ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs ENG: ಸೆಮಿಫೈನಲ್‌ಗೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸೂಚಿಸಿದ ಮೈಕಲ್‌ ವಾನ್‌!

Michael Vaughan on India's Playing XI: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಮಾರ್ಚ್‌ 5 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಮೊದಲನೇ ಸೆಮಿಫೈನಲ್‌ನಲ್ಲಿ ಕಾದಾಟ ನಡೆಸಲಿವೆ. ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌, ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಕುಲ್ದೀಪ್‌ ಯಾದವ್‌ಗೆ ಅವಕಾಶ ನೀಡಬೇಕೆಂದು ಸಲಹೆ ನೀಡಿದ್ದಾರೆ.

ಭಾರತ ತಂಡದಲ್ಲಿ ಕುಲ್ದೀಪ್‌ ಯಾದವ್‌ ಆಡಬೇಕೆಂದ ವಾನ್‌.

ಮುಂಬೈ: ಇಂಗ್ಲೆಂಡ್‌ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ಸೆಮಿಫೈನಲ್‌ ಪಂದ್ಯ ಮಾರ್ಚ್‌ 5 ರಂದು ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ನಿಮಿತ್ತ ಭಾರತ ತಂಡಕ್ಕೆ ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌ (Michael Vaughan) ಒಂದು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ Xiನಲ್ಲಿ ಕುಲ್ದೀಪ್‌ ಯಾದವ್‌ (Kuldeep Singh) ಅವರಿಗೆ ಅವಕಾಶ ನೀಡಬೇಕೆಂದು ವಾನ್‌ ಆಗ್ರಹಿಸಿದ್ದಾರೆ. ಏಕೆಂದರೆ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳ ಎದುರು ಲೆಗ್‌ ಸ್ಪಿನ್ನರ್‌ಗಳು ಉತ್ತಮ ದಾಖಲೆಯನ್ನು ಹೊಂದಿದ್ದಾರೆಂಬುದು ಅವರ ಅಭಿಪ್ರಾಯ.

ಈ ಟೂರ್ನಿಯ ಅವಧಿಯಲ್ಲಿ ಭಾರತ ತಂಡ ಬಹುತೇಕ ಸ್ಥಿರಗೊಂಡ ಬೌಲಿಂಗ್ ಸಂಯೋಜನೆಯನ್ನು ಅನುಸರಿಸಿದೆ. ಸ್ಪಿನ್ ವಿಭಾಗದಲ್ಲಿ ವರುಣ್‌ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ಅವರನ್ನು ಪ್ರಮುಖ ಆಯ್ಕೆಗಳಾಗಿ ಬಳಸಲಾಗಿದ್ದು, ಗುಂಪು ಹಂತದ ಪಂದ್ಯಗಳಲ್ಲಿ ವಾಷಿಂಗ್ಟನ್ ಸುಂದರ್ ಅವರನ್ನು ಆಡಿಲಾಗಿತ್ತು. ಸ್ಪಿನ್ನರ್‌ಗಳು ಪ್ರಮುಖ ವೇಗದ ಬೌಲರ್‌ಗಳಾದ ಜಸ್‌ಪ್ರೀತ್‌ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಅವರಿಗೆ ಉತ್ತಮ ಬೆಂಬಲವನ್ನು ನೀಡಿದ್ದಾರೆ.

T20 World Cup: 33 ಎಸೆತಗಳಲ್ಲಿ ಶತಕ ಬಾರಿಸಿ ಕ್ರಿಸ್‌ ಗೇಲ್‌ ದಾಖಲೆ ಮುರಿದ ಫಿನ್‌ ಆಲೆನ್‌!

ಆದರೆ ಕುಲ್‌ದೀಪ್ ಯಾದವ್ ಈ ಟೂರ್ನಿಯಲ್ಲಿ ಇದುವರೆಗೆ ಕೇವಲ ಒಂದೇ ಪಂದ್ಯದಲ್ಲಿ ಮಾತ್ರ ಆಡಿದ್ದಾರೆ. ಅವರು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡಿದ್ದು, ಅಲ್ಲಿ ಅವರು 14 ರನ್‌ ನೀಡಿ ಒಂದು ವಿಕೆಟ್‌ ಪಡೆದಿದ್ದರು. ಕ್ರಿಕ್‌ಬಜ್‌ನಲ್ಲಿ ಮಾತನಾಡಿದ ಮೈಕಲ್‌ ವಾನ್‌, ಎಡಗೈ ಲೆಗ್‌ ಸ್ಪಿನ್ನರ್ ಕುಲ್‌ದೀಪ್ ಯಾದವ್ ಇಂಗ್ಲೆಂಡ್ ಬ್ಯಾಟಿಂಗ್ ಲೈನ್‌ಅಪ್ ವಿರುದ್ಧ ಪ್ರಮುಖ ಆಯ್ಕೆಯಾಗಬಹುದು ಎಂದು ಹೇಳಿದ್ದಾರೆ.

ಕುಲ್ದೀಪ್‌ ಯಾದವ್‌ಗೆ ಮೈಕಲ್‌ ವಾನ್‌ ಬೆಂಬಲ

"ನಾನು ಕುಲ್‌ದೀಪ್ ಯಾದವ್ ಅವರನ್ನು ಆಡಿಸುತ್ತೇನೆ. ಹಲವು ವರ್ಷಗಳಿಂದ ಯಾವುದೇ ಫಾರ್ಮ್ಯಾಟ್‌ನಲ್ಲಾದರೂ ಕುಲ್‌ದೀಪ್ ಇಂಗ್ಲೆಂಡ್ ವಿರುದ್ಧ ಉತ್ತಮ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಅವರ ಬೌಲಿಂಗ್‌ ಅನ್ನು ಓದಲು ಸದಾ ಕಷ್ಟವಾಗುತ್ತಿದೆ. ಕೆಳಕ್ರಮದಲ್ಲಿ ನಿಮಗೆ ತಿಲಕ್ ವರ್ಮಾ ಅಥವಾ ಶಿವಂ ದುಬೆ ಬೇಕೇ? ಅದರ ಬದಲು, ಈ ಇಂಗ್ಲೆಂಡ್ ಬ್ಯಾಟಿಂಗ್ ಲೈನ್‌ಅಪ್ ವಿರುದ್ಧ ಎಡಗೈ ಲೆಗ್ ಸ್ಪಿನ್ನರ್‌ನ್ನು ಆಡಿಸುತ್ತೇನೆ. ಕುಲ್ದೀಪ್ ಫಾರ್ಮ್‌ನಲ್ಲಿ ಇದ್ದಾರೆಯೇ ಇಲ್ಲವೇ ಎಂಬುದು ನಮಗೆ ಗೊತ್ತಿಲ್ಲ, ಏಕೆಂದರೆ ಅವರು ಇನ್ನೂ ಹೆಚ್ಚು ಪಂದ್ಯಗಳನ್ನು ಆಡಿಲ್ಲ. ಆದರೆ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ವಿರುದ್ಧ ಅವರ ಬೌಲಿಂಗ್ ಭಾರತಕ್ಕೆ ಉತ್ತಮ ಹೊಂದಾಣಿಕೆಯಾಗಲಿದೆ,” ಎಂದು ಮೈಕಲ್‌ ವಾನ್‌ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

IND vs ENG: ʻಭಾರತ ತಂಡವನ್ನು ಮಣಿಸುತ್ತೇವೆʼ-ಹ್ಯಾರಿ ಬ್ರೂಕ್‌ ಎಚ್ಚರಿಕೆ!

“ಆದರೆ, ಗೌತಮ್ ಗಂಭೀರ್ ಅವರ ಹಿಂದಿನ ನಡೆ ನೋಡಿದರೆ ಸಾಮಾನ್ಯವಾಗಿ ಅವರು ಬ್ಯಾಟಿಂಗ್ ವಿಭಾಗವನ್ನು ಬಲಪಡಿಸುವುದನ್ನೇ ಇಷ್ಟಪಡುತ್ತಾರೆ. ಟಿ20 ತಂಡವನ್ನು ಅವರು 7, 8 ಮತ್ತು 9ನೇ ಕ್ರಮದಲ್ಲಿಯೂ ಬಲವಾದ ಬ್ಯಾಟಿಂಗ್ ಆಯ್ಕೆ ಇರುವಂತೆ ರೂಪಿಸುತ್ತಾರೆ. ಆದ್ದರಿಂದ ನಾನು ಹೇಳುತ್ತಿರುವುದು ಪ್ಲೇಯಿಂಗ್‌ Xiನಲ್ಲಿ ಬದಲಾವಣೆ ಬಹುಶಃ ನಡೆಯದೇ ಇರಬಹುದು. ಆದರೆ ಈ ಇಂಗ್ಲೆಂಡ್ ಬ್ಯಾಟಿಂಗ್ ಲೈನ್‌ಅಪ್ ವಿರುದ್ಧ ಕುಲ್‌ದೀಪ್ ಯಾದವ್ ಅವರನ್ನು ಆಡಿಸುವುದು ಪ್ರಯೋಜನಕಾರಿ ಆಯ್ಕೆಯಾಗಬಹುದು,” ಎಂದು ಅವರು ಹೇಳಿದರು.

ಇಂಗ್ಲೆಂಡ್ ವಿರುದ್ಧ ಆಡಿದ ತನ್ನ ಪಂದ್ಯಗಳಲ್ಲಿ ಕುಲ್ದೀಪ್‌ ಒಟ್ಟು 12 ಓವರ್‌ಗಳಲ್ಲಿ ಕೇವಲ 77 ರನ್‌ಗಳನ್ನು ನೀಡಿ, ಎಂಟು ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಎಕಾನಮಿ ರೇಟ್‌ 6.41ರಷ್ಟಿದೆ. ಬಲಗೈ ಬ್ಯಾಟ್ಸ್‌ಮನ್‌ಗಳಿಂದ ಚೆಂಡನ್ನು ಹೊರಗೆ ತಿರುಗಿಸುವ ಅವರ ವೈವಿಧ್ಯಮಯ ಬೌಲಿಂಗ್ ಮತ್ತು ಕೌಶಲಗಳು ಇತಿಹಾಸದಲ್ಲೇ ಇಂಗ್ಲೆಂಡ್‌ನ ಆಕ್ರಮಣಕಾರಿ ಬ್ಯಾಟಿಂಗ್ ಘಟಕಕ್ಕೆ ಸವಾಲಾಗಿ ಪರಿಣಮಿಸಿವೆ.