ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: ಟಿ20 ವಿಶ್ವಕಪ್‌ ಫೈನಲ್‌ನಿಂದ ಅಭಿಷೇಕ್‌ ಶರ್ಮಾರನ್ನು ಕೈ ಬಿಡಬೇಕೆಂದ ಸುನೀಲ್‌ ಗವಾಸ್ಕರ್‌!

Sunil Gavasakar on Abhishek Sharma: ನ್ಯೂಜಿಲೆಂಡ್‌ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್‌ XIನಿಂದ ಅಭಿಷೇಕ್‌ ಶರ್ಮಾ ಅವರನ್ನು ಕೈ ಬಿಡಬೇಕೆಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಆಗ್ರಹಿಸಿದ್ದಾರೆ.

ಅಭಿಷೇಕ್‌ ಶರ್ಮಾಗೆ ಬೆಂಚ್‌ ಕಾಯಿಸಿ ಎಂದ ಗವಾಸ್ಕರ್‌.

ನವದೆಹಲಿ: ನ್ಯೂಜಿಲೆಂಡ್‌ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಫೈನಲ್ ಪಂದ್ಯದಲ್ಲಿ ಫಾರ್ಮ್ ಕಳೆದುಕೊಂಡಿರುವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ (Abhishek Sharma) ಅವರನ್ನು ಭಾರತ ತಂಡದ ಪ್ಲೇಯಿಂಗ್‌ XIನಿಂದ ಕೈ ಬಿಡಬೇಕೆಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್ ಗವಾಸ್ಕರ್ (Sunil Gavaskar) ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಸಲಹೆ ನೀಡಿದ್ದಾರೆ. ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿ ಕಾದಾಟದಲ್ಲಿ ಮುಖಾಮುಖಿಯಾಗಲಿವೆ. ಎಡಗೈ ಬ್ಯಾಟ್ಸ್‌ಮನ್‌ ಜಿಂಬಾಬ್ವೆ ಎದುರು ಅರ್ಧಶತಕ ಸಿಡಿಸಿದ್ದು ಬಿಟ್ಟರೆ ಇನ್ನುಳಿದ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ.

25ರ ವಯಸ್ಸಿನ ಅಭಿಷೇಕ್ ಶರ್ಮಾ ಅವರ ನೀರಸ ಪ್ರದರ್ಶನ ಸೆಮಿಫೈನಲ್ ಪಂದ್ಯದಲ್ಲೂ ಮುಂದುವರಿದಿತ್ತು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 7 ಎಸೆತಗಳಲ್ಲಿ 9 ರನ್ ಗಳಿಸಿ, ಎರಡನೇ ಓವರ್‌ನಲ್ಲಿ ವಿಲ್ ಜ್ಯಾಕ್ಸ್ ಅವರ ಬೌಲಿಂಗ್‌ಗೆ ಬಲಿಯಾದರು. ಈ ವಿಶ್ವಕಪ್‌ ಟೂರ್ನಿಯಲ್ಲಿ ಅವರು 0, 0, 0, 15, 55, 10 ಮತ್ತು 9 ರನ್‌ ಗಳಿಸಿದ್ದಾರೆ. ಒಟ್ಟು 89 ರನ್ ಮಾತ್ರ ಗಳಿಸಿದ್ದಾರೆ. ಅವರ ಸರಾಸರಿ ಕೇವಲ 12.71 ಆಗಿದೆ.

IND vs NZ: ʻಅಹಮದಬಾದ್‌ ಪ್ರೇಕ್ಷಕರನ್ನು ಮೌನಗೊಳಿಸುತ್ತೇವೆʼ-ಸ್ಯಾಂಟ್ನರ್‌ ಹೇಳಿಕೆಗೆ ಸೂರ್ಯ ತಿರುಗೇಟು!

ಅಭಿಷೇಕ್‌ ಶರ್ಮಾರನ್ನು ಕೈ ಬಿಡಿ ಎಂದ ಗವಾಸ್ಕರ್‌

“ಇದು ತುಂಬಾ ಕಠಿಣ ನಿರ್ಧಾರ. ಅಭಿಷೇಕ್ ಶರ್ಮಾ ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ನಂ.1 ಬ್ಯಾಟರ್ ಆಗಿದ್ದಾರೆ. ಆದರೆ ಅವರು ತಮ್ಮ ಔಟ್ ಆಗುವ ವಿಧಾನಗಳಿಂದ ಇನ್ನೂ ಪಾಠ ಕಲಿತಂತಿಲ್ಲ. ಅವರು ಪದೇ-ಪದೆ ಒಂದೇ ವಿಧಾನದಲ್ಲಿ ಔಟ್ ಆಗುತ್ತಿದ್ದಾರೆ. ಬೌಲರ್‌ಗಳು ಅದೇ ಜಾಗವನ್ನು ಗುರಿಯಾಗಿಸಿಕೊಂಡು ಅವರನ್ನು ತಪ್ಪು ಮಾಡಲು ಪ್ರೇರೇಪಿಸುತ್ತಿದ್ದಾರೆ. ನನ್ನ ಚಿಂತೆಯೇನೆಂದರೆ, ಅವರು ಇನ್ನೂ ತಮ್ಮ ಆಟವನ್ನು ಹೊಂದಿಸಿಕೊಳ್ಳಲಿಲ್ಲ ಅಥವಾ ತಮ್ಮ ಕಲ್ಪನೆಯನ್ನು ಬದಲಾಯಿಸಲು ಸಾಧ್ಯವಾಗುತ್ತಿಲ್ಲ,” ಎಂದು ಗವಾಸ್ಕರ್ ಇಂಡಿಯಾ ಟುಡೇಗೆ ಹೇಳಿದ್ದಾರೆ.

IND vs NZ: ʻಗೌತಮ್‌ ಗಂಭೀರ್‌ ಕೂಡ ಬ್ಯಾಟ್‌ ಮಾಡಲು ಸಿದ್ದʼ-ಸೂರ್ಯಕುಮಾರ್‌ ಅಚ್ಚರಿ ಹೇಳಿಕೆ!

ರಿಂಕು ಸಿಂಗ್‌ಗ ಚಾನ್ಸ್‌ ನೀಡಿ ಎಂದ ಸನ್ನಿ

ಅಭಿಷೇಕ್ ಶರ್ಮಾ ಬದಲಿಗೆ ರಿಂಕು ಸಿಂಗ್ ಅವರನ್ನು ಪ್ಲೇಯಿಂಗ್ ಇಲೆವೆನ್‌ಗೆ ಸೇರಿಸುವುದನ್ನು ಭಾರತ ತಂಡದ ಮ್ಯಾನೇಜ್‌ಮೆಂಟ್‌ ಪರಿಗಣಿಸಬೇಕು ಎಂದು ಗವಾಸ್ಕರ್ ಸಲಹೆ ನೀಡಿದರು. ಜೊತೆಗೆ, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್‌ ಮ್ಯಾನೇಜ್‌ಮೆಂಟ್‌, ಇಶಾನ್ ಕಿಶನ್ ಅವರನ್ನು ಸಂಜು ಸ್ಯಾಮ್ಸನ್ ಜೊತೆಗೆ ಇನಿಂಗ್ಸ್‌ ಆರಂಭಿಸಲು ಅವಕಾಶ ನೀಡಬೇಕೆಂದು ಅವರು ಸಲಹೆ ನೀಡಿದ್ದಾರೆ.

“ನಾನು ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಇನಿಂಗ್ಸ್ ಆರಂಭಿಸುವುದನ್ನು ನೋಡಲು ಇಷ್ಟಪಡುತ್ತೇನೆ. ರಿಂಕು ಸಿಂಗ್ ಅವರನ್ನು ತಂಡದಲ್ಲಿ ಸೇರಿಸಬಹುದು. ರಿಂಕುಗೆ ತನ್ನ ಮೇಲಿರುವ ನಂಬಿಕೆ ತುಂಬಾ ಹೆಚ್ಚು. ಅವರ ದೇಹದ ಮೇಲೆ ಇರುವ ‘God’s Plan’ ಟ್ಯಾಟೂವನ್ನು ನೀವು ನೋಡಿರಬಹುದು. ಕೆಲವೊಮ್ಮೆ ಇಂತಹ ಆಟಗಾರರಿಗೆ ಎಲ್ಲವೂ ಸರಿಯಾಗಿ ನಡೆಯುತ್ತದೆ,” ಎಂದು ಗವಾಸ್ಕರ್ ಅಭಿಪ್ರಾಯ ಪಟ್ಟರು.

T20 World Cup 2026: ಭಾರತದ ಪಂದ್ಯಗಳನ್ನು ನೋಡಲ್ಲ ಎಂದ ಮೊಹಮ್ಮದ್‌ ರಿಝ್ವಾನ್‌!

ಭಾರತದ ಮಾಜಿ ನಾಯಕ, ಬೌಲಿಂಗ್ ವಿಭಾಗದಲ್ಲೂ ಬದಲಾವಣೆ ಮಾಡುವಂತೆ ಸಲಹೆ ನೀಡಿದ್ದಾರೆ. ಫಾರ್ಮ್‌ನಲ್ಲಿ ಇಲ್ಲದ ಸ್ಪಿನ್ನರ್ ವರುಣ್ ಚಕ್ರವರ್ತಿ ಬದಲಿಗೆ ಎಡಗೈ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಫೈನಲ್ ಪಂದ್ಯಕ್ಕೆ ಆಡಿಸುವಂತೆ ತಂಡದ ನಿರ್ವಹಣೆಗೆ ಅವರು ಸೂಚಿಸಿದರು.