ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs IRE: ಎರಡನೇ ಟಿ20ಐ ಪಂದ್ಯಕ್ಕೆ ಭಾರತ ತಂಡದಲ್ಲಿ 3 ಬದಲಾವಣೆ ಸಾಧ್ಯತೆ!

India's Playing Xi for 2nd T20I: ಭಾರತ ಹಾಗೂ ಐರ್ಲೆಂಡ್‌ ತಂಡಗಳ ನಡುವಣ ಎರಡು ಪಂದ್ಯಗಳ ಟಿ20ಐ ಸರಣಿ ಆಸಕ್ತದಾಯವಾಗಿದೆ. ಮೊದಲನೇ ಟಿ20ಐ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ 0-1 ಅಂತರದಲ್ಲಿ ಹಿನ್ನಡೆ ಅನುಭವಿಸಿರುವ ಭಾರತ ತಂಡ, ಇದೀಗ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಈ ಪಂದ್ಯಕ್ಕೆ ಭಾರತ ತಂಡದಲ್ಲಿ 3 ಬದಲಾವಣೆ ಮಾಡುವ ಸಾಧ್ಯತೆ ಇದೆ.

ಐರ್ಲೆಂಡ್‌ ಎದುರಿನ ಎರಡನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ.

ಬೆಲ್‌ಫಾಸ್ಟ್‌: ಭಾರತ ಹಾಗೂ ಐರ್ಲೆಂಡ್‌ ತಂಡಗಳ (IND vs IRE) ನಡುವಣ ಎರಡು ಪಂದ್ಯಗಳ ಟಿ20ಐ ಸರಣಿ ತೀವ್ರ ಕುತೂಹಲ ಕೆರಳಿಸಿದೆ. ಮೊದಲನೇ ಪಂದ್ಯದಲ್ಲಿ ಭಾರತ ತಂಡ 34 ರನ್‌ಗಳಿಂದ ಅಚ್ಚರಿ ರೀತಿಯಲ್ಲಿ ಸೋಲು ಅನುಭವಿಸಿತ್ತು. ಮತ್ತೊಂದು ಕಡೆ ಇದೇ ಮೊದಲ ಬಾರಿ ಭಾರತ ತಂಡವನ್ನು ಮಣಿಸಿರುವ ಐರ್ಲೆಂಡ್‌ ತಂಡ, ಎರಡನೇ ಪಂದ್ಯವನ್ನು ಟಿ20ಐ ಸರಣಿಯನ್ನು ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ. ಆದರೆ, ಶ್ರೇಯಸ್‌ ಅಯ್ಯರ್‌ (Shreyas Iyer) ನಾಯಕತ್ವದ ಟೀಮ್‌ ಇಂಡಿಯಾ ಸರಣಿ ಸೋಲಿನ ಮುಖಭಂಗದಿಂದ ತಪ್ಪಿಸಿಕೊಳ್ಳಲು ಯೋಜನೆಯನ್ನು ರೂಪಿಸುತ್ತಿದೆ. ಇದರ ನಡುವೆ ಭಾರತದ ಪ್ಲೇಯಿಂಗ್‌ Xiನಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಭಾರತದಂತಹ ವಿಶ್ವ ಚಾಂಪಿಯನ್ ತಂಡದ ವಿರುದ್ಧ ಐತಿಹಾಸಿಕ ಚೊಚ್ಚಲ ಜಯವನ್ನು ಆಚರಿಸಿದ ಐರ್ಲೆಂಡ್ ಈಗ ಸರಣಿಯನ್ನು ಗೆಲ್ಲುವ ಕನಸು ಕಾಣುತ್ತಿದೆ. 2022ರ ಆರಂಭದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಒಡಿಐ ಸರಣಿಯನ್ನು 2-1 ಅಂತರದಿಂದ ಸೋಲಿಸಿದ ನಂತರ ದ್ವಿಪಕ್ಷೀಯ ಕ್ರಿಕೆಟ್‌ನಲ್ಲಿ ಐರ್ಲೆಂಡ್‌ನ ಶ್ರೇಷ್ಠ ಸಾಧನೆ ಇದಾಗಬಹುದು. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್‌ XI ನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಬಹುದು.

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಹೊಸ ನಾಯಕ ಶ್ರೇಯಸ್ ಅಯ್ಯರ್ ಅವರ ತಂಡದ ಆಯ್ಕೆ ಮತ್ತು ಬೌಲಿಂಗ್ ರೊಟೇಶನ್ ತಂತ್ರವನ್ನು ಸಹ ಸೂಕ್ಷ್ಮವಾಗಿ ಪರಿಶೀಲಿಸಲಾಗುವುದು. ಹಿಂದಿನ ಪಂದ್ಯದಲ್ಲಿ ಇಬ್ಬರು ಬಲಗೈ ಐರಿಶ್ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿದ್ದರೂ, ಅಯ್ಯರ್ 16ನೇ ಓವರ್‌ನಲ್ಲಿ ಮಾತ್ರ ವಾಷಿಂಗ್ಟನ್ ಸುಂದರ್‌ಗೆ ಚೆಂಡನ್ನು ಹಸ್ತಾಂತರಿಸಿದರು; ಈ ನಡೆ ದುಬಾರಿಯಾಯಿತು ಮತ್ತು ಪಂದ್ಯದ ಹಾದಿಯನ್ನು ತಿರುಗಿಸಿತು.

IND vs IRE: ಮೊದಲನೇ ಪಂದ್ಯದಲ್ಲಿ ವಾಷಿಂಗ್ಟನ್‌ ಸುಂದರ್‌ ಪಾತ್ರವನ್ನು ಪ್ರಶ್ನಿಸಿದ ಆಕಾಶ್‌ ಚೋಪ್ರಾ!

ಸುಂದರ್ ಇತ್ತೀಚೆಗೆ ಐಪಿಎಲ್‌ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಪರ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದರು. ಆದರೆ ಭಾರತ ತಂಡದ ಅಗ್ರ ಕ್ರಮಾಂಕದಲ್ಲಿ ಅವರಿಗೆ ಸ್ಥಾನವಿಲ್ಲದ ಕಾರಣ ಅವರ ಪಾತ್ರದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಸಂದರ್ಭದಲ್ಲಿ ಸೂರ್ಯಾಂಶ್ ಶೆಡ್ಗೆ ಅವರನ್ನು ವಾಷಿಂಗ್ಟನ್‌ ಸುಂದರ್‌ ಅವರ ಸ್ಥಾನದಲ್ಲಿ ಆಡಿಸಬಹುದು.

ವೈಭವ್ ಸೂರ್ಯವಂಶಿಗೆ ಅವಕಾಶ ಸಿಗುತ್ತಾ?

ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಚೊಚ್ಚಲ ಪ್ರವೇಶ ಮಾಡುವ ಸಾಧ್ಯತೆ ಹೆಚ್ಚಿದೆ; ಅವರ ಸೇರ್ಪಡೆಯಿಂದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಗಳಾಗಬಹುದು. ಮೊದಲ ಪಂದ್ಯದಲ್ಲಿ 4 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿದ್ದ ಸಂಜು ಸ್ಯಾಮ್ಸನ್ ಬದಲಿಗೆ ವೈಭವ್ ತಂಡಕ್ಕೆ ಆಯ್ಕೆಯಾಗಬಹುದು.

ಪ್ರಿನ್ಸ್ ಯಾದವ್‌ಗೂ ಚಾನ್ಸ್‌?

ಗಾಯದ ಕಾರಣದಿಂದಾಗಿ ಟಿ20 ವಿಶ್ವಕಪ್ ಮತ್ತು ಐಪಿಎಲ್‌ ಟೂರ್ನಿಯಿಂದ ವಂಚಿತರಾಗಿದ್ದ ವೇಗಿ ಹರ್ಷಿತ್ ರಾಣಾ, ಮೊದಲ ಪಂದ್ಯದಲ್ಲಿ 24 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆಯುವ ಮೂಲಕ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದರು. ಜಸ್‌ಪ್ರೀತ್‌ ಬುಮ್ರಾ ಅನುಪಸ್ಥಿತಿಯಲ್ಲಿ ರಾಣಾ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಗುರಿಯನ್ನು ಹೊಂದಿದ್ದಾರೆ. ಇದರ ನಡುವೆ ಇತ್ತೀಚೆಗೆ ಐಪಿಎಲ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡುತ್ತಿರುವ ಪ್ರಿನ್ಸ್ ಯಾದವ್, ಪ್ರಸಿಧ್‌ ಕೃಷ್ಣ ಬದಲಿಗೆ ಟಿ20ಐ ಚೊಚ್ಚಲ ಪ್ರವೇಶ ಮಾಡುವ ಅವಕಾಶವನ್ನು ಪಡೆಯಬಹುದು.

2027ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ರೋಹಿತ್‌ ಶರ್ಮಾ ಆಡಲ್ಲ ಎಂದ ಸಂಜಯ್‌ ಮಾಂಜ್ರೇಕರ್‌!

ಎರಡನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

  1. ವೈಭವ್ ಸೂರ್ಯವಂಶಿ/ಸಂಜು ಸ್ಯಾಮ್ಸನ್‌)
  2. ಅಭಿಷೇಕ್ ಶರ್ಮಾ
  3. ಇಶಾನ್ ಕಿಶನ್ (ವಿಕೆಟ್ ಕೀಪರ್)
  4. ಶ್ರೇಯಸ್ ಅಯ್ಯರ್ (ನಾಯಕ)
  5. ತಿಲಕ್ ವರ್ಮಾ
  6. ಸೂರ್ಯಾಂಶ್ ಶೆಡ್ಗೆ/ವಾಷಿಂಗ್ಟನ್‌ ಸುಂದರ್‌
  7. ಶಿವಂ ದುಬೆ
  8. ಅಕ್ಷರ್ ಪಟೇಲ್
  9. ಅರ್ಷದೀಪ್ ಸಿಂಗ್
  10. ಹರ್ಷಿತ್ ರಾಣಾ
  11. ಪ್ರಿನ್ಸ್ ಯಾದವ್/ಪ್ರಸಿಧ್‌ ಕೃಷ್ಣ