ದಿಕ್‌ ಪಾಂಡ್ಯ (Hardik Pandya) ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್‌ (MI) ತಂಡದ ಪ್ರದರ್ಶನ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಈ ಸೀಸನ್‌ನಲ್ಲಿ ಆಡಿದ 13 ಪಂದ್ಯಗಳಿಂದ ಗೆದ್ದಿರುವುದು ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರ, ಇನ್ನುಳಿದ 9 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇದರ ಪರಿಣಾಮ ಐದು ಬಾರಿ ಚಾಂಪಿಯನ್ಸ್‌ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಕಳೆದ ಪಂದ್ಯದಲ್ಲಿಯೂ ಮುಂಬೈ ಹೀನಾಯವಾಗಿ ಸೋಲು ಅನುಭವಿಸಿತ್ತು. ಇದರ ಬೆನ್ನಲ್ಲೆ ಹಾರ್ದಿಕ್‌ ಪಾಂಡ್ಯ ನಾಯಕತ್ವವನ್ನು ಮಾಜಿ ಕ್ರಿಕೆಟಿಗ ಮನೋಜ್‌ ತಿವಾರಿ(Manoj Tiwary) ಪ್ರಶ್ನೆ ಮಾಡಿದ್ದಾರೆ.

ಕ್ರಿಕ್‌ಬಝ್‌ ಜೊತೆ ಮಾತನಾಡಿದ ಮನೋಜ್‌ ತಿವಾರಿ,"ಕಳೆದ ಮೂರು ವರ್ಷಗಳಲ್ಲಿ ರೋಹಿತ್‌ ಶರ್ಮಾ, ತಮ್ಮ ಕಣ್ಣೆದುರು ತಮ್ಮ ಸಾಮ್ರಾಜ್ಯ ಕುಸಿಯುವುದನ್ನು ನೋಡಿದ್ದಾರೆ. ಕೆಲವೊಮ್ಮೆ ಡಗೌಟ್‌ನಲ್ಲಿ ಅವರ ಮುಖಭಾವಗಳಲ್ಲೇ ಅದನ್ನು ಗಮನಿಸಬಹುದು. ಒಳಗೊಳಗೆ, ಅವರು ನಾಯಕತ್ವದಲ್ಲಿದ್ದರೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ ಎಂಬುದು ಅವರಿಗೆ ತಿಳಿದಿದೆ,” ಎಂದು ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್‌ ತಂಡ 2027ರ ಟೂರ್ನಿಗೆ ಹೊಸ ನಾಯಕನನ್ನು ಹೊಂದುವುದು ಖಚಿತವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಮುಂದಿನ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಹೊಸ ನಾಯಕ ಇರಲಿದ್ದಾರೆ ಎಂಬುದರಲ್ಲಿ ನನಗೆ ಶೇ 200 ರಷ್ಟು ಖಚಿತವಿದೆ. ಅದು ಸೂರ್ಯಕುಮಾರ್‌ ಯಾದವ್‌ ಆಗಿರಬಹುದು ಅಥವಾ ಜಸ್‌ಪ್ರೀತ್‌ ಬುಮ್ರಾ ಆಗಿರಬಹುದು,” ಎಂದು ತಿವಾರಿ ಹೇಳಿದರು.

IPL 2026: ʻಈ ಕಾರಣದಿಂದಾಗಿ ನಾನಿಲ್ಲಿದ್ದೇನೆʼ-ಕೆಕೆಆರ್‌ ಗೆಲುವಿನ ಬಳಿಕ ಕನ್ನಡಿಗ ಮನೀಷ್‌ ಪಾಂಡೆ ಹೇಳಿದ್ದಿದು!

ಬುಮ್ರಾ ವೇಗದ ಬೌಲರ್ ಆಗಿರುವುದರಿಂದ ಗಾಯದ ಅಪಾಯ ಹೆಚ್ಚು ಇರುವ ಸಾಧ್ಯತೆಯನ್ನು ಉಲ್ಲೇಖಿಸಿದ ಅವರು, “ಈ ಸಂಗತಿಯನ್ನು ಪರಿಗಣಿಸಿದರೆ ನಾಯಕತ್ವಕ್ಕಾಗಿ ಸೂರ್ಯಕುಮಾರ್ ಯಾದವ್ ಉತ್ತಮ ಆಯ್ಕೆ ಎಂದು ನಾನು ಭಾವಿಸುತ್ತೇನೆ,” ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ತಿವಾರಿ ಅವರು ವೈಯಕ್ತಿಕವಾಗಿ ರೋಹಿತ್‌ ಶರ್ಮಾ ಮತ್ತೆ ಮುಂಬೈ ಇಂಡಿಯನ್ಸ್ ನಾಯಕತ್ವಕ್ಕೆ ಮರಳುವುದನ್ನು ನೋಡಲು ಇಷ್ಟಪಡುತ್ತೇನೆ ಎಂಬುದನ್ನೂ ತಿಳಿಸಿದ್ದಾರೆ.

ಹಾರ್ದಿಕ್‌ ಪಾಂಡ್ಯಗೆ ನಾಯಕತ್ವ ನೀಡಬಾರದಿತ್ತು: ಮುರಳಿ ಕಾರ್ತಿಕ್‌

ಭಾರತದ ಮಾಜಿ ಕ್ರಿಕೆಟಿಗ ಮುರಳಿ ಕಾರ್ತಿಕ್‌ ಕೂಡ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವ ಬದಲಾವಣೆಯ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ರೋಹಿತ್‌ ಶರ್ಮಾ, ಜಸ್‌ಪ್ರೀತ್‌ ಬುಮ್ರಾ ಮತ್ತು ಸೂರ್ಯಕುಮಾರ್‌ ಯಾದವ್‌ ಅವರನ್ನು ಉಳಿಸಿಕೊಂಡಿದ್ದರೂ, ಹೊರಗಿನಿಂದ ಬಂದ ಹಾರ್ದಿಕ್‌ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಿರುವ ನಿರ್ಧಾರ ತಂಡದೊಳಗಿನ ವಾತಾವರಣದ ಮೇಲೆ ಪರಿಣಾಮ ಬೀರಿದೆ ಎಂದು ಕಾರ್ತಿಕ್ ಅಭಿಪ್ರಾಯಪಟ್ಟರು.

IPL 2026: ʻಈ ಕಾರಣದಿಂದಾಗಿ ನಾನಿಲ್ಲಿದ್ದೇನೆʼ-ಕೆಕೆಆರ್‌ ಗೆಲುವಿನ ಬಳಿಕ ಕನ್ನಡಿಗ ಮನೀಷ್‌ ಪಾಂಡೆ ಹೇಳಿದ್ದಿದು!

“ತಂಡ ಉಳಿಸಿಕೊಂಡ ಆಟಗಾರರು ಯಾರು? ರೋಹಿತ್ ಶರ್ಮಾ, ಜಸ್‌ಪ್ರೀತ್‌ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್. ಇವರು ನಿಮ್ಮ ಮೂರು ಪ್ರಮುಖ ರಿಟೆನ್ಷನ್‌ಗಳು. ಆದರೆ ಏಕಾಏಕಿ ಹೊರಗಿನಿಂದ ಒಬ್ಬರನ್ನು ಕರೆತಂದು ನಾಯಕತ್ವ ನೀಡಲಾಗಿದೆ. ಇದು ತಂಡದ ವಾತಾವರಣವನ್ನು ಹಾಳುಮಾಡುವುದು ಸಹಜ. ಪರಿಸ್ಥಿತಿ ಏನೇ ಆಗಿರಲಿ, ಆಟಗಾರರಿಗೆ ಸಹಜವಾಗಿಯೇ ಆಘಾತವಾಗುತ್ತದೆ ,” ಎಂದು ಕಾರ್ತಿಕ್ ಹೇಳಿದ್ದಾರೆ.