ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗಾಯದ ಹೊರತಾಗಿಯೂ ಅರ್ಧಶತಕ ಬಾರಿಸಿದ ರಿಷಭ್‌ ಪಂತ್‌ಗೆ ಕ್ರಿಕೆಟ್‌ ದೇವರಿಂದ ಮೆಚ್ಚುಗೆ!

ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್‌ನ ಎರಡನೇ ದಿನದಾಟದ ಮೊದಲ ಸೆಷನ್​ನಲ್ಲಿ ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಔಟಾದ ನಂತರ ರಿಷಭ್ ಪಂತ್ ಗಾಯದ ಹೊರತಾಗಿಯೂ ಪುನಃ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದರು. ಪಂತ್ ತನ್ನ ಕಾಲಿನ ನೋವನ್ನು ಲೆಕ್ಕಿಸದೇ ಮೈದಾನಕ್ಕೆ ಬಂದು ತಂಡಕ್ಕೆ ಅರ್ಧಶತಕದ ಕೊಡುಗೆ ನೀಡಿದ್ದು ಎಲ್ಲರ ಗಮನ ಸೆಳೆಯಿತು. ಇದರ ನಡುವೆ ಭಾರತೀಯ ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡುಲ್ಕರ್‌ ತಮ್ಮ ಅಧೀಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿ ರಿಷಭ್‌ ಪಂತ್‌ ಅವರನ್ನು ಹಾಡಿ ಹೊಗಳಿದ್ದಾರೆ.

ಗಾಯದ ಹೊರತಾಗಿಯೂ ಅರ್ಧಶತಕ ಬಾರಿಸಿದ ಪಂತ್‌ಗೆ ಸಚಿನ್‌ ಮೆಚ್ಚುಗೆ.

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ವಿರುದ್ಧ ಇಲ್ಲಿನ ಓಲ್ಡ್‌ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ (IND vs ENG) ಭಾರತ ತಂಡ 358ಕ್ಕೆ ಮೊದಲ ಇನಿಂಗ್ಸ್‌ ಅನ್ನು ಮುಗಿಸಿದೆ. ಇನ್ನು ಪಂದ್ಯದ ವೇಳೆ 5ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ರಿಷಭ್‌ ಪಂತ್‌ (Rishabh Pant) ಆಂಗ್ಲ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸುತ್ತಿದ್ದರು. ಈ ನಡುವೆ ಕ್ರಿಸ್‌ ವೋಕ್ಸ್‌ ಎಸೆದ 68ನೇ ಓವರ್‌ನ 4ನೇ ಎಸೆತದಲ್ಲಿ ಪಂತ್‌ ರಿವರ್ಸ್‌ ಸ್ವೀಪ್‌ ಹೊಡೆಯಲು ಯತ್ನಿಸಿದರು. ಆದರೆ ಪಂತ್‌ ಪ್ರಯತ್ನ ವಿಫಲವಾದ ಕಾರಣ ಬಾಲ್‌ ನೇರವಾಗಿ ಪಾದಕ್ಕೆ ಬಡಿಯಿತು ಹಾಗೂ ಅವರ ಪಾದ ತೀವ್ರ ಗಾಯವಾಯಿತು.

ವೈದ್ಯಕೀಯ ಪರೀಕ್ಷೆಯಲ್ಲಿ ಪಂತ್‌ ಕಾಲಿನ ಬೆರಳು ಮುರಿದಿದ್ದು, ಆರು ವಾರಗಳ ಕಾಲ ವಿಶ್ರಾಂತಿಯ ಅಗತ್ಯವಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಪಂತ್‌ ಅಲಭ್ಯರಾಗುವುದು ಬಹುತೇಕ ಖಚಿತವಾಗಿತ್ತು. ಆದರೆ ಇದರ ಹೊರತಾಗಿಯೂ ಪಂದ್ಯದ ಎರಡನೇ ದಿನದಂದು ಕ್ರಿಕೆಟ್‌ ಅಭಿಮಾನಿಗಳು ಅಚ್ಚರಿ ಪಡುವ ಸಂಗತಿಯೊಂದು ನಡೆಯಿತು. ಗಾಯದಿಂದ ಮೈದಾನ ತೊರೆದು ಪೆವಿಲಿಯನ್‌ ಕಡೆ ಸಾಗಿದ್ದ ಪಂತ್, ಪುನಃ ಬ್ಯಾಟ್ ಹಿಡಿದು ನಿಧಾನವಾಗಿ ಮೆಟ್ಟಿಲುಗಳಿಂದ ಇಳಿದು ಬರುತ್ತಿದ್ದನ್ನು ಗಮನಿಸಿದ ಅಭಿಮಾನಿಗಳು ದಿಗ್ಭ್ರಮೆಗೊಂಡರು. ಈ ವೇಳೆ ಎಲ್ಲರೂ ಎದ್ದು ನಿಂತು ಜೋರಾದ ಚಪ್ಪಾಳೆ ತಟ್ಟುವ ಮೂಲಕ ಪಂತ್‌ಗೆ ಗೌರವ ಸಲ್ಲಿಸಿದರು.

IND vs ENG: ಭಾರತ ಟೆಸ್ಟ್‌ ತಂಡದಲ್ಲಿ ರಿಷಭ್‌ ಪಂತ್‌ ಸ್ಥಾನಕ್ಕೆ ಸೇರ್ಪಡೆಯಾದ ಎನ್‌ ಜಗದೀಶನ್‌!

ಎರಡನೇ ದಿನದಾಟದ ಮೊದಲ ಸೆಷನ್​ನಲ್ಲಿ ರವೀಂದ್ರ ಜಡೇಜಾ ಮತ್ತು ಶಾರ್ದುಲ್ ಠಾಕೂರ್ ಔಟಾದ ನಂತರ ರಿಷಭ್ ಪಂತ್ ಪುನಃ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದರು. ಪಂತ್ ತನ್ನ ಕಾಲಿನ ನೋವನ್ನು ಲೆಕ್ಕಿಸದೇ ಮೈದಾನಕ್ಕೆ ಬಂದು ತಂಡಕ್ಕೆ ಅರ್ಧಶತಕದ ಕೊಡುಗೆ ನೀಡಿದ್ದು ಎಲ್ಲರ ಗಮನ ಸೆಳೆಯಿತು. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡುಲ್ಕರ್‌ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿ ರಿಷಭ್‌ ಪಂತ್‌ ಅವರನ್ನು ಹಾಡಿ ಹೊಗಳಿದ್ದಾರೆ.



ರಿಷಭ್‌ ಪಂತ್‌ ಆಟವನ್ನು ಶ್ಲಾಘಿಸಿದ ಸಚಿನ್‌ ತೆಂಡೂಲ್ಕರ್‌

"ಸ್ಥಿತಿಸ್ಥಾಪಕತ್ವ ಎಂದರೆ ನೋವಿನ ನಡುವೆಯೂ ಆಟವಾಡಿ ಮೇಲೇರುವುದು. ರಿಷಭ್ ಪಂತ್ ಗಾಯದಿಂದ ಆಟಕ್ಕೆ ಮರಳುವ ಮೂಲಕ ಅದ್ಭುತ ವ್ಯಕ್ತಿತ್ವವನ್ನು ಪ್ರದರ್ಶಿಸಿದರು ಮತ್ತು ಅದ್ಭುತ ಪ್ರದರ್ಶನ ನೀಡಿದರು. ಅವರ ಅರ್ಧಶತಕ ನಿಮ್ಮ ದೇಶವನ್ನು ಪ್ರತಿನಿಧಿಸಲು ತೆಗೆದುಕೊಳ್ಳುವ ದೃಢನಿಶ್ಚಯ ಮತ್ತು ದೃಢಸಂಕಲ್ಪದ ಪ್ರಬಲ ಜ್ಞಾಪನೆಯಾಗಿದೆ. ಧೈರ್ಯಶಾಲಿ ಪ್ರಯತ್ನ ಮತ್ತು ದೀರ್ಘಕಾಲ ನೆನಪಿನಲ್ಲಿ ಉಳಿಯುವಂತಹದ್ದು. ಚೆನ್ನಾಗಿ ಆಡಿದೀರಿ. ರಿಷಭ್!," ಎಂದು ಸಚಿನ್‌ ತೆಂಡೂಲ್ಕರ್‌ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿ ಶ್ಲಾಘಿಸಿದ್ದಾರೆ.

IND vs ENG: ಅರ್ಧಶತಕ ಬಾರಿಸಿ ಎಂಎಸ್‌ ಧೋನಿ ದಾಖಲೆ ಮುರಿದ ರಿಷಭ್‌ ಪಂತ್!

ಗಾಯದ ಹೊರತಾಗಿಯೂ ವಿಶೇಷ ದಾಖಲೆ ಬರೆದ ಪಂತ್

ಪ್ರಸ್ತುತ ಸರಣಿಯಲ್ಲಿ ರಿಷಭ್‌ ಪಂತ್ ಅವರು ಐದನೇ ಬಾರಿ 50ಕ್ಕಿಂತ ಹೆಚ್ಚು ರನ್‌ ಗಳಿಸಿದ್ದಾರೆ. ಈ ಹಿಂದೆ 1972ರಲ್ಲಿ ಫಾರೂಕ್ ಇಂಜಿನಿಯರ್‌ ಇಂಗ್ಲೆಂಡ್ ವಿರುದ್ಧ ನಾಲ್ಕು ಅರ್ಧಶತಕಗಳನ್ನು ಸಿಡಿಸಿದ್ದರು. ಹಾಗೆಯೇ ಧೋನಿ 2008 ರಲ್ಲಿ ಆಸ್ಟ್ರೇಲಿಯಾ ಹಾಗೂ 2014ರಲ್ಲಿ ಇಂಗ್ಲೆಂಡ್‌ ವಿರುದ್ಧ ತಲಾ ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದರು. ಇದೀಗ ಪಂತ್‌ ಈ ದಾಖಲೆಗಳನ್ನು ಮುರಿದಿದ್ದಾರೆ. ಅಲ್ಲದೆ ಇಂಗ್ಲೆಂಡ್‌ ನೆಲದಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ಭಾರತೀಯ ವಿಕೆಟ್‌ ಕೀಪರ್‌ ಎನಿಸಿಕೊಂಡರು. ಆ ಮೂಲಕ 8 ಅರ್ಧಶತಕ ಸಿಡಿಸಿದ ಎಂಎಸ್‌ ಧೋನಿಯನ್ನು ಪಂತ್‌ (9 ಅರ್ಧಶತಕ) ಹಿಂದಿಕ್ಕಿದ್ದಾರೆ.

ಬರಹ: ಕೆ ಎನ್‌ ರಂಗು, ಚಿತ್ರದುರ್ಗ