ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs ENG: ಟಿ20ಐ ಸರಣಿಗೂ ಮುನ್ನ ಶ್ರೇಯಸ್‌ ಅಯ್ಯರ್‌ ಬಗ್ಗೆ ಅಂಬಾಟಿ ರಾಯುಡು ದೊಡ್ಡ ಹೇಳಿಕೆ!

ಐರ್ಲೆಂಡ್‌ ವಿರುದ್ಧ ಎರಡು ಪಂದ್ಯಗಳ ಟಿ20ಐ ಸರಣಿಯನ್ನು 0-2 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿದ ಭಾರತ ತಂಡದ ಬಗ್ಗೆ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಯಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಟೀಮ್‌ ಇಂಡಿಯಾ ಕಮ್‌ಬ್ಯಾಕ್‌ ಮಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಶ್ರೇಯಸ್‌ ಅಯ್ಯರ್‌ಗೆ ಸಂದೇಶ ರವಾನಿಸಿದ ಅಂಬಾಟಿ ರಾಯುಡು.

ನವದೆಹಲಿ: ಭಾರತ ಟಿ20ಐ ತಂಡದ ನಾಯಕನಾಗಿ ಐರ್ಲೆಂಡ್‌ ವಿರುದ್ಧದ ಟಿ20ಐ ಸರಣಿಯಲ್ಲಿಯೇ ಶ್ರೇಯಸ್‌ ಅಯ್ಯರ್‌ (Shreyas Iyer) ಸೋಲು ಅನುಭವಿಸಿದರು. ಆದರೂ ಅವರು ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ (IND vs ENG) ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದ್ದಾರೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಭಾರತ ತಂಡ ಆಂಗ್ಲರ ವಿರುದ್ಧ ಉತ್ತಮ ಪ್ರದರ್ಶನವನ್ನು ತೋರಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ ತಂಡದ ಮಾಜಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಅಂಬಾಟಿ ರಾಯುಡು, ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಯಲ್ಲಿ ಭಾರತ ತಂಡಕ್ಕೆ ಸಂಗತಿಗಳು ಕಠಿಣವಾಗುವುದಿಲ್ಲ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಸರಣಿಯಲ್ಲಿ ನಾಯಕನಾಗಿ ಅಯ್ಯರ್‌, ಸಂಗತಿಗಳುಸ ಸುಲಭವಾಗಿಟ್ಟುಕೊಂಡು ತಂಡವನ್ನು ಮುನ್ನಡೆಸಲಿದ್ದಾರೆ ಹಾಗೂ ಒತ್ತಡದ ಸನ್ನಿವೇಶದಲ್ಲಿಯೂ ಶಾಂತ ಮನೋಭಾವವನ್ನು ಕಾಯ್ದುಕೊಳ್ಳಲಿದ್ದಾರೆಂದು ಅವರು ತಿಳಿಸಿದ್ದಾರೆ.

ಇಂಗ್ಲೆಂಡ್‌ ಮೊದಲ ಟಿ20ಗೆ ಸಂಜುಗೆ ಕೊಕ್‌, ಸೂರ್ಯವಂಶಿ ಪದಾರ್ಪಣೆ?

ಸೋನಿ ಸ್ಪೋರ್ಟ್ಸ್‌ ನೆಟ್‌ವರ್ಕ್‌ ಜೊತೆ ಮಾತನಾಡಿದ ಅಂಬಾಟಿ ರಾಯುಡು, "ಇಂಗ್ಲೆಂಡ್‌ ಎದುರು ಸಂಗತಿಗಳು ಉತ್ತಮವಾಗಬಹುದೆಂದು ನಾನು ಭಾವಿಸುತ್ತೇನೆ. ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ದೊಡ್ಡ ಸವಾಲು ಎದುರಾಗಲಿದೆ. ಇದನ್ನು ಶ್ರೇಯಸ್‌ ಅಯ್ಯರ್‌ ಮೆಟ್ಟಿ ನಿಲ್ಲಲಿದ್ದಾರೆಂದು ನನಗೆ ವಿಶ್ವಾಸವಿದೆ. ಐರ್ಲೆಂಡ್‌ ಎದುರಿಗಿಂತ ಇಂಗ್ಲೆಂಡ್‌ನಲ್ಲಿನ ಕಂಡೀಷನ್ಸ್‌ ಭಾರತಕ್ಕೆ ಸುಲಭವಾಗಲಿದೆ. ಅವರು ಸಂಗತಿಗಳನ್ನು ತುಂಬಾ ಸರಳವಾಗಿ ಇಟ್ಟುಕೊಳ್ಳುತ್ತಾರೆ. ಗೆಲುವು ಅಥವಾ ಸೋಲು ಅವರ ಮೇಲೆ ಯಾವುದೇ ಬದಲಾವಣೆಯನ್ನು ತರುವುದಿಲ್ಲ," ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್‌ ಟಿ20ಐ ಸರಣಿಯಲ್ಲಿ ಸಂಗತಿಗಳು ಬದಲಾಗಲಿವೆ: ರಾಯುಡು

ಇಂಗ್ಲೆಂಡ್‌ನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಶ್ರೇಯಸ್ ಅಯ್ಯರ್ ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ, ತಂಡ ಕ್ರಮೇಣ ಸಕಾರಾತ್ಮಕ ಮನೋಭಾವದೊಂದಿಗೆ ಮುಂದುವರಿಯಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು. ಹ್ಯಾರಿ ಬ್ರೂಕ್ ನೇತೃತ್ವದ ಇಂಗ್ಲೆಂಡ್ ತಂಡದ ವಿರುದ್ಧ ನಡೆಯಲಿರುವ ಮುಂಬರುವ ಸರಣಿಯಲ್ಲಿ ಟೀಮ್ ಇಂಡಿಯಾ ಖಂಡಿತವಾಗಿಯೂ ಉತ್ತಮವಾಗಿ ಕಮ್‌ಬ್ಯಾಕ್‌ ಮಾಡಲಿದೆ ಎಂಬ ಭರವಸೆಯನ್ನೂ ಅವರು ವ್ಯಕ್ತಪಡಿಸಿದರು.

ಭಾರತ vs ಇಂಗ್ಲೆಂಡ್ T20I ಸರಣಿಯ ಪೂರ್ಣ ವೇಳಾಪಟ್ಟಿ, ಸಮಯ, ಪ್ರಸಾರದ ವಿವರ ಇಲ್ಲಿದೆ

"ಅವರು ನಿಜವಾಗಿಯೂ ಕಷ್ಟಪಡುತ್ತಾರೆ ಎಂದು ನನಗೆ ಅನಿಸುವುದಿಲ್ಲ. ಇಂಗ್ಲೆಂಡ್ ಸರಣಿಗೆ ಅವರ ಬದಲಾವಣೆ ಅತ್ಯಂತ ಸಹಜವಾಗಿಯೂ ಸುಗಮವಾಗಿಯೂ ನಡೆಯಲಿದೆ. ಅವರು ಪರಿಸ್ಥಿತಿಯನ್ನು ಅತ್ಯಂತ ಸಮಚಿತ್ತದಿಂದ ಮತ್ತು ಸೊಗಸಾಗಿ ನಿಭಾಯಿಸುವ ವ್ಯಕ್ತಿ. ತಮ್ಮ ಕೆಲಸವನ್ನು ಎಂದಿನಂತೆ ಮಾಡುತ್ತಾ ಮುಂದುವರಿಯುತ್ತಾರೆ. ಅವರ ತಂಡವು ಇಂಗ್ಲೆಂಡ್ ಸರಣಿಯಲ್ಲಿ ಖಂಡಿತವಾಗಿಯೂ ಕಮ್‌ಬ್ಯಾಕ್‌ ಮಾಡುತ್ತದೆ ಎಂಬ ವಿಶ್ವಾಸ ನನಗಿದೆ," ಎಂದು ಭಾರತದ ಮಾಜಿ ಕ್ರಿಕೆಟಿಗ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.