ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs ENG: ʻಭಾರತ ತಂಡವನ್ನು ಮಣಿಸುತ್ತೇವೆʼ-ಹ್ಯಾರಿ ಬ್ರೂಕ್‌ ಎಚ್ಚರಿಕೆ!

2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸಲು ಪರಿಪೂರ್ಣ ಆಟ ಅಗತ್ಯವಿಲ್ಲ ಎಂದು ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಹೇಳಿದ್ದು, ಏಕತೆ ಹಾಗೂ ಆತ್ಮವಿಶ್ವಾಸವೇ ತಂಡದ ಶಕ್ತಿ ಎಂದಿದ್ದಾರೆ. ಅಲ್ಲದೆ ಭಾರತ ತಂಡವನ್ನು ಸೋಲಿಸುವ ವಿಶ್ವಾಸವಿದೆ ಎಂದಿದ್ದಾರೆ.

ಭಾರತ ತಂಡಕ್ಕೆ ಹ್ಯಾರಿ ಬ್ರೂಕ್‌ ವಾರ್ನಿಂಗ್‌!

ಮುಂಬೈ: ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ (ICC T20 World Cup 2026) ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಮತ್ತು ಆತಿಥೇಯ ಟೀಮ್ ಇಂಡಿಯಾವನ್ನು ಸೋಲಿಸಲು 'ಪರಿಪೂರ್ಣ ಆಟದ' ಅಗತ್ಯವಿಲ್ಲ ಎಂದು ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್‌ (Harry Brook) ಅತಿಯಾದ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 5ರಂದು ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಸುಮಾರು 30,000ಕ್ಕೂ ಹೆಚ್ಚು ಅಭಿಮಾನಿಗಳ ಸಮ್ಮುಖದಲ್ಲಿ ನಡೆಯಲಿರುವ ಈ ಹೈ ವೋಲ್ಟೇಜ್‌ ಸೆಮಿಫೈನಲ್‌ ಪಂದ್ಯದಲ್ಲಿ ಆತಿಥೇಯ ಭಾರತವನ್ನು ಮಣಿಸಲು ತಮ್ಮ ತಂಡ ಸಿದ್ಧವಾಗಿದೆ ಎಂದು ಬ್ರೂಕ್ ಹೇಳಿದ್ದಾರೆ.

ಸಂಜು ಸ್ಯಾಮ್ಸನ್ ನೆಟ್‌ವರ್ಥ್ ಎಷ್ಟು? ಆಸ್ತಿ, ಕಾರುಗಳು, ಐಪಿಎಲ್ ಸಂಬಳದ ಸಂಪೂರ್ಣ ಮಾಹಿತಿ!

ಪರಿಪೂರ್ಣ ಗೆಲುವು ನಮ್ಮದಾಗಿರಲಿಲ್ಲ: ಬ್ರೂಕ್‌

ಸೆಮಿಫೈನಲ್‌ ಸಲುವಾಗಿ ನಡೆದ ಪ್ರೀ-ಮ್ಯಾಚ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ರೂಕ್, "ಟೂರ್ನಿಯಲ್ಲಿ ಈವರೆಗೆ ನಾವು ಗೆದ್ದ ಪಂದ್ಯಗಳು ಯಾವುದೇ ರೀತಿ ಪರಿಪೂರ್ಣವಾಗಿರಲಿಲ್ಲ. ಆದರೂ ನಾವು ನಂಬಿಕೆಯಿಂದ ಮತ್ತು ಏಕತೆಯಿಂದ ಗೆಲುವು ಸಾಧಿಸಿದ್ದೇವೆ. ಕೆಲ ಪಂದ್ಯಗಳಲ್ಲಿ ಒತ್ತಡದ ಪರಿಸ್ಥಿತಿಯಲ್ಲಿಯೂ ನಾವು ಶಾಂತತೆಯನ್ನು ಕಾಪಾಡಿ ಮೇಲುಗೈ ಪಡೆದೆವು," ಎಂದಿದ್ದಾರೆ.

ತಂಡದ ಏಕತೆ, ಪರಸ್ಪರ ವಿಶ್ವಾಸ ಮತ್ತು ಕಠಿಣ ಕ್ಷಣಗಳಲ್ಲಿ ತೋರಿದ ತಾಳ್ಮೆಯೇ ಯಶಸ್ಸಿನ ಮೂಲ ಎಂದು ಅವರು ಅಭಿಪ್ರಾಯಪಟ್ಟರು.

ಒತ್ತಡದ ಸಂದರ್ಭದಲ್ಲೂ ತಾಳ್ಮೆಯ ಪ್ರದರ್ಶನ

ಇತ್ತೀಚಿನ ಪಂದ್ಯದಲ್ಲಿ ಕೊನೆಯ ಮೂರು ಓವರ್‌ಗಳಲ್ಲಿ 40 ರನ್‌ಗಳ ಅವಶ್ಯಕತೆ ಇರುವಾಗ ತಂಡದ ಆಟಗಾರರು ತೋರಿದ ತಾಳ್ಮೆ ಪ್ರಶಂಸನೀಯ ಎಂದು ಬ್ರೂಕ್ ಹೇಳಿದರು. ವಿಶೇಷವಾಗಿ ಕಳೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರು ವಿಲ್ ಜ್ಯಾಕ್ಸ್ ಮತ್ತು ರೆಹಾನ್ ಅಹ್ಮದ್ ನೀಡಿದ ಕೊಡುಗೆ ತಂಡದ ಗೆಲುವಿಗೆ ನಿರ್ಣಾಯಕ ಎನಿಸಿತು ಎಂದು ಉಲ್ಲೇಖಿಸಿದರು.

ಮೈಕಲ್‌ ಹೇಸನ್‌ ಬಗ್ಗೆ ಅಸಮಾಧಾನ, ಪಾಕಿಸ್ತಾನ ಆಯ್ಕೆ ಸಮಿತಿಯಿಂದ ಹೊರಬಂದ ಅಲೀಮ್‌ ದಾರ್‌!

ಬ್ರೂಕ್ ಫಾರ್ಮ್ ಮತ್ತು ಭಾರತದ ಸ್ಪಿನ್ ಸವಾಲು

ಹ್ಯಾರಿ ಬ್ರೂಕ್ ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿದ್ದು, ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಪರ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇದೆ. ಆದರೆ ಭಾರತ ವಿರುದ್ಧದ ಹಿಂದಿನ ಟಿ20 ಸರಣಿಯಲ್ಲಿ ಮಿಸ್ಟ್ರಿ ಸ್ಪಿನ್ನರ್ ವರುಣ್‌ ಚಕ್ರವರ್ತಿ ಅವರ ಸ್ಪಿನ್ ಬೌಲಿಂಗ್ ಬ್ರೂಕ್‌ಗೆ ತೊಂದರೆ ಉಂಟುಮಾಡಿತ್ತು. ಈ ಬಾರಿ ಅದಕ್ಕೆ ಸಿದ್ಧತೆ ಮಾಡಿಕೊಂಡಿರುವ ಬ್ರೂಕ್, ಸ್ಪಿನ್ ಸವಾಲನ್ನು ಸಮರ್ಥವಾಗಿ ಎದುರಿಸಿ ಹೆಚ್ಚಿನ ರನ್ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

IND vs ENG: ಔಟ್‌ ಅಫ್‌ ಫಾರ್ಮ್‌ ಅಭಿಷೇಕ್‌ ಶರ್ಮಾಗೆ ಮನೋಜ್‌ ತಿವಾರಿ ಮಹತ್ವದ ಸಲಹೆ!

ಕುತೂಹಲ ಕೆರಳಿಸಿರುವ ಸೆಮಿಫೈನಲ್

ಭಾರತದ ಬಲಿಷ್ಠ ತಂಡ ಹಾಗೂ ಇಂಗ್ಲೆಂಡ್‌ನ ಆತ್ಮವಿಶ್ವಾಸ – ಎರಡರ ನಡುವೆ ನಡೆಯಲಿರುವ ಈ ಸೆಮಿಫೈನಲ್ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಅನುಭವ ನೀಡಲಿದೆ. ಇಂಗ್ಲೆಂಡ್ ತಂಡ ಪರಿಪೂರ್ಣ ಆಟವಿಲ್ಲದಿದ್ದರೂ, ಒಗ್ಗಟ್ಟು ಮತ್ತು ಧೈರ್ಯದಿಂದ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದೆ. ಈ ಮಹತ್ವದ ಪಂದ್ಯದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.