IND vs NZ: ರವೀಂದ್ರ ಜಡೇಜಾರ ವೈಫಲ್ಯದ ಬಗ್ಗೆ ಮೊಹಮ್ಮದ್ ಸಿರಾಜ್ ಹೇಳಿದ್ದಿದು!
ನ್ಯೂಜಿಲೆಂಡ್ ಮತ್ತು ಭಾರತದ ನಡುವೆ ನಡೆಯುತ್ತಿರುವ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ರವೀಂದ್ರ ಜಡೇಜಾ ಲಯಕ್ಕೆ ಮರಳಲಿದ್ದಾರೆ ಎಂದು ವೇಗಿ ಮೊಹಮ್ಮದ್ ಸಿರಾಜ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿರುವ ಜಡೇಜಾ ಅವರ ಪರ ಸಿರಾಜ್ ಬ್ಯಾಟ್ ಬಿಸಿದ್ದು, ಅವರ ಪ್ರದರ್ಶನದ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದಿದ್ದಾರೆ.
ರವೀಂದ್ರ ಜಡೇಜಾಗೆ ಮೊಹಮ್ಮದ್ ಸಿರಾಜ್ ಬೆಂಬಲ. -
ನವದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಏಕದಿನ ಸರಣಿಯ (IND vs NZ) ಮೂರನೇ ಹಾಗೂ ಅಂತಿಮ ಪಂದ್ಯಕ್ಕೆ ಉಭಯ ತಂಡಗಳು ಸಿದ್ಧತೆ ನಡೆಸುತ್ತಿವೆ. ಸರಣಿಯಲ್ಲಿ ಎರಡೂ ತಂಡಗಳು 1-1 ಅಂತರದಲ್ಲಿ ಸಮಬಲ ಕಾಯ್ದುಕೊಂಡಿವೆ. ಈ ಹಿನ್ನೆಲೆಯಲ್ಲಿ ಮೂರನೇ ಪಂದ್ಯ ನಿರ್ಣಾಯಕವಾಗಿದ್ದು, ಭಾರತ ತಂಡ ತವರು ನೆಲದಲ್ಲಿ ಈ ಪಂದ್ಯವನ್ನು ಗೆದ್ದು ಸರಣಿ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಕಳೆದ ಎರಡೂ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿ ಹಲವರ ಅಸಮಾಧಾಮಕ್ಕೆ ಕಾರಣವಾಗಿರುವ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಆರಂಭಿಕ ಎರಡು ಪಂದ್ಯಗಳಲ್ಲಿ ಜಡೇಜಾ ಒಂದೇ ಒಂದು ವಿಕೆಟ್ ಕೂಡ ಪಡೆಯಲು ಸಾಧ್ಯವಾಗಿರಲಿಲ್ಲ. ಇತ್ತ ಬ್ಯಾಟಿಂಗ್‌ನಲ್ಲೂ ಕೂಡ ಎರಡು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 4 ಮತ್ತು 27 ರನ್ ಗಳಿಸಿದ್ದಾರೆ. ಈ ಹಿಂದೆ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಹಿಂದಿನ ಏಕದಿನ ಸರಣಿಯಲ್ಲೂ ಅವರು ಕೇವಲ ಒಂದು ವಿಕೆಟ್ ಪಡೆದಿದ್ದರು. ಇದು ವಿಶ್ವಕಪ್ ಟೂರ್ನಿಗೆ ಸಿದ್ಧತೆ ನಡೆಸುತ್ತಿರುವ ಭಾರತ ತಂಡದಲ್ಲಿ ಅವರ ಸ್ಥಾನದ ಬಗೆಗೆ ಕಳವಳವನ್ನು ಹುಟ್ಟುಹಾಕಿದೆ.
WPL 2026: ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 50 ವಿಕೆಟ್ ಪೂರ್ಣಗೊಳಿಸಿದ ಅಮೇಲಿಯಾ ಕೆರ್!
ಜಡೇಜಾ ಲಯಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ ಸಿರಾಜ್
ಇಂದೋರ್‌ನಲ್ಲಿ ನಡೆಯುವ ಮೂರನೇ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮೊಹಮ್ಮದ್ ಸಿರಾಜ್, "ಜಡೇಜಾ ಅವರ ಫಾರ್ಮ್ ಬಗ್ಗೆ ಯಾವುದೇ ಅನುಮಾನ ಇಲ್ಲ ಎಂದು ನಾನು ಭಾವಿಸುತ್ತೇನೆ. ಇದು ಕೇವಲ ಒಂದು ವಿಕೆಟ್‌ನ ವಿಷಯ. ನೀವು ಆ ಒಂದು ವಿಕೆಟ್ ಪಡೆದ ನಂತರ, ನೀವು ಸಂಪೂರ್ಣವಾಗಿ ವಿಭಿನ್ನ ಬೌಲರ್ ಅನ್ನು ನೋಡುತ್ತೀರಿ," ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ರಾಜಕೋಟ್‌ನ ಸೋಲಿನ ಕುರಿತು ಮಾತನಾಡಿದ ಸಿರಾಜ್, ನಾವು ಡ್ಯಾರಿಲ್ ಮಿಚೆಲ್ ಅವರ ಕ್ಯಾಚ್ ಕೈ ಚೆಲ್ಲಿದ ಕಾರಣ ಆ ಪಂದ್ಯದಲ್ಲಿ ನಮಗೆ ಹಿನ್ನಡೆಯಾಯಿತು. ಅವರು ಆ ಅವಕಾಶವನ್ನು ಬಳಸಿಕೊಂಡು ಅಜೇಯ 132 ರನ್ ಬಾರಿಸಿದರು. ಆದರೆ, ಕೆ ಎಲ್ ರಾಹುಲ್ ಹಾಗೂ ನಿತೀಶ್ ರೆಡ್ಡಿ ಅವರ ನಿರೀಕ್ಷಿತ ಪ್ರದರ್ಶನದಿಂದ ಪ್ರವಾಸಿ ತಂಡಕ್ಕೆ ಸವಾಲಿನ ಗುರಿ ನೀಡಲು ಸಾಧ್ಯವಾಯಿತು ಎಂದು ತಿಳಿಸಿದರು.
Under 19 World Cup: ಬಾಂಗ್ಲಾ ನಾಯಕನ ಜೊತೆ ಹ್ಯಾಂಡ್‌ಶೇಕ್ ಮಾಡಲು ನಿರಾಕರಿಸಿದ ಆಯುಷ್ ಮ್ಹಾತ್ರೆ!
"ಒಂದು ಅವಕಾಶವಿತ್ತು. ಕ್ಯಾಚ್ ಕೈಚೆಲ್ಲಿದಾಗ, ನಾವು ಆ ಅವಕಾಶವನ್ನು ಪಡೆದಿದ್ದರೆ, ಫಲಿತಾಂಶ ಬೇರೆಯೇ ಆಗುತ್ತಿತ್ತು. ವಿಶ್ವ ದರ್ಜೆಯ ಬ್ಯಾಟ್ಸ್‌ಮನ್‌ಗಳು ನಿಮಗೆ ಹೆಚ್ಚು ಅವಕಾಶಗಳನ್ನು ನೀಡುವುದಿಲ್ಲ ಮತ್ತು ಅವರಿಗೆ ಒಂದು ಅವಕಾಶ ಸಿಕ್ಕಾಗ, ಅವರು ಉತ್ತಮ ಪ್ರದರ್ಶನ ನೀಡುತ್ತಾರೆ," ಎಂದು ಅವರು ಹೇಳಿದರು.
ಇಂದೋರ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡದ ಬೌಲಿಂಗ್ ಸಂಯೋಜನೆಯ ಕುರಿತು ಮಾತನಾಡಿರುವ ಸಿರಾಜ್, ಅರ್ಷದೀಪ್ ಸಿಂಗ್ ತಂಡಕ್ಕೆ ಮರಳಬೇಕು ಎಂದಿದ್ದಾರೆ.
"ಅರ್ಷದೀಪ್ ತುಂಬಾ ಚೆನ್ನಾಗಿ ಬೌಲ್ ಮಾಡಿದ್ದಾರೆ ಮತ್ತು ಹೊಸ ಚೆಂಡಿನಲ್ಲಿ ವಿಕೆಟ್ ಪಡೆದಿದ್ದಾರೆ. ನಾಯಕ ಮತ್ತು ಕೋಚ್‌ಗಳು ಅದನ್ನು ನಿರ್ಧರಿಸುತ್ತಾರೆ. ಆದರೆ ಬೌಲರ್ ಆಗಿ, ಯಾರಾದರೂ ಇನ್ನೊಂದು ತುದಿಯಲ್ಲಿ ವಿಕೆಟ್ ಪಡೆಯುತ್ತಿದ್ದರೆ, ನನ್ನ ಕೆಲಸ ಒತ್ತಡವನ್ನು ಹೆಚ್ಚಿಸುವುದು ಮತ್ತು ರನ್ ನೀಡುವುದು ಅಲ್ಲ. ನನಗೆ ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ," ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.