ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs ENG: ಸಂಜು ಇನ್‌, ಕಿಶನ್‌ ಔಟ್‌? ಭಾರತದ ಪ್ಲೇಯಿಂಗ್‌ XIನಲ್ಲಿ 3 ಬದಲಾವಣೆ ಸಾಧ್ಯತೆ!

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಜುಲೈ 11 ರಂದು ಸೌಥ್‌ಹ್ಯಾಮ್ಟನ್‌ನ ರೋಸ್‌ ಬೌಲ್‌ನಲ್ಲಿ ನಡೆಯುವ ಐದನೇ ಪಂದ್ಯದಲ್ಲಿ ಕಾದಾಟ ನಡೆಸಲು ಸಜ್ಜಾಗುತ್ತಿವೆ. ಈಗಾಗಲೇ ಟಿ20ಐ ಸರಣಿಯನ್ನು ಕಳೆದುಕೊಂಡಿರುವ ಶ್ರೇಯಸ್‌ ಅಯ್ಯರ್‌, ತಮ್ಮ ನಾಯಕತ್ವದಲ್ಲಿ ಮೊದಲ ಗೆಲುವಿನಲ್ಲಿದ್ದಾರೆ. ಗೆಲುವಿನ ಮೂಲಕ ಸರಣಿಯನ್ನು ಮುಗಿಸಲು ಭಾರತ ಎದುರು ನೋಡುತ್ತಿದೆ.

ಇಂಗ್ಲೆಂಡ್‌ ಎದುರು ಐದನೇ ಟಿ20ಐ ಪಂದ್ಯಕ್ಕೆ ಭಾರತ ಸಜ್ಜು.

ನವದೆಹಲಿ: ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದಲ್ಲಿ ಭಾರತ ತಂಡದ ಇಂಗ್ಲೆಂಡ್ ಪ್ರವಾಸ(IND vs ENG), ಬೆಲ್‌ಫಾಸ್ಟ್‌ನ ತೇವಭರಿತ ಹಾಗೂ ಗಾಳಿಯ ವಾತಾವರಣದಲ್ಲಿ ಆರಂಭವಾಗಿ, ಉತ್ತರ ಇಂಗ್ಲೆಂಡ್ ಮೂಲಕ ಸಾಗುತ್ತಾ ಇದೀಗ ದಕ್ಷಿಣ ಕರಾವಳಿಯ ತನ್ನ ಅಂತಿಮ ಸ್ಥಳವನ್ನು ತಲುಪಿದೆ. ಈಗಾಗಲೇ ಐದು ನಗರಗಳಲ್ಲಿ ನಡೆದಿದ್ದ ಐದು ಪಂದ್ಯಗಳು ಈಗಾಗಲೇ ಮುಗಿದಿವೆಯಾದರೂ ಒಂದೇ ಒಂದು ಸಂಗತಿ ಇನ್ನೂ ಬದಲಾಗಿಲ್ಲ, ತಮ್ಮ ನಾಯಕತ್ವದಲ್ಲಿ ಶ್ರೇಯಸ್‌ ಅಯ್ಯರ್‌ ಇನ್ನೂ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. 2006ರ ಬಳಿಕ ಇದೇ ಮೊದಲ ಬಾರಿ ಭಾರತ ತಂಡ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗೆಲುವು ಕಾಣದೆ ದೀರ್ಘಾವಧಿಯನ್ನು ಸವೆಸಿದೆ.

ಇಡೀ ಸರಣಿಯಲ್ಲಿ ಭಾರತ ತಂಡ ತನ್ನ ಲಯವನ್ನು ಕಂಡುಕೊಳ್ಳಲು ಪರದಾಡಿದೆ. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲಷ್ಟೇ ಭಾರತ ಸ್ವಲ್ಪ ಮಟ್ಟಿಗೆ ಪೈಪೋಟಿ ನೀಡಿದ್ದು, 17ನೇ ಓವರ್‌ವರೆಗೂ ಪಂದ್ಯದಲ್ಲಿ ತನ್ನ ಸ್ಪರ್ಧಾತ್ಮಕತೆಯನ್ನು ಉಳಿಸಿಕೊಂಡಿತ್ತು. ಆದರೆ ನಾಟಿಂಗ್‌ಹ್ಯಾಮ್‌ ಪಂದ್ಯದಲ್ಲಿ ಭಾರತ ಕೇವಲ 76 ರನ್‌ಗಳಿಗೆ ಆಲೌಟ್ ಆಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.

ಬ್ರಿಸ್ಟಲ್‌ನಲ್ಲಿನ ನಾಲ್ಕನೇ ಟಿ20 ಪಂದ್ಯದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಇಂಗ್ಲೆಂಡ್ ಭಾರತವನ್ನು ಸಂಪೂರ್ಣವಾಗಿ ಹೊರತಬ್ಬಿತು. ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಿದರೂ ಸರಣಿಯ ಫಲಿತಾಂಶ ಬದಲಾಗುವುದಿಲ್ಲ. ಆದರೆ, 0-4 ಅಂತರದ ವೈಟ್‌ವಾಶ್‌ ಆಘಾತವನ್ನು ಭಾರತ ತಪ್ಪಿಸಿಕೊಳ್ಳಲಿದೆ ಅಷ್ಟೆ.

IND vs ENG: ಭಾರತ ತಂಡದ ಹೀನಾಯ ಸೋಲಿಗೆ ಕಾರಣ ತಿಳಿಸಿದ ದಿನೇಶ್‌ ಕಾರ್ತಿಕ್‌!

ಜೋಫ್ರಾ ಆರ್ಚರ್ ಮತ್ತು ಜಾಶ್ ಟಂಗ್ ಅವರ ವೇಗದ ಬೌಲಿಂಗ್‌ ಅನ್ನು ಸಮರ್ಥವಾಗಿ ಎದುರಿಸುವಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ವಿಫಲರಾಗುತ್ತಿದ್ದಾರೆ. ಸ್ಯಾಮ್ ಕರನ್ ಅವರ ನಿಧಾನಗತಿಯ ಹಾಗೂ ಸ್ಕಿಡ್ ಆಗುವ ಎಸೆತಗಳ ವಿರುದ್ಧವೂ ಬ್ಯಾಟರ್‌ಗಳು ಪರದಾಡಿದ್ದಾರೆ.

ಬೌಲಿಂಗ್ ವಿಭಾಗದಲ್ಲೂ ಭಾರತಕ್ಕೆ ಆಯ್ಕೆಯ ಅವಕಾಶಗಳು ಸೀಮಿತವಾಗಿವೆ. ಹ್ಯಾಮ್‌ಸ್ಟ್ರಿಂಗ್ ಗಾಯದ ಕಾರಣದಿಂದ ವರುಣ್ ಚಕ್ರವರ್ತಿ ಮತ್ತು ಹರ್ಷಿತ್ ರಾಣಾ ಸರಣಿಯಿಂದ ಹೊರಗುಳಿದಿದ್ದಾರೆ. ಮತ್ತೊಂದೆಡೆ, ಎರಡನೇ ಟಿ20ಐ ಪಂದ್ಯದಲ್ಲಿ ರವಿ ಬಿಷ್ಣೋಯ್ ಒಂದೇ ಓವರ್‌ನಲ್ಲಿ 29 ರನ್ ಬಿಟ್ಟುಕೊಟ್ಟಿದ್ದು, ತಂಡದ ಆಯ್ಕೆ ಪ್ರಕ್ರಿಯೆಯನ್ನು ಇನ್ನಷ್ಟು ಸಮಸ್ಯೆಗೀಡು ಮಾಡಿದೆ.

ಭಾರತ ತಂಡದಲ್ಲಿ ಬದಲಾವಣೆ ಅಗತ್ಯ

ಬ್ಯಾಟಿಂಗ್ ವಿಭಾಗದಲ್ಲಿ, ಶಾರ್ಟ್-ಪಿಚ್ ಎಸೆತಗಳ ವಿರುದ್ಧ ವೈಫಲ್ಯ ಅನುಭವಿಸಿದ್ದರೂ ವೈಭವ್ ಸೂರ್ಯವಂಶಿಗೆ ಭಾರತ ಮತ್ತೊಮ್ಮೆ ಅವಕಾಶ ನೀಡುವ ಸಾಧ್ಯತೆ ಇದೆ. ಸಂಜು ಸ್ಯಾಮ್ಸನ್ ಅವರನ್ನು ಪ್ಲೇಯಿಂಗ್ ಇಲೆವೆನ್ ಹಾಗೂ ಜಿಂಬಾಬ್ವೆ ಪ್ರವಾಸದ ತಂಡದಿಂದ ಕೈಬಿಟ್ಟಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದರೆ ಅವರನ್ನು ತಂಡಕ್ಕೆ ಮರಳಿ ಸೇರಿಸಬೇಕಾದರೆ, ತಿಲಕ್ ವರ್ಮಾ ಅವರನ್ನು ಕೈಬಿಟ್ಟು, ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಒಳಗೊಂಡಿರುವ ಅಗ್ರ ಕ್ರಮಾಂಕದಲ್ಲಿ ಬದಲಾವಣೆ ಮಾಡಬೇಕಾಗುವ ಸಾಧ್ಯತೆ ಇದೆ.

IND vs ENG: ಭಾರತ ತಂಡದಲ್ಲಿ ತಿಲಕ್‌ ವರ್ಮಾ ಬದಲು ಸಂಜು ಸ್ಯಾಮ್ಸನ್‌ ಆಡಬೇಕೆಂದ ಕೆ ಶ್ರೀಕಾಂತ್‌!

ಕ್ಲೀನ್‌ ಸ್ವೀಪ್‌ ಮೇಲೆ ಇಂಗ್ಲೆಂಡ್‌ ಕಣ್ಣು

ಇನ್ನು ಇಂಗ್ಲೆಂಡ್ ತಂಡ, ಭಾರತ ತಂಡವನ್ನು ಕಟ್ಟಿ ಹಾಕಲು ಅತ್ಯುತ್ತಮ ರಣತಂತ್ರವನ್ನು ಕಂಡುಕೊಂಡಿದೆ. ವೇಗಿಗಳಾದ ಜೋಫ್ರಾ ಆರ್ಚರ್ ಹಾಗೂ ಜಾಶ್ ಟಂಗ್ ಭಾರತೀಯ ಬ್ಯಾಟರ್‌ಗಳನ್ನು ಕಾಡಿದರೆ, ವಿಲ್ ಜ್ಯಾಕ್ಸ್, ಆದಿಲ್ ರಶೀದ್ ಮತ್ತು ಲಿಯಾಮ್ ಡಾಸನ್ ವೇಗದ ಬದಲಾವಣೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಭಾರತದ ಮೇಲೆ ಒತ್ತಡ ಹೇರಿದರು. ಬ್ಯಾಟಿಂಗ್‌ನಲ್ಲಿ ಫಿಲ್ ಸಾಲ್ಟ್, ಜೋಸ್ ಬಟ್ಲರ್, ಹ್ಯಾರಿ ಬ್ರೂಕ್ ಮತ್ತು ಜಾಕಬ್ ಬೆಥೆಲ್ ತಮ್ಮ ತವರಿನ ಪರಿಸ್ಥಿತಿಗಳ ಲಾಭವನ್ನು ಸಂಪೂರ್ಣವಾಗಿ ಪಡೆದು ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI

ಭಾರತ: ಅಭಿಷೇಕ್‌ ಶರ್ಮಾ, ವೈಭವ್‌ ಸೂರ್ಯವಂಶಿ, ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌)/ಸಂಜು ಸ್ಯಾಮ್ಸನ್‌ (ವಿಕೆಟ್‌ ಕೀಪರ್‌), ಶ್ರೇಯಸ್‌ ಅಯ್ಯರ್‌ (ನಾಯಕ), ತಿಲಕ್‌ ವರ್ಮಾ, ಶಿವಮ್‌ ದುಬೇ, ವಾಷಿಂಗ್ಟನ್‌ ಸುಂದರ್‌/ಸೂರ್ಯಾಂಶ್‌ ಶೆಡ್ಗೆ, ಅಕ್ಷರ್‌ ಪಟೇಲ್‌, ಪ್ರಿನ್ಸ್‌ ಯಾದವ್‌, ಅರ್ಷದೀಪ್‌ ಸಿಂಗ್‌, ಪ್ರಸಿಧ್‌ ಕೃಷ್ಣ/ರವಿ ಬಿಷ್ಣೋಯ್‌

ಇಂಗ್ಲೆಂಡ್‌: ಫಿಲಿಪ್‌ ಸಾಲ್ಟ್‌, ಜೋಸ್‌ ಬಟ್ಲರ್‌ (ವಿಕೆಟ್‌ ಕೀಪರ್‌), ಹ್ಯಾರಿ ಬ್ರೂಕ್‌ (ನಾಯಕ), ಜೇಕಬ್‌ ಬೆಥೆಲ್‌, ಟಾಮ್‌ ಬ್ಯಾಂಟನ್‌, ಸ್ಯಾಮ್‌ ಕರನ್‌, ವಿಲ್‌ ಜ್ಯಾಕ್ಸ್‌, ರೆಹಾನ್‌ ಅಹ್ಮದ್‌, ಜೋಫ್ರಾ ಆರ್ಚರ್‌, ಆದಿಲ್‌ ರಶೀದ್‌, ಜಾಶ್‌ ಟಂಗ್‌

IND vs ENG ಟಿ20ಐ ಸರಣಿಯಲ್ಲಿ ಭಾರತ ಮಾಡುತ್ತಿರುವ ದೊಡ್ಡ ತಪ್ಪನ್ನು ರಿವೀಲ್‌ ಮಾಡಿದ ಸಬಾ ಕರಿಮ್‌!

ಪಿಚ್‌ ರಿಪೋರ್ಟ್‌

ಟಿ20 ಕ್ರಿಕೆಟ್‌ನಲ್ಲಿ ಸೌತ್‌ಹ್ಯಾಂಪ್ಟನ್‌ನ ರೋಸ್‌ ಬೌಲ್‌ ಕ್ರೀಡಾಂಗಣ ಅತ್ಯುತ್ತಮ ಸಮತೋಲನದಿಂದ ಕೂಡಿದೆ. ಹೊಸ ಚೆಂಡಿನಲ್ಲಿ ಫಾಸ್ಟ್‌ ಬೌಲರ್‌ಗಳು ಪ್ರಾಬಲ್ಯ ಸಾಧಿಸಲಿದ್ದಾರೆ. ಬ್ಯಾಟ್ಸ್‌ಮನ್‌ ಕ್ರೀಸ್‌ನಲ್ಲಿ ನೆಲೆ ಕಂಡುಕೊಂಡರೆ, ದೊಡ್ಡ ಮೊತ್ತವನ್ನು ಕಲೆ ಹಾಕಬಹುದು. ಈ ಅಂಗಣದಲ್ಲಿ ಪ್ರಥಮ ಇನಿಂಗ್ಸ್‌ನ ಸರಾಸರಿ ಮೊತ್ತ 179 ರನ್‌ಗಳು. ಪಂದ್ಯ ಸಾಗುತ್ತಿದ್ದಂತೆ ಬ್ಯಾಟ್ಸ್‌ಮನ್‌ಗಳು ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಬಹುದು. ಅಂದ ಹಾಗೆ ಈ ಅಂಗಣದಲ್ಲಿ ಚೇಸ್‌ ಮಾಡುವುದನ್ನು ತಂಡಗಳು ಇಷ್ಟಪಡುತ್ತವೆ. ಹಾಗಾಗಿ ಟಾಸ್‌ ಗೆದ್ದ ತಂಡದ ನಾಯಕ ಚೇಸಿಂಗ್‌ ಆಯ್ಕೆ ಮಾಡುತ್ತಾರೆ.

ಪಂದ್ಯದ ವಿವರ

ಭಾರತ vs ಇಂಗ್ಲೆಂಡ್‌

ಐದನೇ ಟಿ20ಐ ಪಂದ್ಯ

ದಿನಾಂಕ: ಜುಲೈ 11, 2026

ಸಮಯ: ಸಂಜೆ 07:00ಕ್ಕೆ (ಭಾರತೀಯ ಕಾಲಮಾನ)

ಸ್ಥಳ: ರೋಸ್‌ ಬೌಲ್‌ ಕ್ರೀಡಾಂಗಣ, ಸೌತ್‌ಹ್ಯಾಂಪ್ಟನ್‌

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಲೈವ್‌ ಸ್ಟ್ರೀಮಿಂಗ್‌: ಜಿಯೊ ಹಾಟ್‌ಸ್ಟಾರ್‌