ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಅನುಪಸ್ಥಿತಿ ಕಾಡುತ್ತಿದೆ ಎಂದ ಕೆಎಲ್‌ ರಾಹುಲ್!

KL Rahul on Virat kohli-Rohit sharma: ಇಂಗ್ಲೆಂಡ್‌ ವಿರುದ್ಧ ಐದನೇ ಟೆಸ್ಟ್‌ ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಕೆಎಲ್‌ ರಾಹುಲ್‌, ತಮ್ಮ ಮಾಜಿ ಸಹ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರನ್ನು ಸ್ಮರಿಸಿಕೊಂಡಿದ್ದಾರೆ. ಈ ಇಬ್ಬರ ಅನುಪಸ್ಥಿತಿ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಕಾಡುತ್ತಿದೆ ಎಂದು ಹೇಳಿದ್ದಾರೆ.

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾರನ್ನು ನೆನೆದ ಕೆಎಲ್‌ ರಾಹುಲ್‌.

ಲಂಡನ್‌: ವಿರಾಟ್‌ ಕೊಹ್ಲಿ (Virat Kohli) ಹಾಗೂ ರೋಹಿತ್‌ ಶರ್ಮಾ (Rohit sharma) ಅನುಪಸ್ಥಿತಿಯಲ್ಲಿ ಹಾಗೂ ಶುಭಮನ್‌ ಗಿಲ್‌ ನಾಯಕತ್ವದಲ್ಲಿ ಭಾರತ ತಂಡ, ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 2-2 ಡ್ರಾ ಸಾಧಿಸಿದೆ. ಆ ಮೂಲಕ ಉತ್ತಮ ಸಾಧನೆ ತೋರಿದೆ. ಅಂದ ಹಾಗೆ ಇಲ್ಲಿನ ಕೆನಿಂಗ್ಟನ್‌ ಓವಲ್‌ನಲ್ಲಿ ಸೋಮವಾರ ಅಂತ್ಯವಾದ ಐದನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಮೊಹಮ್ಮದ್‌ ಸಿರಾಜ್‌ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಕೇವಲ 6 ರನ್‌ ರೋಚಕ ಗೆಲುವು ಸಾಧಿಸಿತು. ಈ ಪಂದ್ಯದ ಬಳಿಕ ಮಾತನಾಡಿದ ಕನ್ನಡಿಗ ಕೆಎಲ್‌ ರಾಹುಲ್‌ (KL Rahul), ಟೆಸ್ಟ್‌ ತಂಡದ ಮಾಜಿ ಸಹ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರನ್ನು ಸ್ಮರಿಸಿಕೊಂಡಿದ್ದಾರೆ. ಇವರ ಅನುಪಸ್ಥಿತಿ ತಮಗೆ ಕಾಡಿದ ಬಗ್ಗೆ ರಾಹುಲ್‌ ಹೇಳಿದ್ದಾರೆ.

ಈ ಟೆಸ್ಟ್‌ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಬ್ಯಾಟ್ಸ್‌ಮನ್‌ಗಳ ಪೈಕಿ ಕೆಎಲ್‌ ರಾಹುಲ್ ಕೂಡ ಒಬ್ಬರು ಅವರು ಈ ಸರಣಿಯಲ್ಲಿ ಆಡಿದ ಐದು ಟೆಸ್ಟ್‌ ಪಂದ್ಯಗಳಿಂದ 532 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಇದರೊಂದಿಗೆ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರ ಅನುಪಸ್ಥಿತಿಯನ್ನು ನೀಗಿಸಿದ್ದಾರೆ.

IND vs ENG: ಒಂದು ಕೈಯಲ್ಲಿ ಬ್ಯಾಟಿಂಗ್‌ಗೆ ಬಂದು ಅಭಿಮಾನಿಗಳ ಹೃದಯ ಗೆದ್ದ ಕ್ರಿಸ್‌ ವೋಕ್ಸ್‌!

"ಒಮ್ಮೆ ಭಾರತ ತಂಡಕ್ಕೆ ಸೇರ್ಪಡೆಯಾದ ಬಳಿಕ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಹಾಗೂ ಆರ್‌ ಅಶ್ವಿನ್‌ ಅವರ ಅನುಪಸ್ಥಿತಿ ಕಾಡಿದೆ. ಡ್ರೆಸ್ಸಿಂಗ್‌ ರೂಂನಲ್ಲಿ ಅವರು ಕಾಣಿಸದರೆ ಇದ್ದಾಗ ನನಗೆ ಒಂದು ರೀತಿಯ ವಿಚಿತ್ರ ಎನಿಸಿತು. ಪ್ರತಿಯೊಬ್ಬರು ನನ್ನ ಬಳಿ ಬಂದು ಕಂಡೀಷನ್ಸ್‌ ಹೇಗಿದೆ ಎಂದು ಕೇಳಿದ್ದರು ಹಾಗೂ ಈ ವೇಳೆ ನನಗೆ ಹಿನ್ನಡೆಯಾಯಿತು. ಕಿರಿಯ ಹುಡುಗರಿಗೆ ಸಹಾಯ ಮಾಡಲು ಮತ್ತು ಎಲ್ಲಾ ಅನುಭವವನ್ನು ಬಳಸಿಕೊಳ್ಳಲು ಮತ್ತು ನಿಜವಾಗಿಯೂ ಈ ತಂಡಕ್ಕಾಗಿ ನಿಲ್ಲಲು ವಿಭಿನ್ನ ಪಾತ್ರಕ್ಕೆ ಕಾಲಿಟ್ಟಿದ್ದೇನೆ," ಎಂದು ಅವರು ಹೇಳಿದ್ದಾರೆ.



ಶುಭಮನ್‌ ಗಿಲ್‌ಗೆ ರಾಹುಲ್‌ ಮೆಚ್ಚುಗೆ

ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ಬಗ್ಗೆ ಮಾತನಾಡಿ,"ಶುಭಮನ್‌ ಗಿಲ್‌ ಅದ್ಭುತ. ಅವರು ಮುಂದೆ ನಿಂತು ತಡವನ್ನು ಮುನ್ನಡೆಸಿದ್ದಾರೆ. ಹುಡುಗರ ಜೊತೆ ಅವರು ನಿಜವಾಗಿಯೂ ಕಠಿಣ ಪರಿಶ್ರಮ ಪಟ್ಟಿದ್ದಾರೆ. ಅವರು ತಾಂತ್ರಿಕವಾಗಿ ತುಂಬಾ ಬಲಿಷ್ಠವಾಗಿದ್ದಾರೆ. ಅವರು ಬದಲಾವಣೆ ಮಾಡಿದಾಗಲೆಲ್ಲಾ ನಾವು ವಿಕೆಟ್‌ಗಳನ್ನು ಪಡೆದಿದ್ದೇವೆ. ಅವರು ಇನ್ನಷ್ಟು ಬೆಳೆಯಲಿದ್ದಾರೆ. ಅವರು ಇಲ್ಲಿ ತಂಡದ ನಾಯಕನಾಗಿದ್ದು, ಭಾರತ ಟೆಸ್ಟ್‌ ತಂಡವನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲಿದ್ದಾರೆ," ಎಂದು ಶ್ಲಾಘಿಸಿದ್ದಾರೆ.

IND vs ENG: ಈ ಎರಡು ಕಾರಣಗಳಿಂದ ಆಕಾಶ್‌ ದೀಪ್‌, ಮೊಹಮ್ಮದ್‌ ಸಿರಾಜ್‌ ವಿರುದ್ಧ ದಿನೇಶ್‌ ಕಾರ್ತಿಕ್‌ ಕಿಡಿ!

ಓವಲ್‌ ಟೆಸ್ಟ್‌ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿ, "ಅದು ಸಂಪೂರ್ಣವಾಗಿ ಎಲ್ಲವನ್ನೂ ಅರ್ಥೈಸುತ್ತದೆ. ನಾನು ಸ್ವಲ್ಪ ಸಮಯದಿಂದ ಕ್ರಿಕೆಟ್ ಆಡಿದ್ದೇನೆ. ನಾವು ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದ್ದೇವೆ. ಭಾರತ ವಿಶ್ವಕಪ್ ಎತ್ತಿ ಹಿಡಿದದ್ದನ್ನು ನಾನು ನೋಡಿದ್ದೇನೆ, ವಿಶ್ವಕಪ್ ಎತ್ತಿ ಹಿಡಿದಿದ್ದಕ್ಕೆ ಸಮನಾದದ್ದು ಯಾವುದೂ ಇಲ್ಲ. ಆದರೆ ಹಲವು ಅನುಮಾನಗಳು, ಟೆಸ್ಟ್ ಕ್ರಿಕೆಟ್ ಉಳಿಯುತ್ತದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಹಲವು ಪ್ರಶ್ನೆಗಳು. ನಾವು ಸರಣಿಯನ್ನು ಆಡಿದ ರೀತಿಯಲ್ಲಿ ಎರಡೂ ತಂಡಗಳು ಆ ಪ್ರಶ್ನೆಗೆ ಉತ್ತರಿಸಿವೆ ಎಂದು ನಾನು ಭಾವಿಸುತ್ತೇನೆ," ಎಂದು ಕೆಎಲ್‌ ರಾಹುಲ್‌ ತಿಳಿಸಿದ್ದಾರೆ.