ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಇಂಗ್ಲೆಂಡ್‌ ವಿರುದ್ಧ ನಾಲ್ಕನೇ ಟೆಸ್ಟ್‌ಗೂ ಮುನ್ನ ಭಾರತ ತಂಡಕ್ಕೆ ಆಘಾತ!

ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್‌ಗೂ ಮುನ್ನ ಭಾರತ ತಂಡಕ್ಕೆ ಮತ್ತೊಂದು ಗಾಯದ ಭೀತಿ ಎದುರಾಗಿದೆ. ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಉತ್ಸುಕರಾಗಿರುವ ಯುವ ವೇಗಿ ಅರ್ಷದೀಪ್‌ ಸಿಂಗ್‌ ಗಾಯಕ್ಕೆ ತುತ್ತಾಗಿದ್ದಾರೆಂದು ವರದಿಯಾಗಿದೆ. ಜುಲೈ 17 ರಂದು ಅಭ್ಯಾಸದ ವೇಳೆ ಕೈ ಗೆ ಬ್ಯಾಂಡೇಜ್‌ ಸುತ್ತಿಕೊಂಡು ಅವರು ಕಾಣಿಸಿಕೊಂಡಿದ್ದರು.

ಭಾರತದ ವೇಗಿ ಅರ್ಷದೀಪ್‌ ಸಿಂಗ್‌ ಕೈಗೆ ಗಾಯವಾಗಿದೆ.

ನವದೆಹಲಿ: ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿ( IND vs ENG) ಸೋಲು ಅನುಭವಿಸಿದ್ದ ಭಾರತ ತಂಡ, ಇದೀಗ ಜುಲೈ 23 ರಂದು ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಆರಂಭವಾಗುವ ನಾಲ್ಕನೇ ಟೆಸ್ಟ್‌ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇದರ ನಡುವೆ ಟೀಮ್‌ ಇಂಡಿಯಾಗೆ (India) ಗಾಯದ ಭೀತಿ ಎದುರಾಗಿದೆ. ಈಗಾಗಲೇ ರಿಷಭ್‌ ಪಂತ್‌ ತನ್ನ ಬೆರಳು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಯುವ ವೇಗಿ ಅರ್ಷದೀಪ್‌ ಸಿಂಗ್‌ (Arshdeep singh) ಅವರಿಗೂ ಗಾಯವಾಗಿದ ಎಂದು ಹೇಳಲಾಗುತ್ತಿದೆ. ಅವರು ಅಭ್ಯಾಸದ ವೇಳೆ ತಮ್ಮ ಕೈಗೆ ಬ್ಯಾಂಡೇಜ್‌ ಸುತ್ತಿಕೊಂಡು ಬಂದಿದ್ದರು. ಹಾಗಾಗಿ ಅವರು ಗಾಯಕ್ಕೆ ತುತ್ತಾಗಿರಬಹುದೆಂದು ಹೇಳಲಾಗುತ್ತಿದೆ.

ಭಾರತ ತಂಡ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಸರಣಿಯಲ್ಲಿ 1-2 ಹಿನ್ನಡೆ ಅನುಭವಿಸಿದೆ. ಇದೀಗ ಭಾರತ ತಂಡ ಮ್ಯಾಂಚೆಸ್ಟರ್‌ನಲ್ಲಿ ಗೆಲ್ಲಲೇಬೇಕಾದ ಪರಿಸ್ಥಿತಿಗೆ ಒಳಗಾಗಿದೆ. ಇದರ ನಡುವೆ ಅರ್ಷದೀಪ್‌ ಸಿಂಗ್‌ ಜುಲೈ 17 ರಂದು ಅಭ್ಯಾಸಕ್ಕೆ ಕೈಗೆ ಬ್ಯಾಂಡೇಜ್‌ ಸುತ್ತಿಕೊಂಡು ಬಂದಿದ್ದರು. ಈ ಹಿನ್ನೆಲೆಯಲ್ಲಿ ಭಾರತ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಜಸ್‌ಪ್ರೀತ್‌ ಬುಮ್ರಾ ಅವರು ಕೇವಲ ಮೂರು ಪಂದ್ಯಗಳಿಗೆ ಮಾತ್ರ ಲಭ್ಯರಾಗಿದ್ದಾರೆಂದು ಮೊದಲೇ ಹೇಳಲಾಗಿದೆ. ಇದರ ನಡುಗೆ ಬೌಲಿಂಗ್‌ ವಿಭಾಗದಲ್ಲಿ ಹೆಚ್ಚಿನ ಆಯ್ಕೆಯಾಗಿ ಅರ್ಷದೀಪ್‌ ಸಿಂಗ್‌ ತಂಡದಲ್ಲಿದ್ದಾರೆ.

IND vs ENG: ನಾಲ್ಕನೇ ಟೆಸ್ಟ್‌ನಲ್ಲಿ ರಿಷಭ್‌ ಪಂತ್‌ಗೆ ವಿಕೆಟ್‌ ಕೀಪಿಂಗ್‌ ನೀಡಲ್ಲ ಎಂದ ಕೋಚ್‌!

ಕಳೆದ ಮೂರು ಪಂದ್ಯಗಳಲ್ಲಿಯೂ ಆಡಲು ಅರ್ಷದೀಪ್‌ ಸಿಂಗ್‌ಗೆ ಅವಕಾಶ ಸಿಕ್ಕಿಲ್ಲ. ವೇಗದ ಬೌಲಿಂಗ್‌ ವಿಭಾಗದಲ್ಲಿ ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಆಕಾಶ್‌ ದೀಪ್‌ ಹಾಗೂ ಪ್ರಸಿಧ್‌ ಕೃಷ್ಣ ಆಡಿದ್ದಾರೆ. ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಹಿನ್ನೆಲೆಯಲ್ಲಿ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಜಸ್‌ಪ್ರೀತ್‌ ಬುಮ್ರಾ ವಿಶ್ರಾಂತಿ ನೀಡಿ, ಅರ್ಷದೀಪ್‌ ಸಿಂಗ್‌ಗೆ ಅವಕಾಶ ನೀಡಬಹುದು. ಆದರೆ, ಅರ್ಷದೀಪ್‌ ಗಾಯಕ್ಕೆ ತುತ್ತಾಗಿದ್ದಾರೆಂದು ವರದಿಯಾಗಿದೆ.

ಸಹಾಯಕ ಕೋಚ್‌ ಹೇಳಿದ್ದೇನು?

ಭಾರತ ತಂಡದ ಸಹಾಯಕ ಕೋಚ್‌ ರಯಾನ್‌ ಟೆನ್‌ ಡಶಾಟ್‌ ಅವರು ಅರ್ಷದೀಪ್‌ ಸಿಂಗ್‌ ಅವರ ಗಾಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ತರಬೇತಿ ಪಡೆಯುತ್ತಿದ್ದ ವೇಳೆ ಗಾಯಕ್ಕೆ ತುತ್ತಾಗಿದ್ದಾರೆಂದು ಅವರು ತಿಳಿಸಿದ್ದಾರೆ.

"ಅವರು ಬೌಲ್‌ ಮಾಡುವಾಗ ಚೆಂಡನ್ನು ತೆಗೆದುಕೊಂಡರು. ಚೆಂಡನ್ನು ತಡೆಯಲು ಪ್ರಯತ್ನಿಸಿದರು ಮತ್ತು ಅದು ಕೇವಲ ಒಂದು ಕಟ್. ಕಟ್ ಎಷ್ಟು ಕೆಟ್ಟದಾಗಿದೆ ಎಂದು ನಾವು ನೋಡಬೇಕು. ವೈದ್ಯಕೀಯ ತಂಡವು ಅವರನ್ನು ವೈದ್ಯರ ಬಳಿ ತೋರಿಸಲು ಕರೆದೊಯ್ದರು ಮತ್ತು ನಿಸ್ಸಂಶಯವಾಗಿ ಅವರಿಗೆ ಹೊಲಿಗೆಗಳು ಬೇಕೇ ಅಥವಾ ಬೇಡವೇ? ಎಂಬುದು ಮುಂದಿನ ಕೆಲವು ದಿನಗಳಲ್ಲಿ ನಮ್ಮ ಯೋಜನೆಗೆ ಮುಖ್ಯವಾಗಿರುತ್ತದೆ," ಎಂದು ಟೆನ್ ಡಶಾಟ್‌ ಇಂಡಿಯಾ ಟುಡೇಗೆ ಹೇಳಿದ್ದಾರೆ.

IND vs ENG: ಶುಭಮನ್‌ ಗಿಲ್‌ರನ್ನು ಹಿಂದಿಕ್ಕಬಲ್ಲ ಆಟಗಾರನನ್ನು ಹೆಸರಿಸಿದ ಓವೈಸ್‌ ಶಾ!

ವೈಟ್-ಬಾಲ್ ಕ್ರಿಕೆಟ್, ಐಪಿಎಲ್ ಮತ್ತು ಕೌಂಟಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರೂ ಅರ್ಷ್‌ದೀಪ್ ಇನ್ನೂ ತಮ್ಮ ಚೊಚ್ಚಲ ಟೆಸ್ಟ್ ಕ್ಯಾಪ್‌ಗಾಗಿ ಕಾಯುತ್ತಿದ್ದಾರೆ. ಸರಣಿಯಲ್ಲಿ ಕಮ್‌ಬ್ಯಾಕ್‌ ಮಾಡಬೇಕೆಂಬ ಹಾದಿಯಲ್ಲಿ ಭಾರತ ತಂಡಕ್ಕೆ ಅವರ ಫಿಟ್‌ನೆಸ್ ಪ್ರಮುಖವಾಗಿದೆ. ಹಾಗಾಗಿ ಅವರು ಇನ್ನೆರಡು ದಿನಗಳಲ್ಲಿ ಅವರು ಅದನ್ನು ಸಾಬೀತುಪಡಿಸಬೇಕಾಗುತ್ತದೆ.

ಸದ್ಯಕ್ಕೆ ಭಾರತ ತಂಡದ ಕ್ಯಾಂಪ್‌ನಲ್ಲಿ ಅರ್ಷದೀಪ್‌ ಸಿಂಗ್‌ ಸ್ಥಿತಿಯ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಹೊರಬಿದ್ದಿಲ್ಲ. ಆದರೆ ಪಂದ್ಯಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಅರ್ಷ್‌ದೀಪ್ ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು. ಕೇವಲ ಬ್ಯಾಕಪ್ ಆಗಿ ಮಾತ್ರವಲ್ಲದೆ, ಭಾರತ ತಂಡ ತನ್ನ ವೇಗದ ಬೌಲಿಂಗ್‌ ವಿಭಾಗವನ್ನು ಬಲಿಷ್ಠಗೊಳಿಸಿಕೊಳ್ಳಲು ಪ್ರಮುಖ ಅಸ್ತ್ರವಾಗಬಹುದು.