ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಜಸ್‌ಪ್ರೀತ್‌ ಬುಮ್ರಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆಂದ ಮೊಹಮ್ಮದ್‌ ಕೈಫ್‌!

ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಜಸ್‌ಪ್ರೀತ್‌ ಬುಮ್ರಾ ನಿರಂತರವಾಗಿ ದೈಹಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಅವರು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಬಹುದು ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ಕೈಫ್‌ ಭವಿಷ್ಯ ನುಡಿದಿದ್ದಾರೆ. ನಾಲ್ಕನೇ ಟೆಸ್ಟ್‌ ಮೂರನೇ ದಿನ ಒಂದೇ ಒಂದು ವಿಕೆಟ್‌ ಪಡೆಯಲು ಸಾಧ್ಯವಾಗಿರಲಿಲ್ಲ.

ಜಸ್‌ಪ್ರೀತ್‌ ಬುಮ್ರಾ ಟೆಸ್ಟ್‌ ಭವಿಷ್ಯದ ಬಗ್ಗೆ ಮೊಹಮ್ಮದ್‌ ಕೈಫ್‌ ಹೇಳಿಕೆ.

ಮ್ಯಾಂಚೆಸ್ಟರ್‌: ಭಾರತ ತಂಡದ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ (Jasprit Bumrah) ನಿರಂತರವಾಗಿ ದೈಹಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕಾರಣದಿಂದಲೇ ಜಸ್‌ಪ್ರೀತ್‌ ಬುಮ್ರಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಪರಿಣಾಮಕಾರಿಯಾಗಿ ಬೌಲ್‌ ಮಾಡಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮ ಟೀಮ್‌ ಇಂಡಿಯಾ ವೇಗಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಬಹುದು ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ (Mohammad Kaif) ಭವಿಷ್ಯ ನುಡಿದಿದ್ದಾರೆ. ಇಂಗ್ಲೆಂಡ್‌ ವಿರುದ್ದ ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ ಪಂದ್ಯದ (IND vs ENG) ಮೂರನೇ ದಿನ ಜಸ್‌ಪ್ರೀತ್‌ ಬುಮ್ರಾ ಅಷ್ಟೊಂದು ಪರಿಣಾಮಕಾರಿಯಾಗಿ ಕಂಡಿರಲಿಲ್ಲ. ಹಾಗಾಗಿ ಅವರು ಒಂದೇ ಒಂದು ವಿಕೆಟ್‌ ಕೂಡ ಪಡೆದಿರಲಿಲ್ಲ.

ಜಸ್‌ಪ್ರೀತ್‌ ಬುಮ್ರಾ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದುದ್ದಕ್ಕೂ ಗಾಯಗಳು ಸಮಸ್ಯೆಗಳನ್ನು ಎದುರಿಸಿದ್ದಾರೆ. ಇದರಲ್ಲಿ ಹೆಚ್ಚಿನ ಗಾಯಗಳು ಅವರ ಅಸಾಂಪ್ರದಾಯಿಕ ಬೌಲಿಂಗ್ ಶೈಲಿಗೆ ಸಂಬಂಧಿಸಿವೆ. ಇದು ಕನಿಷ್ಠ ರನ್-ಅಪ್ ಅನ್ನು ಒಳಗೊಂಡಿರುತ್ತದೆ ಮತ್ತು ಬೆನ್ನಿನ ಮೇಲೆ ಗಣನೀಯ ಒತ್ತಡವನ್ನುಂಟು ಮಾಡುತ್ತದೆ. ಇವರು ಸಾಕಷ್ಟು ಬಾರಿ ಗಾಯಕ್ಕೆ ತುತ್ತಾಗಿ ಕ್ರಿಕೆಟ್‌ನಿಂದ ದೂರ ಉಳಿದಿರುವ ಉದಾಹರಣೆಗಳಿವೆ.

IND vs ENG 4th Test: ಜೋ ರೂಟ್‌ ಶತಕ, ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಇಂಗ್ಲೆಂಡ್‌!

ಇಂಗ್ಲೆಂಡ್ ಪ್ರವಾಸದಲ್ಲಿ ಬುಮ್ರಾ ಭರವಸೆಯ ಆರಂಭವನ್ನು ಪಡೆದರು, ಆದರೆ ನಾಲ್ಕನೇ ಟೆಸ್ಟ್‌ನಲ್ಲಿ ಅವರ ಫಾರ್ಮ್ ಕುಸಿದಂತೆ ಕಾಣುತ್ತದೆ. ಮ್ಯಾಂಚೆಸ್ಟರ್‌ ಟೆಸ್ಟ್‌ನ ಮೂರನೇ ದಿನದ ಅಂತಿಮ ಅವಧಿಯಲ್ಲಿ ವೇಗಿ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗುತ್ತಿರುವುದು ಕಂಡುಬಂದಿದ್ದು, ಅವರ ದೈಹಿಕ ಸ್ಥಿತಿಯ ಬಗ್ಗೆ ಊಹಾಪೋಹಗಳಿಗೆ ಕಾರಣವಾಯಿತು. ಬೌಲಿಂಗ್ ಕೋಚ್ ಮೊರ್ನೆ ಮಾರ್ಕೆಲ್ ಬುಮ್ರಾ ಗಾಯಗೊಂಡಿಲ್ಲ ಎಂದು ಹೇಳಿದ್ದರೂ, ಪಂದ್ಯದಲ್ಲಿ ಅವರ ವೇಗದ ಕೊರತೆಯು ವಿಭಿನ್ನ ಕಥೆಯನ್ನು ಹೇಳುತ್ತದೆ. ಅವರು 140 ಕಿ.ಮೀ ಗಿಂತ ಹೆಚ್ಚು ವೇಗದಲ್ಲಿ ಕೇವಲ ಒಂದು ಎಸೆತವನ್ನು ಬೌಲ್ ಮಾಡಿದ್ದರು. ನಿಯಮಿತವಾಗಿ 140ಕ್ಕೂ ಹೆಚ್ಚಿನ ವೇಗದಲ್ಲಿ ಬೌಲ್‌ ಮಾಡುವ ಮೂಲಕ ಧೀಡರನೆ ಕುಸಿದರೆ ಎಲ್ಲರಿಗೂ ಅಚ್ಚರಿ ಆಗುವುದರಲ್ಲಿ ಸಂಶಯವೇ ಇಲ್ಲ.

ಜಸ್‌ಪ್ರೀತ್‌ ಬುಮ್ರಾ ಅವರ ದೈಹಿಕ ಪರಿಸ್ಥಿತಿಯನ್ನು ಗಮನಿಸಿದ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌, ಟೀಮ್‌ ಇಂಡಿಯಾ ವೇಗಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

IND vs ENG: ರಾಹುಲ್‌ ದ್ರಾವಿಡ್‌ ಬೆನ್ನಲ್ಲೆ ರಿಕಿ ಪಾಂಟಿಂಗ್‌ ದಾಖಲೆ ಮುರಿದ ಜೋ ರೂಟ್‌!

"ಮುಂಬರುವ ಟೆಸ್ಟ್ ಪಂದ್ಯಗಳಲ್ಲಿ ಜಸ್‌ಪ್ರೀತ್‌ ಬುಮ್ರಾ ಆಡದೇ ಇರಬಹುದು ಮತ್ತು ಅವರು ನಿವೃತ್ತಿ ಹೊಂದಬಹುದು ಎಂದು ನಾನು ಭಾವಿಸುತ್ತೇನೆ. ಅವರು ತಮ್ಮ ದೇಹದೊಂದಿಗೆ ಹೋರಾಡುತ್ತಿದ್ದಾರೆ, ನಿಧಾನವಾಗಿ ಬೌಲ್‌ ಮಾಡುತ್ತಿದ್ದಾರೆ ಮತ್ತು ಈ ಟೆಸ್ಟ್ ಪಂದ್ಯದಲ್ಲಿ ಯಾವುದೇ ವೇಗವನ್ನು ತೋರಿಸುತ್ತಿಲ್ಲ," ಎಂದು ಕೈಫ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ತಿಳಿಸಿದ್ದಾರೆ.

"ಜಸ್‌ಪ್ರೀತ್‌ ಬುಮ್ರಾ ಸ್ವತಂತ್ರ ವ್ಯಕ್ತಿ, ಒಂದು ವೇಳೆ ಅವರು ಶೇ 100 ರಷ್ಟು ಸಾಮರ್ಥ್ಯದಲ್ಲಿ ಬೌಲ್‌ ಮಾಡಲು ಸಾಧ್ಯವಾಗಿಲ್ಲವಾದರೆ, ಅವರಿಂದ ಭಾರತ ತಂಡವನ್ನು ಗೆಲ್ಲಿಸಲು ಸಾಧ್ಯವಾಗುವುದಿಲ್ಲ. ಅಂದರೆ ಅವರಿಂದ ವಿಕೆಟ್‌ ಪಡೆಯಲು ಸಾಧ್ಯವಿಲ್ಲ ಎಂದರ್ಥ. ಈಗ ಅವರೇ ನಿರಾಕರಿಸುತ್ತಿದಾರೆಂಬುದು ನನ್ನ ಭಾವನೆ," ಎಂದು ಮೊಹಮ್ಮದ್‌ ಕೈಫ್‌ ಎಚ್ಚರಿಕೆ ನೀಡಿದ್ದಾರೆ.

"ಮೊದಲು ರೋಹಿತ್‌ ಶರ್ಮಾ, ನಂತರ ವಿರಾಟ್‌ ಕೊಹ್ಲಿ ಹೋದರು ಮತ್ತು ಆರ್‌ ಅಶ್ವಿನ್ ಕೂಡ ಇಲ್ಲ. ಇದೀಗ ಬಹುಶಃ ಬುಮ್ರಾ ಕೂಡ ಇರಬಹುದು, ನೀವು ಅವರಿಲ್ಲದೆ ಟೆಸ್ಟ್ ಪಂದ್ಯಗಳನ್ನು ನೋಡಲು ಒಗ್ಗಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ," ಎಂದು ಹೇಳಿದ್ದಾರೆ.