ನವದೆಹಲಿ: ಮುಂಬರುವ 2026ರ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯ (ICC U-19 World Cup 2026) ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಬುಧವಾರ ಪ್ರಕಟಿಸಿದೆ. ಹದಿನಾರನೇ ಆವೃತ್ತಿಯ ಈ ಟೂರ್ನಿಯು ನಮೀಬಿಯಾ ಹಾಗೂ ಜಿಂಬಾಬ್ವೆ ಜಂಟಿ ಆತಿಥ್ಯದಲ್ಲಿ ಜನವರಿ 15 ರಂದು ಆರಂಭವಾಗಲಿದೆ. ಭಾರತ ತಂಡ (India U-19) ಟೂರ್ನಿಯ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಆ ಮೂಲಕ ಭಾರತದ ವೈಭವ್ ಸೂರ್ಯವಂಶಿ ಅವರ ಮೇಲೆ ಈ ಟೂರ್ನಿಯಲ್ಲಿ ಸಾಕಷ್ಟು ನಿರೀಕ್ಷೆಯನ್ನು ಇಡಲಾಗಿದೆ. ಆಧುನಿಕ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಕೂಡ ಈ ಟೂರ್ನಿಯಿಂದಲೇ ಬೆಳಕಿಗೆ ಬಂದವರು. ಹಾಗಾಗಿ ಮುಂಬರುವ ಟೂರ್ನಿಯಲ್ಲಿಯೂ ಹಲವು ಯುವ ಪ್ರತಿಭೆಗಳು ಬೆಳಕಿಗೆ ಬರಬಹುದು.
ನಮೀಬಿಯಾ ಹಾಗೂ ಜಿಂಬಾಬ್ವೆ ಎರಡೂ ದೇಶಗಳ ಐದು ಸ್ಥಳಗಳಲ್ಲಿ ಟೂರ್ನಿಯ ಪಂದ್ಯಗಳು ನಡೆಯಲಿವೆ. ಜಿಂಬಾಬ್ವೆಯ ಮೂರು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆದರೆ, ನಮೀಬಿಯಾದ ಎರಡು ಮೈದಾನಗಳಲ್ಲಿ ಪಂದ್ಯಗಳು ಜರುಗಲಿವೆ. 2027ರ ಏಕದಿನ ವಿಶ್ವಕಪ್ ಟೂರ್ನಿಯನ್ನೂ ಕೂಡ ಈ ಎರಡೂ ತಂಡಗಳು ಕೂಡ ದಕ್ಷಿಣ ಆಫ್ರಿಕಾ ಜಂಟಿ ಆತಿಥ್ಯದಲ್ಲಿ ನಡೆಸಲಿವೆ.
IND vs SA: ʻಗೌತಮ್ ಗಂಭೀರ್ ಮೈದಾನದಲ್ಲಿ ಆಡುತ್ತಿಲ್ಲʼ-ಟೀಕಾಕಾರರಿಗೆ ಉತ್ತಪ್ಪ ತಿರುಗೇಟು!
ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯ ಸ್ಥಳಗಳು
ಜಿಂಬಾಬ್ವೆ: ಹರಾರೆ ಸ್ಪೋರ್ಟ್ಸ್ ಕ್ಲಬ್ (ಹರಾರೆ), ತಕಶಿಂಗ ಸ್ಪೋರ್ಟ್ಸ್ ಕ್ಲಬ್ (ಹರಾರೆ), ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ (ಬುಲವಾಯೊ)
ನಮೀಬಿಯಾ: ನಮೀಬಿಯಾ ಕ್ರಿಕೆಟ್ ಗ್ರೌಂಡ್ (ವಿಂಧೋಕ್), ಎಚ್‌ಪಿ ಓವಲ್ (ವಿಂದೋಕ್)
ಒಟ್ಟು 16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ ಹಾಗೂ ಒಂದೊಂದು ಗುಂಪಿನಲ್ಲಿ ನಾಲ್ಕು ತಂಡಗಳು ಸ್ಥಾನ ಪಡೆದಿವೆ. ಈ ಟೂರ್ನಿಯ ಅತ್ಯಂತ ಯಶಸ್ವಿ ತಂಡವಾಗಿರುವ ಭಾರತ ತಂಡವನ್ನು ಆಯುಷ್ ಮ್ಹಾತ್ರೆ ಮುನ್ನಡೆಸಲಿದ್ದಾರೆ ಹಾಗೂ ಭಾರತ ಎ ಗುಂಪಿನಲ್ಲಿ ಯುಎಸ್‌ಎ, ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ತಂಡಗಳ ಜತೆ ಲೀಗ್ ಹಂತದಲ್ಲಿ ಕಾದಾಟ ನಡೆಸಲಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಸಿ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಐಸಿಸಿ ಅಂಡರ್-19 ವಿಶ್ವಕಪ್ 2026 ಗುಂಪುಗಳು
ಗುಂಪು ಎ: ಭಾರತ, ಯುಎಸ್ಎ, ಬಾಂಗ್ಲಾದೇಶ, ನ್ಯೂಜಿಲೆಂಡ್
ಗುಂಪು ಬಿ: ಜಿಂಬಾಬ್ವೆ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್
ಗುಂಪು ಸಿ: ಆಸ್ಟ್ರೇಲಿಯಾ, ಐರ್ಲೆಂಡ್, ಜಪಾನ್, ಶ್ರೀಲಂಕಾ
ಗುಂಪು ಡಿ: ತಾಂಜಾನಿಯಾ, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ
ಈ ಟೂರ್ನಿಯು ಜನವರಿ 15 ರಂದು ಆರಂಭವಾಗಲಿದೆ. ಬಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಭಾರತ ಹಾಗೂ ಯುಎಸ್‌ಎ ತಂಡಗಳು ಕಾದಾಟ ನಡೆಸಲಿವೆ. ಇನ್ನು ಫೆಬ್ರವರಿ 5ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಫೈನಲ್ ಪಂದ್ಯದ ಮೂಲಕ ಟೂರ್ನಿಯ ಅಭಿಯಾನ ಅಂತ್ಯವಾಗಲಿದೆ. ಗುಂಪು ಹಂತದ ಪಂದ್ಯಗಳ ಬಳಿಕ ಸೂಪರ್ ಸಿಕ್ಸ್ ಪಂದ್ಯಗಳು ನಂತರ ಸೆಮಿಫೈನಲ್ಸ್ ಹಾಗೂ ಫೈನಲ್ ಪಂದ್ಯ ಜರುಗಲಿದೆ.
IND vs SA: ಗಾಯಳು ಶುಭಮನ್ ಗಿಲ್ ಬದಲಿಗೆ ಮತ್ತೆ ತಂಡ ಸೇರಿದ ನಿತೀಶ್ ರೆಡ್ಡಿ
2026ರ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ
15 ಜನವರಿ, ಯುಎಸ್‌ಎ VS ಭಾರತ, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
15 ಜನವರಿ, ಜಿಂಬಾಬ್ವೆ VS ಸ್ಕಾಟ್ಲೆಂಡ್, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
15 ಜನವರಿ, ತಾಂಜಾನಿಯಾ VS ವೆಸ್ಟ್ ಇಂಡೀಸ್, HP ಓವಲ್, ವಿಂಡ್‌ಹೋಕ್
16 ಜನವರಿ, ಪಾಕಿಸ್ತಾನ VS ಇಂಗ್ಲೆಂಡ್, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
16 ಜನವರಿ, ಆಸ್ಟ್ರೇಲಿಯಾ VS ಐರ್ಲೆಂಡ್, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
16 ಜನವರಿ, ಅಫ್ಘಾನಿಸ್ತಾನ VS ದಕ್ಷಿಣ ಆಫ್ರಿಕಾ, HP ಓವಲ್, ವಿಂಡ್‌ಹೋಕ್
17 ಜನವರಿ, ಭಾರತ VS ಬಾಂಗ್ಲಾದೇಶ, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
17 ಜನವರಿ, ಜಪಾನ್ VS ಶ್ರೀಲಂಕಾ, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
18 ಜನವರಿ, ನ್ಯೂಜಿಲೆಂಡ್ VS ಯುಎಸ್‌ಎ, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
18 ಜನವರಿ, ಇಂಗ್ಲೆಂಡ್ VS ಜಿಂಬಾಬ್ವೆ, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
18 ಜನವರಿ, ವೆಸ್ಟ್ ಇಂಡೀಸ್ VS ಅಫ್ಘಾನಿಸ್ತಾನ, HP ಓವಲ್, ವಿಂಡ್‌ಹೋಕ್
19 ಜನವರಿ, ಪಾಕಿಸ್ತಾನ VS ಸ್ಕಾಟ್ಲೆಂಡ್, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
19 ಜನವರಿ, ಶ್ರೀಲಂಕಾ VS ಐರ್ಲೆಂಡ್, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
19 ಜನವರಿ, ದಕ್ಷಿಣ ಆಫ್ರಿಕಾ ವಿರುದ್ಧ ಟಾಂಜಾನಿಯಾ, HP ಓವಲ್, ವಿಂಡ್‌ಹೋಕ್
ಜನವರಿ 20, ಬಾಂಗ್ಲಾದೇಶ VS ನ್ಯೂಜಿಲೆಂಡ್, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
ಜನವರಿ 20, ಆಸ್ಟ್ರೇಲಿಯಾ VS ಜಪಾನ್, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
ಜನವರಿ 21, ಇಂಗ್ಲೆಂಡ್ VS ಸ್ಕಾಟ್ಲೆಂಡ್, ಟಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
ಜನವರಿ 21, ಅಫ್ಘಾನಿಸ್ತಾನ vs ಟಾಂಜಾನಿಯಾ, HP ಓವಲ್, ವಿಂಡ್‌ಹೋಕ್
ಜನವರಿ 22, ಜಿಂಬಾಬ್ವೆ VS ಪಾಕಿಸ್ತಾನ, ಟಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
ಜನವರಿ 22, ಐರ್ಲೆಂಡ್ VS ಜಪಾನ್, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
ಜನವರಿ 22, ವೆಸ್ಟ್ ಇಂಡೀಸ್ VS ದಕ್ಷಿಣ ಆಫ್ರಿಕಾ, HP ಓವಲ್, ವಿಂಡ್‌ಹೋಕ್
ಜನವರಿ 23, ಬಾಂಗ್ಲಾದೇಶ VS ಯುಎಸ್‌ಎ, ಟಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
ಜನವರಿ 23, ಶ್ರೀಲಂಕಾ v ಆಸ್ಟ್ರೇಲಿಯಾ, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
ಜನವರಿ 24, ಭಾರತ v ನ್ಯೂಜಿಲೆಂಡ್, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
ಜನವರಿ 24, A4 v D4, HP ಓವಲ್, ವಿಂಡ್‌ಹೋಕ್
ಜನವರಿ 25, ಸೂಪರ್ ಸಿಕ್ಸ್ A1 v D3, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
ಜನವರಿ 25, ಸೂಪರ್ ಸಿಕ್ಸ್ D2 v A3, HP ಓವಲ್, ವಿಂಡ್‌ಹೋಕ್
ಜನವರಿ 26, ಸೂಪರ್ ಸಿಕ್ಸ್ B4 v C4, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
ಜನವರಿ 26, ಸೂಪರ್ ಸಿಕ್ಸ್ C1 v B2, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
ಜನವರಿ 26, ಸೂಪರ್ ಸಿಕ್ಸ್ D1 v A2, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
ಜನವರಿ 27, ಸೂಪರ್ ಸಿಕ್ಸ್ C2 v B3, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
ಜನವರಿ 27, ಸೂಪರ್ ಸಿಕ್ಸ್ C3 v B1, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
ಜನವರಿ 28, ಸೂಪರ್ ಸಿಕ್ಸ್, A1 v D2, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
ಜನವರಿ 29, ಸೂಪರ್ ಸಿಕ್ಸ್ D3 v A2, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
ಜನವರಿ 30, ಸೂಪರ್ ಸಿಕ್ಸ್ D1 v A3, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
ಜನವರಿ 30, ಸೂಪರ್ ಸಿಕ್ಸ್ B3 v C1, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
ಜನವರಿ 31, ಸೂಪರ್ ಸಿಕ್ಸ್ B2 v C3, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
ಫೆಬ್ರವರಿ 01, ಸೂಪರ್ ಸಿಕ್ಸ್ B1 v C2, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
ಫೆಬ್ರವರಿ 03, ಮೊದಲ ಸೆಮಿಫೈನಲ್, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
ಫೆಬ್ರವರಿ 04, ಎರಡನೇ ಸೆಮಿಫೈನಲ್, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
06 ಫೆಬ್ರವರಿ, ಫೈನಲ್, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ