ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರೋಹಿತ್‌ ಶರ್ಮಾ ಶತಕ ಸಿಡಿಸಿದ ಬೆನ್ನಲ್ಲೆ ಗೌತಮ್‌ ಗಂಭೀರ್‌ರನ್ನು ಕೆಣಕಿದ ಫ್ಯಾನ್ಸ್‌!

ಸಿಕ್ಕಿಂ ವಿರುದ್ಧ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ರೋಹಿತ್‌ ಶರ್ಮಾ ಭರ್ಜರಿ ಶತಕವನ್ನು ಬಾರಿಸಿದರು. ಆ ಮೂಲಕ ಎಂಟು ವರ್ಷಗಳ ಬಳಿಕ ಹಿಟ್‌ಮ್ಯಾನ್‌ ಶತಕದ ಮೂಲಕ ದೇಶಿ ಕ್ರಿಕೆಟ್‌ಗೆ ಭರ್ಜರಿ ಕಮ್‌ಬ್ಯಾಕ್‌ ಮಾಡಿದರು. ಶತಕ ಸಿಡಿಸಿದ ಬೆನ್ನಲ್ಲೆ ಅಭಿಮಾನಿಗಳು ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರನ್ನು ಕೆಣಕಿದ್ದಾರೆ.

ಗೌತಮ್‌ ಗಂಭೀರ್‌ ಅವರನ್ನು ಕೆಣಕಿದ ರೋಹಿತ್‌ ಶರ್ಮಾ ಫ್ಯಾನ್ಸ್‌.

ನವದೆಹಲಿ: ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ (Rohit Sharma), ಇದೀಗ ಎಂಟು ವರ್ಷಗಳ ಬಳಿಕ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಗೆ ಭರ್ಜರಿಯಾಗಿ ಕಮ್‌ಬ್ಯಾಕ್‌ ಮಾಡಿದ್ದಾರೆ. ಅವರು ಬುಧವಾರ ಜೈಪುರದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ದೇಶಿ ಕ್ರಿಕೆಟ್‌ನಲ್ಲಿ ತಮ್ಮ ಬಲವನ್ನು ಸಾಬೀತುಪಡಿಸಿದ್ದಾರೆ. ಅಂದ ಹಾಗೆ ಸಿಕ್ಕಿಂ ವಿರುದ್ಧ ಶತಕ ಬಾರಿಸಿದ ಬೆನ್ನಲ್ಲೆ ಗ್ಯಾಲರಿಯಲ್ಲಿ ಕುಳಿತಿದ್ದ ಕೆಲ ಅಭಿಮಾನಿಗಳು ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರನ್ನು ಕೆಣಕಿದ್ದಾರೆ.

ಸ್ಪೋರ್ಟ್‌ಸ್ಟಾರ್ ವರದಿಯ ಪ್ರಕಾರ, ರೋಹಿತ್ ಶರ್ಮಾ ಶತಕವು ಜೈಪುರದಲ್ಲಿ ಪ್ರೇಕ್ಷಕರ ಒಂದು ಭಾಗವನ್ನು ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರನ್ನು ಕೆಣಕಲು ಪ್ರೇರೇಪಿಸಿತು. " ಗೌತಮ್‌ ಗಂಭೀರ್ ರೋಹಿತ್ ಶರ್ಮಾ ಅವರ ಬ್ಯಾಟಿಂಗ್‌ ಅನ್ನು ನೋಡುತ್ತಿದ್ದಾರೆಯೇ?" ಎಂದು ಅವರು ಪ್ರಶ್ನೆ ಮಾಡಿದ್ದಾರೆ.

Vijay Hazare Trophy: ಸೌರಾಷ್ಟ್ರ ಎದುರು ಡಬಲ್‌ ಸೆಂಚುರಿ ಬಾರಿಸಿದ ಸ್ವಸ್ತಿಕ್‌ ಸಮಲ್‌ ಯಾರು?

ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಹಾಗೂ ಮುಖ್ಯ ಆಯ್ಕೆದಾರ ಅಜಿತ್‌ ಅಗರ್ಕರ್‌ ಅವರು 2027 ರ ಐಸಿಸಿ ಏಕದಿನ ವಿಶ್ವಕಪ್‌ ಭಾರತ ತಂಡದಲ್ಲಿ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಆಡುವ ಬಗ್ಗೆ ಯಾವುದೇ ಸ್ಪಷ್ಟತೆಯನ್ನು ನೀಡಿಲ್ಲ. ಆದರೆ, ಅವರು 2027ರ ಟೂರ್ನಿಯಲ್ಲಿ ಆಡಬೇಕೆಂದರೆ, ದೇಶಿ ಕ್ರಿಕೆಟ್‌ನಲ್ಲಿ ನಿಯಮಿತವಾಗಿ ಆಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕೆಂದು ಕೋಚ್‌ ಹಾಗೂ ಸೆಲೆಕ್ಟರ್‌ ಹೇಳಿದ್ದಾರೆಂದು ವರದಿಯಾಗಿದೆ. ಹಾಗಾಗಿ ಗಂಭೀರ್‌ ಹಾಗೂ ಅಗರ್ಕರ್‌ ಅವರನ್ನು ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಕಣ್ಣಲ್ಲಿ ಕಣ್ಣಿಟ್ಟು ಇನ್ನೂ ನೋಡಿಲ್ಲ. ಈ ಕಾರಣದಿಂದಾಗಿ ಪ್ರೇಕ್ಷಕರು ಗಂಭೀರ್‌ ಅವರನ್ನು ಟೀಕಿಸಿದ್ದಾರೆಂದು ಹೇಳಲಾಗುತ್ತಿದೆ.

Vijay Hazare Trophy: ಆಂಧ್ರ ಬೌಲರ್‌ಗಳನ್ನು ಬೆಂಡೆತ್ತಿದ್ದ ವಿರಾಟ್‌ ಕೊಹ್ಲಿ, 131 ರನ್‌ ಚಚ್ಚಿದ ರನ್‌ ಮಷೀನ್‌!

94 ಎಸೆತಗಳಲ್ಲಿ 155 ರನ್‌ ಸಿಡಿಸಿದ ರೋಹಿತ್‌ ಶರ್ಮಾ

ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ರೋಹಿತ್‌ ಶರ್ಮಾ 94 ಎಸೆತಗಳಲ್ಲಿ 155 ರನ್‌ಗಳನ್ನು ಗಳಿಸಿದ್ದಾರೆ. ಇದಕ್ಕೂ ಮುನ್ನ ಅವರು 62 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದ್ದರು. ಅವರು ಈ ರನ್‌ಗಳನ್ನು 164.89ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ಗಳನ್ನು ಸಿಡಿಸಿದ್ದರು. ಹಿಟ್‌ಮ್ಯಾನ್‌ ತಮ್ಮ ಇನಿಂಗ್ಸ್‌ನಲ್ಲಿ 18 ಬೌಂಡರಿಗಳು ಹಾಗೂ 9 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದರ ಜೊತೆಗೆ ಅಂಗ್‌ಕೃಷ್‌ ರಘುವಂಶಿ (38) ಅವರ ಜೊತೆ ಮೊದಲನೇ ವಿಕೆಟ್‌ಗೆ 141 ರನ್‌ಗಳನ್ನು ಗಳಿಸಿದ್ದರು. ನಂತರ ಮುಶೀರ್‌ ಖಾನ್‌ ಅವರ ಜೊತೆ 85 ರನ್‌ಗಳ ಜೊತೆಯಾಟವನ್ನು ಆಡಿದ್ದರು. ರೋಹಿತ್‌ ಶರ್ಮಾ ಅವರ ಶತಕದ ಬಲದಿಂದ ಮುಂಬೈ ತಂಡ 237 ರನ್‌ಗಳ ಗುರಿಯನ್ನು 30.3 ಓವರ್‌ಗಳಲ್ಲಿ ಚೇಸ್‌ ಮಾಡಿತ್ತು.

ಇನ್ನು ರೋಹಿತ್‌ ಶರ್ಮಾ ಅವರ ಭಾರತ ತಂಡದ ಸಹ ಆಟಗಾರ ವಿರಾಟ್‌ ಕೊಹ್ಲಿ ಕೂಡ ಬೆಂಗಳೂರಿನಲ್ಲಿ ಆಂಧ್ರ ವಿರುದ್ಧದ ಪಂದ್ಯದಲ್ಲಿ ಶತಕವನ್ನು ಸಿಡಿಸಿದ್ದರು. ಆ ಮೂಲಕ ದೆಹಲಿ ತಂಡದ ಗೆಲುವಿಗೆ ನೆರವು ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.