ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: ಎಂಟನೇ ಒಡಿಐ ಶತಕ ಸಿಡಿಸಿ ವಿಭಿನ್ನವಾಗಿ ಸಂಭ್ರಮಿಸಿದ ಕನ್ನಡಿಗ ಕೆಎಲ್‌ ರಾಹುಲ್!

KL Rahul Scored Century:ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌, ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ತಮ್ಮ ಒಡಿಐ ವೃತ್ತಿ ಜೀವನದ ಎಂಟನೇ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಭಾರತ ತಂಡ 284 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿತು.

ಎಂಟನೇ ಶತಕ ಬಾರಿಸಿ ವಿಭಿನ್ನ ರೀತಿಯಲ್ಲಿ ಸಂಭ್ರಮಿಸಿದ ಕೆಎಲ್‌ ರಾಹುಲ್!

ಎಂಟನೇ ಒಡಿಐ ಶತಕ ಬಾರಿಸಿದ ಕೆಎಲ್‌ ರಾಹುಲ್‌. -

Profile
Ramesh Kote Jan 14, 2026 6:26 PM

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ (IND vs NZ) ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ (KL Rahul) ಅದ್ಭುತ ಶತಕ ಗಳಿಸಿದರು. ಸೌರಾಷ್ಟ್ರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಹುಲ್ ಸಿಕ್ಸರ್‌ನೊಂದಿಗೆ ತಮ್ಮ ಎಂಟನೇ ಏಕದಿನ ಶತಕ ಪೂರ್ಣಗೊಳಿಸಿದರು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಬಹುಬೇಗ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಭಾರತ ತಂಡ (India) ಆರಂಭಿಕ ಆಘಾತಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಕೆಎಲ್ ರಾಹುಲ್ ಕಿವೀಸ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ತಮ್ಮ ಭಾರತ ತಂಡವನ್ನು ಅಪಾಯದಿಂದ ಪಾರು ಮಾಡಿದರು.

ಕೆಎಲ್ ರಾಹುಲ್ 49ನೇ ಓವರ್‌ನಲ್ಲಿ ಶತಕ ಪೂರೈಸಿದರು. ಕೈಲ್ ಜೇಮಿಸನ್ 49ನೇ ಓವರ್ ಬೌಲ್‌ ಮಾಡುತ್ತಿದ್ದರು. ರಾಹುಲ್ ತಮ್ಮ ಓವರ್‌ನ ಕೊನೆಯ ಎಸೆತದಲ್ಲಿ ಸ್ಟ್ರೈಕ್‌ನಲ್ಲಿದ್ದರು. ಜೇಮಿಸನ್ ಫುಲ್ ಟಾಸ್ ಎಸೆದರು. ರಾಹುಲ್ ಲಾಂಗ್ ಆನ್ ಮೇಲೆ ಅದ್ಭುತ ಸಿಕ್ಸ್ ಬಾರಿಸಿ ಶತಕವನ್ನು ಪೂರ್ಣಗೊಳಿಸಿದರು. ಅವರು ಆಡಿದ 87 ಎಸೆತಗಳಲ್ಲಿಯೇ ಮೂರಂಕಿ ವೈಯಕ್ತಿಕ ಮೊತ್ತವನ್ನು ಸೇರಿಸಿದರು.

IND vs NZ: ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ರ ಮತ್ತೊಂದು ದಾಖಲೆ ಮುರಿದ ವಿರಾಟ್‌ ಕೊಹ್ಲಿ!

ಅಜೇಯ112 ರನ್ ಗಳಿಸಿದ ಕೆಎಲ್‌ ರಾಹುಲ್‌

33ನೇ ವಯಸ್ಸಿನ ಕೆಎಲ್ ರಾಹುಲ್ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅಜೇಯ 112 ರನ್ ಗಳಿಸಿದರು. ಅವರು 92 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು. ಅವರ ಸ್ಟ್ರೈಕ್ ರೇಟ್ 121.74 ಆಗಿತ್ತು. ರಾಹುಲ್ ಅವರ ಶತಕ ನೆರವಿನಿಂದ ಟೀಮ್ ಇಂಡಿಯಾ ಹೋರಾಟದ ಮೊತ್ತವನ್ನು ತಲುಪಿತು. ಅವರು ತಮ್ಮ ಕೊನೆಯ 4 ಏಕದಿನ ಇನಿಂಗ್ಸ್‌ಗಳಲ್ಲಿ 2 ಅರ್ಧಶತಕ ಮತ್ತು ಒಂದು ಶತಕ ಗಳಿಸಿದ್ದಾರೆ.



ಕಿವೀಸ್‌ಗೆ 285 ರನ್ ಗುರಿ ನೀಡಿದ ಭಾರತ

ಟಾಸ್ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 284 ರನ್ ಗಳಿಸಿತು. ರಾಹುಲ್ ಶತಕದ ಜೊತೆಗೆ, ನಾಯಕ ಶುಭ್‌ಮನ್ ಗಿಲ್ ಕೂಡ ಅರ್ಧಶತಕ ಗಳಿಸಿ 56 ರನ್ ಗಳಿಸಿದರು. ನ್ಯೂಜಿಲೆಂಡ್ ಪರ ಕ್ರಿಶ್ಚಿಯನ್ ಕ್ಲಾರ್ಕ್ ಮೂರು ವಿಕೆಟ್ ಪಡೆದರು. ಕೈಲ್ ಜೇಮಿಸನ್, ಜಕಾರಿ ಫಾಕ್ಸ್, ಜೇಡನ್ ಲೆನಾಕ್ಸ್ ಮತ್ತು ಮೈಕೆಲ್ ಬ್ರೇಸ್‌ವೆಲ್ ತಲಾ ಒಂದೊಂದು ವಿಕೆಟ್ ಪಡೆದರು.

141 ರನ್‌ ಗಳಿಸಿರುವ ಕೆಎಲ್‌ ರಾಹುಲ್‌

ಕಿವೀಸ್‌ ಎದುರಿನ ಈ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಕೆಎಲ್‌ ರಾಹುಲ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದಾರೆ. ವಡೋದರದಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ 21 ಎಸೆತಗಳಲ್ಲಿ ಅಜೇಯ 29 ರನ್‌ಗಳನ್ನು ಕಲೆ ಹಾಕಿದ್ದರು. ಇದೀಗ 112 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ಈ ಸರಣಿಯಲ್ಲಿ ಎರಡು ಪಂದ್ಯಗಳ ಅಂತ್ಯಕ್ಕೆ 141 ರನ್‌ ಗಳಿಸಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.