ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂಗ್ಲೆಂಡ್‌ ಸರಣಿಯ ವೇಳೆ ಗಂಭೀರ್‌ ಹೇಳಿದ್ದ ಮಾತನ್ನು ರಿವೀಲ್‌ ಮಾಡಿದ ಆಕಾಶ್‌ ದೀಪ್‌!

Akash Deep Statement On Gautam Gambhir: ಭಾರತ ತಂಡದ ವೇಗದ ಬೌಲರ್ ಆಕಾಶ್ ದೀಪ್ ಮುಖ್ಯ ಕೋಚ್ ಗೌತಮ್ ಗಂಭೀರ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಗೌತಮ್‌ ಗಂಭಿರ್‌ ತಮ್ಮನ್ನು ಹೇಗೆ ಪ್ರೇರೇಪಿಸುತ್ತಾರೆ ಎಂಬುದನ್ನು ಅವರು ವಿವರಿಸಿದ್ದಾರೆ.

ಗೌತಮ್‌ ಗಂಭೀರ್‌ ಬಗ್ಗೆ ಆಕಾಶ್‌ ದೀಪ್‌ ಹೇಳಿಕೆ.

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ವೇಗಿ ಆಕಾಶ್ ದೀಪ್ (Akash Deep) ತಮ್ಮ ಮೊದಲ ಇಂಗ್ಲೆಂಡ್ ಪ್ರವಾಸದ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇಂಗ್ಲೆಂಡ್‌ ಪ್ರವಾಸದಲ್ಲಿ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಹಾಗೂ ನಾಯಕ ಶುಭಮನ್‌ ಗಿಲ್‌ (Shubman Gill) ಅವರು ತನ್ನನ್ನು ಹೇಗೆ ಬೆಂಬಲಿಸಿದರು ಎಂಬ ಬಗ್ಗೆಯೂ ಅವರು ಬಹಿರಂಗಪಡಿಸಿದ್ದಾರೆ. ಒಂದು ಪಂದ್ಯದಲ್ಲಿ 10 ವಿಕೆಟ್‌ಗಳು ಮತ್ತು ಇನ್ನೊಂದು ಪಂದ್ಯದಲ್ಲಿ ಅರ್ಧಶತಕ ಗಳಿಸುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಆಕಾಶ್ ದೀಪ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಕೆನಿಂಗ್ಟನ್‌ ಓವಲ್‌ನಲ್ಲಿ 66 ರನ್ ಗಳಿಸಿದ ನಂತರ ಮುಖ್ಯ ಕೋಚ್ ಗೌತಮ್ ಗಂಭೀರ್ ಹೇಳಿದ್ದ ಮಾತನ್ನು ಆಕಾಶ್‌ ದೀಪ್‌ ರಿವೀಲ್‌ ಮಾಡಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ಆಕಾಶ್‌ ದೀಪ್‌, "ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಗೊತ್ತಿಲ್ಲ. ನಾನು ನಿಮಗೆ ಹೇಳುತ್ತಿದ್ದೇನೆ, ನಿಮ್ಮಿಂದ ಇದು ಸಾಧ್ಯ. ನೀವು ಯಾವಾಗಲೂ ಅದೇ ಸಮರ್ಪಣೆಯೊಂದಿಗೆ ಆಡಬೇಕೆಂದು ಗೌತಮ್‌ ಭಾಯ್‌ ಹೇಳಿದ್ದರು. ಗೌತಮ್ ಭಾಯ್ ತುಂಬಾ ಉತ್ಸಾಹಭರಿತ ಕೋಚ್. ಅವರು ಯಾವಾಗಲೂ ನಮ್ಮನ್ನು ಪ್ರೇರೇಪಿಸುತ್ತಾರೆ. ಅವರು ನನ್ನ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ನನಗಿಂತ ಹೆಚ್ಚು ನಂಬಿಕೆ ಇಡುತ್ತಾರೆ," ಎಂದು ತಿಳಿಸಿದ್ದಾರೆ.

IND vs ENG: ಅರ್ಷದೀಪ್‌ ಸಿಂಗ್‌ ಬದಲು ಅನ್ಶುಲ್‌ ಕಾಂಬೋಜ್‌ಗೆ ಸ್ಥಾನ ನೀಡಿದ್ದೇಕೆ? ಅರುಣ್‌ ಲಾಲ್‌ ಪ್ರಶ್ನೆ!

ಶುಭಮನ್‌ ಗಿಲ್‌ಗೆ ಆಕಾಶ್‌ ದೀಪ್‌ ಮೆಚ್ಚುಗೆ

ಶುಭಮನ್‌ ಗಿಲ್‌ ಇದೇ ಮೊದಲ ಬಾರಿ ಭಾರತ ಟೆಸ್ಟ್‌ ತಂಡವನ್ನು ಮುನ್ನಡೆಸಿದರು ಹಾಗೂ ಯಶಸ್ವಿಯಾದರು. ಭಾರತ ತಂಡ ಡ್ರಾ ಸಾಧಿಸುವಲ್ಲಿ ಗಿಲ್‌ ನಾಯಕನಾಗಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಭಾರತ ಟೆಸ್ಟ್‌ ತಂಡದ ನೂತನ ನಾಯಕನನ್ನು ಆಕಾಶ್‌ ದೀಪ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

"ಅವರು (ಶುಭಮನ್‌ ಗಿಲ್‌) ತುಂಬಾ ಒಳ್ಳೆಯ ನಾಯಕ. ಅವರು ಹೊಸ ನಾಯಕ ಎಂದು ಅರ್ಥವಲ್ಲ. ಅವರು ಕಳೆದ ಕೆಲವು ವರ್ಷಗಳಿಂದ ಐಪಿಎಲ್‌ನಲ್ಲಿ ನಾಯಕತ್ವ ವಹಿಸುತ್ತಿದ್ದಾರೆ, ಇದು ಒಂದು ದೊಡ್ಡ ವೇದಿಕೆಯಾಗಿದೆ. ಈ ಅನುಭವವು ಬಹಳ ಮುಖ್ಯವಾಗಿದೆ. ಒಬ್ಬ ನಾಯಕ ನಿಮ್ಮನ್ನು ಬೆಂಬಲಿಸಿದಾಗ ಮತ್ತು ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಾಗ, ಅದು ಬಹಳಷ್ಟು ವ್ಯತ್ಯಾಸವನ್ನುಂಟು ಮಾಡುತ್ತದೆ. ಕಳೆದ ವರ್ಷ ನಾನು ಅವರ ನಾಯಕತ್ವದಲ್ಲಿ ದುಲೀಪ್ ಟ್ರೋಫಿ ಆಡಿದೆ. ಅವರು ಶಾಂತ ಆಟಗಾರ ಮತ್ತು ಬಹಳಷ್ಟು ವಿಚಾರಗಳನ್ನು ಹೊಂದಿದ್ದಾರೆ. ಯಾರಾದರೂ ಶಾಂತವಾಗಿದ್ದಾಗ, ಅದು ಮೈದಾನದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ," ಎಂದು ಆಕಾಶ್ ದೀಪ್ ತಿಳಿಸಿದ್ದಾರೆ.

IND vs ENG ಸಂಯೋಜನೆಯ ಪ್ಲೇಯಿಂಗ್‌ XI ಪ್ರಕಟಿಸಿದ ಆಕಾಶ ಚೋಪ್ರಾ!

ಇಂಗ್ಲೆಂಡ್‌ ಕಂಡೀಷನ್ಸ್‌ ಬಗ್ಗೆ ಮಾತನಾಡಿದ ಆಕಾಶ್‌ ದೀಪ್‌, "ನಾವು ಇಂಗ್ಲೆಂಡ್‌ನಲ್ಲಿ ಆಡಿದ ಐದು ಟೆಸ್ಟ್ ಪಂದ್ಯಗಳಲ್ಲಿ ನಾಲ್ಕರಲ್ಲಿ, ಪಿಚ್‌ಗಳು ನಾವು ವರ್ಷಗಳಿಂದ ಕೇಳಿರುವ ಅಥವಾ ನೋಡಿರುವ ವಿಶಿಷ್ಟ ಇಂಗ್ಲಿಷ್ ವಿಕೆಟ್‌ಗಳಂತೆ ಇರಲಿಲ್ಲ. ಚೆಂಡು ಕೆಲವೊಮ್ಮೆ ಸೀಮಿಂಗ್ ಆಗುತ್ತಿರಲಿಲ್ಲ ಅಥವಾ ಹೆಚ್ಚು ಸ್ವಿಂಗ್ ಆಗುತ್ತಿರಲಿಲ್ಲ ಮತ್ತು ನಾವು ಭಾರತೀಯ ಲೆನ್ತ್‌ಗೆ ಅನುಗುಣವಾಗಿ ಪೂರ್ಣ ಲೆಂಗ್ತ್ ಬೌಲಿಂಗ್ ಮಾಡಬೇಕಾಗಿತ್ತು. ನಾವು ಇದಕ್ಕೆ ಹೊಂದಿಕೊಳ್ಳಬೇಕಾಗಿತ್ತು. ನೀವು ಸಾಕಷ್ಟು ಕ್ರಿಕೆಟ್ ಆಡಿದ್ದರೆ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಯಾವುದೇ ಸಮಸ್ಯೆ ಇಲ್ಲ," ಎಂದು ಅವರು ಹೇಳಿದ್ದಾರೆ.