ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ʻಒಂದು ಕಾಲದಲ್ಲಿ ನನ್ನನ್ನು ಟೆಸ್ಟ್‌ ಕ್ರಿಕೆಟ್‌ಗೆ ಸೀಮಿತ ಮಾಡಿದ್ದರುʼ-ಕೆಎಲ್‌ ರಾಹುಲ್‌!

ಟಿ20 ಕ್ರಿಕೆಟ್‌ನಲ್ಲಿ ಎಲ್ಲಾ ಸಂಗತಿಗಳು ತಮ್ಮ ಪರವಾಗಿಯೇ ನಡೆಯಲಿಲ್ಲ ಎಂಬುದನ್ನು ಕೆಎಲ್ ರಾಹುಲ್ ಒಪ್ಪಿಕೊಂಡಿದ್ದಾರೆ. ಕೇವಲ ಟೆಸ್ಟ್‌ ಕ್ರಿಕೆಟ್‌ ಬ್ಯಾಟ್ಸ್‌ಮನ್‌ ಅಲ್ಲ, ಟಿ20 ಕ್ರಿಕೆಟ್‌ನಲ್ಲಿಯೂ ಅತ್ಯುತ್ತಮ ಸ್ಟ್ರೈಕ್‌ ರೇಟ್‌ ಜೊತೆಗೆ ವೈಟ್‌ಬಾಲ್‌ನಲ್ಲಿಯೂ ಪ್ರಾಬಲ್ಯ ಸಾಧಿಸಿರುವ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿನ ತಮ್ಮ ಪಯಣದ ಬಗ್ಗೆ ಕೆಎಲ್‌ ರಾಹುಲ್‌ ಹೇಳಿಕೆ.

ನವದೆಹಲಿ: ತಮ್ಮ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ತಾವು ಶಕ್ತಿಶಾಲಿ ಟಿ20 ಆಟಗಾರನಾಗಿ ಪರಿಗಣಿಸಲ್ಪಟ್ಟಿರಲಿಲ್ಲ ಎಂದು ಭಾರತ ತಂಡದ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ (KL Rahul) ಒಪ್ಪಿಕೊಂಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ತಮ್ಮ ಸ್ಟ್ರೈಕ್ ರೇಟ್ ಮತ್ತು ಆಟದ ಶೈಲಿಯ ಕುರಿತು ವರ್ಷಗಳ ಕಾಲ ಟೀಕೆಗಳನ್ನು ಎದುರಿಸಿದ ಬಳಿಕ, ತಮ್ಮ ವೈಟ್-ಬಾಲ್ ಆಟದ ಬಗ್ಗೆ ಇದ್ದ ಅಭಿಪ್ರಾಯವನ್ನು ಬದಲಾಯಿಸಲು ಸಾಧ್ಯವಾಗಿರುವುದರಿಂದ ತನಗೆ ತುಂಬಾ ಖುಷಿ ಇದೆ ಎಂದು ಹೇಳಿದ್ದಾರೆ. ಕೆಎಲ್‌ ರಾಹುಲ್‌ ಬಳಿಕ ಭಾರತ ತಂಡದ ಪರ ಮೂರೂ ಸ್ವರೂಪದ ಬ್ಯಾಟ್ಸ್‌ಮನ್‌ ಆಗಿ ಪರಿವರ್ತನೆಯಾದರು. ಟಿ20 ಕ್ರಿಕೆಟ್‌ನಲ್ಲಿ ವಿಶೇಷವಾಗಿ ಐಪಿಎಲ್‌ (IPL 2026) ಟೂರ್ನಿಯಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ.

ಪ್ರಸ್ತುತ ಐಪಿಎಲ್ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ರಾಹುಲ್ ಉತ್ತಮ ಫಾರ್ಮ್‌ನಲ್ಲಿದ್ದು, ಕಳೆದ ತಿಂಗಳು ಪಂಜಾಬ್ ಕಿಂಗ್ಸ್ ವಿರುದ್ಧ 64 ಎಸೆತಗಳಲ್ಲಿ ಅಜೇಯ 152 ರನ್‌ಗಳ ಸ್ಫೋಟಕ ಇನಿಂಗ್ಸ್ ಆಡುವ ಮೂಲಕ ಎಲ್ಲರ ಗಮನವನ್ನುಸೆಳೆದಿದ್ದರು. ಅವರ ಆ ಶತಕದ ಇನಿಂಗ್ಸ್‌ನ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್‌, ಪಂಜಾಬ್‌ ಕಿಂಗ್ಸ್‌ ಎದುರು ಸೋತಿತ್ತು. ಆದರೆ, ಈ ಪಂದ್ಯದಲ್ಲಿ ರಾಹುಲ್ ಅವರ ಟಿ20 ಕ್ರಿಕೆಟ್‌ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿತ್ತು.

MI vs LSG: 'ಅದೃಷ್ಟದ ಅವಶ್ಯಕತೆಯಿದೆ'; ಸತತ ಸೋಲಿನ ಬೆನ್ನಲ್ಲೇ ಪಂತ್‌ ಹತಾಶ ನುಡಿ

ಜಿಯೊ ಸ್ಟಾರ್‌ನ ʻಸೂಪರ್‌ ಸ್ಟಾರ್ಸ್‌ʼನ ಶೋನಲ್ಲಿ ಮಾತನಾಡಿದ ಕೆಎಲ್‌ ರಾಹುಲ್‌, ತಮ್ಮ ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿನ ಪಯಣದ ಬಗ್ಗೆ ಬೆಳಕು ಚೆಲ್ಲಿದ್ದಾರೆ.

“ಹತ್ತು ವರ್ಷಗಳ ಹಿಂದೆ, ಟಿ20 ತಂಡದ ಭಾಗವಾಗಲು ನಾನು ಏನೇ ಬೇಕಾದರೂ ಮಾಡುತ್ತಿದ್ದೆ. ಆಗ ನನನ್ನು ಟಿ20 ಆಟಗಾರನಾಗಿ ಮೌಲ್ಯಮಾಪನ ಮಾಡಲಾಗುತ್ತಿರಲಿಲ್ಲ ಅಥವಾ ಉತ್ತಮ ವೈಟ್-ಬಾಲ್ ಆಟಗಾರನೆಂದೂ ಪರಿಗಣಿಸಲಾಗುತ್ತಿರಲಿಲ್ಲ; ನನಗೆ ‘ಟೆಸ್ಟ್ ಆಟಗಾರ’ ಎಂಬ ಮುದ್ರೆ ಬಿದ್ದಿತ್ತು,” ಎಂದು ಕೆಎಲ್‌ ರಾಹುಲ್ ಹೇಳಿದ್ದಾರೆ.

“ಈ ಕಾರಣದಿಂದಾಗಿ ನಾನು ಹೊರಬಂದು ನನ್ನ ವೈಟ್-ಬಾಲ್ ಆಟವನ್ನು ಅಭಿವೃದ್ಧಿಪಡಿಸಿ ಇಷ್ಟು ದೂರ ಬಂದಿರುವುದು ನನಗೆ ಬಹಳ ಹೆಮ್ಮೆಯ ವಿಷಯ. ಈ ಪ್ರಯಾಣದಲ್ಲಿ ನಾನು ತಪ್ಪುಗಳನ್ನೂ ಮಾಡಿದ್ದೇನೆ, ಇನ್ನಷ್ಟು ಚೆನ್ನಾಗಿ ಮಾಡಬಹುದಾಗಿದ್ದ ಕೆಲವು ಸಂಗತಿಗಳೂ ಇದ್ದವು,” ಎಂದು ಅವರು ತಿಳಿಸಿದ್ದಾರೆ.

LSG vs MI ಪಂದ್ಯದ ಪವರ್‌ಪ್ಲೇನಲ್ಲಿ ವಿಶೇಷ ದಾಖಲೆ ಬರೆದ ಲಖನೌ ಸೂಪರ್‌ ಜಯಂಟ್ಸ್‌!

ತಮ್ಮ ವೃತ್ತಿಜೀವನದಲ್ಲಿ ಏರಿಳಿತಗಳಿದ್ದರೂ, ಯಾವಾಗಲೂ ತಮ್ಮ ತಂಡವನ್ನು ಪ್ರತಿನಿಧಿಸಿದಾಗ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಿದ್ದೇನೆ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟ್ಸ್‌ಮನ್‌ ಹೇಳಿದ್ದಾರೆ.

“ಆದರೆ ನನಗೆ ಹೆಮ್ಮೆಯ ವಿಷಯವೇನೆಂದರೆ, ನಾನು ಪ್ರತೀ ಬಾರಿ ಆಡಿದಾಗ ನನ್ನ ಶ್ರೇಷ್ಠ ಪ್ರಯತ್ನವನ್ನು ಹಾಕಿದ್ದೇನೆ ಮತ್ತು ಯಶಸ್ಸು ಸಾಧಿಸಲು ಸಾಧ್ಯವಾದಷ್ಟು ಉತ್ತಮವಾಗಿ ಸಿದ್ಧತೆ ಮಾಡಿಕೊಂಡಿದ್ದೇನೆ. ಇದೇ ಕ್ರೀಡೆ — ಎಲ್ಲವೂ ಸದಾ ನಿಮ್ಮ ಪರವಾಗಿಯೇ ನಡೆಯುವುದಿಲ್ಲ,” ಎಂದು ಕೆಎಲ್‌ ರಾಹುಲ್ ತಿಳಿಸಿದ್ದಾರೆ.

"ನನಗೆ ಇನ್ನೂ ಸಮಯವಿದೆ. ಹಾಗಾಗಿ ನನ್ನ ಕಡೆಯಿಂದ ಎಷ್ಟು ಸಾಧ್ಯವಾಗುತ್ತೋ ಅಷ್ಟು ಪ್ರಯತ್ನ ಹಾಕಿ, ಟ್ರೋಫಿಗಳನ್ನು ಗೆಲ್ಲಲು ಪ್ರಯತ್ನಿಸುತ್ತೇನೆ," ಎಂದು ಭಾರತ ತಂಡದ ವಿಕೆಟ್‌ ಕೀಪರ್‌ ಹೇಳಿದ್ದಾರೆ.