ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

4 ವರ್ಷಗಳ ಬಳಿಕ ಭಾರತ ತಂಡದಲ್ಲಿ ಭುವನೇಶ್ವರ್‌ ಕುಮಾರ್‌ಗೆ ಚಾನ್ಸ್‌ ನೀಡಿದ್ದೇಕೆಂದು ತಿಳಿಸಿದ ಸಿತಾಂಶು ಕೊಟಕ್‌!

ನ್ಯೂಜಿಲೆಂಡ್‌ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯ ಭಾರತ ತಂಡದಲ್ಲಿ ಹಿರಿಯ ವೇಗಿ ಭುವನೇಶ್ವರ್‌ ಕುಮಾರ್‌ ಅವರಿಗೆ ಸ್ಥಾನ ನೀಡಿದ್ದೇಕೆಂದು ಟೀಮ್‌ ಇಂಡಿಯಾ ಸಹಾಯಕ ಕೋಚ್‌ ಸಿತಾಂಶು ಕೊಟಕ್‌ ಸ್ಪಷ್ಟನೆ ನೀಡಿದ್ದಾರೆ. 2022ರಲ್ಲಿ ಕೊನೆಯ ಬಾರಿ ಭಾರತ ತಂಡದ ಪರ ಭುವಿ ಆಡಿದ್ದರು.

ಭುವನೇಶ್ವರ್‌ ಕುಮಾರ್‌ ಆಯ್ಕೆಗೆ ಕಾರಣ ತಿಳಿಸಿದ ಸಿತಾಂಶು ಕೊಟಕ್‌.

ನವದೆಹಲಿ: ಭಾರತ ತಂಡ ಸದ್ಯ ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20ಐ ಸರಣಿಯಲ್ಲಿ (IND vs WI) ಆಡುತ್ತಿದೆ. ಎರಡನೇ ಪಂದ್ಯ ಅಕ್ಟೋಬರ್‌ 9 ರಂದು ನಡೆಯಲಿದೆ. ಈ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತ ತಂಡದ ಸಹಾಯಕ ಕೋಚ್‌ ಸಿತಾಂಶು ಕೊಟಕ್‌ (Sitanshu Kotak) ಅವರಿಗೆ ಭುವನೇಶ್ವರ್‌ ಕುಮಾರ್‌ (Bhuvneshwar Kumar) ಅವರ ಬಗ್ಗೆ ಪ್ರಶ್ನೆಗಳು ಎದುರಾದವು. ಹಿರಿಯ ವೇಗಿಗೆ ನಾಲ್ಕು ವರ್ಷಗಳ ಬಳಿಕ ಭಾರತ ತಂಡದಲ್ಲಿ ಅವಕಾಶ ನೀಡಲು ಕಾರಣವೇನೆಂದು ಬಹಿರಂಗಪಡಿಸಿದ್ದಾರೆ.

ಅಕ್ಟೋಬರ್‌ 22 ರಂದು ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಕಾದಾಟ ನಡಸಲಿದೆ. ಈ ಸರಣಿಗೆ ಭಾರತ ತಂಡದಲ್ಲಿ ಭುವನೇಶ್ವರ್‌ ಕುಮಾರ್‌ಗೆ ಅವಕಾಶವನ್ನು ನೀಡಲಾಗಿದೆ. ಇವರು 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭುವಿ ಕೊನೆಯ ಬಾರಿ ಆಡಿದ್ದರು. ಇದೀಗ ನಾಲ್ಕು ವರ್ಷಗಳ ಬಳಿಕ ಭಾರತ ತಂಡದಲ್ಲಿ ಭುವನೇಶ್ವರ್‌ ಕುಮಾರ್‌ ಮರಳಿದ್ದಾರೆ. ಅವರು 2025 ಹಾಗೂ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗಳಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಉತ್ತಮ ಪ್ರದರ್ಶನವನ್ನು ತೋರಿದ್ದರು ಹಾಗೂ ದೇಶಿ ಕ್ರಿಕೆಟ್‌ನಲ್ಲಿಯೂ ಸ್ಥಿರ ಪ್ರದರ್ಶನವನ್ನು ತೋರುತ್ತಿದ್ದರು. ಇದರ ಫಲವಾಗಿ ಅವರಿಗೆ ಭಾರತ ತಂಡದಲ್ಲಿ ಮರಳಿ ಸ್ಥಾನವನ್ನು ನೀಡಲಾಗಿದೆ.

ಭಾರತ ವಿರುದ್ಧದ ಸರಣಿಗೂ ಮುನ್ನವೇ ನ್ಯೂಜಿಲೆಂಡ್‌ಗೆ ಗಾಯದ ಸಮಸ್ಯೆ

ಅನುಭವದ ಕೊರತೆ ನೀಗಿಸಲು ಭುವಿಗೆ ಸ್ಥಾನ: ಸಿತಾಂಶು ಕೊಟಕ್

ಇಂಗ್ಲೆಂಡ್ ಪ್ರವಾಸದ ವೇಳೆ ಜಸ್‌ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಯುವ ವೇಗದ ಬೌಲರ್‌ಗಳು ಆಡಿದ್ದರಿಂದ ಅನುಭವದ ಮಹತ್ವ ಅರಿವಿಗೆ ಬಂತು ಎಂದು ಭಾರತ ತಂಡದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಹೇಳಿದ್ದಾರೆ. ಇದೇ ಕಾರಣದಿಂದ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ಮತ್ತೆ ತಂಡಕ್ಕೆ ಆಯ್ಕೆ ಮಾಡಿರುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಂಚಿಯಲ್ಲಿ ನಡೆದಿದ್ದ ಪಂದ್ಯದ ಪೂರ್ವ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಸಿತಾಂಶು ಕೊಟಕ್, “ಆಯ್ಕೆದಾರರ ನಿರ್ಧಾರದ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ನನ್ನ ಅಭಿಪ್ರಾಯದ ಆಧಾರದಲ್ಲಿ ಉತ್ತರ ನೀಡಬಹುದು. ಇಂಗ್ಲೆಂಡ್‌ನಲ್ಲಿ ಬುಮ್ರಾ ತಂಡದಲ್ಲಿ ಇರಲಿಲ್ಲ. ಅಲ್ಲದೆ, ಹಲವು ಯುವ ಬೌಲರ್‌ಗಳು ಆಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಅನುಭವವನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ವೈಯಕ್ತಿಕವಾಗಿ ನನಗೆ ಅನಿಸಿತ್ತು,” ಎಂದು ತಿಳಿಸಿದ್ದಾರೆ.

IND vs WI: ಎರಡನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌!

ಯುವ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ತಮ್ಮ ಸಾಮರ್ಥ್ಯದ ಆಧಾರದ ಮೇಲೆ ತಂಡಕ್ಕೆ ಆಯ್ಕೆಯಾಗುತ್ತಿದ್ದಾರೆ. ಆದರೆ ನಿರ್ದಿಷ್ಟ ಹಂತದಲ್ಲಿ ತಂಡಕ್ಕೆ ಅನುಭವಿ ಆಟಗಾರರ ಅಗತ್ಯವೂ ಇರುತ್ತದೆ ಎಂದು ಕೋಟಕ್ ಅಭಿಪ್ರಾಯಪಟ್ಟರು. ಭುವನೇಶ್ವರ್ ಕುಮಾರ್ ಅವರ ಪುನರಾಗಮನಕ್ಕೆ ಅನುಭವವೊಂದೇ ಕಾರಣವಲ್ಲ. ಕಳೆದ ಎರಡು ಐಪಿಎಲ್ ಋತುಗಳಲ್ಲಿ ಅವರು ನೀಡಿರುವ ಸ್ಥಿರ ಪ್ರದರ್ಶನವೂ ಆಯ್ಕೆಗೆ ಪ್ರಮುಖ ಕಾರಣವಾಗಿದೆ ಎಂದು ಕೊಟಕ್ ವಿವರಿಸಿದರು.

“ಅದು ಒಂದು ಕಾರಣವಾಗಿರಬಹುದು. ಮತ್ತೊಂದು ಪ್ರಮುಖ ಅಂಶವೆಂದರೆ, ಭುವನೇಶ್ವರ್ ಕಳೆದ ಎರಡು ಐಪಿಎಲ್ ಋತುಗಳಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಪ್ರದರ್ಶನವನ್ನು ತೋರಿದ್ದಾರೆ. ನ್ಯೂಜಿಲೆಂಡ್‌ನ ಪರಿಸ್ಥಿತಿಗಳನ್ನೂ ಗಮನದಲ್ಲಿಟ್ಟುಕೊಂಡು ಆಯ್ಕೆದಾರರು ನಿರ್ಧಾರ ಕೈಗೊಂಡಿರಬಹುದು. ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಮತ್ತು ತಂಡಕ್ಕೆ ಅನುಭವದ ಅಗತ್ಯವಿದೆ ಎಂದು ಆಯ್ಕೆದಾರರು ಭಾವಿಸಿರಬಹುದು,” ಎಂದು ಕೋಟಕ್ ಹೇಳಿದರು.

ಭಾರತ ತಂಡಕ್ಕೆ ಭುವನೇಶ್ವರ್‌ ಕುಮಾರ್‌ ಆಯ್ಕೆಯ ಬಗ್ಗೆ ಪ್ರತಿಕ್ರಿಯಿಸಿದ ಕಪಿಲ್‌ ದೇವ್‌!

ಒಟ್ಟಿನಲ್ಲಿ, ಯುವ ಬೌಲರ್‌ಗಳ ಪ್ರತಿಭೆಯ ಜೊತೆಗೆ ಅನುಭವಕ್ಕೂ ಆದ್ಯತೆ ನೀಡುವ ಉದ್ದೇಶದಿಂದ ಭುವನೇಶ್ವರ್ ಅವರನ್ನು ಮರಳಿ ತಂಡಕ್ಕೆ ಕರೆತಂದಿರಬಹುದು ಎಂಬ ಸುಳಿವನ್ನು ಕೋಟಕ್ ನೀಡಿದ್ದಾರೆ. ನ್ಯೂಜಿಲೆಂಡ್‌ನ ಪರಿಸ್ಥಿತಿಗಳಲ್ಲಿ ಅವರ ಸ್ವಿಂಗ್ ಬೌಲಿಂಗ್ ಹಾಗೂ ಅನುಭವ ಭಾರತ ತಂಡಕ್ಕೆ ನೆರವಾಗುವ ನಿರೀಕ್ಷೆಯಿದೆ.