ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs ENG: 200ನೇ ಒಡಿಐ ಪಂದ್ಯವನ್ನು ಆಡಿ ಆಂಗ್ಲರ ಪರ ಇತಿಹಾಸ ಬರೆದ ಜೋಸ್‌ ಬಟ್ಲರ್‌!

ಭಾರತ ವಿರುದ್ಧ ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದ ಇಂಗ್ಲೆಂಡ್‌ನ ಅನುಭವಿ ವಿಕೆಟ್‌ಕೀಪರ್-ಬ್ಯಾಟರ್ ಜೋಸ್ ಬಟ್ಲರ್ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಈ ಪಂದ್ಯವು ಅವರ ವೃತ್ತಿಜೀವನದ 200ನೇ ಏಕದಿನ ಪಂದ್ಯವಾಗಿದೆ. ಗವಇದರೊಂದಿಗೆ, ಇಂಗ್ಲೆಂಡ್ ಪರ 200 ಏಕದಿನ ಪಂದ್ಯಗಳನ್ನು ಆಡಿದ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಬಟ್ಲರ್ ಪಾತ್ರರಾಗಿದ್ದಾರೆ.

200ನೇ ಏಕದಿನ ಪಂದ್ಯವನ್ನು ಆಡಿದ ಜೋಸ್‌ ಬಟ್ಲರ್‌.

ಬರ್ಮಿಂಗ್‌ಹ್ಯಾಮ್‌: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ (IND vs ENG) ಮೊದಲ ಪಂದ್ಯ ಇಲ್ಲಿನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ಇಂಗ್ಲೆಂಡ್‌ನ ಅನುಭವಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್‌ ಜೋಸ್ ಬಟ್ಲರ್(Jos Buttler) ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಈ ಪಂದ್ಯ ಬಟ್ಲರ್ ಅವರ ವೃತ್ತಿಜೀವನದ 200ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಇದರೊಂದಿಗೆ, ಇಂಗ್ಲೆಂಡ್ ಪರ 200 ಏಕದಿನ ಪಂದ್ಯಗಳನ್ನು ಆಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಬಟ್ಲರ್ ಅವರ 200ನೇ ಏಕದಿನ ಪಂದ್ಯ ಜುಲೈ 14 ಎಂಬ ಐತಿಹಾಸಿಕ ದಿನಾಂಕದಂದೇ ಬಂದಿರುವುದು ವಿಶೇಷ. ಇಂದಿನಿಂದ ನಿಖರವಾಗಿ ಏಳು ವರ್ಷಗಳ ಹಿಂದೆ, 2019ರ ಜುಲೈ 14ರಂದು ಇಂಗ್ಲೆಂಡ್ ತಂಡ ಲಾರ್ಡ್ಸ್ ಮೈದಾನದಲ್ಲಿ ತನ್ನ ಇತಿಹಾಸದ ಮೊದಲ ಐಸಿಸಿ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿತ್ತು.

ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ರೋಚಕ ಹಾಗೂ ವಿವಾದಾತ್ಮಕ ಫೈನಲ್ ಪಂದ್ಯಗಳಲ್ಲಿ ಒಂದಾಗಿದ್ದ ಆ ಪಂದ್ಯದಲ್ಲಿ ಸೂಪರ್ ಓವರ್ ಕೂಡ ಟೈ ಆದ ಬಳಿಕ ಬೌಂಡರಿ ಕೌಂಟ್ ನಿಯಮದ ಆಧಾರದ ಮೇಲೆ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಪ್ರಶಸ್ತಿ ಗೆದ್ದಿತ್ತು. ಆ ಐತಿಹಾಸಿಕ ವಿಶ್ವಕಪ್ ವಿಜೇತ ತಂಡದ ಪ್ರಮುಖ ಸದಸ್ಯರಲ್ಲಿ ಜೋಸ್ ಬಟ್ಲರ್ ಕೂಡ ಒಬ್ಬರಾಗಿದ್ದರು.

ಆಂಡಿ ಫ್ಲವರ್‌ ಆರ್‌ಸಿಬಿ ತಂಡವನ್ನು ತೊರೆದು ಇಂಗ್ಲೆಂಡ್‌ಗೆ ಕೋಚ್‌ ಆಗ್ತಾರಾ? ಸ್ಪಷ್ಟನೆ ನೀಡಿದ ದಿನೇಶ್‌ ಕಾರ್ತಿಕ್!

ಇಯಾನ್ ಮಾರ್ಗನ್ ಬಳಿಕ ಎರಡನೇ ಆಟಗಾರ ಬಟ್ಲರ್

ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ 200 ಅಥವಾ ಅದಕ್ಕಿಂತ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ಹೆಗ್ಗಳಿಕೆ ಇದುವರೆಗೆ ಮಾಜಿ ನಾಯಕ ಇಯಾನ್ ಮಾರ್ಗನ್ ಅವರಿಗೆ ಮಾತ್ರ ಸೇರಿತ್ತು. ಮಾರ್ಗನ್ ಇಂಗ್ಲೆಂಡ್ ಪರ ಗರಿಷ್ಠ 225 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಜೋಸ್ ಬಟ್ಲರ್ 200 ಪಂದ್ಯಗಳ ಮೈಲಿಗಲ್ಲು ತಲುಪಿ, ಈ ಸಾಧನೆ ಮಾಡಿದ ಇಂಗ್ಲೆಂಡ್‌ನ ಎರಡನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ಮಾಜಿ ಆಲ್‌ರೌಂಡರ್ ಪಾಲ್ ಕಾಲಿಂಗ್‌ವುಡ್ ಮೂರನೇ ಸ್ಥಾನದಲ್ಲಿದ್ದು, ಅವರು ಇಂಗ್ಲೆಂಡ್ ಪರ 197 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 200 ಪಂದ್ಯಗಳೊಂದಿಗೆ ಬಟ್ಲರ್ ಇದೀಗ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ.



2012ರಲ್ಲಿ ಏಕದಿನ ಕ್ರಿಕೆಟ್‌ಗೆ ಬಟ್ಲರ್‌ ಪದಾರ್ಪಣೆ

ಜೋಸ್ ಬಟ್ಲರ್ ತಮ್ಮ ಏಕದಿನ ಕ್ರಿಕೆಟ್ ವೃತ್ತಿಜೀವನವನ್ನು 2012ರ ಫೆಬ್ರವರಿ 21ರಂದು ದುಬೈನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಆರಂಭಿಸಿದ್ದರು. ಕಳೆದ 14 ವರ್ಷಗಳ ಸುದೀರ್ಘ ಅವಧಿಯಲ್ಲಿ ಇಂಗ್ಲೆಂಡ್ ತಂಡವನ್ನು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅತ್ಯಂತ ಆಕ್ರಮಣಕಾರಿ ಮತ್ತು ಬಲಿಷ್ಠ ತಂಡವನ್ನಾಗಿ ರೂಪಿಸುವಲ್ಲಿ ಬಟ್ಲರ್ ಪ್ರಮುಖ ಪಾತ್ರ ವಹಿಸಿದ್ದಾರೆ.



ಭಾರತ ವಿರುದ್ಧದ ಈ ಮೊದಲ ಏಕದಿನ ಪಂದ್ಯಕ್ಕಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿಯೇ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿತ್ತು. ಇತ್ತೀಚೆಗೆ ಭಾರತ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ್ದ ಪ್ರಮುಖ ಆಟಗಾರರನ್ನೇ ಒಳಗೊಂಡ ತಂಡದ ಸಂಯೋಜನೆಯ ಮೇಲೆ ಇಂಗ್ಲೆಂಡ್ ಮತ್ತೊಮ್ಮೆ ವಿಶ್ವಾಸ ಇಟ್ಟಿದೆ.