ಧರ್ಮಶಾಲಾ: ಭಾರತದ ವಿರುದ್ಧದ ಏಕದಿನ ಸರಣಿಯ (IND vs AFG) ಮೊದಲನೇ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಅಫ್ಘಾನಿಸ್ತಾನ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರಹಮಾನ್‌ವುಲ್ಲಾ ಗುರ್ಬಾಝ್ (Rahamanullah Gurbaz) ಅವರು ಭರ್ಜರಿ ಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ಭಾರತದ ಎದುರು ಏಕದಿನ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಮೊದಲ ಆಫ್ಘನ್ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದಿದ್ದಾರೆ. ಇದರ ಜೊತೆಗೆ ಅವರು ಮತ್ತೊಂದು ದೊಡ್ಡ ದಾಖಲೆಯನ್ನು ಕೂಡ ಬರೆದಿದ್ದಾರೆ. ಅದನ್ನು ಇಲ್ಲಿ ವಿವರಿಸಲಾಗಿದೆ.
ಶನಿವಾರ ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯಕ್ಕೆ ಮಳೆ ಕಾಟ ನೀಡಿತ್ತು. ಹಾಗಾಗಿ ಪಂದ್ಯವನ್ನು ನಿಗದಿತ ಸಮಯಕ್ಕೆ ಆರಂಭಿಸಲು ಸಾಧ್ಯವಾಗಲಿಲ್ಲ. ಇದರ ಪರಿಣಾಮ ಪಂದ್ಯವನ್ನು 25 ಓವರ್‌ಗಳಿಗೆ ಇಳಿಸಲಾಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಆಫ್ಘನ್ ತಂಡಕ್ಕೆ ಹೊಸ ಚೆಂಡಿನಲ್ಲಿ ಅರ್ಷದೀಪ್ ಸಿಂಗ್ ಆರಂಭಿಕ ಆಘಾತ ನೀಡಿದರು. ಇವರು ಸೆಡಿಕುಲ್ಲಾ ಅಟಲ್ ಹಾಗೂ ರಹಮತ್ ಶಾ ಅವರನ್ನು ಔಟ್ ಮಾಡಿದ್ದರೆ, ಗುರ್ನೂರ್ ಬ್ರಾರ್, ಇಬ್ರಾಹಿಂ ಝರ್ಡಾನ್ ಅವರನ್ನು ಔಟ್ ಮಾಡಿದರು.
IND vs AFG: ಧರ್ಮಶಾಲಾದಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಹರ್ಷ್ ದುಬೇ ಯಾರು?
ಭಾರತದ ಎದುರು ಎರಡನೇ ವೇಗದ ಶತಕ ಸಿಡಿಸಿದ ಗುರ್ಬಾಝ್
ಅಫ್ಘಾನಿಸ್ತಾನ ತಂಡ 4.3 ಓವರ್‌ಗಳಿಗೆ 26 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನೆಲೆಯೂರಿದ ರಹಮಾನ್‌ವುಲ್ಲಾ ಗುರ್ಬಾಝ್, ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಆಡಿದ 51 ಎಸೆತಗಳಲ್ಲಿ ಬರೋಬ್ಬರಿ 8 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 102 ರನ್‌ಗಳನ್ನು ಗಳಿಸಿದರು. ಅಂದ ಹಾಗೆ ಇವರು ಕೇವಲ 48 ಎಸೆತಗಳಲ್ಲಿಯೇ ಶತಕವನ್ನು ಬಾರಿಸಿದ್ದರು. ಆ ಮೂಲಕ ಭಾರತದ ಎದುರು ಎರಡನೇ ಅತ್ಯಂತ ವೇಗದ ಒಡಿಐ ಶತಕವನ್ನು ಪೂರ್ಣಗೊಳಿಸಿದರು. ಮೊದಲನೇ ಸ್ಥಾನದಲ್ಲಿ ಪಾಕಿಸ್ತಾನ ಮಾಜಿ ನಾಯಕ ಶಾಹೀದ್ ಅಫ್ರಿದಿ ಇದ್ದಾರೆ. ಇವರು ಭಾರತದ ಎದುರು ಕೇವಲ 45 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು.
ಭಾರತದ ಎದುರು ವೇಗದ ಒಡಿಐ ಶತಕ ಸಿಡಿಸಿದ ಬ್ಯಾಟರ್ಸ್
45 - ಶಾಹಿದ್ ಅಫ್ರಿದಿ (PAK), ಕಾನ್ಪುರ್, 2005
48 - ರಹಮಾನುಲ್ಲಾ ಗುರ್ಬಾಝ್ (AFG), ಧರ್ಮಶಾಲಾ, 2026
57 - ಜೇಮ್ಸ್ ಫಾಕ್ನರ್ (AUS), ಬೆಂಗಳೂರು, 2013
57 - ಎಬಿ ಡಿವಿಲಿಯರ್ಸ್ (SA), ಮುಂಬೈ WS, 2015
57 - ಮೈಕಲ್ ಬ್ರೇಸ್‌ವೆಲ್ (NZ), ಹೈದರಾಬಾದ್, 2023
IND vs AFG: ವಿರಾಟ್ ಕೊಹ್ಲಿ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ಆಕಾಶ್ ಚೋಪ್ರಾ!
ಅಫ್ಘಾನಿಸ್ತಾನದ ಪರ ಅತಿ ವೇಗದ ಓಡಿಐ ಶತಕಗಳು (ಎದುರಿಸಿದ ಎಸೆತಗಳ ಮೂಲಕ)
48 - ರಹಮಾನಲ್ಲಾ ಗುರ್ಬಾಝ್ vs IND, ಧರ್ಮಶಾಲಾ, 2026
72 - ಮೊಹಮ್ಮದ್ ಶಹಜಾದ್ vs SCOT, ಅಲೋವೇ, 2010
72 - ಕರೀಮ್ ಸಾದಿಕ್ vs NED, ಶಾರ್ಜಾ, 2012
85 - ನವ್ರೋಜ್ ಮಂಗಲ್ vs SCOT, ಶಾರ್ಜಾ, 2013
85 - ಮೊಹಮ್ಮದ್ ಶಹಜಾದ್ vs IRE, ಬೆಲ್‌ಫಾಸ್ಟ್, 2019