ನವದೆಹಲಿ: ಮೂರನೇ ಪಂದ್ಯ ಮಳೆಯಿಂದ ರದ್ದಾದ ಬಳಿಕ ಭಾರತ ಹಾಗೂ ನ್ಯೂಜಿಲೆಂಡ್ (IND vs NZ) ತಂಡಗಳು ನವೆಂಬರ್ 13 ರಂದು ಮೌಂಟ್ ಮೌಂಗನುಯಿಯ ಬೇ ಓವಲ್ನಲ್ಲಿ ನಡೆಯಲಿರುವ ನಾಲ್ಕನೇ ಏಕದಿನ ಪಂದ್ಯಕ್ಕೆ ಸಜ್ಜಾಗುತ್ತಿವೆ. ಮೂರನೇ ಪಂದ್ಯ ರದ್ದಾದರೂ ಆರಂಭಿಕ ಎರಡು ಪಂದ್ಯಗಳ ಗೆಲುವಿನ ಆಧಾರದ ಮೇಲೆ ಟೀಮ್ ಇಂಡಿಯಾ 2-0 ಮುನ್ನಡೆಯನ್ನು ಕಾಯ್ದುಕೊಂಡಿವೆ. ಇದೀಗ ಭಾರತ ತಂಡ ನಾಲ್ಕನೇ ಪಂದ್ಯವನ್ನು ಗೆದ್ದು ಏಕದಿನ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಆದರೆ, ಸರಣಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿಕೊಂಡಿರುವ ಕಿವೀಸ್ಗೆ ಸರಣಿಯನ್ನು ಸಮಬಲ ಸಾಧಿಸಲು ಕೊನೆಯ ಎರಡೂ ಪಂದ್ಯಗಳನ್ನು ಗೆಲ್ಲಬೇಕಾಗಿದೆ.
ಆತಿಥೇಯ ನ್ಯೂಜಿಲೆಂಡ್ ತಂಡ ಆರಂಭಿಕ ಎರಡು ಪಂದ್ಯಗಳನ್ನು ಸೋಲು ಒಪ್ಪಿಕೊಂಡಿತ್ತು. ಆದರೆ, ಮೂರನೇ ಪಂದ್ಯ ಟಾಸ್ ಹೊರತಾಗಿಯೂ ಒಂದೂ ಎಸೆತ ಕಾಣದೆ ಮಳೆಗೆ ಬಲಿಯಾಗಿತ್ತು. ಇದೀಗ ನ್ಯೂಜಿಲೆಂಡ್ ತಂಡಕ್ಕೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಎದುರಾಗಿದೆ. ಆದರೆ, ಕಿವೀಸ್ಗೆ ಗಾಯಾಳುಗಳ ಸಮಸ್ಯೆಯಿಂದ ಭಾರಿ ಹಿನ್ನಡೆಯನ್ನು ಅನುಭವಿಸಿದೆ. ಹಾಗಾಗಿ ನಾಲ್ಕನೇ ಪಂದ್ಯದಲ್ಲಿ ಯಾವ ಸಂಯೋಜನೆಯಿಂದ ಕಿವೀಸ್ ಕಣಕ್ಕೆ ಇಳಿಯಲಿದೆ ಎಂಬುದು ತೀವ್ರ ಕುತೂಹಲವನ್ನು ಮೂಡಿಸಿದೆ.
ಮೌಂಟ್ ಮೌಂಗನುಯಿಯಲ್ಲಿ ಭಾರತದ ಏಕದಿನ ದಾಖಲೆ ಏನು?
ಈ ಸರಣಿಯ ಆರಂಭಿಕ ಎರಡೂ ಪಂದ್ಯಗಳಲ್ಲಿ ಭಾರತ ತಂಡ, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರುತ್ತಿದೆ. ಮೊದಲನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕವನ್ನು ಬಾರಿಸಿದ್ದರು, ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಉಪಯುಕ್ತ ಕೊಡುಗೆಯನ್ನು ನೀಡಿದ್ದರು. ಇನ್ನು ಬೌಲಿಂಗ್ ವಿಭಾಗದಲ್ಲಿ ಗುರ್ನೂರ್ ಬ್ರಾರ್, ಅರ್ಷದೀಪ್ ಸಿಂಗ್ ಸೇರಿದಂತೆ ಬೌಲಿಂಗ್ ವಿಭಾಗ ಪರಿಣಾಮಕಾರಿಯಾಗಿ ಪ್ರದರ್ಶನವನ್ನು ತೋರುತ್ತಿದ್ದಾರೆ.
ಪಂದ್ಯದ ವಿವರ
ಭಾರತ vs ನ್ಯೂಜಿಲೆಂಡ್
ನಾಲ್ಕನೇ ಏಕದಿನ ಪಂದ್ಯ
ದಿನಾಂಕ: ನವೆಂಬರ್ 13, 2026
ಸಮಯ: ಬೆಳಿಗ್ಗೆ 07: 30ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ಬೇ ಓವಲ್, ಮೌಂಟ್ ಮೌಂಗನುಯಿ
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಸೋನಿ ಲಿವ್
ಬೇ ಓವಲ್ ಪಿಚ್ ರಿಪೋರ್ಟ್
ಇಲ್ಲಿನ ಬೇ ಓವಲ್ ಕ್ರೀಡಾಂಗಣದ ಪಿಚ್ ಫಾಸ್ಟ್ ಬೌಲರ್ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಬ್ಯಾಟ್ಸ್ಮನ್ಗಳು ಆರಂಭದಲ್ಲಿ ಸ್ವಲ್ಪ ಹೆಚ್ಚಿನ ಸಮಯವನ್ನು ತೆಗೆದುಕೊಂಡರೆ, ಉತ್ತಮ ರನ್ ಗಳಿಸಬಹುದು. ಆದರೆ, ಕಳೆದ ಐದು ಏಕದಿನ ಪಂದ್ಯಗಳ ಅಂಕಿಅಂಶಗಳನ್ನು ನೋಡಿದಾಗ, ಚೇಸಿಂಗ್ ತಂಡಗಳೇ ಇಲ್ಲಿನ ಕಂಡೀಷನ್ಸ್ನ ಲಾಭವನ್ನು ಪಡೆದಿದ್ದಾರೆ. ಶುಕ್ರವಾರ ಟಾಸ್ ಗೆದ್ದ ತಂಡದ ನಾಯಕ ಚೇಸಿಂಗ್ ಆಯ್ಕೆ ಮಾಡಿಕೊಳ್ಳಲು ಬಯಸುತ್ತಿದ್ದಾರೆ.
IND vs NZ: ಗಾಯಕ್ವಾಡ್, ಇಶಾನ್ ಇನ್; 4ನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
ಮುಖಾಮುಖಿ ದಾಖಲೆ
ಒಟ್ಟು ಆಡಿರುವ ಪಂದ್ಯಗಳು: 126 ಪಂದ್ಯಗಳು
ಭಾರತ ತಂಡದ ಗೆಲುವು: 65 ಪಂದ್ಯಗಳು
ನ್ಯೂಜಿಲೆಂಡ್ನ ಗೆಲುವು: 52 ಪಂದ್ಯಗಳು
ಫಲಿತಾಂಶವಿಲ್ಲ: 08
ಟೈ: 01
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ಭಾರತ: ಋತುರಾಜ್ ಗಾಯಕ್ವಾಡ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ನಮನ್ ಧೀರ್, ಆಕಿಬ್ ನಬಿ, ಗುರ್ನೂರ್ ಬ್ರಾರ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್
ನ್ಯೂಜಿಲೆಂಡ್: ಫಿನ್ ಆಲೆನ್, ಟಿಮ್ ಸೈಫರ್ಟ್ (ವಿಕೆಟ್ ಕೀಪರ್), ವಿಲ್ ಯಂಗ್, ಮಿಚೆಲ್ ಹೇ, ಮೈಕಲ್ ಬ್ರೇಸ್ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಡೀನ್ ಫಾಕ್ಸ್ಕ್ರಾಫ್ಟ್, ಕೈಲ್ ಜೇಮಿಸನ್, ಮ್ಯಾಟ್ ಹೆನ್ರಿ, ಜೇಕಬ್ ಡಫಿ