ವಿರಾಟ್ ಕೊಹ್ಲಿ ಅಲ್ಲವೇ ಅಲ್ಲ! ಈ ಆಟಗಾರನೇ ಭಾರತೀಯ ಕ್ರಿಕೆಟ್‌ಗೆ ಮಿಸ್ಟರ್ ಕನ್ಸಿಸ್ಟಂಟ್ ಎಂದ ಅಶ್ವಿನ್!
ಪ್ರಸ್ತುತ ತವರಿನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಗೆಲುವು ದಾಖಲಿಸಿದೆ. ಈ ಪಂದ್ಯದ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸಿದ ವಿರಾಟ್ ಕೊಹ್ಲಿಯವರು ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಭರ್ಜರಿ ಫಾರ್ಮ್ ಮುಂದುವರಿಸಿದ್ದಾರೆ. ಇದರ ನಡುವೆ ಆರ್ ಅಶ್ವಿನ್, ಶ್ರೇಯಸ್ ಅಯ್ಯರ್ ಅವರನ್ನು 'ಮಿಸ್ಟರ್ ಕನ್ಸಿಸ್ಟಂಟ್' ಎಂದು ಬಣ್ಣಿಸಿದ್ದಾರೆ.
ಶ್ರೇಯಸ್ ಅಯ್ಯರ್‌ಗೆ ಆರ್ ಅಶ್ವಿನ್ ಮೆಚ್ಚುಗೆ. -
ಮುಂಬೈ: ತವರಿನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ (IND vs NZ) ಏಕದಿನ ಸರಣಿಯಲ್ಲಿ ಭಾರತ ತಂಡ ಗೆಲುವಿನೊಂದಿಗೆ ಶುಭಾರಂಭ ಕಂಡಿದೆ. ವಡೋದರದಲ್ಲಿ ಬಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿಯವರು (Virat Kohli) ಅದ್ಭುತ ಪ್ರದರ್ಶನ ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇನ್ನೂ, ಈ ಪಂದ್ಯದಲ್ಲಿ ಕೊಹ್ಲಿ 91 ಎಸೆತಗಳಲ್ಲಿ ಒಂದು ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 93 ರನ್ ಬಾರಿಸಿ ಶತಕ ವಂಚಿತರಾಗಿ ವಿಕೆಟ್ ಒಪ್ಪಿಸಿ ಹೊರನಡೆದರು. ಆ ಮೂಲಕ ಅವರು ಸತತ ಐದು ಏಕದಿನ ಪಂದ್ಯಗಳಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಸ್ಥಿರತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇದರ ಹೊರತಾಗಿಯೂ, ಭಾರತ ತಂಡದ ಮಾಜಿ ಸ್ಪಿನ್ನರ್ ಆರ್ ಅಶ್ವಿನ್ (R Ashwin), ಸ್ಥಿರತೆಗೆ ಇನ್ನೊಂದು ಹೆಸರೇ ಶ್ರೇಯಸ್ ಅಯ್ಯರ್ (Shreyas Iyer) ಎಂದು ಬಣ್ಣಿಸಿದ್ದಾರೆ.
ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಆರ್. ಅಶ್ವಿನ್, "ಶ್ರೇಯಸ್ ಅಯ್ಯರ್ ಭಾರತಕ್ಕೆ ಏಕದಿನ ಕ್ರಿಕೆಟ್‌ನಲ್ಲಿ ಮಿಸ್ಟರ್ ಕನ್ಸಿಸ್ಟೆಂಟ್ ಆಗಿದ್ದಾರೆಂದು ನಮಗೆ ತಿಳಿದಿದೆ. ಅವರ (ಕೊಹ್ಲಿಯವರ) ವಿಕೆಟ್ ಶ್ರೇಯಸ್‌ಗಿಂತ ಭಿನ್ನವಾಗಿತ್ತು ಅವರು ಎಂದಿಗೂ ಆಟವನ್ನು ಈ ರೀತಿ ಬಿಡುವುದಿಲ್ಲ. ಅವರು ಸಾಮಾನ್ಯವಾಗಿ ಅದನ್ನು ಮುಗಿಸುತ್ತಾರೆ. ಆದರೆ ಇದು ಅರ್ಥವಾಗುವಂತಹದ್ದಾಗಿದೆ, ಅವರು ಮತ್ತೆ ಆಟಕ್ಕೆ ಮರಳುತ್ತಿದ್ದಾರೆ ಮತ್ತು ಅದು ಜೇಮಿಸನ್ ಅವರ ಉತ್ತಮ ಎಸೆತವಾಗಿತ್ತು," ಎಂದು ಹೇಳಿದ್ದಾರೆ.
ʻನಿಜವಾಗಿಯೂ ನನಗೆ ಗೊತ್ತಿರಲಿಲ್ಲʼ: ಟಿ20 ವಿಶ್ವಕಪ್ ತಂಡದಿಂದ ಹೊರಗಿಟ್ಟಿರುವ ಬಗ್ಗೆ ಜಿತೇಶ್ ಶರ್ಮಾ ಹೇಳಿದ್ದಿದು!
ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯವರ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಟೀಮ್ ಇಂಡಿಯಾ ಪರವಾಗಿ ನಿರಂತರವಾಗಿ ದೊಡ್ಡ ಮೊತ್ತ ಗಳಿಸುತ್ತಿದ್ದಾರೆ. ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಕೂಡ ಅವರು ಉತ್ತಮ ಪ್ರದರ್ಶನ ತೋರಿದ್ದರು. ಈ ಬಗ್ಗೆ ಮಾತನಾಡಿರುವ ಅಶ್ವಿನ್, ಕೊಹ್ಲಿಯವರು ಸ್ವತಂತ್ರವಾಗಿ ಆಡುತ್ತಿದ್ದಾರೆ. ಅವರ ಮನಸ್ಸಿನಲ್ಲಿ ಬೇರೆ ಯಾವುದೇ ವಿಚಾರ ಇಲ್ಲ ಎಂದು ಹೇಳಿದ್ದಾರೆ.
"ಅವರ ಮನಸ್ಸಿನಲ್ಲಿ ಏನೂ ನಡೆಯುತ್ತಿಲ್ಲ ಎಂದು ತೋರುತ್ತದೆ. ಅವರು ಏನು ಬದಲಾಗಿದ್ದಾರೆ ಎಂದು ನೀವು ನನ್ನನ್ನು ಕೇಳಿದ್ದೀರಿ. ಅವರು ಏನನ್ನೂ ಬದಲಾಯಿಸಿಲ್ಲ, ಯಾವುದರ ಬಗ್ಗೆಯೂ ಯೋಚಿಸುತ್ತಿಲ್ಲ. ನೀವು ಆಟದಿಂದ ಸಂತೋಷ ಪಡೆದಾಗ ಮತ್ತು ನಿಮ್ಮ ಜೀವನದಲ್ಲಿ ಸರಿಯಾದ ಜಾಗದಲ್ಲಿದ್ದಾಗ, ಈ ರೀತಿ ಆಡಬಹುದು," ಎಂದು ಅವರು ತಿಳಿಸಿದ್ದಾರೆ.
IND vs NZ: ʻಅವರು ಇಂದಿಗೂ ಬದಲಾಗಿಲ್ಲʼ-ವಿರಾಟ್ ಕೊಹ್ಲಿ ಬಗ್ಗೆ ಆರ್ ಅಶ್ವಿನ್ ಅಚ್ಚರಿ ಹೇಳಿಕೆ!
"ಕೊಹ್ಲಿ ತನ್ನ ಕ್ರಿಕೆಟ್ ಅನ್ನು ಆನಂದಿಸಲು ಬಯಸುವ ನಿರ್ಧಾರವನ್ನು ತೆಗೆದುಕೊಂಡರು. ಅವರು ತನ್ನ ಬಾಲ್ಯದ ಸ್ವಾತಂತ್ರ್ಯದೊಂದಿಗೆ, ಹಲವು ವರ್ಷಗಳ ಅನುಭವದೊಂದಿಗೆ ಬ್ಯಾಟಿಂಗ್ ಮಾಡುತ್ತಿರುವಂತೆ ತೋರುತ್ತಿದೆ," ಎಂದರು.
ಸರಣಿಯ ಎರಡನೇ ಪಂದ್ಯ ಜನವರಿ 14ರಂದು ರಾಜ್ ಕೋಟ್‌ನ ನಿರಂಜನ್ ಶಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವ ಮೂಲಕ ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿದೆ. ಕಿಂಗ್ ಕೊಹ್ಲಿ ಮತ್ತೆ ಅಬ್ಬರಿಸುವ ಸಾಧ್ಯತೆ ಹೆಚ್ಚಿದೆ.
ಭಾರತ ಏಕದಿನ ತಂಡ: ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್.