ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻನನ್ನ ಅಪ್ಪನ ಮುಂದೆ ಪ್ರತಿ ದಿನ ಅಳುತ್ತಿದ್ದೆʼ: ತಮ್ಮ ವೃತ್ತಿ ಜೀವನದ ಕಠಿಣ ದಿನಗಳನ್ನು ನೆನೆದ ಹರ್ಷಿತ್‌ ರಾಣಾ!

ಭಾರತ ತಂಡದ ಯುವ ವೇಗಿ ಹರ್ಷಿತ್‌ ರಾಣಾ ಅವರು ತಮ್ಮ ವೃತ್ತಿ ಜೀವನದ ಆರಂಭಿಸಕ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ಅವರು ಸಾಲು-ಸಾಲು ವೈಫಲ್ಯಗಳಿಂದಾಗಿ ಪ್ರತಿ ದಿನ ನನ್ನ ತಂದೆಯ ಮುಂದೆ ಅಳುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ತದ ನಂತರ ವೈಫಲ್ಯಗಳನ್ನು ಹೇಗೆ ನಿರ್ವಹಿಸಬೇಕೆಂದು ಕಲಿತಿದ್ದೇನೆ ಎಂದು ತಿಳಿಸಿದ್ದಾರೆ.

ತಮ್ಮ ವೃತ್ತಿ ಜೀವನದ ಕಠಿಣ ದಿನಗಳನ್ನು ನೆನೆದ ಹರ್ಷಿತ್‌ ರಾಣಾ.

ನವದೆಹಲಿ: ಕ್ರಿಕೆಟ್‌ ವೃತ್ತಿ ಜೀವನದಲ್ಲಿ ವೈಫಲ್ಯಗಳನ್ನು ಹೇಗೆ ನಿರ್ವಹಿಸಬೇಕೆಂಬುದರ ಬಗ್ಗೆ ಭಾರತ ತಂಡದ (Indian Cricket Team) ಯುವ ವೇಗಿ ಹರ್ಷಿತ್‌ ರಾಣಾ (Harshit Rana) ಬಹಿರಂಗಪಡಿಸಿದ್ದಾರೆ. ವೈಫಲ್ಯಗಳನ್ನು ಕಂಡಾಗ ಹಾಗೂ ಟೀಕೆಗಳನ್ನು ಎದುರಿಸಿದಾಗ ನನ್ನ ತಂದೆಯ ಮುಂದೆ ಪ್ರತಿನಿತ್ಯ ಅಳುತ್ತಿದ್ದೆ ಎಂಬ ಅಂಶವನ್ನು ರಾಣಾ ರಿವೀಲ್‌ ಮಾಡಿದ್ದಾರೆ. ಅಂದ ಹಾಗೆ ಭಾರತ ತಂಡದ ಮೂರೂ ಸ್ವರೂಪದಲ್ಲಿ ಹರ್ಷಿತ್‌ ರಾಣಾಗೆ ಅವಕಾಶ ನೀಡಿದ ಬಳಿಕ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ವಿರುದ್ಧ ಪಕ್ಷಪಾತ ಧೋರಣೆ ವಿಷಯವಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಆದರೆ, ಹರ್ಷಿತ್‌ ರಾಣಾ ಭಾರತ ತಂಡದಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ಆ ಬೌಲಿಂಗ್‌ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಗಮನ ಸೆಳೆದಿದ್ದಾರೆ ಹಾಗೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ದೆಹಲಿಯಲ್ಲಿ ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ಸಾಲು-ಸಾಲು ವೈಫಲ್ಯಗಳ ಎದುರಾದಾಗ ನಾನು ನನ್ನ ತಂದೆಯ ಮುಂದೆ ದಿನನಿತ್ಯ ಅಳುತ್ತಿದ್ದೆ. ಈ ಸಂದರ್ಭದಲ್ಲಿ ನಾನು ವೈಫಲ್ಯಗಳನ್ನು ಹೇಗೆ ನಿರ್ವಹಿಸಬೇಕೆಂದು ಕಲಿತೆ. ಅಂದ ಹಾಗೆ ಹರ್ಷಿತ್‌ ರಾಣಾ ಭಾರತ ತಂಡವನ್ನು ಮೂರೂ ಸ್ವರೂಪದಲ್ಲಿ ಪ್ರತಿನಿಧಿಸಿದ್ದಾರೆ. ಏಕದಿನ ಸ್ವರೂಪದಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅವರು, ಇಲ್ಲಿಯವರೆಗೂ ಆಡಿದ 13 ಏಕದಿನ ಪಂದ್ಯಗಳಿಂದ 23 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿನ ಪ್ರದರ್ಶನದಿಂದ ಟಿ20ಐ ತಂಡದಲ್ಲಿಯೂ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. 2026ರ ಐಸಿಸಿ ಟಿ20 ವಿಶ್ವಕಪ್‌ ಭಾರತ ತಂಡದಲ್ಲಿಯೂ ರಾಣಾ ಸ್ಥಾನ ಪಡೆದಿದ್ದಾರೆ.

ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಭಾರತ

"ವೈಫಲ್ಯಗಳನ್ನು ಹೇಗೆ ನಿರ್ವಹಿಸಬೇಕೆಂದು ನನಗೆ ಗೊತ್ತಿದೆ. ಕಳೆದ 10 ವರ್ಷಗಳಲ್ಲಿ ನಾನು ಇದನ್ನು ನೋಡಿದ್ದೇನೆ. ನಾನು ಟ್ರಯಲ್ಸ್‌ಗೆ ಹೋಗಿದ್ದೇನೆ ಹಾಗೂ ಇಲ್ಲಿ ನನ್ನ ಹೆಸರು ಬಂದಿರಲಿಲ್ಲ. ಈ ವೇಳೆ ನಾನು ಪ್ರತಿದಿನ ನನ್ನ ತಂದೆಯ ಮುಂದೆ ಅಳುತ್ತಿದ್ದೆ ಹಾಗೂ ಕಮ್‌ಬ್ಯಾಕ್‌ ಮಾಡಲು ಪ್ರಯತ್ನ ನಡೆಸಿತ್ತು.ಈಗ ವೈಫಲ್ಯಗಳು ಮುಗಿದಿದೆ ಹಾಗೂ ಏನೇ ಬರಲಿ ಇದೀಗ ನಾನು ನಿರ್ವಹಿಸುತ್ತೇನೆ. ಆದರೆ, ನನ್ನ ತಂದೆ ನನ್ನನ್ನು ಸಾಕಷ್ಟು ಮುಂದೆ ತಳ್ಳಿದ್ದಾರೆ," ಎಂದು ಮೆನ್ಸ್‌ಎಕ್ಸ್‌ಪಿ ಸಂಭಾಷಣೆಯಲ್ಲಿ ಹರ್ಷಿತ್‌ ರಾಣಾ ತಿಳಿಸಿದ್ದಾರೆ.



ಕೊಹ್ಲಿ, ರೋಹಿತ್‌ಗೆ ಬೌಲ್‌ ಮಾಡಿದ್ದು ನೆರವಾಯಿತು: ಹರ್ಷಿತ್‌ ರಾಣಾ

ನೆಟ್ಸ್‌ನಲ್ಲಿ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾಗೆ ಬೌಲಿಂಗ್‌ ನಡೆಸಿದ್ದರಿಂದ ನನ್ನ ಆಟದಲ್ಲಿ ಸಾಕಷ್ಟು ಸುಧಾರಣೆಯಾಗಿದೆ ಎಂದು ಕೋಲ್ಕತಾ ನೈಟ್‌ ರೈಡರ್ಸ್‌ ವೇಗಿ ಹೇಳಿಕೊಂಡಿದ್ದಾರೆ.

"ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ. ನಾನು ಅವರಿಗೆ ಸುಲಭವಾಗಿ ಬೌಲ್‌ ಮಾಡಿದರೂ ಸಹ, ಅವರು ನೆಟ್ಸ್‌ನಲ್ಲಿ ಬ್ಯಾಟ್‌ ಮಾಡಲು ಬಂದಾಗ ಸ್ಪರ್ಧೆ ಇರುತ್ತದೆ ಮತ್ತು ಅವರು ನನಗೆ ಕೆಲಸಗಳನ್ನು ಮಾಡಲು ಸವಾಲು ಹಾಕುತ್ತಾರೆ, ಆದ್ದರಿಂದ ನಾನು ಬೌಲ್‌ ಮಾಡಲು ನನ್ನ ಉತ್ತುಂಗಕ್ಕೇರುತ್ತೇನೆ, ”ಎಂದು ಹರ್ಷಿತ್‌ ರಾಣಾ ತಿಳಿಸಿದ್ದಾರೆ.