ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS: ಟಿ20ಐ ಸರಣಿಯ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಆಘಾತ, ನಿತೀಶ್‌ ರೆಡ್ಡಿಗೆ ಗಾಯ!

Nitish kumar Reddy out for 3 Matches: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಟಿ20ಐ ಸರಣಿ ಆರಂಭವಾಗಿದೆ. ಈ ಸರಣಿಯ ಆರಂಭಿಕ ಪಂದ್ಯಕ್ಕೂ ಮುನ್ನ ಟೀಮ್‌ ಇಂಡಿಯಾಗೆ ಹಿನ್ನಡೆಯಾಗಿದೆ. ಗಾಯದಿಂದಾಗಿ ನಿತೀಶ್‌ ಕುಮಾರ್‌ ರೆಡ್ಡಿ ಅವರು ಟಿ20ಐ ಸರಣಿಯ ಆರಂಭಿಕ ಮೂರು ಪಂದ್ಯಗಳಿಂದ ಹೊರ ನಡೆದಿದ್ದಾರೆ.

IND vs AUS: ಆರಂಭಿಕ ಮೂರು ಪಂದ್ಯಗಳಿಂದ ನಿತೀಶ್‌ ರೆಡ್ಡಿ ಔಟ್‌!

ಟಿ20ಐ ಸರಣಿಯ ಆರಂಭಿಕ ಮೂರು ಪಂದ್ಯಗಳಿಂದ ನಿತೀಶ್‌ ರೆಡ್ಡಿ ಔಟ್‌. -

Profile Ramesh Kote Oct 29, 2025 3:57 PM

ಕ್ಯಾನ್‌ಬೆರಾ: ಭಾರತ ತಂಡದ ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿ (Nitish Kumar Reddy) ಅವರು ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಯ (IND vs AUS) ಆರಂಭಿಕ ಮೂರು ಪಂದ್ಯಗಳಿಂದ ಹೊರ ನಡೆದಿದ್ದಾರೆ. ಆ ಮೂಲಕ ಟಿ20ಐ ಸರಣಿಯ ಆರಂಭಕ್ಕೂ ಮುನ್ನ ಟೀಮ್‌ ಇಂಡಿಯಾಗೆ (India) ಆರಂಭಿಕ ಆಘಾತ ಅನುಭವಿಸಿದೆ. ಇದೀಗ ಕ್ಯಾನ್‌ಬೆರಾದ ಮನುಕಾ ಓವಲ್‌ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ ಮೊದಲನೇ ಟಿ20ಐ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್‌ ಮಾರ್ಷ್‌ ಬೌಲಿಂಗ್‌ ಆಯ್ದುಕೊಂಡಿದ್ದಾರೆ ಹಾಗೂ ಎದುರಾಳಿ ಭಾರತಕ್ಕೆ ಮೊದಲ ಬ್ಯಾಟಿಂಗ್‌ಗೆ ಆಹ್ವಾನ ನೀಡಿದ್ದಾರೆ.

"ಟಿ20ಐ ಸರಣಿಯ ಆರಂಭಿಕ ಮೂರು ಪಂದ್ಯಗಳಿಂದ ನಿತೀಶ್‌ಕುಮಾರ್‌ ರೆಡ್ಡಿ ಹೊರ ನಡೆದಿದ್ದಾರೆ. ಅಡಿಲೇಡ್‌ನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದ ವೇಳೆ ಎಡ ಕ್ವಾಡ್ರೈಸ್ಪ್ಸ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಆಲ್‌ರೌಂಡರ್, ಕುತ್ತಿಗೆ ಸೆಳೆತದ ಬಗ್ಗೆ ದೂರು ನೀಡಿದ್ದು, ಇದು ಅವರ ಚೇತರಿಕೆ ಮತ್ತು ಚಲನಶೀಲತೆಯ ಮೇಲೆ ಪರಿಣಾಮ ಬೀರಿದೆ. ತಂಡದ ವೈದ್ಯಕೀಯ ಸಿಬ್ಬಂದಿ ನಿತೀಶ್‌ ರೆಡ್ಡಿ ಅವರನ್ನು ನಿರ್ವಹಿಸುತ್ತಿದೆ," ಎಂದು ಪಂದ್ಯದ ಟಾಸ್‌ ವೇಳೆ ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

IND vs AUS 1st T20I: ಆಸ್ಟ್ರೇಲಿಯಾ ಎದುರು ಟಾಸ್‌ ಸೋತ ಭಾರತ ಮೊದಲ ಬ್ಯಾಟಿಂಗ್‌!

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ವೇಳೆ ನಿತೀಶ್‌ಕುಮಾರ್‌ ರೆಡ್ಡಿ ಅಂತಾರಾಷ್ಟ್ರೀಯ ಒಡಿಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಹಾರ್ದಿಕ್‌ ಪಾಂಡ್ಯ ಗಾಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ನಿತೀಶ್‌ ರೆಡ್ಡಿಗೆ ಅವಕಾಶ ಸಿಕ್ಕಿತ್ತು. ಆದರೆ, ಅಡಿಲೇಡ್‌ನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದ ವೇಳೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಆಲ್‌ರೌಂಡರ್‌ ಗಾಯಕ್ಕೆ ತುತ್ತಾಗಿದ್ದರು. ನಿತೀಶ್‌ ರೆಡ್ಡಿ ಯಾವಾಗ ಸಂಪೂರ್ಣವಾಗಿ ಫಿಟ್‌ ಆಗಲಿದ್ದಾರೆಂದು ಇನ್ನೂ ಖಚಿತವಿಲ್ಲ. ಹಾಗಾಗಿ ಕೊನೆಯ ಎರಡು ಪಂದ್ಯಗಳಿಗೆ ಅವರು ಲಭ್ಯವಾಗುವುದೂ ಕೂಡ ಖಚಿತವಿಲ್ಲ. ಆದರೆ, ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಸರಣಿಯ ಹೊತ್ತಿಗೆ ಬಹುಶಃ ಅವರು ಸಂಪೂರ್ಣ ಫಿಟ್‌ ಆಗಬಹುದು.

ಮೊದಲನೇ ಟಿ20ಐ ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಇಬ್ಬರು ಫಾಸ್ಟ್‌ ಬೌಲರ್‌ಗಳು ಹಾಗೂ ಮೂವರು ಸ್ಪಿನ್ನರ್‌ಗಳನ್ನು ಆರಿಸಲಾಗಿದೆ. ಇದರ ಜೊತೆಗೆ ಸೀಮ್ ಬೌಲಿಂಗ್‌ ಆಲ್‌ರೌಂಡರ್‌ ಶಿವಂ ದುಬೆಗೆ ಅವಕಾಶವನ್ನು ನೀಡಲಾಗಿದೆ. ಟಿ20ಐ ಕ್ರಿಕೆಟ್‌ನಲ್ಲಿ 100ಕ್ಕೂ ಅಧಿಕ ವಿಕೆಟ್‌ ಕಿತ್ತಿರುವ ಅರ್ಷದೀಪ್‌ ಸಿಂಗ್‌ಗೆ ಮತ್ತೊಂದು ಬೆಂಚ್‌ ಕಾಯಿಸಲಾಗಿದೆ. ಪೂರ್ಣ ಪ್ರಮಾಣದ ವೇಗದ ಬೌಲರ್‌ಗಳಾಗಿ ಜಸ್‌ಪ್ರೀತ್‌ ಬುಮ್ರಾ ಹಾಗೂ ಹರ್ಷಿತ್‌ ರಾಣಾ ಆಡುತ್ತಿದ್ದಾರೆ.



ಕಳೆದ ಏಷ್ಯಾ ಕಪ್‌ ಟೂರ್ನಿಯಲ್ಲಿಯೂ ಅರ್ಷದೀಪ್‌ ಸಿಂಗ್‌ಗೆ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ. ಇದೀಗ ಆರಂಭಿಕ ಪಂದ್ಯದಲ್ಲಿಯೂ ಅವರನ್ನು ಕೈ ಬಿಟ್ಟಿರುವ ಬಗ್ಗೆ ಟೀಮ್‌ ಮ್ಯಾನೇಜ್‌ಮೆಂಟ್‌ ವಿರುದ್ಧ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಹರ್ಷಿತ್‌ ರಾಣಾ ಅವರನ್ನು ಎರಡನೇ ವೇಗದ ಬೌಲರ್‌ ಆಗಿ ಟೀಮ್‌ ಮ್ಯಾನೇಜ್‌ಮೆಂಟ್‌ ಪರಿಗಣಿಸಿದೆ. ಮೂರನೇ ಏಕದಿನ ಪಂದ್ಯದಲ್ಲಿ ಡೆಲ್ಲಿ ಮೂಲದ ವೇಗಿ ನಾಲ್ಕು ವಿಕೆಟ್‌ಗಳನ್ನು ಕಿತ್ತಿದ್ದರು.

IND vs AUS: ಸೂರ್ಯಕುಮಾರ್ ಯಾದವ್‌ಗೆ ವಾರ್ನಿಂಗ್‌ ಕೊಟ್ಟ ಪಾರ್ಥಿವ್ ಪಟೇಲ್!

ಮೊದಲನೇ ಟಿ20ಐ ಪಂದ್ಯಕ್ಕೆ ಉಭಯ ತಂಡಗಳ ಪ್ಲೇಯಿಂಗ್‌ XI

ಭಾರತ: ಅಭಿಷೇಕ್‌ ಶರ್ಮಾ, ಶುಭಮನ್‌ ಗಿಲ್‌, ಸೂರ್ಯಕುಮಾರ್‌ ಯಾದವ್‌ (ನಾಯಕ), ತಿಲಕ್‌ ವರ್ಮಾ, ಸಂಜು ಸ್ಯಾಮ್ಸನ್‌ (ವಿಕೆಟ್‌ ಕೀಪರ್‌), ಶಿವಂ ದುಬೆ, ಅಕ್ಷರ್‌ ಪಟೇಲ್‌, ಹರ್ಷಿತ್‌ ರಾಣಾ, ಕುಲ್ದೀಪ್‌ ಯಾದವ್‌, ವರುಣ್‌ ಚಕ್ರವರ್ತಿ, ಜಸ್‌ಪ್ರೀತ್‌ ಬುಮ್ರಾ

ಆಸ್ಟ್ರೇಲಿಯಾ: ಮಿಚೆಲ್‌ ಮಾರ್ಷ್‌ (ನಾಯಕ), ಟ್ರಾವಿಸ್‌ ಹೆಡ್‌, ಜಾಶ್‌ ಇಂಗ್ಲಿಸ್‌ (ವಿಕೆಟ್‌ ಕೀಪರ್‌), ಟಿಮ್‌ ಡೇವಿಡ್‌, ಮಿಚೆಲ್‌ ಓವೆನ್‌, ಮಾರ್ಕಸ್‌ ಸ್ಟೋಯ್ನಿಸ್‌, ಜಾಶ್‌ ಫಿಲಿಪ್‌, ಕ್ಸಿವಿಯರ್‌ ಬಾರ್ಟ್ಲೆಟ್, ನೇಥನ್‌ ಎಲ್ಲಿಸ್‌, ಮ್ಯಾಥ್ಯೂ ಕುಹ್ನೆಮನ್‌, ಜಾಶ್‌ ಹೇಝಲ್‌ವುಡ್‌