ನವದೆಹಲಿ: ಜಿಂಬಾಬ್ವೆ ಟಿ20ಐ ಸರಣಿಯ ಭಾರತ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ (Sanju Samson), ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಗೆ(IND vs AFG) ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಇದೀಗ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ನಿರೂಪಕ ದೀಪ್ ದಾಸ್‌ಗುಪ್ತಾ (Deep Dasgupta) ಅವರು, ಭಾರತ ತಂಡಕ್ಕೆ ನೂತನ ಆರಂಭಿಕ ಜೋಡಿಯನ್ನು ಆರಿಸಿದ್ದಾರೆ. ಭಾರತ ತಂಡದ ಪರ ಸಂಜು ಸ್ಯಾಮ್ಸನ್ ಹಾಗೂ ವೈಭವ್ ಸೂರ್ಯವಂಶಿ ಇನಿಂಗ್ಸ್ ಆರಂಭಿಸಬೇಕೆಂದು ಆಗ್ರಹಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ದೀಪ್ ದಾಸ್‌ಗುಪ್ತಾ, "ಕೊನೆಯ ಟಿ20ಐ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಇನಿಂಗ್ಸ್ ಆರಂಭಿಸಿದ್ದರು. ಜಿಂಬಾಬ್ವೆ ಸರಣಿಯನ್ನು ಬಿಡಿ. ಮೂವರು ಬ್ಯಾಟ್ಸ್‌ಮನ್‌ಗಳು ಲಭ್ಯರಾಗಿದ್ದರೆ, ಸಂಜು ಮತ್ತು ಅಭಿಷೇಕ್ ಇದ್ದೇ ಇರುತ್ತಾರೆ. ಆದರೆ, ನಾವು ಇನ್ನೂ ವೈಭವ್ ಸೂರ್ಯವಂಶಿ ಮತ್ತು ಸಂಜು ಸ್ಯಾಮ್ಸನ್ ಜೋಡಿಯನ್ನು ನೋಡಿಲ್ಲ. ಅಭಿಷೇಕ್-ವೈಭವ್ ಹಾಗೂ ಸಂಜು-ಅಭಿಷೇಕ್ ಜೋಡಿಯನ್ನು ಈಗಾಗಲೇ ನೋಡಿದ್ದೇವೆ ಅಲ್ಲವೇ? ವೈಭವ್ ಹಾಗೂ ಸಂಜು ಜೋಡಿ ಪಂದ್ಯದಲ್ಲಿ ಹೇಗೆ ಆಡಬಹುದು ಎಂದು ನೋಡುವುದು ಕೆಟ್ಟ ಉಪಾಯ ಅಲ್ಲವೇ ಅಲ್ಲ," ಎಂದು ಹೇಳಿದ್ದಾರೆ.
ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಹೇಳಿ ಎಂದ ಬಿಸಿಸಿಐ ಸೆಲೆಕ್ಟರ್‌ಗಳ ವಿರುದ್ಧ ರೋಹಿತ್ ಶರ್ಮಾ ಗರಂ!
ಇಂಗ್ಲೆಂಡ್ ಟಿ20ಐ ಸರಣಿಯಲ್ಲಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದ ವೈಭವ್ ಸೂರ್ಯವಂಶಿ, ಜಿಂಬಾಬ್ವೆ ಸರಣಿಯಲ್ಲಿ 151 ರನ್‌ಗಳ ಮೂಲಕ ಬಲವಾಗಿ ಕಮ್‌ಬ್ಯಾಕ್ ಮಾಡಿದ್ದರು. ಈ ಸರಣಿಯಲ್ಲಿ ಅವರು 196ರ ಸ್ಟ್ರೈಕ್ ರೇಟ್ ಹಾಗೂ 50.33ರ ಸರಾಸರಿಯಲ್ಲಿ ರನ್ ಸಿಡಿಸಿದ್ದರು. ಅಂದ ಹಾಗೆ ಈ ಸರಣಿಯಲ್ಲಿ 81 ರನ್ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು. ಇದೀಗ ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಯಲ್ಲಿಯೂ ಅವರು ಮುಂದುವರಿಯಲಿದ್ದಾರೆ.
ಅತ್ಯಂತ ಉತ್ತಮ ಸಂಯೋಜನೆ
ಇದೇ ವೇಳೆ ದೀಪ್ ದಾಸ್‌ಗುಪ್ತಾ ಅವರು ಈ ಮೂವರು ಆಟಗಾರರ ಪೈಕಿ ಒಬ್ಬರನ್ನು ಕೂರಿಸಬಾರದೆಂದು ಸಲಹೆ ನೀಡಿದ್ದಾರೆ. ಟಿ20 ವಿಶ್ವಕಪ್ ಟೂರ್ನಿ ಸಮೀಪಿಸುತ್ತಿದೆ ಹಾಗೂ ನೀವು ತಂಡದಲ್ಲಿ ವಿಭಿನ್ನ ಸಂಯೋಜನೆಗಳ ಮೂಲಕ ಪ್ರಯೋಗಗಳನ್ನು ನಡೆಸಬೇಕೆಂದು ದೀಪ್ ದಾಸ್‌ಗುಪ್ತಾ ಸಲಹೆ ನೀಡಿದ್ದಾರೆ.
2027ರ ಏಕದಿನ ವಿಶ್ವಕಪ್ ಟೂರ್ನಿಗೆ ರೋಹಿತ್ ಶರ್ಮಾರ ಮಹತ್ವವನ್ನು ತಿಳಿಸಿದ ಜಾಂಟಿ ರೋಡ್ಸ್!
"ಮತ್ತೊಮ್ಮೆ ನಾನು ಹೇಳುತ್ತಿಲ್ಲ, ನನ್ನನ್ನು ತಪ್ಪಾಗಿ ತೆಗೆದುಕೊಳ್ಳಬೇಡಿ, ಯಾರೊಬ್ಬರು ಆಟಗಾರನನ್ನು ಕೈ ಬಿಡಬಾರದೆಂದು ನಾನು ಹೇಳುತ್ತಿಲ್ಲ. ನಾನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿರುವುದೇನೆಂದರೆ, ವಿಶ್ವಕಪ್‌ಗೂ ಮುನ್ನ ಪ್ರತಿಯೊಂದು ಸಂಯೋಜನೆಗೂ ಮತ್ತು ಪ್ರತಿಯೊಬ್ಬ ಆಟಗಾರನಿಗೂ ಸೂಕ್ತ ಅವಕಾಶ ಹಾಗೂ ಸಾಕಷ್ಟು ಪಂದ್ಯದ ಸಮಯ ನೀಡಬೇಕು. ಇದರಿಂದ ಯಾವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ," ಎಂದು ಅವರು ಹೇಳಿದ್ದಾರೆ.