ಲಂಡನ್: ಇಲ್ಲಿನ ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಐದನೇ ಹಾಗೂ ಟೆಸ್ಟ್ ಸರಣಿಯ(IND vs ENG) ಕೊನೆಯ ಪಂದ್ಯದ ನಾಲ್ಕನೇ ದಿನ ಕಳಪೆ ಬೌಲಿಂಗ್ ಹಾಗೂ ಕಳಪೆ ಫೀಲ್ಡಿಂಗ್ ಪ್ರದರ್ಶನ ತೋರಿದ ಭಾರತ ತಂಡದ ವೇಗದ ಬೌಲರ್ ಆಕಾಶ್ ದೀಪ್ (Akash Deep) ಹಾಗೂ ಮೊಹಮ್ಮದ್ ಸಿರಾಜ್ (Mohammed Siraj) ಅವರನ್ನು ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (Dinesh Karthik) ಟೀಕಿಸಿದ್ದಾರೆ. ನಾಲ್ಕನೇ ದಿನ ಕಳಪೆ ಫೀಲ್ಡಿಂಗ್ ಹಾಗೂ ಬೌಲಿಂಗ್ ಕಾರಣ ಭಾರತ ತಂಡ ಐದನೇ ಟೆಸ್ಟ್ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಸ್‌ಪ್ರೀತ್ ಬುಮ್ರಾ ಐದನೇ ದಿನ ವಿಶ್ರಾಂತಿ ಪಡೆದಿದ್ದರೆ, ಶಾರ್ದುಲ್ ಠಾಕೂರ್ ಅವರನ್ನು ಬೆಂಚ್ ಕಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆಕಾಶ್ ದೀಪ್, ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿಧ್ ಕೃಷ್ಣ ಆಡುತ್ತಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಆಕಾಶ್ ದೀಪ್ ಅವರು ನಾಲ್ಕನೇ ದಿನ ಬೌಲಿಂಗ್ ವೈಫಲ್ಯ ಅನುಭವಿಸಿದರು. ಅವರು ಬೌಲ್ ಮಾಡಿದ್ದ 20 ಓವರ್‌ಗಳಲ್ಲಿ 85 ರನ್ ನೀಡಿ ಒಂದೇ ಒಂದು ವಿಕೆಟ್ ಕಿತ್ತಿದ್ದರು.
IND vs ENG Test Series: ಟೆಸ್ಟ್ ಇತಿಹಾಸದಲ್ಲೇ ಮೊದಲು!; 9 ಆಟಗಾರರಿಂದ 400+ ರನ್
ಗಾಯದ ಕಾರಣ ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಆಕಾಶ್ ದೀಪ್ ಐದನೇ ಪಂದ್ಯದಲ್ಲಿ ಆಡಿದ್ದರು. ಆದರೆ, ನಾಲ್ಕನೇ ಪಂದ್ಯದಲ್ಲಿ ಅವರಿಂದ ನಿರೀಕ್ಷಿತ ಬೌಲಿಂಗ್ ಪ್ರದರ್ಶನ ಮೂಡಿ ಬಂದಿರಲಿಲ್ಲ. ಅವರು ಲೈನ್ ಆಂಡ್ ಲೆನ್ತ್‌ನಲ್ಲಿ ತುಂಬಾ ಎಡವುತ್ತಿದ್ದರು. ಅಂದ ಹಾಗೆ ಆಕಾಶ್ ದೀಪ್ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿರಲಿಲ್ಲ. ಹಾಗಾಗಿ ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರು ಇಂಜೆಕ್ಷನ್ ತೆಗೆದುಕೊಂಡು ಪಂದ್ಯವನ್ನು ಆಡುವಂತೆ ಸೂಚನೆ ನೀಡಿದ್ದರು.
ಕ್ರಿಕ್‌ಬಝ್ ಜೊತೆ ಮಾತನಾಡಿದ ದಿನೇಶ್ ಕಾರ್ತಿಕ್, "ಆರಂಭದಲ್ಲಿ, ಆಕಾಶ್ ದೀಪ್ ಇನ್ನೂ ಉತ್ತಮವಾಗಿ ಬೌಲ್ ಮಾಡಬಹುದಿತ್ತು ಎಂದು ನಾನು ಭಾವಿಸುತ್ತೇನೆ. ಅವರು ನಿಜವಾಗಿಯೂ ಅವರ ಪ್ರತಿಭೆ ಸೂಚಿಸುವಷ್ಟು ಉತ್ತಮವಾಗಿ ಬೌಲ್ ಮಾಡಿದ್ದಾರೆಂದು ನಾನು ಭಾವಿಸುವುದಿಲ್ಲ, ಏಕೆಂದರೆ ಅವರು ಎಜ್‌ಬಾಸ್ಟನ್‌ನಲ್ಲಿ ತೋರಿಸಿದ್ದು ಉತ್ತಮ ಗುಣಮಟ್ಟದ್ದಾಗಿತ್ತು. ಆದರೆ ನಂತರ ಅವರು ಸ್ವಲ್ಪ ಮಟ್ಟಿಗೆ ಎಡವಿದರು, ಏಕೆ ಎಂದು ನನಗೆ ತಿಳಿದಿಲ್ಲ. ಅವರು ಕಾಲಿನ ಕೆಳಗೆ ಬಹಳಷ್ಟು ಬೌಲ್ ಮಾಡಿದರು, ಅವರು ಏಕೆ ಎರಡು ಪಂದ್ಯಗಳಲ್ಲಿ ಉತ್ತಮವಾಗು ಆಡಲಿಲ್ಲ ಎಂದು ನನಗೆ ಖಚಿತವಿಲ್ಲ," ಎಂದು ಹೇಳಿದ್ದಾರೆ.
IND vs ENG: 36 ವರ್ಷಗಳಲ್ಲಿ ಮೊದಲ ಬಾರಿಗೆ!; ಟೆಸ್ಟ್ ಕ್ರಿಕೆಟ್‌ನಲ್ಲಿ ಗಿಲ್, ಜಡೇಜ, ರಾಹುಲ್ ವಿಶೇಷ ದಾಖಲೆ
ಮೊಹಮ್ಮದ್ ಸಿರಾಜ್ ವಿರುದ್ಧ ಕಾರ್ತಿಕ್ ಕಿಡಿ
ಇಂಗ್ಲೆಂಡ್ ತಂಡ ಇನಿಂಗ್ಸ್‌ನಲ್ಲಿ ಹ್ಯಾರಿ ಬ್ರೂಕ್ ಅವರ ಕ್ಯಾಚ್ ಅನ್ನು ಕೈಚೆಲ್ಲಿದ ಮೊಹಮ್ಮದ್ ಸಿರಾಜ್ ಅವರ ವಿರುದ್ದವೂ ದಿನೇಶ್ ಕಾರ್ತಿಕ್ ಬೇಸರ ವ್ಯಕ್ತಪಡಿಸಿದ್ದಾರೆ. 19 ರನ್ ಇದ್ದ ವೇಳೆ ಬ್ಯಾಟ್ ಮಾಡುತ್ತಿದ್ದಾಗ ಹ್ಯಾರಿ ಬ್ರೂಕ್ ಸಿಕ್ಸರ್‌ಗೆ ಬಲವಾಗಿ ಹೊಡೆದಿದ್ದರು. ಆದರೆ, ಬೌಂಡರಿ ಲೈನ್ ಬಳಿಕ ಸಿರಾಜ್ ಕ್ಯಾಚ್ ಪಡೆದು ಲೈನ್ ಅನ್ನು ತುಳಿದಿದ್ದರು. ಇದರ ಲಾಭ ಪಡೆದ ಬ್ರೂಕ್ ಅಂತಿಮವಾಗಿ 98 ಎಸೆತಗಳಲ್ಲಿ 111 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಭಾರತ ತಂಡ ಹಿನ್ನಡೆ ಅನುಭವಿಸಿತ್ತು.
"ಸಿರಾಜ್ ಹಾಗೂ ಪ್ರಸಿಧ್ ತಮ್ಮ ಹೃದಯದಿಂದ ಬೌಲ್ ಮಾಡಿದ್ದರು, ಇದರಲ್ಲಿ ಯಾವುದೇ ಅನುಮಾನವಿಲ್ಲ. ಮೊಹಮ್ಮದ್ ಸಿರಾಜ್ ಕ್ಯಾಚ್ ಕೈಚೆಲ್ಲಿದ್ದು, ಅತ್ಯಂತ ನಿರ್ಣಾಯಕ ಸನ್ನುವೇಶವಾಗಿತ್ತು. ಆ ಓವರ್ ಆರಂಭವಾಗುವ ಮುನ್ನ ಅವರು ಮೈದಾನಕ್ಕೆ ಬಂದಿದ್ದರೆ, ಮಸಾಜ್ ಮಾಡುವವರು ಅವರ ಹಿಂದೆ ನಿಂತಿದ್ದರು, ಅರ್ಷದೀಪ್ ಸಿಂಗ್ ಮೂಲೆಯಲ್ಲಿ ನಿಂತಿದ್ದರು, ಬಹುಶಃ ಅವರು ಸುಮ್ಮನಿದ್ದರು ಹಾಗೂ ಅವರು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಸಿರಾಜ್ ಕ್ಯಾಚ್ ಪಡೆದಿದ್ದರೆಂದು ಭಾವಿಸಿ ಭಾರತ ತಂಡ ಸ್ವಲ್ಪ ಹಿಗ್ಗಿರುವುದನ್ನು ನೀವು ಬಹುತೇಕ ನೋಡಬಹುದು," ಎಂದು ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ.