ನವದೆಹಲಿ: ಭಾರತ ವಿರುದ್ಧದ ಏಕದಿನ ಸರಣಿಯ (IND vs NZ) ಮುಂದಿನ ಮೂರು ಪಂದ್ಯಗಳಿಂದ ಬ್ಲೈರ್ ಟಿಕ್ನರ್ (Blair Tickner), ಲಾಕಿ ಫರ್ಗ್ಯೂಸನ್ ಅವರು ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಿಸ್ಟಿಯನ್ ಕ್ಲಾರ್ಕ್ ಅವರಿಗೆ ಏಕದಿನ ತಂಡದಲ್ಲಿ ಸ್ಥಾನವನ್ನು ನೀಡಲಾಗಿದ್ದು, ಬ್ಲೈರ್ ಟಿಕ್ನರ್ ಅವರ ಸ್ಥಾನಕ್ಕೆ ಮ್ಯಾಟ್ ಹೆನ್ರಿ ಅವರನ್ನು ಪ್ಲೇಯಿಂಗ್ XIನಲ್ಲಿ ಪರಿಗಣಿಸಬಹುದು. ಆರಂಭಿಕ ಎರಡೂ ಪಂದ್ಯಗಳನ್ನು ಸೋತು, ಸರಣಿಯನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿರುವ ಕಿವೀಸ್ಗೆ ಕೊನೆಯ ಮೂರು ನಿರ್ಣಾಯಕ ಪಂದ್ಯಗಳಿಗೆ ಗಾಯದ ಸಮಸ್ಯೆ ಭಾರಿ ತಲೆ ನೋವು ಉಂಟು ಮಾಡಿದೆ.
"ಎರಡನೇ ಏಕದಿನ ಪಂದ್ಯದ ವೇಳೆ ಬ್ಯಾಟ್ ಮಾಡುವಾಗ ತಲೆ ಚೆಂಡು ತಗುಲಿಸಿಕೊಂಡಿದ್ದ ಬ್ಲೈರ್ ಟಿಕ್ನರ್ ಅವರ ಸ್ಥಾನಕ್ಕೆ ಮೂರನೇ ಪಂದ್ಯಕ್ಕೆ ನಾರ್ಥೆರ್ನ್ ಜಿಲ್ಲೆಯ ವೇಗದ ಬೌಲರ್ ಕ್ರಿಸ್ಟಿಯನ್ ಕ್ಲಾರ್ಕ್ ಅವರಿಗೆ ಸ್ಥಾನವನ್ನು ನೀಡಲಾಗಿದೆ. ಟಿಕ್ನರ್ ಅವರು ಕನ್ಕಷನ್ ನಿಯಮದ ಅವಧಿಯನ್ನು ಪೂರ್ಣಗೊಳಿಸಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮೂರನೇ ಪಂದ್ಯದಲ್ಲಿ ಕಿವೀಸ್ ಪ್ಲೇಯಿಂಗ್ xiನಲ್ಲಿ ಅವರ ಸ್ಥಾನವನ್ನು ಮ್ಯಾಟ್ ಫಿಷರ್ ತುಂಬಲಿದ್ದಾರೆ. ಕನ್ಕಷನ್ ನಿಯಮದ ಪ್ರಕಾರ ಟಿಕ್ನರ್ ಅವರು ಏಳು ದಿನಗಳನ್ನು ಪೂರ್ಣಗೊಳಿಸಬೇಕಾಗುತ್ತದೆ," ಎಂದು ನ್ಯೂಜಿಲೆಂಡ್ ಕ್ರಿಕೆಟ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
2027ರಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ 627 ಕೋಟಿ ರು ನಷ್ಟ ಸಾಧ್ಯತೆ! ಇದಕ್ಕೆ ಬಲವಾದ ಕಾರಣ ಇಲ್ಲಿದೆ..
ಟಿ20ಐ ಸರಣಿಯ ವೇಳೆ ಗಾಯಕ್ಕೆ ತುತ್ತಾಗಿದ್ದ ಲಾಕಿ ಫರ್ಗ್ಯೂಸನ್ ಅವರು ಇನ್ನೂ ಚೇತರಿಸಿಕೊಳ್ಳುತ್ತಿದ್ದು, ಏಕದಿನ ಸರಣಿಯ ಇನ್ನುಳಿದ ಭಾಗದಿಂದ ಹೊರ ನಡೆದಿದ್ದಾರೆ. ಮ್ಯಾಟ್ ಹೆನ್ರಿ ಕೂಡ ಗಾಯದಿಂದ ಇನ್ನೂ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ತರಬೇತಿಯ ವೇಳೆ ಡೆವೋನ್ ಕಾನ್ವೆ ಅವರಿಗೆ ಮ್ಯಾಡ್ ಹೆನ್ರಿ ಹೊಡೆದಿದ್ದರು. ಹಾಗಾಗಿ ಮ್ಯಾಟ್ ಮೂರನೇ ಪಂದ್ಯದಲ್ಲಿ ವಿಶ್ರಾಂತಿ ಪಡೆದು, ನಾಲ್ಕನೇ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.
"ಲಾಕಿ ಫರ್ಗ್ಯೂಸನ್ ಅವರು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ, ಹಾಗಾಗಿ ಅವರು ನಾಲ್ಕು ಹಾಗೂ ಐದನೇ ಪಂದ್ಯಗಳಿಂದ ಹೊರ ನಡೆದಿದ್ದಾರೆ. ಟಿ20ಐ ಸರಣಿಯ ವೇಳೆ ಅವರು ಗಾಯಕ್ಕೆ ತುತ್ತಾಗಿದ್ದರು. ಆಕ್ಲೆಂಡ್ನಲ್ಲಿ ಡೆವೋನ್ ಕಾನ್ವೆ ಜೊತೆ ಡಿಕ್ಕಿ ಹೊಡೆದಿದ್ದ ಮ್ಯಾಟ್ ಹೆನ್ರಿ ಅವರು ಮೂರನೇ ಪಂದ್ಯಕ್ಕೆ ಅಲಭ್ಯರಾಗಿದ್ದು, ಅವರಿಗೆ ಮೂರನೇ ಪಂದ್ಯದಲ್ಲಿ ವಿಶ್ರಾಂತಿ ನೀಡಲು ಸೂಚನೆ ನೀಡಲಾಗಿದೆ ಹಾಗೂ ಅವರು ನಾಲ್ಕನೇ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ," ಎಂದು ನ್ಯೂಜಿಲೆಂಡ್ ಕ್ರಿಕೆಟ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿಯಿಂದ ರಜತ್ ಪಾಟಿದಾರ್ ಔಟ್, ರಿಂಕು ಸಿಂಗ್ಗೆ ಉಪ ನಾಯಕತ್ವ!
ನ್ಯೂಜಿಲೆಂಡ್ ತಂಡದಲ್ಲಿ ಬದಲಾವಣೆ
ಮೂರನೇ ಏಕದಿನ ಪಂದ್ಯದ ಬಳಿಕ ಮ್ಯಾಟ್ ಹೆನ್ರಿ ಹಾಗೂ ಕೈಲ್ ಜೇಮಿಸನ್ ಅವರು ಒಡಿಐ ತಂಡದಿಂದ ಹೊರ ನಡೆಯಲಿದ್ದಾರೆ ಹಾಗೂ ಟೆಸ್ಟ್ ಕ್ಯಾಂಪ್ಗೆ ಸೇರ್ಪಡೆಯಾಗಲಿದ್ದಾರೆ. ಹಾಗಾಗಿ ನಾಲ್ಕು ಹಾಗೂ ಐದನೇ ಪಂದ್ಯಗಳಿಗೆ ಈ ಇಬ್ಬರೂ ಅಲಭ್ಯರಾಗಲಿದ್ದಾರೆ. ಈ ಇಬ್ಬರ ಜೊತಿಗೆಗೆ ಟಾಮ್ ಲೇಥಮ್, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್ ಹಾಗೂ ನೇಥನ್ ಸ್ಮಿತ್ ಅವರು ಕೂಡ ಬುಧವಾರ ಹ್ಯಾಮಿಲ್ಟನ್ಗೆ ತೆರಳಲಿದ್ದು, ಐದನೇ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.
ಮೂರನೇ ಒಡಿಐಗೆ ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕಲ್ ಬ್ರೇಸ್ವೆಲ್, ಕ್ರಿಸ್ಟಿಯಾನ್ ಕ್ಲಾರ್ಕ್, ಜೇಕಬ್ ಡಫಿ, ಮ್ಯಾಟ್ ಫಿಷರ್, ಕೈಲ್ ಜೇಮಿಸನ್, ನಿಕ್ ಕೆಲ್ಲಿ, ಟಾಮ್ ಲೇಥಮ್, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಟಿಮ್ ಸೈಫರ್ಟ್, ನೇಥನ್ ಸ್ಮಿತ್, ವಿಲ್ ಯಂಗ್
ನಾಲ್ಕನೇ ಏಕದಿನ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಆಲೆನ್, ಮೈಕಲ್ ಬ್ರೇಸ್ವೆಲ್, ಕ್ರಿಸ್ಟಿಯಾನ್ ಕ್ಲಾರ್ಕ್, ಜೇಕಬ್ ಡಫಿ, ಮ್ಯಾಟ್ ಫಿಷರ್, ಡಿಯಾನ್ ಫಾಕ್ಸ್ಕ್ರಾಫ್ಟ್, ಮಿಚ್ ಹೇ, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ನಿಕ್ ಕೆಲ್ಲಿ, ಟೀಮ್ ಸೈಫರ್ಟ್, ವಿಲ್ ಯಂಗ್