ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಿಚ್‌ ಬಗ್ಗೆ ಗೌತಮ್‌ ಗಂಭೀರ್‌ ನೀಡಿದ್ದ ಸೂಚನೆಯನ್ನು ರಿವೀಲ್‌ ಮಾಡಿದ ಪಿಚ್‌ ಕ್ಯುರೇಟರ್‌!

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಜೂನ್‌ 20 ರಂದು ಆರಂಭವಾಗುವ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕಾದಾಟ ನಡೆಸಲಿವೆ. ಇಂಗ್ಲೆಂಡ್‌ ಕಂಡೀಷನ್ಸ್‌ ಬ್ಯಾಟಿಂಗ್‌ಗೆ ತುಂಬಾ ಕಠಿಣವಾಗಿದೆ. ಇದರ ನಡುವೆ ಟೀಮ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಪಿಚ್‌ ಬಗ್ಗೆ ನೀಡಿದ್ದ ಸಲಹೆಯನ್ನು ಕ್ಯುರೇಟರ್‌ ಜಾಶ್‌ ಮಾರ್ಡನ್‌ ಬಹಿರಂಗಪಡಿಸಿದ್ದಾರೆ.

ಪಿಚ್‌ ಕ್ಯುರೇಟರ್‌ಗಳಿಗೆ ಸಂದೇಶ ನೀಡಿರುವ ಗೌತಮ್‌ ಗಂಭೀರ್.

ಲೀಡ್ಸ್‌: ಶುಭ್‌ಮನ್‌ ಗಿಲ್‌ ನಾಯಕತ್ವದಲ್ಲಿ ಭಾರತ ತಂಡ ಜೂನ್‌ 20 ರಂದು ಇಂಗ್ಲೆಂಡ್‌ ವಿರುದ್ಧ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್‌ ಸರಣಿಗೆ (IND vs ENG) ಸಜ್ಜಾಗುತ್ತಿದೆ. ಆ ಮೂಲಕ 2025-27ರ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ (WTC 2025-27) ಅಭಿಯಾನವನ್ನು ಟೀಮ್‌ ಇಂಡಿಯಾ ಆರಂಭಿಸಲಿದೆ. ಈಗಾಗಲೇ ಟೀಮ್‌ ಇಂಡಿಯಾ, ಇಂಗ್ಲೆಂಡ್‌ಗೆ ತೆರಳಿದ್ದು, ಬೆಹನ್‌ಹ್ಯಾಮ್‌ನಲ್ಲಿ ಅಭ್ಯಾಸ ನಡೆಸುತ್ತಿದೆ. ಇಂಗ್ಲೆಂಡ್‌ ಕಂಡೀಷನ್ಸ್‌ಗೆ ತಕ್ಕಂತೆ ಪಿಚ್‌ಗಳನ್ನು ಅಭ್ಯಾಸಕ್ಕೆ ನೀಡಬೇಕೆಂದು ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ನಮಗೆ ಸಲಹೆ ನೀಡಿದ್ದರು ಎಂದು ಪಿಚ್‌ ಕ್ಯುರೇಟರ್‌ ಜಾಶ್‌ ಮಾರ್ಡನ್‌ ತಿಳಿಸಿದ್ದಾರೆ.

ರೆವ್‌ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಪಿಚ್‌ ಕ್ಯುರೇಟರ್‌ ಜಾಶ್‌ ಮಾರ್ಡನ್‌, ನಮಗೆ ಹೆಚ್ಚು ಫ್ಲ್ಯಾಟ್‌ ಅಲ್ಲದ ಹಾಗೂ ತುಂಬಾ ಹಸಿರಿನಿಂದ ಕೂಡಿರದ, ಉತ್ತಮ ಗುಣಮಟ್ಟದ ಪಿಚ್ ಬೇಕು. ಇದರಿಂದ ನಮಗೆ ಪಂದ್ಯಕ್ಕೆ ಉತ್ತಮ ತಯಾರಿ ನಡೆಸಲು ಸಾಧ್ಯವಾಗುತ್ತದೆ ಎಂದು ಗೌತಮ್‌ ಗಂಭೀರ್‌ ಸೇರಿದಂತೆ ಕೋಚಿಂಗ್‌ ಸಿಬ್ಬಂದಿ ಮೀಟಿಂಗ್‌ನಲ್ಲಿ ನಮಗೆ ತಿಳಿಸಿದ್ದರು ಎಂದು ಬೆಕನ್‌ಹ್ಯಾಮ್‌ ಪಿಚ್ ಕ್ಯುರೇಟರ್‌ ಜಾಶ್‌ ಮಾರ್ಡನ್‌ ತಿಳಿಸಿದ್ದಾರೆ.

IND vs ENG: ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಮಿಂಚಬಲ್ಲ ಭಾರತೀಯ ಆಟಗಾರರನ್ನು ಆರಿಸಿದ ಸೌರವ್‌ ಗಂಗೂಲಿ!

"ಹೌದು, ಗೌತಮ್ ಗಂಭೀರ್ ಮತ್ತು ಇತರರು ಸೇರಿದಂತೆ ಕೋಚಿಂಗ್ ಸಿಬ್ಬಂದಿ ತಮ್ಮ ಆಂತರಿಕ ಸಭೆಯ ನಂತರ ನಮ್ಮೊಂದಿಗೆ ಮಾತನಾಡಿದ್ದರು.ಅವರು ನಮಗೆ ನೀಡಿದ್ದ ಸಂದೇಶ ಸ್ಪಷ್ಟವಾಗಿತ್ತು. ಅದೇನೆಂದರೆ, ಫ್ಯಾಟ್‌ ಅಲ್ಲದ ಅಥವಾ ಹಸಿರಿನಿಂದ ಕೂಡಿರದ ಒಳ್ಳೆಯ ಪಿಚ್‌ ನಮಗೆ ಬೇಕು. ಪಂದ್ಯದ ತಯಾರಿಗೆ ಇದು ನೆರವು ನೀಡಬೇಕು, ಅಂಥಾ ಪಿಚ್‌ ನಮಗೆ ಅಗತ್ಯವಿದೆ. ಅವರು ಬ್ಯಾಟಿಂಗ್ ಡ್ರಿಲ್‌ಗಳಿಗೆ ಮಾತ್ರವಲ್ಲದೆ ಹೆಚ್ಚು ವಾಸ್ತವಿಕ ಪರಿಸ್ಥಿತಿಗಳನ್ನು ಬಯಸಿದ್ದರು. ಆದ್ದರಿಂದ ಹುಲ್ಲಿನ ಹೊದಿಕೆ, ನಿವ್ವಳ ಅಗಲ ಮತ್ತು ಉದ್ದದ ವಿಸ್ತರಣೆಗಳು ಸೇರಿದಂತೆ ಕೆಲ ಅಂಶಗಳನ್ನು ಸರಿಹೊಂದಿಸಿದ್ದೇವೆ. ಹಾಗಾಗಿ ಪಿಚ್‌ ಬಗೆಗಿನ ಪ್ರತಿಕ್ರಿಯೆ ಉತ್ತಮವಾಗಿದೆ," ಎಂದು ಪಿಚ್‌ ಕ್ಯುರೇಟರ್‌ ತಿಳಿಸಿದ್ದಾರೆ.

"ಇಲ್ಲಿನ ಮಣ್ಣು ಬ್ಯಾಟಿಂಗ್‌ಗೆ ಸ್ನೇಹಿಯಾಗಿದೆ. ಆದರೆ, ಇಲ್ಲಿನ ಪಿಚ್‌ ನೋಡಲು ಬಹುಶಃ ಒಣಗಿದ ಅಥವಾ ಫ್ಲ್ಯಾಟ್‌ ವಿಕೆಟ್‌ ರೀತಿ ಕಾಣಬಹುದು. ನಾವು ಇಲ್ಲಿನ ಹುಲ್ಲಿನ ಸಾಂಧ್ರತೆಯನ್ನು ನಿರ್ವಹಿಸಿದ್ದೇವೆ, ಹಾಗಾಗಿ ನೀವು ನೋಡಿದ ರೀತಿ ಹುಲ್ಲು ದಟ್ಟವಾಗಿಲ್ಲ. ಭಾರತ ಮತ್ತು ಆಸ್ಟ್ರೇಲಿಯಾ ಪ್ರಸ್ತುತ ಬಳಸುತ್ತಿರುವ ಪಿಚ್‌ಗಳು ನಮ್ಮ ಸಾಮಾನ್ಯ ಬಿಳಿ ಚೆಂಡಿನ ಮೇಲ್ಮೈಗಳಿಗಿಂತ ಸ್ವಲ್ಪ ಹೆಚ್ಚು ಹುಲ್ಲನ್ನು ಹೊಂದಿವೆ. ಇಲ್ಲಿನ ಪಿಚ್‌ ಸಮತೋಲನದಿಂದ ಕೂಡಿದೆ. ಕಂದು ಬಣ್ಣದ ಮೇಲ್ಮೈ ಇದ್ದರೂ ಸಹ, ಸರಿಯಾದ ಲೆನ್ತ್‌ಗಳನ್ನು ಹಾಕಿದರೆ ಸೀಮರ್‌ಗಳಿಗೆ ಪಿಚ್‌ ಸಾಕಷ್ಟು ಅವಧಿ ನೆರವು ನೀಡಲಿದೆ," ಎಂದು ಅವರು ಹೇಳಿದ್ದಾರೆ.

IND vs ENG: ಶುಭಮನ್‌ ಗಿಲ್‌ಗೆ ನಾಯಕತ್ವ ನೀಡಿರುವ ಬಗ್ಗೆ ಮೈಕಲ್‌ ವಾನ್‌ ಪ್ರತಿಕ್ರಿಯೆ!

ಇಂಗ್ಲೆಂಡ್ ಸರಣಿಗೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ರಿಷಭ್‌ ಪಂತ್ (ವಿ.ಕೀ ಮತ್ತು ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿ.ಕೀ), ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್‌ ಸಿರಾಜ್, ಪ್ರಸಿಧ್‌ ಕೃಷ್ಣ, ಆಕಾಶ್ ದೀಪ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್