ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS: ಎರಡನೇ ಟಿ20ಐ ಪಂದ್ಯಕ್ಕೆ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌, ಮುಖಾಮುಖಿ ದಾಖಲೆ!

IND vs AUS 2nd Match Preview: ಕ್ಯಾನ್‌ಬೆರಾದಲ್ಲಿ ನಡೆಯಬೇಕಿದ್ದ ಮೊದಲನೇ ಟಿ20ಐ ಪಂದ್ಯ ಮಳೆಗೆ ಬಲಿಯಾದ ಬಳಿಕ ಇದೀಗ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಎರಡನೇ ಟಿ20ಐ ಪಂದ್ಯಕ್ಕೆ ಸಜ್ಜಾಗುತ್ತಿವೆ. ಈ ಪಂದ್ಯ ಶುಕ್ರವಾರ ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯಲಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಟಿ20ಐ ಪಂದ್ಯ.

ಮೆಲ್ಬೋರ್ನ್‌: ಮೊದಲನೇ ಟಿ20ಐ ಪಂದ್ಯ ಮಳೆಗೆ ಬಲಿಯಾದ ಬಳಿಕ ಇದೀಗ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು (IND vs AUS) ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿವೆ. ಉಭಯ ತಂಡಗಳ ನಡುವಣ ಎರಡನೇ ಹಣಾಹಣಿ ಶುಕ್ರವಾರ ಇಲ್ಲಿನ ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ (MCG) ನೆಡಯಲಿದೆ. ಈ ಪಂದ್ಯವನ್ನು ಗೆದ್ದು 5 ಪಂದ್ಯಗಳ ಟಿ20ಐ ಸರಣಿಯಲ್ಲಿ ಮುನ್ನಡೆ ಗಳಿಸಲು ಎರಡೂ ತಂಡಗಳು ಎದುರು ನೋಡುತ್ತಿವೆ. ಎರಡೂ ತಂಡಗಳಲ್ಲಿ ಉತ್ತಮ ಗುಣಮಟ್ಟದ ಆಟಗಾರರು ಇರುವ ಕಾರಣ ಈ ಪಂದ್ಯದಲ್ಲಿ ಪೈಪೋಟಿಯನ್ನು ನೋಡಲು ಕ್ರಿಕೆಟ್‌ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಏಕದಿನ ಸರಣಿಯನ್ನು ಸೋತಿರುವ ಭಾರತ ತಂಡ (India), ಇದೀಗ ಟಿ20ಐ ಸರಣಿಯನ್ನು ಗೆದ್ದು ಆತಿಥೇಯರಿಗೆ ತಿರುಗೇಟು ನೀಡಲು ಬಯಸುತ್ತಿದೆ.

ಕ್ಯಾನ್‌ಬೆರಾದ ಮನುಕಾ ಓವಲ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿತ್ತು. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡ, ಬಹುಬೇಗ ಶುಭಮನ್‌ ಗಿಲ್‌ ಅವರ ವಿಕೆಟ್‌ ಅನ್ನು ಕಳೆದುಕೊಂಡಿದ್ದರೂ ಶುಭಮನ್‌ ಗಿಲ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಅವರ ಭರ್ಜರಿ ಬ್ಯಾಟಿಂಗ್‌ ಬಲದಿಂದ 9.4 ಓವರ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ 97 ರನ್‌ ಗಳಿಸಿತ್ತು. ಈ ವೇಳೆ ಜೋರಾಗಿ ಮಳೆ ಬಂದ ಕಾರಣ ಪಂದ್ಯವನ್ನು ಮುಂದುರಿಸಲು ಸಾಧ್ಯವಾಗಲಿಲ್ಲ ಹಾಗೂ ಅಂತಿಮವಾಗಿ ಪಂದ್ಯ ರದ್ದಾಗಿತ್ತು. 19 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದ ಅಭಿಷೇಕ್‌ ಶರ್ಮಾ, ನೇಥನ್‌ ಎಲ್ಲಿಸ್‌ ಎಸೆತದಲ್ಲಿ ಔಟ್‌ ಆಗಿದ್ದರು. ನಂತರ ಸೂರ್ಯಕುಮಾರ್‌ ಯಾದವ್‌ (39 ರನ್‌) ಹಾಗೂ ಶುಭಮನ್‌ ಗಿಲ್‌ (37*) ಅಜೇಯರಾಗಿ ಉಳಿದಿದ್ದರು.

AUS vs IND 1st T20I: ಮಳೆಯದ್ದೇ ಆಟ; ಭಾರತ-ಆಸೀಸ್‌ ಮೊದಲ ಟಿ20 ಪಂದ್ಯ ರದ್ದು

ಎರಡನೇ ಪಂದ್ಯದಲ್ಲಿಯೂ ಕೂಡ ಭಾರತ ತಂಡ ಅದೇ ಪ್ಲೇಯಿಂಗ್‌ XI ಅನ್ನು ಮುಂದುವರಿಸಬಹುದು. ಆಸ್ಟ್ರೇಲಿಯಾ ತಂಡ ಕೂಡಅ ಅದೇ ಆಡುವ ಬಳಗವನ್ನು ಆಡಿಸಬಹುದು. ಇನ್ನೂ ನಾಲ್ಕು ಪಂದ್ಯಗಳು ಬಾಕಿ ಇವೆ. ಹಾಗಾಗಿ ಎರಡೂ ತಂಡಗಳ ನಡುವಣ ಕಠಿಣ ಪೈಪೋಟಿ ಏರ್ಪಡಲಿದೆ.

ಪಂದ್ಯದ ವಿವರ

ಭಾರತ vs ಆಸ್ಟ್ರೇಲಿಯಾ

ಎರಡನೇ ಟಿ20ಐ ಪಂದ್ಯ

ದಿನಾಂಕ: ಅಕ್ಟೋಬರ್‌ 31, 2025

ಸಮಯ: ಮಧ್ಯಾಹ್ನ 1: 45ಕ್ಕೆ (ಭಾರತೀಯ ಕಾಲಮಾನ)

ಲೈವ್‌ ಸ್ಟ್ರೀಮಿಂಗ್‌: ಡಿಸ್ನಿ ಹಾಟ್‌ಸ್ಟಾರ್‌

ಸ್ಥಳ: ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌ , ಮೆಲ್ಬೋರ್ನ್‌

IND vs AUS: ಟಿ20ಐ ಸರಣಿಯ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಆಘಾತ, ನಿತೀಶ್‌ ರೆಡ್ಡಿಗೆ ಗಾಯ!

ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌ ಪಿಚ್‌ ರಿಪೋರ್ಟ್‌

ಎರಡನೇ ಟಿ20ಐ ಪಂದ್ಯ ನಡೆಯುವ ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌ ಪಿಟ್‌ ಸಮತೋಲನದಿಂದ ಕೂಡಿದೆ. ವೇಗ ಮತ್ತು ಬೌನ್ಸ್‌ನಿಂದಾಗಿ ಬ್ಯಾಟ್ಸ್‌ಮನ್‌ಗಳಿಗೆ ನೆರವಾಗುತ್ತಿತ್ತು. ಇನ್ನು ಬೌಲರ್‌ಗಳು ಸರಿಯಾದ ಜಾಗದಲ್ಲಿ ಪಿಚ್‌ ಮಾಡಿದರೆ, ಅವರಿಗೆ ನೆರವು ನೀಡಬಹುದು.

ಮುಖಾಮುಖಿ ದಾಖಲೆ

ಒಟ್ಟು ಆಡಿರುವ ಪಂದ್ಯಗಳು: 33

ಆಸ್ಟೇಲಿಯಾ ಗೆಲುವು: 11

ಭಾರತದ ಗೆಲುವು: 20

ಟೈ/ಫಲಿತಾಂಶವಿಲ್ಲ: 02



ಎರಡನೇ ಟಿ20ಐ ಪಂದ್ಯಕ್ಕೆ ಭಾರತದ ಪ್ಲೇಯಿಂಗ್‌ XI

ಅಭಿಷೇಕ್‌ ಶರ್ಮಾ, ಶುಭಮನ್‌ ಗಿಲ್‌, ಸೂರ್ಯಕುಮಾರ್‌ ಯಾದವ್‌ (ನಾಯಕ), ತಿಲಕ್‌ ವರ್ಮಾ, ಸಂಜು ಸ್ಯಾಮ್ಸನ್‌ (ವಿಕೆಟ್‌ ಕೀಪರ್‌), ಶಿವಂ ದುಬೆ, ಅಕ್ಷರ್‌ ಪಟೇಲ್‌, ಹರ್ಷಿತ್‌ ರಾಣಾ, ಕುಲ್ದೀಪ್‌ ಯಾದವ್‌, ವರುಣ್‌ ಚಕ್ರವರ್ತಿ, ಜಸ್‌ಪ್ರೀತ್‌ ಬುಮ್ರಾ

ಎರಡನೇ ಟಿ20ಐ ಪಂದ್ಯಕ್ಕೆ ಆಸ್ಟ್ರೇಲಿಯಾ ಪ್ಲೇಯಿಂಗ್‌ XI

ಮಿಚೆಲ್‌ ಮಾರ್ಷ್‌ (ನಾಯಕ), ಟ್ರಾವಿಸ್‌ ಹೆಡ್‌, ಜಾಶ್‌ ಇಂಗ್ಲಿಸ್‌ (ವಿಕೆಟ್‌ ಕೀಪರ್‌), ಟಿಮ್‌ ಡೇವಿಡ್‌, ಮಿಚೆಲ್‌ ಓವೆನ್‌, ಮಾರ್ಕಸ್‌ ಸ್ಟೋಯ್ನಿಸ್‌, ಜಾಶ್‌ ಫಿಲಿಪ್‌, ಕ್ಸಿವಿಯರ್‌ ಬಾರ್ಟ್ಲೆಟ್, ನೇಥನ್‌ ಎಲ್ಲಿಸ್‌, ಮ್ಯಾಥ್ಯೂ ಕುಹ್ನೇಮನ್‌, ಜಾಶ್‌ ಹೇಝಲ್‌ವುಡ್‌