ನವದೆಹಲಿ: ಭಾರತೀಯ ಕ್ರಿಕೆಟ್ನ ದಿಗ್ಗಜ ಆಟಗಾರ ಎಂಎಸ್ ಧೋನಿ (MS Dhoni) ವೃತ್ತಿಪರ ಕ್ರಿಕೆಟ್ಗೆ ವಿದಾಯ ಘೋಷಿಸಿರುವ ಬೆನ್ನಲ್ಲೇ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಭಾವುಕ ಸಂದೇಶದ ಮೂಲಕ ಗೌರವ ಸಲ್ಲಿಸಿದ್ದಾರೆ. ಧೋನಿ ಅವರ ಏಕದಿನ ಕ್ರಿಕೆಟ್ ಪದಾರ್ಪಣೆಯ ದಿನಗಳನ್ನು ನೆನಪಿಸಿಕೊಂಡಿರುವ ಸಚಿನ್, ಅಂದೇ ಅವರಲ್ಲಿದ್ದ ವಿಶೇಷ ಪ್ರತಿಭೆಯನ್ನು ಗುರುತಿಸಿದ್ದಾಗಿ ಬಹಿರಂಗಪಡಿಸಿದ್ದಾರೆ.
2004ರಲ್ಲಿ ಧೋನಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಸಂದರ್ಭದಲ್ಲಿ ಸಚಿನ್ ತಂಡದ ಅನುಭವಿ ಆಟಗಾರರಾಗಿದ್ದರು. ಬಾಂಗ್ಲಾದೇಶ ವಿರುದ್ಧ ಧೋನಿ ಬ್ಯಾಟಿಂಗ್ ನಡೆಸುತ್ತಿದ್ದಾಗ ಅವರ ಸ್ಫೋಟಕ ಹೊಡೆತಗಳನ್ನು ಗಮನಿಸಿದ್ದ ಸಚಿನ್, ಆಗಿನ ಭಾರತ ತಂಡದ ನಾಯಕ ಸೌರವ್ ಗಂಗೂಲಿಗೆ ಧೋನಿಯಲ್ಲಿ ವಿಶೇಷ ಪ್ರತಿಭೆಯಿದೆ ಎಂದು ಹೇಳಿದ್ದರು.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸಚಿನ್, "ಬಾಂಗ್ಲಾದೇಶದಲ್ಲಿ ಎಂ.ಎಸ್ ಧೋನಿ ಬ್ಯಾಟ್ ಮಾಡುತ್ತಿದ್ದುದನ್ನು ನೋಡಿದ ಕ್ಷಣ ನನಗೆ ಇನ್ನೂ ನೆನಪಿದೆ. ಅವರ ಪವರ್ ಹಿಟ್ಟಿಂಗ್ನಲ್ಲಿ ಏನೋ ವಿಶೇಷವಿದೆ ಎಂದು ಸೌರವ್ಗೆ ಹೇಳಿದ್ದೆ. ಅವರಲ್ಲಿರುವ ಅಪರೂಪದ ಪ್ರತಿಭೆಯನ್ನು ಆಗಲೇ ಗುರುತಿಸಬಹುದಾಗಿತ್ತು. ಆನಂತರ ಅವರು ಸಾಗಿದ ಪಯಣ ನಿಜಕ್ಕೂ ಅದ್ಭುತ," ಎಂದು ಬರೆದುಕೊಂಡಿದ್ದಾರೆ.
IND vs NZ: ಜಸ್ಪ್ರೀತ್ ಬುಮ್ರಾಗೆ ಸೂಕ್ತ ಯೋಜನೆ ರೂಪಿಸಿದ್ದೇವೆಂದ ಟಾಮ್ ಲೇಥಮ್!
"ನಿಮ್ಮೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದು ಹಾಗೂ ಭಾರತೀಯ ಕ್ರಿಕೆಟ್ನ ಕೆಲವು ಅತ್ಯಂತ ಸ್ಮರಣೀಯ ಕ್ಷಣಗಳ ಭಾಗವಾಗಿದ್ದು ನಿಜಕ್ಕೂ ಸಂತೋಷದ ವಿಚಾರ. ನೀವು ವಿಶೇಷವಾದದ್ದನ್ನು ಸಾಧಿಸುತ್ತೀರಿ ಎಂಬ ನಂಬಿಕೆ ನನಗಿತ್ತು. ಆದರೆ ನೀವು ಅದಕ್ಕಿಂತಲೂ ಹೆಚ್ಚಿನ ಸಾಧನೆ ಮಾಡಿದ್ದೀರಿ. ಭಾರತೀಯ ಕ್ರಿಕೆಟ್ಗೆ ನಿಮ್ಮ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದೀರಿ. ನಿಮ್ಮೊಂದಿಗೆ ಈ ಪಯಣದ ಭಾಗವಾಗಿದ್ದು ಸಂತಸದ ಸಂಗತಿ. ಅದ್ಭುತವಾಗಿ ಆಡಿದ್ದೀರಿ ಎಂ.ಎಸ್!" ಎಂದು ಸಚಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
9 ವರ್ಷಗಳ ಕಾಲ ಒಟ್ಟಿಗೆ ಆಡಿದ್ದ ಸಚಿನ್-ಧೋನಿ
ಸಚಿನ್ ತೆಂಡೂಲ್ಕರ್ ಹಾಗೂ ಎಂಎಸ್ ಧೋನಿ ಸುಮಾರು 9 ವರ್ಷಗಳ ಕಾಲ ಭಾರತ ತಂಡದಲ್ಲಿ ಒಟ್ಟಿಗೆ ಆಡಿದ್ದರು. 2007-08ರಲ್ಲಿ ಧೋನಿ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಆ ಬಳಿಕ ಸಚಿನ್ ಧೋನಿ ನಾಯಕತ್ವದಲ್ಲಿ ಹಲವು ವರ್ಷಗಳ ಕಾಲ ಆಡಿದ್ದರು. ವಿಶೇಷವೆಂದರೆ, 2011ರ ಏಕದಿನ ವಿಶ್ವಕಪ್ ಗೆಲ್ಲುವ ಸಚಿನ್ ಅವರ ಬಹುದಿನಗಳ ಕನಸು ಧೋನಿ ನಾಯಕತ್ವದಲ್ಲೇ ನನಸಾಗಿತ್ತು. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದಿದ್ದ ಫೈನಲ್ನಲ್ಲಿ ಶ್ರೀಲಂಕಾವನ್ನು ಸೋಲಿಸಿ ಭಾರತ ವಿಶ್ವ ಚಾಂಪಿಯನ್ ಆಗಿತ್ತು.
ʻನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆʼ: ಎಂಎಸ್ ಧೋನಿಗೆ ಗೌರವ ಸಲ್ಲಿಸಿದ ಸುರೇಶ್ ರೈನಾ!
ಆದರೆ, ಸಚಿನ್ ಅವರು ಧೋನಿ ನಾಯಕತ್ವದಲ್ಲಿ ಒಂದೇ ಒಂದು ಟಿ20ಐ ಪಂದ್ಯವನ್ನೂ ಆಡಿರಲಿಲ್ಲ. ಸಚಿನ್ ತಮ್ಮ ವೃತ್ತಿಜೀವನದಲ್ಲಿ ಕೇವಲ ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದಾರೆ. ಭಾರತದ ಚೊಚ್ಚಲ ಟಿ20 ಪಂದ್ಯದಲ್ಲಿ ವಿರೇಂದ್ರ ಸೆಹ್ವಾಗ್ ತಂಡವನ್ನು ಮುನ್ನಡೆಸಿದ್ದರು. ಆ ತಂಡದಲ್ಲಿ ಧೋನಿ ಕೂಡ ಇದ್ದರು.
ಧೋನಿಗೆ ನಾಯಕತ್ವ ನೀಡುವಂತೆ ಬಿಸಿಸಿಐಗೆ ಸಲಹೆ ನೀಡಿದ್ದ ಸಚಿನ್!
2007ರಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂರನೇ ಬಾರಿ ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳುವಂತೆ ಪ್ರಸ್ತಾಪಿಸಿತ್ತು. ಆದರೆ ಸಚಿನ್ ಈ ಅವಕಾಶವನ್ನು ನಿರಾಕರಿಸಿ, ಯುವ ಆಟಗಾರ ಧೋನಿಗೆ ನಾಯಕತ್ವ ನೀಡುವಂತೆ ಮಂಡಳಿಗೆ ಸಲಹೆ ನೀಡಿದ್ದರು. 2022ರಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಚಿನ್ ಈ ವಿಚಾರವನ್ನು ಬಹಿರಂಗಪಡಿಸಿದ್ದರು.
"ಇಂಗ್ಲೆಂಡ್ ಪ್ರವಾಸದ ವೇಳೆ ನನಗೆ ನಾಯಕತ್ವದ ಪ್ರಸ್ತಾಪ ಬಂದಿತ್ತು. ಆಗ ತಂಡದಲ್ಲಿ ಉತ್ತಮ ನಾಯಕನಾಗುವ ಸಾಮರ್ಥ್ಯವಿರುವ ಆಟಗಾರನಿದ್ದಾನೆ. ಆತ ಇನ್ನೂ ಯುವ ಆಟಗಾರನಾಗಿದ್ದರೂ, ಆತನ ಬಗ್ಗೆ ನೀವು ಗಂಭೀರವಾಗಿ ಯೋಚಿಸಬೇಕು ಎಂದು ಹೇಳಿದ್ದೆ."
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟೆಸ್ಟ್ನಲ್ಲಿ ವಿಶ್ವ ದಾಖಲೆ ಬರೆದ ಲಿಟನ್ ದಾಸ್!
"ನಾನು ಧೋನಿ ಜೊತೆ ಸಾಕಷ್ಟು ಬಾರಿ ಮಾತನಾಡಿದ್ದೇನೆ. ಮೈದಾನದಲ್ಲಿ ಮೊದಲ ಸ್ಲಿಪ್ನಲ್ಲಿ ಫೀಲ್ಡಿಂಗ್ ಮಾಡುವಾಗಲೂ ಅವರ ಬಳಿ ಹೋಗಿ, ನಿಮ್ಮ ಅಭಿಪ್ರಾಯವೇನು ಎಂದು ಕೇಳುತ್ತಿದ್ದೆ. ಆಗ ರಾಹುಲ್ ನಾಯಕರಾಗಿದ್ದರೂ ಧೋನಿಯ ಅಭಿಪ್ರಾಯ ಪಡೆಯುತ್ತಿದ್ದೆ. ಅವರ ಪ್ರತಿಕ್ರಿಯೆ ಯಾವಾಗಲೂ ಸಮತೋಲನದಿಂದ ಕೂಡಿರುತ್ತಿತ್ತು. ಶಾಂತವಾಗಿದ್ದ ಅವರ ಆಲೋಚನೆಗಳಲ್ಲಿ ಪ್ರಬುದ್ಧತೆ ಎದ್ದು ಕಾಣುತ್ತಿತ್ತು," ಎಂದು ಸಚಿನ್ ಹೇಳಿದ್ದರು.
ಧೋನಿ ನಾಯಕತ್ವದಲ್ಲಿ ಭಾರತ ತಂಡ ಮೂರು ಪ್ರಮುಖ ವೈಟ್ಬಾಲ್ ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟಿದ್ದರು.