ನವದೆಹಲಿ: ಭಾರತದ ಪ್ರವಾಸಕ್ಕೆ ಏಕೈಕ ಟೆಸ್ಟ್ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಗೆ (IND vs AFG) ಅಫ್ಘಾನಿಸ್ತಾನ ತಂಡಗಳನ್ನು (Afghanistan Squads) ಮೇ 26 ರಂದು ಮಂಗಳವಾರ ಪ್ರಕಟಿಸಲಾಗಿದೆ. ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್ (Rashid Khan) ಅವರನ್ನು ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಆಯ್ಕೆ ಮಾಡಲಾಗಿಲ್ಲ. ಆದರೆ ಜೂನ್ ಅಂತ್ಯದ ವೇಳೆಗೆ ಆರಂಭವಾಗಲಿರುವ ಏಕದಿನ ಸರಣಿಗೆ ಅವರು ತಂಡಕ್ಕೆ ಮರಳಲಿದ್ದಾರೆ. ಜೂನ್ 6ರಂದು ಆರಂಭವಾಗುವ ಏಕೈಕ ಟೆಸ್ಟ್ ಪಂದ್ಯದ ಮೂಲಕ ಅಫ್ಘಾನಿಸ್ತಾನ ತಂಡದ ಭಾರತ ಪ್ರವಾಸ ಅಧಿಕೃತವಾಗಿ ಆರಂಭವಾಗಲಿದೆ.
ಗುಜರಾತ್ ಟೈಟನ್ಸ್ ಪರ ಆಡುತ್ತಿರುವ ರಶೀದ್ ಖಾನ್ ಈ ಸೀಸನ್‌ನ ಆರಂಭದಲ್ಲೇ ತಾವು ಟೆಸ್ಟ್ ಪಂದ್ಯಕ್ಕೆ ಗೈರಾಗುವ ಸಾಧ್ಯತೆಯನ್ನು ಸೂಚಿಸಿದ್ದರು. 2026ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಬಳಿಕ ಮಾತನಾಡಿದ್ದ ಅವರು, ದೀರ್ಘಕಾಲದ ಬೆನ್ನು ನೋವಿನ ಸಮಸ್ಯೆಯಿಂದ ಟೆಸ್ಟ್ ಕ್ರಿಕೆಟ್‌ನಿಂದ ದೂರವಿರಲು ವೈದ್ಯರು ಸಲಹೆ ನೀಡಿದ್ದಾರೆ ಎಂದು ಬಹಿರಂಗಪಡಿಸಿದ್ದರು.
ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಮಂಗಳವಾರ ಭಾರತ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕಾಗಿ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಜೊತೆಗೆ ಜೂನ್ 6ರಿಂದ 20ರವರೆಗೆ ನಡೆಯಲಿರುವ ಈ ಪ್ರವಾಸದಲ್ಲಿ ಟೆಸ್ಟ್ ಹಾಗೂ ಏಕದಿನ ಎರಡೂ ಮಾದರಿಗಳ ತಂಡಗಳಿಗೆ ಹಷ್ಮತ್‌ವುಲ್ಲಾ ಶಾಹಿದಿ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ದೃಢಪಡಿಸಿದೆ.
IND vs AFG: ರಿಷಭ್ ಪಂತ್‌ರನ್ನು ಟೆಸ್ಟ್ ಉಪ ನಾಯಕತ್ವದಿಂದ ಕೆಳಗಿಳಿಸಲು ಕಾರಣವೇನು?
ಅಫ್ಘಾನಿಸ್ತಾನ ತಂಡ ಜೂನ್ 6 ರಿಂದ 10ರವರೆಗೆ ನ್ಯೂ ಚಂಡೀಗಢದಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದಿಂದ ಪ್ರವಾಸ ಆರಂಭಿಸಲಿದೆ. ಬಳಿಕ ಉಭಯ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಈ ಏಕದಿನ ಪಂದ್ಯಗಳು ಕ್ರಮವಾಗಿ ಜೂನ್ 14, 17 ಮತ್ತು 20ರಂದು ಧರ್ಮಶಾಲಾ, ಲಖನೌ, ಮತ್ತು ಚೆನ್ನೈ ನಗರಗಳಲ್ಲಿ ನಡೆಯಲಿವೆ.
2024ರ ಮಾರ್ಚ್ ಬಳಿಕ ಟೆಸ್ಟ್ ಕ್ರಿಕೆಟ್‌ನಿಂದ ದೂರ ಉಳಿದಿರುವ ಅವರನ್ನು ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಆಯ್ಕೆ ಮಾಡಲಾಗಿಲ್ಲ. ಆದರೆ 27 ವರ್ಷದ ಈ ಸ್ಟಾರ್ ಲೆಗ್ ಸ್ಪಿನ್ನರ್ ಅನ್ನು ಏಕದಿನ ಸರಣಿಗಾಗಿ ರಾಷ್ಟ್ರೀಯ ತಂಡದಲ್ಲಿ ಸೇರಿಸಲಾಗಿದೆ. ಅನುಭವಿ ಆಲ್‌ರೌಂಡರ್ ಮೊಹಮ್ಮದ್ ನಬಿ ಕೂಡ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದು, 50 ಓವರ್‌ಗಳ ಸರಣಿಯಲ್ಲಿ ಸಂಪೂರ್ಣ ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ಅಫ್ಘಾನಿಸ್ತಾನ ಸಜ್ಜಾಗಿದೆ.
ಟೆಸ್ಟ್ ಪಂದ್ಯಕ್ಕಾಗಿ ಆಯ್ಕೆ ಸಮಿತಿಯು ಬ್ಯಾಟಿಂಗ್ ವಿಭಾಗದ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದೆ. ರಹಮತ್ ಶಾ, ರಹಮಾನುಲ್ಲಾ ಗುರ್ಬಾಝ್ ಮತ್ತು ಅಝಮತ್‌ವುಲ್ಲಾ ಒರ್ಮಜಾಯ್ ಮಧ್ಯಮ ಕ್ರಮದಲ್ಲಿ ಪ್ರಮುಖ ಹೊಣೆಗಾರಿಕೆಯನ್ನು ನಿರ್ವಹಿಸುವ ನಿರೀಕ್ಷೆಯಿದೆ. ಇದಲ್ಲದೆ ವಿಕೆಟ್-ಕೀಪರ್‌ಗಳಾದ ಅಫ್ಸರ್ ಝಾಝೈ ಹಾಗೂ ಇಕ್ರಾಮ್ ಅಲಿಖಿಲ್ ಅವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಅಫ್ಘಾನಿಸ್ತಾನ ಟೆಸ್ಟ್ ತಂಡ: ಹಷ್ಮತ್‌ವುಲ್ಲಾ ಶಾಹಿದಿ (ನಾಯಕ), ಅಬ್ದುಲ್ ಮಲಿಕ್, ಸಿಡಿಕುಲ್ಹಾ ಅಟಲ್, ರಹಮತ್ ಶಾ, ರಹಮಾನುಲ್ಲಾ ಗುರ್ಬಾಝ್, ರಹಮಾನುಲ್ಲಾ ಝರ್ಡಾನ್, ಅಫ್ಸರ್ ಝಝೈ (ವಿಕೆಟ್ ಕೀಪರ್), ಇಕ್ರಾಮ್ ಅಲಿಖಿಲ್ (ವಿಕೆಟ್ ಕೀಪರ್), ಅಝಮತ್‌ವುಲ್ಲಾ ಒಮರ್ಜಾಯ್, ಶರಫುದ್ದಿನ್ ಅಶ್ರಫ್, ನಂಗ್ಯಾಲ್ ಖರೋತಾಯ್, ಕೈಸ್ ಅಹ್ಮದ್, ಬಿಲಾಲ್ ಸಮಿ, ಝಿಯಾ ಶರಫಿ, ಸಲೀಮ್ ಸಫಿ
ಮೀಸಲು ಆಟಗಾರರು: ಬಸೀರ್ ಅಹ್ಮದ್, ಬಹಿರ್ ಶಾ, ಇಸ್ಮತ್ ಅಲಾಮ್
IND vs AFG: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ಗೆ ಭಾರತ ತಂಡವನ್ನು ಪ್ರಕಟಿಸಿದ ಬಿಸಿಸಿಐ!
ಅಫ್ಘಾನಿಸ್ತಾನ ಒಡಿಐ ತಂಡ: ಹಷ್ಮತ್‌ವುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಇಮ್ರಾಹಿಂ ಝರ್ಡಾನ್, ಸೆಡಿಕುಲ್ಲಾ ಅಟಲ್, ದಾರ್ವಿಸ್ ರಸೋಲಿ, ರಹಮತ್ ಶಾ, ಇಕ್ರಾಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ಅಝಮತ್ ಒಮರ್ಜಾಯ್, ರಶೀದ್ ಖಾನ್, ನಂಗ್ಯಾಲ್ ಖರೋತಾಯ್, ಘಝನ್‌ಫರ್, ಝಿಯಾ ಉರ್ ರೆಹಮಾನ್ ಶರಿಫಿ, ಫರೀದ್ ಮಲಿಕ್, ಬಿಲಾಲ್ ಸಮಿ
ಮೀಸಲು ಆಟಗಾರ: ಕೈಸ್ ಅಹ್ಮದ್, ಸಲೀಮ್ ಸಫಿ, ಬಶೀರ್ ಅಹ್ಮದ್