ನವದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ (IND vs NZ) ಮುಕ್ತಾಯಗೊಂಡಿದೆ. ವಿರಾಟ್ ಕೊಹ್ಲಿಯವರ (Virat Kohli) ಹೋರಾಟದ ಶತಕದ ಹೊರತಾಗಿಯೂ ಭಾರತ ತಂಡ 2-1 ಅಂತರದಲ್ಲಿ ಏಕದಿನ ಸರಣಿಯನ್ನು ಕಳೆದುಕೊಂಡಿತು. ಡ್ಯಾರಿಲ್ ಮಿಚೆಲ್ ಶತಕದ ನೆರವಿನಿಂದಾಗಿ ಪ್ರವಾಸಿ ನ್ಯೂಜಿಲೆಂಡ್ ತಂಡ 337 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಆದರೆ, ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡ 41 ರನ್‌ಗಳಿಂದ ಸೋಲು ಅನುಭವಿಸಿತು. ಇದರ ಬೆನ್ನಲ್ಲೆ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ (Sunil Gavaskar) ಪ್ರತಿಕ್ರಿಯೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಆಟವನ್ನು ಮೆಚ್ಚಿಕೊಂಡ ಗವಾಸ್ಕರ್, ಯುವ ಆಟಗಾರರು ಮಾಜಿ ನಾಯಕನ ಆಟವನ್ನು ನೋಡಿ ಕಲಿಯಬೇಕೆಂದು ಸಲಹೆ ನೀಡಿದ್ದಾರೆ.
ಏಕದಿನ ಸ್ವರೂಪದಲ್ಲಿ ವಿರಾಟ್ ಕೊಹ್ಲಿಯವರ ಆಟದ ಕುರಿತು ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್, "ಅವರ (ವಿರಾಟ್ ಕೊಹ್ಲಿ) ಬಗ್ಗೆ ವಿಶೇಷವೆಂದರೆ ಅವರು ಒಂದು ಇಮೇಜ್‌ಗೆ ಬದ್ಧರಾಗಿಲ್ಲ. ಬಹಳಷ್ಟು ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಅವರನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳಿತ್ತೇವೋ ಅದಕ್ಕೆ ತಕ್ಕಂತೆ ಬದುಕಬೇಕು ಎಂದು ಭಾವಿಸುತ್ತಾರೆ. ವಿರಾಟ್ ಹಾಗಲ್ಲ. ಅವರು ಕೈಯಲ್ಲಿರುವ ಕೆಲಸಕ್ಕೆ ಬದ್ಧರಾಗಿದ್ದಾರೆ ಮತ್ತು ಆ ಕೆಲಸ ರನ್ ಗಳಿಸುವುದು," ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿಯವರು ಮೈದಾನದಲ್ಲಿ ಕೆಲ ಸನ್ನಿವೇಶಗಳಿಗೆ ಅತಿ ಬೇಗನೆ ಹೊಂದಿಕೊಳ್ಳುತ್ತಾರೆ. ಅಗತ್ಯಕ್ಕೆ ತಕ್ಕಂತೆ ಅವರ ಆಟವನ್ನು ಬದಲಾಯಿಸುತ್ತಾರೆ. ಕೆಲವೊಮ್ಮೆ, ಆರಂಭದಲ್ಲೇ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸುತ್ತಾರೆ, ಇದು ಅವರ ವಿಶೇಷತೆ ಎಂದು ಗವಾಸ್ಕರ್ ತಿಳಿಸಿದ್ದಾರೆ.
IND vs NZ: ವಿರಾಟ್ ಕೊಹ್ಲಿ ಅಲ್ಲ, ನಾವು ಟಾರ್ಗೆಟ್ ಮಾಡಿದ್ದು ಈ ಆಟಗಾರನನ್ನು ಎಂದ ಡ್ಯಾರಿಲ್ ಮಿಚೆಲ್!
"ಕೆಲವೊಮ್ಮೆ ಅವರು ನಿಧಾನಗತಿಯಲ್ಲಿ ಆಡುತ್ತಾರೆ ಮತ್ತು ನಂತರ ಖಾತೆ ತೆರೆಯುತ್ತಾರೆ. ಕೆಲವೊಮ್ಮೆ ಅವರು ಆರಂಭದಲ್ಲಿ ಬಿರುಸಾಗಿ ಬ್ಯಾಟ್ ಮಾಡುತ್ತಾರೆ. ಅಲ್ಲದೆ ಮೈದಾನದಲ್ಲಿ ಒಂದು ಮತ್ತು ಎರಡು ರನ್ ಹುಡುಕುತ್ತಾರೆ. ಅವರು ನಿರೀಕ್ಷೆಗಳಿಂದ ನಿಯಂತ್ರಿಸಲ್ಪಡುವುದಿಲ್ಲ. ಆ ಮನೋಧರ್ಮವೇ ಮುಖ್ಯ. ನಾನು ಸಿಕ್ಸ್ ಹೊಡೆಯಬೇಕೆಂದು ನಿರೀಕ್ಷಿಸಿದ್ದೆ ಎಂದು ಅವರು ಭಾವಿಸುವುದಿಲ್ಲ. ಅವರು ಪರಿಸ್ಥಿತಿಗನುಗುಣವಾಗಿ ಆಡುತ್ತಾರೆ," ಎಂದು ಬ್ಯಾಟಿಂಗ್ ದಿಗ್ಗಜ ಹೇಳಿದ್ದಾರೆ.
ವಿರಾಟ್ ಕೊಹ್ಲಿಯವರು ಚೇಸಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ
ಹಲವು ಬಾರಿ ಕಠಿಣ ಚೇಸಿಂಗ್ ಗಳಲ್ಲಿಯೂ ಕೊಹ್ಲಿ ಅವರು ಅಷ್ಟು ಸುಲಭವಾಗಿ ಪಂದ್ಯವನ್ನು ಬಿಟ್ಟುಕೊಡುವುದಿಲ್ಲ ಎಂದು ಅವರು ವಿವರಿಸಿದರು.
T20 World Cup 2026: ಆಸ್ಟ್ರೇಲಿಯಾ ತಂಡಕ್ಕೆ ಆಘಾತ! ಆರಂಭಿಕ 2 ಪಂದ್ಯಗಳಿಂದ ಪ್ಯಾಟ್ ಕಮಿನ್ಸ್ ಔಟ್!
"ಚೇಸ್ ನಲ್ಲಿ ಅವರು ಎಂದಿಗೂ ಬಿಟ್ಟುಕೊಡಲಿಲ್ಲ. ಕೊನೆಯವರೆಗೂ ಅವರು ಗೆಲುವಿಗೆ ಪ್ರಯತ್ನಿಸುತ್ತಿದ್ದರು. ಬಹುಶಃ ಅವರ ಕೈಯಲ್ಲಿನ ಗ್ಲೌಸ್‌ಗಳು ಸ್ವಲ್ಪ ಬೆವರಿರಬಹುದು ಮತ್ತು ಹಿಡಿತ ಸ್ವಲ್ಪ ಹೋಗಿರಬಹುದು, ಅದಕ್ಕಾಗಿಯೇ ಬ್ಯಾಟ್ ತಿರುಗಿ ಬೌಂಡರಿಯ ಬಳಿ ಕ್ಯಾಚ್ ಹಿಡಿಯಲಾಯಿತು. ಆದರೆ ಉದ್ದೇಶ ಯಾವಾಗಲೂ ಇತ್ತು. ಹರ್ಷಿತ್ ರಾಣಾ ಅವರದ್ದು ತುಂಬಾ ಒಳ್ಳೆಯ ಇನಿಂಗ್ಸ್. ಅವರು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಮಾಡಬೇಕಾದಂತೆಯೇ, ಚಿಂತೆಯಿಲ್ಲದೆ ಮತ್ತು ನಿರೀಕ್ಷೆಗಳಿಲ್ಲದೆ ಬ್ಯಾಟಿಂಗ್ ಮಾಡಿದರು. ಬ್ಯಾಟ್ ಬೀಸುವುದು ಅವರ ಕೆಲಸ ಎಂದು ಅವರಿಗೆ ತಿಳಿದಿತ್ತು. ಅವರು ಚೆಂಡಿನ ಸಂಪರ್ಕ ಸಾಧಿಸಿದರೆ, ಅದ್ಭುತ. ಇಲ್ಲದಿದ್ದರೆ, ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ," ಎಂದು ಗವಾಸ್ಕರ್ ತಿಳಿಸಿದ್ದಾರೆ.
"ಕೊಹ್ಲಿ ಅಥವಾ ತೆಂಡೂಲ್ಕರ್ ಜೊತೆ ಬ್ಯಾಟಿಂಗ್ ಮಾಡುವ ಅವಕಾಶ ಹಲವರಿಗೆ ಸಿಗುವುದಿಲ್ಲ. ನೀವು ಸಾಧ್ಯವಾದಷ್ಟು ಕಾಲ ಕ್ರೀಸ್‌ನಲ್ಲಿಯೇ ಇರಲು ಬಯಸುತ್ತೀರಿ. ಓವರ್‌ನ ಕೊನೆಯಲ್ಲಿ, ಅಂತಹ ಆಟಗಾರರು ನಿಮ್ಮೊಂದಿಗೆ ಮಾತನಾಡುವಾಗ, ಅವು ನೀವು ಜೀವನಪರ್ಯಂತ ಹೊತ್ತಿರುವ ನೆನಪುಗಳಾಗುತ್ತವೆ," ಎಂದು ಗವಾಸ್ಕರ್ ಹೇಳಿದರು.