ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ (IPL 2026) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ(RCB) ಚಾಂಪಿಯನ್ ಆಗಿದೆ. ಮೇ 31 ರಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದಿದ್ದ ಆರ್‌ಸಿಬಿ ಸತತ ಎರಡನೇ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಟೂರ್ನಿಯ ಬಳಿಕ ಕ್ರಿಕೆಟ್ ನಿರೂಪಕ ಹಾಗೂ ಕಾಮೆಂಟೇಟರ್ ಹರ್ಷ ಭೋಗ್ಲೆ(Harsha Bhogle) ಅವರು 2026ರ ಐಪಿಎಲ್ ಟೂರ್ನಿಯಲ್ಲಿ ತಮ್ಮ ನೆಚ್ಚಿನ ಪ್ಲೇಯಿಂಗ್ XI ಅನ್ನು ಆರಿಸಿದ್ದಾರೆ.
ಹರ್ಷ ಭೋಗ್ಲೆ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ತಮ್ಮ ನೆಚ್ಚಿನ ತಂಡಕ್ಕೆ ನಾಲ್ವರು ಆಟಗಾರರನ್ನು ಆರಿಸಿದ್ದಾರೆ. ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಕೃಣಾಲ್ ಪಾಂಡ್ಯ ಹಾಗೂ ಭುವನೇಶ್ವರ್ ಕುಮಾರ್ ಅವರು ನಿರೂಪಕನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆರ್‌ಸಿಬಿ ತಂಡ, ಈ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಈ ನಾಲ್ವರು ಆಟಗಾರರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ವೈಭವ್ ಸೂರ್ಯವಂಶಿಗೆ ಈಗಲೇ ಭಾರತ ತಂಡದಲ್ಲಿ ಚಾನ್ಸ್ ನೀಡಬೇಡಿ: ಸಂಜಯ್ ಮಾಂಜ್ರೇಕರ್!
ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ. ಅವರು ಈ ಟೂರ್ನಿಯಲ್ಲಿ ಆಡಿದ 16 ಪಂದ್ಯಗಳಿಂದ 675 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು ಒಂದು ಶತಕ ಹಾಗೂ ಐದು ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು ರಜತ್ ಪಾಟಿದಾರ್ 14 ಇನಿಂಗ್ಸ್‌ಗಳಿಂದ 501 ರನ್‌ಗಳನ್ನು ಕಲೆ ಹಾಕಿದ್ದರ ಜೊತೆಗೆ ನಾಯಕನಾಗಿ ಆರ್‌ಸಿಬಿ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿದ್ದಾರೆ.
ಕೃಣಾಲ್ ಪಾಂಡ್ಯ ಈ ಸೀಸನ್‌ನಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದಾರೆ. ಇವರ ಜೊತೆಗೆ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಟೂರ್ನಿಯುದ್ದಕ್ಕೂ ಉತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿ 28 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ.
ವೈಭವ್ ಸೂರ್ಯವಂಶಿಗೆ ಈಗಲೇ ಭಾರತ ತಂಡದಲ್ಲಿ ಚಾನ್ಸ್ ನೀಡಬೇಡಿ: ಸಂಜಯ್ ಮಾಂಜ್ರೇಕರ್!
ಆದರೆ, ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನಗಳಲ್ಲಿರುವ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಅವರನ್ನು ಹರ್ಷ ಭೋಗ್ಲೆ ಕೈಬಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಜೊತೆಗೆ ಇನಿಂಗ್ಸ್ ಆರಂಭಿಸಲು 776 ರನ್ ಕಲೆ ಹಾಕಿದ್ದ ವೈಭವ್ ಸೂರ್ಯವಂಶಿ ಇನಿಂಗ್ಸ್ ಆರಂಭಿಸಲಿದ್ದಾರೆ.
ಮೂರನೇ ಕ್ರಮಾಂಕಕ್ಕೆ ಇಶಾನ್ ಕಿಶನ್, ನಾಲ್ಕನೇ ಕ್ರಮಾಂಕಕ್ಕೆ ಹೆನ್ರಿಕ್ ಕ್ಲಾಸೆನ್ ಅವರನ್ನು ಆಯ್ಕೆ ಮಾಡಲಾಗಿದೆ. ಐದನೇ ಕ್ರಮಾಂಕದಲ್ಲಿ ರಜತ್ ಪಾಟಿದಾರ್ ಸ್ಥಾನ ಪಡೆದಿದ್ದಾರೆ. ಆಲ್‌ರೌಂಡರ್‌ಗಳಾಗಿ ನಿತೀಶ್ ರೆಡ್ಡಿ, ಕೃಣಾಲ್ ಪಾಂಡ್ಯ ಹಾಗೂ ಸುನೀಲ್ ನರೇನ್ ಸ್ಥಾನ ಪಡೆದಿದ್ದರೆ, ವೇಗದ ಬೌಲಿಂಗ್ ವಿಭಾಗಗಕ್ಕೆ ಜೋಫ್ರಾ ಆರ್ಚರ್, ಕಗಿಸೊ ರಬಾಡ ಮತ್ತು ಭುವನೇಶ್ವರ್ ಕುಮಾರ್‌ಗೆ ಹರ್ಷ ಭೋಗ್ಲೆ ಸ್ಥಾನ ನೀಡಿದ್ದಾರೆ.
ಹರ್ಷ ಭೋಗ್ಲೆ ಆಯ್ಕೆ ಮಾಡಿದ 2026ರ ಐಪಿಎಲ್ ತಂಡ: ವೈಭವ್ ಸೂರ್ಯವಂಶಿ, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್, ರಜತ್ ಪಾಟಿದಾರ್, ನಿತೀಶ್ ಕುಮಾರ್ ರೆಡ್ಡಿ, ಕೃಣಾಲ್ ಪಾಂಡ್ಯ, ಸುನಿಲ್ ನರೇನ್, ಜೋಫ್ರಾ ಆರ್ಚರ್, ಕಗಿಸೊ ರಬಾಡ, ಭುವನೇಶ್ವರ್ ಕುಮಾರ್