ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ (IND vs AUS) ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿರುವ ಭಾರತ ತಂಡ, ಇದೀಗ ಆಸ್ಟ್ರೇಲಿಯಾ ವಿರುದ್ದ ವೈಟ್ ಬಾಲ್ ಸರಣಿಗಳನ್ನು ಆಡಲು ಸಜ್ಜಾಗುತ್ತಿದೆ. ಅಕ್ಟೋಬರ್ 19 ರಂದು ಮೊದಲನೇ ಪಂದ್ಯದ ಮೂಲಕ ಏಕದಿನ ಸರಣಿ ಆರಂಭವಾದರೆ, ಬಳಿಕ ಐದು ಪಂದ್ಯಗಳ ಟಿ20ಐ ಸರಣಿ ನಡೆಯಲಿದೆ. ಅಂದ ಹಾಗೆ ಪರ್ತ್‌ನಲ್ಲಿ ನಡೆಯಲಿರುವ ಮೊದಲನೇ ಏಕದಿನ ಪಂದ್ಯದ ಮೂಲಕ ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ. ಇದು ಈ ಸರಣಿಯ ಆಕರ್ಷಣೆಯಾಗಿದೆ. ಈ ಪಂದ್ಯದ ನಿಮಿತ್ತ ಭಾರತ ತಂಡದ ಪ್ಲೇಯಿಂಗ್ XI ಯಾವ ರೀತಿ ಇರಬಹುದು ಎಂದು ಇಲ್ಲಿ ವಿವರಿಸಲಾಗಿದೆ.
ನಾಯಕ ಶುಭಮನ್ ಗಿಲ್ ಅವರ ಜೊತೆಗೆ ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸಬಹುದು. ಈ ಜೋಡಿ ಏಕದಿನ ಕ್ರಿಕೆಟ್‌ನಲ್ಲಿ ಅದ್ಭುತ ದಾಖಲೆಯನ್ನು ಹೊಂದಿದೆ. ಹಾಗಾಗಿ ಯಶಸ್ವಿ ಜೈಸ್ವಾಲ್ ಅವರು ಸದ್ಯ ಅತ್ಯುತ್ತಮ ಫಾರ್ಮ್‌ನಲ್ಲಿದ್ದರೂ ಅವರು ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ. ನಂತರ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಬ್ಯಾಟ್ ಮಾಡಬಹುದು. ಕೆಎಲ್ ರಾಹುಲ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿ ಆಡಲಿದ್ದಾರೆ. ನಿತೀಶ್ ಕುಮಾರ್ ರಡ್ಡಿ ಸೀಮ್ ಬೌಲಿಂಗ್ ಆಲ್‌ರೌಂಡರ್ ಆಗಿ ಸ್ಥಾನ ಪಡೆದರೆ, ಸ್ಪಿನ್ ಆಲ್‌ರೌಂಡರ್ ಆಗಿ ಅಕ್ಷರ್ ಪಟೇಲ್ ಆಡಬಹುದು.
IND vs WI 2nd Test: ವಿಂಡೀಸ್ ಟೆಸ್ಟ್: ಭಾರತದ ಕ್ಲೀನ್ ಸ್ವೀಪ್ ಪರಾಕ್ರಮ
ಇನ್ನು ಮತ್ತೊಬ್ಬ ಸ್ಪಿನ್ ಬೌಲರ್ ಸ್ಥಾನಕ್ಕೆ ಕುಲ್ದೀಪ್ ಯಾದವ್ ಹಾಗೂ ವಾಷಿಂಗ್ಟನ್ ಸುಂದರ್ ಅವರಲ್ಲಿ ಒಬ್ಬರು ಆಡಬಹುದು. ಆದರೆ, ಹೆಚ್ಚಿನ ಸ್ಪಿನ್ ಬೌಲಿಂಗ್ ಕೌಶಲದ ಆಧಾರದ ಮೇಲೆ ವಾಷಿಂಗ್ಟನ್ ಸುಂದರ್ ಅವರನ್ನು ಕುಲ್ದೀಪ್ ಯಾದವ್ ಹಿಂದಿಕ್ಕಬಹುದು. ಇನ್ನು ವೇಗದ ಬೌಲರ್‌ಗಳಾಗಿ ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಹಾಗೂ ಮೊಹಮ್ಮದ್ ಸಿರಾಜ್ ಆಡಲಿದ್ದಾರೆ.
ನಿತೀಶ್ ರೆಡ್ಡಿ ಹೆಚ್ಚಿನದಾಗಿ ಬೌಲ್ ಮಾಡಿಲ್ಲ, ಆದರೆ ಅವರನ್ನು ಮೂರನೇ ವೇಗದ ಆಯ್ಕೆಯಾಗಿ ಇಟ್ಟುಕೊಳ್ಳಬಹುದು. ಏಕೆಂದರೆ ಹಾರ್ದಿಕ್ ಪಾಂಡ್ಯ ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ. ವಾಷಿಂಗ್ಟನ್ ಸುಂದರ್ ಹಾಗೂ ಕುಲ್ದೀಪ್ ಯಾದವ್ ಅವರನ್ನು ಆಡಿಸಿದರೆ, ಆಗ ಅರ್ಷದೀಪ್ ಅಥವಾ ಹರ್ಷಿತ್ ರಾಣಾ ಅವರಲ್ಲಿ ಒಬ್ಬರನ್ನು ಕೈ ಬಿಡಬಹುದು. ಆ ಮೂಲಕ ಬ್ಯಾಟಿಂಗ್ ಡೆಪ್ತ್ ಹೆಚ್ಚಿಸಬಹುದು. ಆದರೆ, ಮೂವರು ಪರಿಪೂರ್ಣ ವೇಗಿಗಳನ್ನು ಇಲ್ಲಿ ಆಡಿಸಬೇಕಾಗುತ್ತದೆ. ನಿತೀಶ್ 8-9 ಓವರ್ ಬೌಲ್ ಮಾಡುವುದರ ಮೇಲೆ ಇದೆಲ್ಲವೂ ನಿರ್ಧಾರವಾಗುತ್ತದೆ.
IND vs AUS: ಭಾರತ ಎದುರಿನ ಏಕದಿನ ಸರಣಿಯ ಆರಂಭಿಕ ಪಂದ್ಯದಿಂದ ಇಂಗ್ಲಿಸ್, ಜಂಪಾ ಔಟ್
ಆಸ್ಟ್ರೇಲಿಯಾ ವಿರುದ್ಧ ಮೊದಲನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
1.ರೋಹಿತ್ ಶರ್ಮಾ (ಆರಂಭಿಕ ಬ್ಯಾಟ್ಸ್‌ಮನ್)
2.ಶುಭಮನ್ ಗಿಲ್ (ನಾಯಕ, ಆರಂಭಿಕ ಬ್ಯಾಟ್ಸ್‌ಮನ್)
3. ವಿರಾಟ್ ಕೊಹ್ಲಿ (ಬ್ಯಾಟ್ಸ್‌ಮನ್)
4.ಶ್ರೇಯಸ್ ಅಯ್ಯರ್ (ಉಪ ನಾಯಕ, ಬ್ಯಾಟ್ಸ್‌ಮನ್)
5.ಕೆಎಲ್ ರಾಹುಲ್ (ವಿಕೆಟ್ ಕೀಪರ್-ಬ್ಯಾಟ್ಸ್‌ಮನ್)
6.ನಿತೀಶ್ ರೆಡ್ಡಿ (ಆಲ್‌ರೌಂಡರ್)
7.ಅಕ್ಷರ್ ಪಟೇಲ್ (ಆಲ್‌ರೌಂಡರ್)
8.ಕುಲ್ದೀಪ್ ಯಾದವ್ (ಸ್ಪಿನ್ನರ್)
9.ಅರ್ಷದೀಪ್ ಸಿಂಗ್ (ವೇಗದ ಬೌಲರ್)
10.ಮೊಹಮ್ಮದ್ ಸಿರಾಜ್ (ವೇಗದ ಬೌಲರ್)
11.ಹರ್ಷಿತ್ ರಾಣಾ (ವೇಗದ ಬೌಲರ್)