ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಸೂಪರ್-8ರ ಪಂದ್ಯದಲ್ಲಿಯೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma) ಅವರನ್ನು ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ (Manoj Tiwary) ಟೀಕಿಸಿದ್ದು, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದ ನಿಮಿತ್ತ ಅವರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಪ್ರಸ್ತುತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಅವರು ಆರಂಭಿಕ ಮೂರು ಪಂದ್ಯಗಳಲ್ಲಿ ಡಕ್‌ಔಟ್ ಆಗಿದ್ದರು, ನಂತರ ಜಿಂಬಾಬ್ವೆ ವಿರುದ್ಧ ಅರ್ಧಶತಕ ಸಿಡಿಸಿದ ಬಳಿಕ ದಕ್ಷಿಣ ಆಫ್ರಿಕಾ ಎದುರು ಸೂಪರ್-8ರ ಪಂದ್ಯದಲ್ಲಿ 12 ಎಸೆತಗಳಲ್ಲಿ 15 ರನ್ ಗಳಿಸಿದ್ದರು. ನಂತರ ವಿಂಡೀಸ್ ಎದುರು ಅವರು 10 ರನ್ ಗಳಿಸಿ ಔಟ್ ಆಗಿದ್ದರು.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಆರು ಪಂದ್ಯಗಳಿಂದ ಅಭಿಷೇಕ್ ಶರ್ಮಾ ಅವರು 13.33ರ ಸರಾಸರಿಯಲ್ಲಿ ಕೇವಲ 131 ರನ್‌ಗಳನ್ನು ಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಡಗೈ ಬ್ಯಾಟ್ಸ್‌ಮನ್ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿ ಮನೋಜ್ ತಿವಾರಿ, ಆರಂಭಿಕ ಬ್ಯಾಟ್ಸ್‌ಮನ್‌ಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ. ಮುಂದಿನ ಪಂದ್ಯಕ್ಕೆ ಸ್ವಲ್ಪ ಜವಾಬ್ದಾರಿಯುತವಾಗಿ ಬ್ಯಾಟ್ ಮಾಡಬೇಕೆಂದು ಕಿವಿ ಮಾತು ಹೇಳಿದ್ದಾರೆ.
IND vs ENG: ಪವರ್‌ಪ್ಲೇನಲ್ಲಿ ಜಸ್‌ಪ್ರೀತ್ ಬುಮ್ರಾಗೆ ಬೌಲಿಂಗ್ ಕೊಡಿ ಎಂದ ಸುನೀಲ್ ಗವಾಸ್ಕರ್!
ಕ್ರಿಕ್‌ಬಝ್ ಜೊತೆ ಮಾತನಾಡಿದ ಮನೋಜ್ ತಿವಾರಿ, "ನಿಮ್ಮ ವಿಕೆಟ್‌ಗೆ ನೀವು ಮೌಲ್ಯವನ್ನು ತಂದುಕೊಡುವುದಿಲ್ಲವಾದರೆ, ನೀವು ಈ ರೀತಿಯ ಕಳಪೆ ಹೊಡೆತಗಳನ್ನು ಹೊಡೆಯಬೇಕಾಗುತ್ತದೆ," ಎಂದು ಬೇಸರ ವ್ಯಕ್ತಪಡಿಸಿದರು. ಅಭಿಷೇಕ್ ಶರ್ಮಾ ಅವರು ಈಗಾಗಲೇ ಸ್ಟಾರ್ ಆಟಗಾರ, ಹಾಗಾಗಿ ಅವರು ಭಾರತ ತಂಡಕ್ಕೆ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ತೋರಬೇಕಾಗಿದೆ ಎಂದು ಅವರು ಹೇಳಿದ್ದಾರೆ.
“ಅಭಿಷೇಕ್ ಈಗಾಗಲೇ ಅಲ್ಪ ಅವಧಿಯಲ್ಲಿ ಸ್ಟಾರ್ ಆಗಿದ್ದಾರೆ, ಆದರೆ ಅವರು ಸೂಪರ್‌ಸ್ಟಾರ್ ಆಗಬೇಕಾದರೆ, ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲಬೇಕು. ತುಂಬಾ ಸ್ಪರ್ಧೆ ಇದೆ, ಬಹಳಷ್ಟು ಪಂದ್ಯ ವಿಜೇತರು ಇದ್ದಾರೆ, ಆದ್ದರಿಂದ ಅವರಿಗಿಂತ ಮುಂದೆ ಇರಬೇಕು,” ಎಂದು ಅವರು ತಿಳಿಸಿದ್ದಾರೆ.
IPL 2026: ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 5 ಪಂದ್ಯಗಳು!
“ಇಂದು ಅವರಿಗೆ ಉತ್ತಮ ಅವಕಾಶವಿತ್ತು. ಅವರು ಎರಡು ಕ್ಯಾಚ್‌ಗಳನ್ನು ಮಿಸ್ ಮಾಡಿದ್ದಾರೆ. ಯಾವ ಎಸೆತಗಳನ್ನು ಹಿಡಿಯಬೇಕು ಮತ್ತು ಯಾವ ಎಸೆತಗಳನ್ನು ಬಿಡಬೇಕು ಎಂಬ ನಿರ್ಧಾರವನ್ನು ಮಾಡುವ ಮನೋಭಾವವನ್ನು ಅವರು ಬೆಳೆಸಿಕೊಳ್ಳಬೇಕು,” ಎಂದು ಮನೋಜ್ ತಿವಾರಿ ಹೇಳಿದ್ದಾರೆ.
ಅಭಿಷೇಕ್ ಶರ್ಮಾ ವೈಫಲ್ಯಕ್ಕೆ ಕಾರಣವೇನು?
ಅಭಿಷೇಕ್ ಶರ್ಮಾ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣ ತಾಂತ್ರಿಕ ಸಮಸ್ಯೆ ಕಾರಣ ಎಂದು ಭಾರತ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಅವರು ಅಗತ್ಯವಾಗಿರುವ ಸಣ್ಣ-ಸಣ್ಣ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದ್ದಾರೆ.
T20 World Cup: ಅಭಿಷೇಕ್ ಶರ್ಮಾ ಔಟ್! ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
“ಒಂದು ಚಿಂತನೆ ಎಂದರೆ ಅಭಿಷೇಕ್ ಶರ್ಮಾ ಅವರ ಫಾರ್ಮ್ ಬಗ್ಗೆ. ಆ ಅರ್ಧಶತಕದ ಬಳಿಕ ಅವರು ರನ್ ಗಳಿಸುವುದನ್ನು ಮುಂದುವರಿಸಲಿದ್ದಾರೆಂಬ ಭಾವನೆ ಮೂಡಿತ್ತು, ಆದರೆ ಅವರು ಆ ಶಾಟ್‌ಗೆ ಹೋದಾಗ, ಹಿಂಬದಿಯ ಮೊಣಕಾಲು ತುಂಬಾ ಬಾಗಿತ್ತು ಮತ್ತು ದೇಹದ ತೂಕ ಹಿಂಬದಿಗೆ ಹೋಗುತ್ತಿತ್ತು," ಎಂದು ಹೇಳಿದ್ದಾರೆ.
"ಮುಖ್ಯ ಅಂಶವೇನೆಂದರೆ ಅವರು ದೇಹದ ತೂಕ ಫ್ರಂಟ್ ಫುಟ್ ಮೇಲೆ ಇರಬೇಕು, ಇದು ಅವರಿಗೆ ಸೂಕ್ತವಾಗುತ್ತದೆ. ಇದರ ಬಗ್ಗೆ ಅವರು ಗಮನ ನೀಡಬೇಕಾದ ಅಗತ್ಯವಿದೆ," ಎಂದು ಇರ್ಫಾನ್ ಪಠಾಣ್ ಸಲಹೆಯನ್ನು ನೀಡಿದ್ದಾರೆ.