ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs ENG: ʻಅದೇ ರಾಗ-ಅದೇ ತಾಳʼ-ಸೆಮಿಫೈನಲ್‌ನಲ್ಲಿಯೂ ಅಭಿಷೇಕ್‌ ಶರ್ಮಾ ಫ್ಲಾಪ್‌!

ಪ್ರಸ್ತುತ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ಬ್ಯಾಟಿಂಗ್‌ ವೈಫಲ್ಯ ಮುಂದುವರಿದಿದೆ. ಗುರುವಾರ ಇಂಗ್ಲೆಂಡ್‌ ವಿರುದ್ಧದ ಮೊದಲನೇ ಸೆಮಿಫೈನಲ್‌ನಲ್ಲಿಯೂ ಅಭಿಷೇಕ್‌ ಶರ್ಮಾ ವಿಫಲರಾದರು. ಅವರು ಆಡಿದ 7 ಎಸೆತಗಳಲ್ಲಿ 9 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

ಅಭಿಷೇಕ್‌ ಶರ್ಮಾ ಸೆಮಿಫೈನಲ್‌ನಲ್ಲಿಯೂ ವೈಫಲ್ಯ.

ನವದೆಹಲಿ: ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿಯೂ (IND vs ENG) ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ (Abhishek Sharma) ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಆ ಮೂಲಕ 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಯಲ್ಲಿ ಎಡಗೈ ಬ್ಯಾಟ್ಸ್‌ಮನ್‌ನ ವೈಫಲ್ಯ ಮುಂದುವರಿದಿದೆ. ಇದರಿಂದಾಗಿ ಕ್ರಿಕೆಟ್‌ ಅಭಿಮಾನಿಗಳು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅವರು ಈ ಇನಿಂಗ್ಸ್‌ನಲ್ಲಿ ಕೇವಲ 9 ರನ್‌ ಗಳಿಸಿದ ಬಳಿಕ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಟೀಮ್‌ ಮ್ಯಾನೇಜ್‌ಮೆಂಟ್‌ ಹಾಗೂ ಅಭಿಮಾನಿಗಳಿಗೆ ಭಾರಿ ನಿರಾಶೆಯನ್ನು ಮೂಡಿಸಿದರು.

ಗುರುವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಭಾರತದ ಪರ ಇನಿಂಗ್ಸ್‌ ಆರಂಭಿಸಿದ ಅಭಿಷೇಕ್‌ ಶರ್ಮಾ ನಿರಾಶೆ ಮೂಡಿಸಿದರು. ಅವರು ಆಡಿದ 7 ಎಸೆತಗಳಲ್ಲಿ 9 ರನ್‌ ಗಳಿಸಿದ ಬಳಿಕ ವಿಲ್‌ ಜ್ಯಾಕ್ಸ್‌ಗೆ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಎರಡನೇ ಓವರ್‌ನಲ್ಲಿಯೇ ಅವರು ತಮ್ಮ ವಿಕೆಟ್‌ ಕೈ ಚೆಲ್ಲಿದರು. ಇದರೊಂದಿಗೆ ಬಹಳಾ ನಿರಾಶೆಯೊಂದಿಗೆ ಪೆವಿಲಿಯನ್‌ಗೆ ಮರಳಿದರು.

IND vs ENG Semifinal: ಇಂಗ್ಲೆಂಡ್‌ ಎದುರು ಟಾಸ್‌ ಸೋತ ಭಾರತ ಮೊದಲ ಬ್ಯಾಟಿಂಗ್‌!

ಇಲ್ಲಿಯವರೆಗೂ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಿಂದ ಅಭಿಷೇಕ್‌ ಶರ್ಮಾ ಕಲೆ ಹಾಕಿದ್ದು ಕೇವಲ 85 ರನ್‌ಗಳು ಮಾತ್ರ. ಅವರು ಕೇವಲ 14.16ರ ಸರಾಸರಿ ಹಾಗೂ 132.81ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದ್ದಾರೆ. ಇದರಲ್ಲಿ ಅವರು ಒಂದು ಅರ್ಧಶತಕವನ್ನು ಬಾರಿಸಿದ್ದಾರೆ. ಅಂದ ಹಾಗೆ ಟೂರ್ನಿಯ ಆರಂಭಿಕ ಮೂರು ಪಂದ್ಯಗಳಲ್ಲಿ ಕ್ರಮವಾಗಿ ಯುಎಸ್‌ಎ, ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್‌ ವಿರುದ್ಧ ಹ್ಯಾಟ್ರಿಕ್‌ ಡಕ್‌ಔಟ್‌ ಆಗಿದ್ದರು.



ಕಳೆದ ವರ್ಷ ಇದೇ ಅಂಗಣದಲ್ಲಿ ಶತಕ ಬಾರಿಸಿದ್ದ ಅಭಿಷೇಕ್‌

ಕಳೆದ ವರ್ಷ ಭಾರತ ತಂಡ ಇದೇ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ್ದ ಸಮಯದಲ್ಲಿ ಅಭಿಷೇಕ್ ಶರ್ಮಾ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ 37 ಎಸೆತಗಳ ಮೂಲಕ ಸೆಂಚುರಿ ಬಾರಿಸಿದ್ದರು. ಈ ಪಂದ್ಯದಲ್ಲಿ ಅವರು ಒಟ್ಟಾರೆ ಆಡಿದ್ದ 54 ಎಸೆತಗಳಲ್ಲಿ 135 ರನ್‌ಗಳನ್ನು ಬಾರಿಸಿದ್ದರು. ಇದರಲ್ಲಿ ಅವರು ಆಡಿದ ಏಳು ಬೌಂಡರಿಗಳು ಮತ್ತು 13 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇವರ ಶತಕದ ಬಲದಿಂದ ಟೀಮ್‌ ಇಂಡಿಯಾ ಅಂದು 150 ರನ್‌ಗಳ ದೊಡ್ಡ ಜಯ ಪಡೆದಿತ್ತು. ಆದರೆ ಗುರುವಾರ, ಅವರು ಆ ಪ್ರದರ್ಶನವನ್ನು ಪುನರಾವರ್ತಿಸಲು ಸಾಧ್ಯವಾಗಲಿಲ್ಲ.

IND vs ENG: ಸೆಮಿಫೈನಲ್‌ಗೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸೂಚಿಸಿದ ಮೈಕಲ್‌ ವಾನ್‌!

253 ರನ್‌ ಕಲೆ ಹಾಕಿದ ಭಾರತ ತಂಡ

ಇನ್ನು ಈ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ ವೈಫಲ್ಯ ಅನುಭವಿಸಿದರೂ ಸಂಜು ಸ್ಯಾಮ್ಸನ್‌ (89 ರನ್‌), ಇಶಾನ್‌ ಕಿಶನ್‌ (34) ಹಾಗೂ ಶಿವಂ ದುಬೆ (43 ರನ್‌ ) ಅವರ ಸ್ಪೋಟಕ ಬ್ಯಾಟಿಂಗ್‌ ಮೂಲಕ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 253 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಇಂಗ್ಲೆಂಡ್‌ ತಂಡಕ್ಕೆ 254 ರನ್‌ಗಳ ಗುರಿಯನ್ನು ನೀಡಿತು.