ನವದೆಹಲಿ: ಐಸಿಸಿ ನೂತನ ಟಿ20ಐ ಶ್ರೇಯಾಂಕ (ICC T20I Rankings) ಪಟ್ಟಿ ಬಿಡುಗಡೆ ಮಾಡಿದ್ದು, ಭಾರತೀಯ ತಂಡದ (Indian Cricket team) ಹಲವು ಆಟಗಾರರು ಮುಂಬಡ್ತಿ ಪಡೆದಿದ್ದಾರೆ. ಅದರಲ್ಲೂ ವಿಶೇಷವಾಗಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 97 ರನ್ ಬಾರಿಸಿ ಎಲ್ಲರ ಗಮನ ಸೆಳೆದಿದ್ದ ಸಂಜು ಸ್ಯಾಮ್ಸನ್ (Sanju Samson), 25 ಸ್ಥಾನಗಳಲ್ಲಿ ಜಿಗಿತ ಕಂಡಿದ್ದಾರೆ. ಕಳೆದ ಶ್ರೇಯಾಂಕ ಪಟ್ಟಿಯ ಪ್ರಕಾರ 65ನೇ ಸ್ಥಾನದಲ್ಲಿದ್ದ ಸಂಜು ಸ್ಯಾಮ್ಸನ್, ಇದೀಗ ಬರೋಬ್ಬರಿ 25 ಸ್ಥಾನಗಳ ಜಿಗಿತ ಕಂಡು 549 ರೇಟಿಂಗ್ ಪಾಯಿಂಟ್‌ಗಳೊಂದಿಗೆ 40ನೇ ಸ್ಥಾನ ಪಡೆದಿದ್ದಾರೆ. ಅವರಿಗಿಂತ ಮೊದಲು ವೆಸ್ಟ್ ಇಂಡೀಸ್ ತಂಡದ ರೋವ್ಮನ್ ಪೊವೆಲ್, ದಕ್ಷಿಣ ಆಫ್ರಿಕಾದ ರೀಜಾ ಹೆಂಡ್ರಿಕ್ಸ್ ಮತ್ತು ಪಾಕಿಸ್ತಾನದ ಬಾಬರ್ ಆಝಮ್ ಸ್ಥಾನ ಪಡೆದಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ಗೆ ಹೆಸರುವಾಸಿಯಾಗಿರುವ ಅಭಿಷೇಕ್ ಶರ್ಮಾ ಅವರಿಂದ ಈ ಬಾರಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. ಆರಂಭದ ಮೂರು ಪಂದ್ಯಗಳಲ್ಲಿ ಸತತವಾಗಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಅದರ ಹೊರತಾಗಿಯೂ, ಅವರು ನೂತನ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ತಮ್ಮ ಅಗ್ರ ಸ್ಥಾನವನ್ನು ಕಾಪಾಡಿಕೊಂಡಿದ್ದಾರೆ. ಮತ್ತೊಂದೆಡೆ ಇಶಾನ್ ಕಿಶನ್ ಐದನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಮೇಲೇರಿದ್ದಾರೆ. ಇತ್ತ ತಿಲಕ್ ವರ್ಮಾ ಕೂಡ ಒಂದು ಸ್ಥಾನ ಏರಿಕೆ ಕಂಡಿದ್ದು, ಏಳನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಇದರ ನಡುವೆ ನಾಯಕ ಸೂರ್ಯಕುಮಾರ್ ಯಾದವ್ ಏಳನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.
ಸಂಜು ಸ್ಯಾಮ್ಸನ್ ನೆಟ್‌ವರ್ಥ್ ಎಷ್ಟು? ಆಸ್ತಿ, ಕಾರುಗಳು, ಐಪಿಎಲ್ ಸಂಬಳದ ಸಂಪೂರ್ಣ ಮಾಹಿತಿ!
ಬೌಲರ್‌ಗಳ ಶ್ರೇಯಾಂಕದಲ್ಲಿ ಪ್ರಾಬಲ್ಯ ಭಾರತದ ಬೌಲರ್ಸ್
ಇನ್ನು ಟಿ20ಐ ಬೌಲರ್‌ಗಳ ಶ್ರೇಯಾಂಕದಲ್ಲಿಯೂ ಟೀಮ್ ಇಂಡಿಯಾ ಬೌಲರ್‌ಗಳು ಪ್ರಾಬಲ್ಯ ಸಾಧಿಸಿದ್ದಾರೆ. ಜಸ್‌ಪ್ರೀತ್ ಬುಮ್ರಾ ಒಂದು ಸ್ಥಾನ ಜಿಗಿದು 8 ರಿಂದ 7 ನೇ ಸ್ಥಾನಕ್ಕೆ ಏರಿದ್ದಾರೆ. ಅರ್ಷದೀಪ್ ಸಿಂಗ್ ಕೂಡ ಅದ್ಭುತ ಪ್ರದರ್ಶನ ನೀಡಿ 19ನೇ ಸ್ಥಾನದಿಂದ 13ನೇ ಸ್ಥಾನಕ್ಕೇರಿದ್ದಾರೆ. ಸ್ಪಿನ್ನರ್ ವರುಣ್ ಚಕ್ರವರ್ತಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ಮೈಕಲ್ ಹೇಸನ್ ಬಗ್ಗೆ ಅಸಮಾಧಾನ, ಪಾಕಿಸ್ತಾನ ಆಯ್ಕೆ ಸಮಿತಿಯಿಂದ ಹೊರಬಂದ ಅಲೀಮ್ ದಾರ್!
ವೆಸ್ಟ್ ಇಂಡೀಸ್ ವಿರುದ್ಧ ಅಮೋಘ ಪ್ರದರ್ಶನ
ಟೀಮ್ ಇಂಡಿಯಾ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡ ನೀಡಿದ್ದ 196 ರನ್ ಗುರಿ ಬೆನ್ನತ್ತಿ ಸೂಪರ್-8 ರ ಹಂತದ ಪಂದ್ಯದಲ್ಲಿ ಗೆಲುವು ಸಾಧಿಸುವಲ್ಲಿ ಸಂಜು ಸ್ಯಾಮ್ಸನ್ ಅವರು ನಿರ್ಣಾಯಕ ಪಾತ್ರ ವಹಿಸಿದರು. ಆರಂಭದಿಂದಲೂ ಅಕ್ರಮಣಶೀಲವಾಗಿ ಬ್ಯಾಟ್ ಬೀಸಿದ ಸ್ಯಾಮ್ಸನ್, 50 ಎಸೆತಗಳಲ್ಲಿ 12 ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಗಳೊಂದಿಗೆ ಅಜೇಯವಾಗಿ 97 ರನ್ ಕಲೆಹಾಕಿದರು. ಈ ಮೂಲಕ ಟೀಮ್ ಇಂಡಿಯಾ ಗೆದ್ದು ಈ ಬಾರಿಯ ಟಿ20 ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿತು.
ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್
ಭಾರತವು ಇದೀಗ 2026ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮುಖಾಮುಖಿಯಾಗಲಿದೆ. ಈ ಮಹತ್ವದ ಪಂದ್ಯವು ನಾಳೆ ಮಾರ್ಚ್ 5 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಹೆಚ್ಚಿನ ರನ್‌ಗಳ ಸಂಭಾವನೆಯಿರುವ ಈ ಪಂದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.