ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: ಎರಡನೇ ಟಿ20ಐ ಪಂದ್ಯಕ್ಕೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ!

India's Probable Playing XI: ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಜನವರಿ 23ರಂದು ರಾಯ್ಪುರದ ಶಾಹೀದ್‌ ವೀರ್‌ ನಾರಯಣ್‌ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಮೊದಲನೇ ಪಂದ್ಯದಲ್ಲಿ ಗೆದ್ದಿದ್ದ ಭಾರತ ತಂಡ, ಇದೀಗ ಎರಡನೇ ಪಂದ್ಯದಲ್ಲಿಯೂ ಗೆಲ್ಲುವ ವಿಶ್ವಾಸವನ್ನು ಹೊಂದಿದೆ.

ನ್ಯೂಜಿಲೆಂಡ್‌ ವಿರುದ್ಧ ಎರಡನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ರಾಯ್ಪುರ: ನ್ಯೂಜಿಲೆಂಡ್‌ ವಿರುದ್ಧ ಮೊದಲನೇ ಪಂದ್ಯದಲ್ಲಿ (IND vs NZ) 48 ರನ್‌ಗಳಿಂದ ಗೆಲುವು ಪಡೆದಿದ್ದ ಭಾರತ ತಂಡ, ಇದೀಗ ಜನವರಿ 23 ರಂದು ಇಲ್ಲಿನ ಶಾಹೀದ್‌ ವೀರ್ ನಾರಯಣ್‌ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯುವ ಎರಡನೇ ಟಿ20ಐ ಪಂದ್ಯಕ್ಕೆ ಸಜ್ಜಾಗಿತ್ತಿದೆ. ಪ್ರಸ್ತುತ ಸೂರ್ಯಕುಮಾರ್‌ ಯಾದವ್‌ (Suryakumar Yadav) ನಾಯಕತ್ವದ ಟೀಮ್‌ ಇಂಡಿಯಾ ಇದೀಗ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ1-0 ಮುನ್ನಡೆಯನ್ನು ಪಡೆದಿದೆ. ಇದೀಗ ಎರಡನೇ ಟಿ20ಐ ಪಂದ್ಯದಲ್ಲಿಯೂ ಗೆಲ್ಲುವ ವಿಶ್ವಾಸವನ್ನು ಹೊಂದಿದೆ. ಅಂದ ಹಾಗೆ ಎರಡನೇ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XI (India's Playing XI) ಯಾವ ರೀತಿ ಇರಲಿದೆ ಎಂಬ ಬಗ್ಗೆ ಕುತೂಹಲವಿದೆ.

ಅಂದ ಹಾಗೆ ಭಾರತ ತಂಡ ಮೊದಲನೇ ಪಂದ್ಯದ ಗೆಲುವಿನ ಹೊರತಾಗಿಯೂ ತನ್ನ ಪ್ಲೇಯಿಂಗ್‌ XIನಲ್ಲಿ ಎರಡು ಬದಲಾವಣೆಯನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ದೀರ್ಘಾವಧಿ ಬಳಿಕ ಭಾರತ ಟಿ20ಐ ತಂಡಕ್ಕೆ ಮರಳಿದ್ದ ಇಶಾನ್‌ ಕಿಶನ್‌ ಮೊದಲನೇ ಪಂದ್ಯದಲ್ಲಿ ವಿಫಲರಾಗಿದ್ದರು. ಹಾಗಾಗಿ ಅವರ ಬದಲು ಶ್ರೇಯಸ್‌ ಅಯ್ಯರ್‌ಗೆ ಮೂರನೇ ಕ್ರಮಾಂಕದಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ. ರಾಯ್ಪುರ ಕ್ರೀಡಾಂಗಣದ ಪಿಚ್‌ ಸ್ಪಿನ್‌ ಸ್ನೇಹಿಯಾಗಿದೆ. ಹಾಗಾಗಿ ಹೆಚ್ಚುವರಿ ಸ್ಪಿನ್ನರ್‌ ಆಯ್ಕೆಗಾಗಿ ಶಿವಂ ದುಬೆ ಅವರ ಸ್ಥಾನಕ್ಕೆ ಕುಲ್ದೀಪ್‌ ಯಾದವ್‌ ಅಥವಾ ರವಿ ಬಿಷ್ಣೋಯ್‌ ಅವರಲ್ಲಿ ಒಬ್ಬರಿಗೆ ಸ್ಥಾನವನ್ನು ನೀಡಬಹುದು.

ಟಿ20ಯಲ್ಲಿ 9 ಸಾವಿರ ರನ್ ಪೂರೈಸಿದ ಸೂರ್ಯಕುಮಾರ್ ಯಾದವ್; ಈ ಸಾಧನೆಗೈದ 4ನೇ ಭಾರತೀಯ ಕ್ರಿಕೆಟಿಗ

ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಈ ಎರಡು ಸ್ಥಾನಗಳನ್ನು ಹೊರತುಪಡಿಸಿ ಇನ್ನುಳಿದ ಅದೇ ಆಟಗಾರರು ಆಡಲಿದ್ದಾರೆ. ಸಂಜು ಸ್ಯಾಮ್ಸನ್‌ ಹಾಗೂ ಅಭಿಷೇಕ್‌ ಶರ್ಮಾ ಇನಿಂಗ್ಸ್‌ ಆರಂಭಿಸಲಿದ್ದಾರೆ. ಸಂಜು ಬೇಗ ಔಟ್‌ ಆಗಿದ್ದರೂ ಅಭಿಷೇಕ್‌ ಕಳೆದ ಪಂದ್ಯದಲ್ಲಿ 35 ಎಸೆತಗಳಲ್ಲಿ 84 ರನ್‌ಗಳನ್ನು ಸಿಡಿಸಿದ್ದರು. ಮೂರನೇ ಕ್ರಮಂಕದಲ್ಲಿ ಇಶಾನ್‌ ಕಿಶನ್‌ ಅಥವಾ ಶ್ರೇಯಸ್‌ ಅಯ್ಯರ್‌ ಅವರಲ್ಲಿ ಒಬ್ಬರು ಆಡಬಹುದು. ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌ ಮುಂದುವರಿಯಲಿದ್ದಾರೆ. 5 ಮತ್ತು 6ನೇ ಕ್ರಮಾಂಕಗಳಲ್ಲಿ ಹಾರ್ದಿಕ್‌ ಪಾಂಡ್ಯ ಹಾಗೂ ರಿಂಕು ಸಿಂಗ್‌ ಆಡಲಿದ್ದಾರೆ.

ರಾಯ್ಪುರದಲ್ಲಿನ ಪಿಚ್‌ ಸ್ಪಿನ್ ಸ್ನೇಹಿಯಾಗಿದೆ. ಹಾಗಾಗಿ ಶಿವಂ ದುಬೆ ಅವರ ಸ್ಥಾನದಲ್ಲಿ ಹೆಚ್ಚುವರಿ ಸ್ಪಿನ್ನರ್‌ ಆಗಿ ಕುಲ್ದೀಪ್‌ ಯಾದವ್‌ ಅಥವಾ ರವಿ ಬಿಷ್ಣೋಯ್‌ಗೆ ಸ್ಥಾನ ನೀಡಬಹುದು. ವಿಶ್ವದ ನಂ 1 ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಸ್ಪಿನ್‌ ವಿಭಾಗವನ್ನು ಮುನ್ನಡೆಸಲಿದ್ದಾರೆ. ಉಪ ನಾಯಕ ಅಕ್ಷರ್‌ ಪಟೇಲ್‌ ಎರಡನೇ ಸ್ಪಿನ್ನರ್‌ ಆಗಿ ಆಡಲಿದ್ದಾರೆ. ಇನ್ನು ವೇಗದ ಬೌಲಿಂಗ್‌ ವಿಭಾಗದಲ್ಲಿ ಜಸ್‌ಪ್ರೀತ್‌ ಬುಮ್ರಾ ಹಾಗೂ ಅರ್ಷದೀಪ್‌ ಸಿಂಗ್‌ ಆಡಲಿದ್ದಾರೆ.

ಅಭಿಷೇಕ್‌ ಶರ್ಮ ಸ್ಫೋಟಕ ಅರ್ಧ ಶತಕ; ನ್ಯೂಜಿಲ್ಯಾಂಡ್‌ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಎರಡನೇ ಟಿ20ಐ ಪಂದ್ಯಕ್ಕೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI

ಭಾರತ: ಅಭಿಷೇಕ್‌ ಶರ್ಮಾ, ಸಂಜು ಸ್ಯಾಮ್ಸನ್‌ (ವಿಕೆಟ್‌ ಕೀಪರ್‌), ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌ ಯಾದವ್‌ (ನಾಯಕ), ಹಾರ್ದಿಕ್‌ ಪಾಂಡ್ಯ, ರಿಂಕು ಸಿಂಗ್‌, ಅಕ್ಷರ್‌ ಪಟೇಲ್‌ (ಉಪ ನಾಯಕ), ವರುಣ್‌ ಚಕ್ರವರ್ತಿ,ಕುಲ್ದೀಪ್‌ ಯಾದವ್‌/ರವಿ ಬಿಷ್ಣೋಯ್‌, ಜಸ್‌ಪ್ರೀತ್‌ ಬುಮ್ರಾ, ಅರ್ಷದೀಪ್‌ ಸಿಂಗ್‌

ನ್ಯೂಜಿಲೆಂಡ್‌: ಟಿಮ್‌ ರಾಬಿನ್ಸನ್‌, ಡೆವೋನ್‌ ಕಾನ್ವೇ (ವಿಕೆಟ್‌ ಕೀಪರ್‌), ರಚಿನ್‌ ರವೀಂದ್ರ, ಗ್ಲೆನ್‌ ಫಿಲಿಪ್ಸ್‌, ಮಾರ್ಕ್‌ ಚಾಪ್ಮನ್‌, ಡ್ಯಾರಿಲ್‌ ಮಿಚೆಲ್‌, ಮಿಚೆಲ್‌ ಸ್ಯಾಂಟ್ನರ್‌ (ನಾಯಕ), ಕ್ರಿಸ್ಟನ್‌ ಕ್ಲಾರ್ಕ್‌, ಕೈಲ್‌ ಜೇಮಿಸನ್‌, ಇಶ್‌ ಸೋಧಿ, ಜಾಕೋಬ್‌ ಡಫಿ